Blog number 1691. ಸಾಗರದ ವಿಬಿನ್ನ ರಾಜಕಾರಣಿ ಮಂಜುನಾಥ್ ಕೆ.ಎಲ್.ಇವರು ನಗರ ಸಭಾ ಸದಸ್ಯರಾಗಿದ್ದಾಗ ಸಾಗರದ ಮಾರಿಕಾಂಬಾ ದೇವಿಯ ಎದರು ಲಂಚ ಪಡೆದಿಲ್ಲ ಎಂದು ಪ್ರಮಾಣ ಮಾಡಿ ಆಶ್ರಯ ಹಕ್ಕು ಪತ್ರ ನೀಡಿದ್ದರು ಫಲಾನುಭವಿಗಳೂ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಪಡೆದಿದ್ದು ಆಗ ದೊಡ್ಡ ಸುದ್ದಿ.
#ಸಾಗರದ_ನಗರ_ಸಭಾ_ಸದಸ್ಯರಾಗಿದ್ದಾಗ_ಮಂಜುನಾಥ್_ತಮ್ಮ_ವಾರ್ಡಿನಲ್ಲಿ_ಆಶ್ರಯ_ಹಕ್ಕು_ಪತ್ರ_ನೀಡುವಾಗ
#ಅವರೂ_ಮತ್ತು_ಫಲಾನುಭವಿಗಳು_ಸಾಗರ_ಮಾರಿಕಾಂಬಾ_ದೇವಾಲಯದಲ್ಲಿ_ಮಾಡಿದ_ಪ್ರಮಾಣ.
#ನಗರಸಭಾ_ಸದಸ್ಯನಾಗಿ_ಹಕ್ಕುಪತ್ರಕ್ಕೆ_ಲಂಚ_ಪಡೆದಿಲ್ಲ_ಅಂತ_ಮಂಜಣ್ಣ.
#ಹಕ್ಕು_ಪತ್ರಕ್ಕೆ_ಲಂಚ_ನೀಡಿಲ್ಲ_ಅಂತ_ಫಲಾನುಭವಿಗಳು_ದೇವರ_ಎದರು_ಪ್ರಮಾಣ_ಮಾಡಿದ್ದರು.
#ಇದು_ಅನುಕರಣೀಯ_ಆಗಬೇಕಾಗಿತ್ತು'
#ಈವರೆಗೆ_ಯಾರು_ಇಂತಹ_ದೈಯ೯_ಮಾಡಲಿಲ್ಲ.
ಸಾಗರದ ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ ಅವಧಿಯಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯಲ್ಲಿ ಅವ್ಯವಹಾರದ ಸುದ್ದಿ ದೊಡ್ಡದಾಗಿ ಕೇಳಿಬಂದಿತ್ತು.
ಆದರೆ ಇಲ್ಲಿನ ನಗರಸಭಾ ಸದಸ್ಯರು ತಮ್ಮ ವಾಡಿ೯ನ ಆಶ್ರಯ ಫಲಾನುಭವಿಗಳನ್ನ ಸಾಗರದ ಮಾರಿಕಾಂಭ ದೇವಾಲಯಕ್ಕೆ ಕರೆದೊಯ್ದು ಆಶ್ರಯ ಹಕ್ಕು ಪತ್ರ ನೀಡುವಲ್ಲಿ ತಾವು ಹಣ ಪಡೆದಿಲ್ಲ ಅಂತಲೂ ಹಾಗೆ ಫಲಾನುಭವಿಗಳೂ ತಾವೂ ನಗರಸಭಾ ಸದಸ್ಯ ಮಂಜಣ್ಣನಿಗೆ ಹಣ ನೀಡಿಲ್ಲ ಅಂತ ಪ್ರಮಾಣ ಮಾಡಿದ್ದರು.
ಇದು ದೊಡ್ಡ ಸುದ್ದಿ ಆಗಿತ್ತು.
ಇಲ್ಲಿ ಗಮನಿಸ ಬೇಕಾದದ್ದು ಜನಪ್ರತಿನಿದಿ ಒಬ್ಬರೆ ಪ್ರಮಾಣ ಮಾಡಿದರೆ ನಂಬಲು ಕಷ್ಟವಿತ್ತು ಆದರೆ ಫಲಾನುಭವಿಗಳು ಸೇರಿ ಪ್ರಮಾಣ ಮಾಡಿದ್ದಾರೆ.
ಈಗೆಲ್ಲ ಆಶ್ರಯ ನಿವೇಶನ ಹಂಚಿಕೆಯಲ್ಲಿ ಹಣವೇ ನಿಣಾ೯ಯಕ ಯಾಕೆಂದರೆ ನಿವೇಶನದ ಬೆಲೆ ಮಾರುಕಟ್ಟೆಯಲ್ಲಿ 10 ಲಕ್ಷ ಮಾರುಕಟ್ಟೆ ಬೆಲೆ ಇದೆ, ಪ್ರತಿ ವಾಡ್೯ ಪ್ರತಿನಿದಿಗೆ 15 ಸೈಟ್ ಹಂಚಲು ಆಶ್ರಯ ಸಮಿತಿ ಅಧ್ಯಕ್ಷರು ಅವಕಾಶ ನೀಡಿರುತ್ತಾರೆ ಕನಿಷ್ಟ ಒಂದು ಲಕ್ಷದಿಂದ ಮೂರು ಲಕ್ಷ ಹಣ ಪಡೆದು ಅನಹ೯ರಿಗೆ ಹಂಚುವ ಕೆಲಸ ಎಲ್ಲಾ ಕಡೆ ಇದೆ, ಚುನಾವಣೆಗೆ ಹಣ ನೀಡಿ ಮತ ಪಡೆದು ಗೆಲ್ಲಬೇಕಾದ ಇವತ್ತಿನ ಚುನಾವಣೆಗಳು ಇದಕ್ಕೆ ಕಾರಣ.
ಸಾಗರದ ಈ ಮಂಜಣ್ಣ ವಿಭಿನ್ನ ಯಾಕೆಂದರೆ ಇವರ ತಂದೆ ಪೈಲ್ವಾನ್ ಲಿಂಗಪ್ಪನವರದ್ದು ಒಂದು ಹಿನ್ನೆಲೆ ಇದೆ, ಇವರ ಜಾತಿಯ ಒಂದೇ ಮನೆ ಇಲ್ಲಿರುವುದು 40 ವಷ೯ದಿಂದ ಅವರು ಪುರಸಭೆಗೆ ಆಯ್ಕೆ ಆಗುತ್ತಿದ್ದರು ಎರೆಡು ಬಾರಿ ಅಧ್ಯಕ್ಷರೂ ಆಗಿದ್ದರು ವಯಸ್ಸಿನ ಕಾರಣದಿಂದ ಅವರು ರಾಜಕೀಯದಿಂದ ನಿವೃತ್ತರಾಗಿದ್ದಾರೆ ಅವರ ಮಗ ಮಂಜಣ್ಣ ಸತತ ಎರಡು ಅವಧಿಗೆ ನಗರಸಭೆಗೆ ಆಯ್ಕೆ ಆಗಿದ್ದಾರೆ.
ನೇರ ನಡೆ ನುಡಿಯ ಇಡೀ ಕುಟುಂಬ ಸಾಗರದಲ್ಲಿ ಜನಮನ್ನಣೆಯನ್ನ ಪಡೆದಿದೆ ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ಈ ಕುಟುಂಬದ ಮಂಜಣ್ಣರ ಪ್ರಾಮಾಣಿಕತೆಯ ಪ್ರಮಾಣಕ್ಕೆ ಕಾಗೋಡು ತಿಮ್ಮಪ್ಪನವರ ನುಡಿ ಪ್ರೇರಣೆ ಆಗಿದೆಯಂತೆ ಅದೇನೆ೦ದರೆ "ಜನಪ್ರತಿನಿದಿಗಳು ದೇವರ ಮೇಲೆ ಆಣೆ ಮಾಡಿ ಲಂಚ ಪಡೆಯದೆ ಬಡವರಿಗೆ ಅಹ೯ತೆ ಇದ್ದವರಿಗೆ ಆಯ್ಕೆ ಮಾಡುವಂತೆ ಸಾವ೯ಜನಕವಾಗಿ ಹೇಳಿದ್ದರಂತೆ."
ಇಲ್ಲಿ ಒಂದು ವಿಶೇಷವೆಂದರೆ ಆಗ ಬಿಜೆಪಿಯಲ್ಲಿದ್ದ ಮಂಜಣ್ಣ ಮಾತ್ರ ಪ್ರಮಾಣ ಮಾಡಿದ್ದರು ನಂತರ ನಗರ ಸಭಾ ಚುನಾವಣೆಯಲ್ಲಿ ಇವರ ವಾರ್ಡನಲ್ಲಿ ಇವರಿಗೆ ಸ್ಪರ್ದೆಗೆ ಅವಕಾಶ ಸಿಗದೆ ಬೇರೆ ವಾರ್ಡಿನಲ್ಲಿ ಸ್ಪರ್ಧಿಸಿ ಪರಾಭವಗೊಂಡರು ಈಗ ಕಾಂಗ್ರೇಸ್ ಪಕ್ಷದಲ್ಲಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತೆ ಇವರ ವಾರ್ಡನಿಂದ ಸ್ಪರ್ಧಿಸಿದರೆ ಅಧಿಕ ಮತದಲ್ಲಿ ಗೆಲ್ಲಿಸುವ ವಿಶ್ವಾಸ ಇವರ ಕ್ಷೇತ್ರದ ಮತದಾರರದ್ದು.
Comments
Post a Comment