Blog number 1856. ಶಿವಮೊಗ್ಗದ ಪ್ರಭಾವಿ ವಕೀಲರಲ್ಲಿ ಒಬ್ಬರಾಗಿರುವ ಜನಪರ ಹೋರಾಟಗಾರ - ಸಹೃದಯಿ ಶ್ರೀಪಾಲ್ ವಕೀಲರು ನನ್ನ ಅತಿಥಿ (8 - ಡಿಸೆಂಬರ್ -2023)
#ಶ್ರೀಪಾಲ್_ವಕೀಲರು_ನಿನ್ನೆ_ನನ್ನ_ಅತಿಥಿ.
#ಶಿವಮೊಗ್ಗ_ಜಿಲ್ಲೆಯ_ಜನಪರ_ದ್ವನಿಯಾಗಿರುವ_ಶ್ರೀಪಾಲ್.
#ವೃತ್ತಿ_ವಕೀಲಿಕೆ_ಪ್ರವೃತ್ತಿ_ಜನಪರ_ಹೋರಾಟ
#ಯಾವತ್ತೂ_ಪ್ರಜಾಪ್ರಭುತ್ವವಾದಿಗಳಿಗೆ_ವಿರೋದ_ಪಕ್ಷಗಳಿಗೆ_ಆಸಹಾಯಕರಿಗೆ_ಜನಪರ_ಸಂಘಟನೆಗಳಿಗೆ_ಸಹಾಯ_ಹಸ್ತ.
#ತೀರ್ಥಹಳ್ಳಿಯ_ಕೋಣಂದೂರಿನಂತಹ_ಪ್ರದೇಶದಿಂದ_ಬಂದು_ಶಿವಮೊಗ್ಗ_ಕೇಂದ್ರದಲ್ಲಿ_ಹೆಸರು_ಖ್ಯಾತಿ_ಗಳಿಸಿದ್ದಾರೆ
#ಹಣ_ಅಧಿಕಾರ_ಇದ್ದವರ_ಪರ_ಇದ್ದವರಿಗೆ_ಇದು_ಸುಲಭ
#ಅವರನ್ನೆಲ್ಲ_ವಿರೋದಿಸಿ_ಯಶಸ್ಸುಗಳಿಸುವುದು_ಸುಲಭವಲ್ಲ.
1995 - 2000 ಇಸವಿಯ ನನ್ನ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯತ್ವದ ಅವಧಿಯಲ್ಲಿ ನನ್ನ ಎಲ್ಲಾ ಹೋರಾಟಗಳು ಜನಪರವಾಗೇ ಇದ್ದಿತ್ತಾದ್ದರು ಅಶಕ್ತ ಜನರಿಗೆ ವ್ಯವಸ್ಥೆಯ ವಿರುದ್ಧ ಹೋರಾಡುವ ಶಕ್ತಿ ಯಾವತ್ತೂ ಇರುವುದಿಲ್ಲ ಬಲಿಷ್ಟ ಎದುರಾಳಿಗಳ ಎದುರಿಸಲು ಅವತ್ತಿನ ಜನ ಪರ ಮನಸ್ಸಿನ ನೂರಾರು ಜನರು, ಪತ್ರಕರ್ತರು, ವಿದ್ಯಾರ್ಥಿ ಮುಖಂಡರು ಸದಾ ಬೆಂಬಲಿಸುತ್ತಿದ್ದರು.
ಶಿವಮೊಗ್ಗ ಜಿಲ್ಲೆಯ ಪೈರ್ ಬ್ರಾಂಡ್ ಹೋರಾಟಗಾರ ಲೋಕೇಶ್ ಈಸೂರು ಜೊತೆಗಾರರು, ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರನ್ನು ಅವರ ಊರಾದ ಸಾಗರ ತಾಲೂಕಿನ ವಡ್ನಾಳದಲ್ಲಿ ಅವರ ಧೀವರ ಜಾತಿಯಿಂದ ಬಹಿಷ್ಕಾರ ಹಾಕಿದ್ದಾಗ ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಸ್ವರ್ಣ ಪ್ರಭಾಕರ್ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ಗಣಪತಿಯಪ್ಪರ ಊರಿಗೆ ಹೋಗುವ ಮುನ್ನ ನನ್ನ ಮನೆಗೆ ಬಂದಿತ್ತು ಅವತ್ತು ಆ ಸಮಿತಿಯಲ್ಲಿ ಯುವಕ ಶ್ರೀಪಾಲ್ ಇದ್ದರು.
1984 ರಲ್ಲಿ ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ನಾಲ್ಕು ಕಾರ್ಮಿಕರನ್ನ ತೀರ್ಥಹಳ್ಳಿ ಸಮೀಪದ ಆರಗ ಮತ್ತು ಅರಳಸುರಳಿಯಲ್ಲಿ ಜೋಡಿ ಕೊಲೆ ಪ್ರಕರಣದಲ್ಲಿ ಪ್ರಾರಂಭವಾದ ಹೋರಾಟದಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಗೆ ಆನಂದಪುರಂನಿಂದ ನಾವು ನೂರಾರು ಜನ ಸೈಕಲ್ ಯಾತ್ರೆ ಮಾಡಿದ್ದೆವು ಇದರ ನೇತೃತ್ವ ದಲಿತ ಸಂಘರ್ಷ ಸಮಿತಿಯ ಸಂಸ್ಧಾಪಕರಾದ ಬಿ.ಕೃಷ್ಣಪ್ಪನವರದ್ದು.
ಅವತ್ತು ಅಷ್ಟು ದೂರದಿಂದ (ಆನಂದಪುರಂನಿಂದ ಶಿವಮೊಗ್ಗ 50 ಕಿ.ಮಿ.) ಬಂದ ನಮಗೆಲ್ಲ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಹೊಟ್ಟೆ ತುಂಬಾ ಊಟ ಆಗಿನ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಮುಖಂಡ ಪೈಲ್ವಾನ್ ಈಸೂರು ಲೋಕೇಶ್ ವ್ಯವಸ್ಥೆ ಮಾಡಿದ್ದರು ಈ ರೀತಿ ಈಸೂರು ಲೋಕೇಶ್ ಮತ್ತು ನನ್ನ ಸಂಬಂದ ಅವರ ಜೀವಿತಾವದಿ ಪೂರ್ಣ ಉಳಿದಿತ್ತು,ಈಸೂರು ಲೋಕೇಶರಿಗೆ ಶ್ರೀಪಾಲರ ಬಗ್ಗೆ ವಿಶೇಷ ಅಭಿಮಾನ ಇತ್ತು.
ನಿನ್ನೆ ಶಿವಮೊಗ್ಗದಿಂದ ಸಾಗರ ನ್ಯಾಯಾಲಯಕ್ಕೆ ಶ್ರೀಪಾಲ್ ಮತ್ತು ಅವರ ಜೊತೆ ನಾಲ್ವರು ಯುವ ವಕೀಲರು ಹೋಗುವಾಗ ನನಗೆ ಪೋನಾಯಿಸಿದ್ದರು, ನಾನು ನನ್ನ ಅಪೀಸಲ್ಲಿ ಇದ್ದರೆ ಬೇಟಿ ಮಾಡುವುದಾಗಿ ತಿಳಿಸಿದ್ದರು ಅದರಂತೆ ಮದ್ಯಾಹ್ನ ಬಂದಿದ್ದರು ಅವರ ಆಗಮನ ಮತ್ತು ಬೇಟಿ ನನಗೆ ತುಂಬಾ ಇಷ್ಟವಾಯಿತು.
ಜೊತೆಗೆ ಬಂದ ಯುವ ವಕೀಲರೂ ಚುರುಕಾಗಿದ್ದಾರೆ ಶ್ರೀಪಾಲರ ಗರುಡಿಯಲ್ಲಿ ತರಬೇತಿ ಪೂರ್ಣ ಮಾಡಿದರೆ ಅವರೆಲ್ಲ ಯಶಸ್ವಿ ವಕೀಲರಾಗಿ ಶ್ರೀಪಾಲರಂತೆ ಖ್ಯಾತಿ ಪಡೆಯಿರಿ ಎಂದು ಹಾರೈಸಿದೆ ಅವರಲ್ಲಿ ಕೆಲವರು ನನ್ನ FB ಪೋಸ್ಟ್ ನಿತ್ಯ ನೋಡುವವರು ಎಂಬುದು ಗೊತ್ತಾಯಿತು.
ತೀರ್ಥಹಳ್ಳಿ ತಾಲ್ಲುಕಿನ ಕೋಣಂದೂರಿನಲ್ಲಿ ವಿದ್ಯಾಬ್ಯಾಸ ಮಾಡಿ ಶಿವಮೊಗ್ಗದ ನ್ಯಾಷನಲ್ ಕಾಲೇಜ್ ನಲ್ಲಿ ಕಾನೂನು ಪದವಿದರರಾಗಿ ರೈತರು - ದಲಿತರು - ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗಿಯಾಗಿ ಶ್ರೀಮಂತರ - ಆಡಳಿತಾರೂಡ ರಾಜಕಾರಣಿಗಳ - ಭ್ರಷ್ಟ ಅಧಿಕಾರಿಗಳ ಎದುರು ಹಾಕಿ ಕೊಂಡು ಯಾವುದೇ ಗಾಡ್ ಫಾದರ್ ಇಲ್ಲದೆ ಇವತ್ತು ಶಿವಮೊಗ್ಗ ಕೇಂದ್ರ ಸ್ಥಾನದಲ್ಲಿ ಲೀಡಿಂಗ್ ಅಡ್ವೋಕೇಟ್ ಆಗಿ ಮುಂದುವರಿಯುವುದು ಸುಲಭವಲ್ಲ.
ಇದನ್ನೆ ಶ್ರೀಪಾಲರು ಉಳ್ಳವರ ಪರವಾಗಿ ನಡೆಸಿದ್ದರೆ ಇನ್ನೂ ಹೆಚ್ಚಿನ ಸಂಪಾದನೆ, ಪ್ರಖ್ಯಾತಿ ಮತ್ತು ರಾಜಕಾರಣದಲ್ಲಿ ಉನ್ನತ ಸ್ಥಾನ ಪಡೆಯಬಹುದಿತ್ತು ಆದರೆ ಜನಪರ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡು ವೃತ್ತಿಯಾಗಿ ವಕೀಲಿಕೆ ಮತ್ತು ಪ್ರವೃತ್ತಿಯಾಗಿ ಜನಪರ ಹೋರಾಟ ಮುಂದುವರಿಸಿದ್ದಾರೆ.
Comments
Post a Comment