Blog number 1894. ಸಂಪ್ರದಾಯಿಕ ಮಲೆನಾಡಿನ ವಿಶಿಷ್ಟ ಖಾದ್ಯ ಹಲಸಿನ ಎಲೆ ಕೊಟ್ಟೆ ಕಡಬು ಗ್ರಾಹಕರಿಗೆ ಕಳೆದ 2 ವರ್ಷದಿಂದ ನಿರಂತರವಾಗಿ ಆನಂದಪುರಂ ಮಲ್ಲಿಕಾ ವೆಜ್ ನಲ್ಲಿ ಸಿಗುತ್ತಿದೆ.
https://youtu.be/FKhBKZi0X7g?feature=shared
#ನಮ್ಮ_ಮಲ್ಲಿಕಾ_ವೆಜ್_ಹಲಸಿನ_ಎಲೆ_ಕೊಟ್ಟೆ_ಕಡಬು
#ಎರೆಡು_ವರ್ಷದಿಂದ_ನಿರಂತರವಾಗಿ_ಕೊಟ್ಟೆ_ಕಡಬು,
#ಮಲೆನಾಡಿನ_ಸಂಪ್ರದಾಯಿಕ_ಉಪಹಾರ
#ಗಣಪತಿಗೆ_ನೈವೇದ್ಯಕ್ಕೆ_ಬಳಕೆ.
#ಇಡ್ಲಿ_ಪಾತ್ರೆಯಲ್ಲಿನ_ಹಬೆಯು_ಹಲಸಿನ_ಎಲೆಯ_ಹಾಯ್ದು_ಕಡುಬಿಗೆ
#ಹಲಸಿನ_ಎಲೆಯ_ಅರೋಮ_ರುಚಿ_ಅವರಿಸುವುದರಿಂದ_ಇದು_ವಿಶೇಷವಾಗಿದೆ.
ನಮ್ಮ ಮಲ್ಲಿಕಾ ವೆಜ್ ಪ್ರಾರಂಬಿಸಲು ಕಾರಣ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ಅತಿಥಿಗಳಿಗಾಗಿ ಅವರ ಉಪಹಾರ ಊಟದ ವ್ಯವಸ್ಥೆಗಾಗಿ, ಅದೂ ಯಾರೂ ರೆಸ್ಟೋರೆಂಟ್ ಪ್ರಾರಂಬಿಸಲು ಮುಂದೆ ಬರದಿದ್ದಾಗ ನಾವೇ ಅನಿವಾರ್ಯವಾಗಿ ಪ್ರಾರಂಬಿಸಿ ನಂತರ ಎಲ್ಲಾ ಕಲಿತದ್ದು ಅದು 11 ವರ್ಷದ ಹಿಂದೆ.
ಸ್ಥಳಿಯವಾದ ವಿಶೇಷ ಖಾದ್ಯ ಯಾವುದು? ಎಂಬ ಆಹಾರ ಪ್ರಿಯ ಪ್ರವಾಸಿಗಳ ಪ್ರಶ್ನೆಗೆ ಉತ್ತರ ನಮ್ಮಲ್ಲಿರಲಿಲ್ಲ, ನಾವು ತಯಾರಿಸುವ ಇಡ್ಲಿ-ವಡೆ- ದೋಸೆ - ಪಲಾವ್ - ಬಿಸಿಬೇಳೆಬಾತ್ - ಉಪ್ಪಿಟ್ಟು - ಕೇಸರಿ ಬಾತ್ - ಬನ್ಸ್ - ಅವಲಕ್ಕಿ -ಅವಲಕ್ಕಿ ಮೊಸರು - ಪಿಲ್ಟರ್ ಕಾಫಿ-ಟೀ - ದಕ್ಷಿಣ ಭಾರತೀಯ ಊಟ-ಉತ್ತರ ಭಾರತೀಯ ಊಟ ಎಲ್ಲಾ ರೆಸ್ಟೋರೆಂಟ್ ಗಳಲ್ಲಿ ಇರುತ್ತದೆ.
ಆದ್ದರಿಂದ ಮಲೆನಾಡಿನ ವಿಶಿಷ್ಟ ಉಪಹಾರವಾದ ಹಲಸಿನ ಎಲೆ ಕೊಟ್ಟೆ ಕಡಬು 2021 ರ ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಬಿಸಿದೆವು ಇದರ ಜೊತೆಗೆ ಹಸಿಗಡಲೆ ಗಸಿ, ಕಾಯಿ ಚಟ್ನಿ ಮತ್ತು ಕೆಂಪು ಮೆಣಸಿನ ಚಟ್ನಿ ಜೊತೆ ನೀಡಲು ಪ್ರಾರಂಬಿಸಿ ಎರೆಡು ವರ್ಷ ದಾಟಿದೆ.
ಇವತ್ತು ಪ್ರತಿನಿತ್ಯದ ಬೆಳಿಗ್ಗೆಯ ನಮ್ಮ ಮಲ್ಲಿಕಾ ವೆಜ್ ನ ಉಪಹಾರದ ಸ್ಯಾಂಪಲ್ ತಪಾಸಣೆ ಮಾಡುವಾಗ ನನಗೆ ನೆನಪಾಯಿತು.
Comments
Post a Comment