Blog number 1858. ಒಂದು ಕಾಲದ ಶರಾವತಿ ನದಿ ದಂಡೆಯಿಂದ ವರದಾ ನದಿ ದಂಡೆಗೆ ಸಂಚರಿಸುತ್ತಿದ್ದ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ಪುತ್ರ ಸಾಗರದ ಪ್ರಖ್ಯಾತ ಉಡುಪಿ ಮೆಡಿಕಲ್ಸ್ ಚಂದ್ರಶೇಖರ್ ರ ನೂತನ ಮನೆ ಅಪ್ಪಯ್ಯ ಗೃಹ ಪ್ರವೇಶ.
#ಶ್ರೀ_ವರದಾ_ಮೋಟಾರ್_ಸರ್ವಿಸ್
#ಶರಾವತಿ_ನದಿಗೂ_ವರದಾ_ನದಿಗೂ_ಸಂಪರ್ಕಿಸಿದ_ಮೊದಲ_ಖಾಸಾಗಿ_ಬಸ್
#ಮಾಲಿಕರಾದ_ಮುತ್ತಣ್ಣ_ನಾಗಪ್ಪಣ್ಣ
#ನಾಗಪ್ಪಣ್ಣರ_ಪುತ್ರರೇ_ಸಾಗರದ_ಪ್ರಖ್ಯಾತ_ಉಡುಪಿ_ಮೆಡಿಕಲ್ಸ್_ಚಂದ್ರಶೇಖರ್
#ಇವರ_ತಾಯಿಯ_ಸಹೋದರ_ತುಪ್ಪೂರಿನ_ಅಂತಣ್ಣ_ನಾಯಕರು
#ಚಂದ್ರು_ನೂತನ_ಮನೆಗೆ_ಅಪ್ಪಯ್ಯ_ಎಂಬ_ನಾಮಾಂಕಿತ_ಗೃಹ_ಪ್ರವೇಶ
#ಈ_ಮೂಲಕ_ವರದಾ_ಬಸ್ಸು_ನಾಗಪ್ಪಣ್ಣ_ಮುತ್ತಣ್ಣರ_ನೆನಪುಗಳು.
ಮೊನ್ನೆ ತಡವಾಗಿ ಆಫೀಸಿಗೆ ತಲುಪಿದಾಗ ಸಾಗರದ ಪ್ರಖ್ಯಾತ #ಉಡುಪಿ_ಮೆಡಿಕಲ್_ಸ್ಟೋರ್ಸ್ ಮಾಲಿಕ ಚಂದ್ರಶೇಖರ್ ನೂತನವಾಗಿ ನಿರ್ಮಿಸಿರುವ ಅವರ ಮನೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ತಲುಪಿತು.
ಚಂದ್ರು ತಮ್ಮ ನೂತನ ಮನೆಗೆ #ಅಪ್ಪಯ್ಯ ಅಂತ ನಾಮಕರಣ ಮಾಡಿದ್ದಾರೆ ಕಳೆದ ತಿಂಗಳು ಶರಾವತಿ ಮುಳುಗಡೆ ಪ್ರದೇಶದ ಕರೂರಿನ ಜಿ.ಟಿ. ಸತ್ಯನಾರಾಯಣ್ ಅವರ ತಂದೆ ಪೇಟೆ ತಿಮ್ಮಣ್ಣರ ಆತ್ಮ ಚರಿತ್ರೆ ಪುಸ್ತಕ ಬಿಡುಗಡೆ ಮಾಡಿದ್ದರು ಆ ಪುಸ್ತಕದ ಶಿರೋನಾಮೆ ಕೂಡ #ಅಪ್ಪಯ್ಯ ಹಾಗಾಗಿ ಇಲ್ಲಿ ಚಂದ್ರು ಅಪ್ಪಯ್ಯ ವರದಾ ಬಸ್ಸಿನ ಮಾಲಿಕರಾದ ನಾಗಪ್ಪಣ್ಣರ ನೆನಪುಗಳನ್ನು ದಾಖಲಿಸಿದ್ದೇನೆ.
70 ರ ದಶಕದಲ್ಲಿ ಶರಾವತಿ ನದಿಗೆ ಆಣೆಕಟ್ಟು ನಿರ್ಮಾಣದಿಂದ ಕರೂರು ಬಾರಂಗಿ ಹೋಬಳಿಗೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು ಆಗಿನ ಏಕ ಮಾತ್ರ ಸಣ್ಣ ಬಾರ್ಜ್ ನಿಂದ ಜನ ಸಂಚರಿಸುತ್ತಿದ್ದ ಕಾಲ, ಆಗ ಸಾಗರದಿಂದ ಮೊದಲ ಖಾಸಾಗಿ ಬಸ್ ಸಂಪರ್ಕ ವ್ಯವಸ್ತೆಯನ್ನು ಮಾಡಿದವರು ಮುತ್ತಣ್ಣ ಮತ್ತು ನಾಗಪ್ಪಣ್ಣ.
ಆ ಕಾಲದಲ್ಲಿ ಅಂದರೆ 50 ವರ್ಷದ ಹಿಂದೆ ಅವರ ಬಸ್ಸಿಗೆ ಅವರು ಇಟ್ಟಿದ್ದ ಹೆಸರು #ವರದಾ_ಮೋಟಾರ್_ಸರ್ವಿಸ್ ಬಹುಶಃ ವರದಾ ನದಿ ದಂಡೆಯ ಸಾಗರಕ್ಕೂ ಮತ್ತು ಶರಾವತಿ ನದಿ ದಂಡೆಗೂ ಸಂಪರ್ಕ ಮಾಡುವ ಬಸ್ಸಿಗೆ ವರದಾ ನದಿಯ ಹೆಸರು ಸೂಕ್ತ ಅಂತ ಮುತ್ತಣ್ಣ ಮತ್ತು ನಾಗಪ್ಪಣ್ಣ ನಿರ್ದರಿಸಿರಬೇಕು.
ಈ ಸಂಸ್ಥೆಯ ಎಲ್ಲಾ ಬಸ್ಸುಗಳ ಹಿಂಬಾಗದಲ್ಲಿ ಇರುತ್ತಿದ್ದ ಟ್ಯಾಗ್ ಲೈನ್ "ಜೀವನ ಪರ್ಯಂತ ಸಾದನೆ" ಇದನ್ನು ನೆನಪಿಸಿದರು ಸಾಗರದ ಸಾಹಿತಿಗಳಾದ ಜಿ.ಎಸ್ ಭಟ್ಟರ ಪುತ್ರ ಪತ್ರಕರ್ತ ಯೋಗಿಶ್
ನಾನು ಆರೇಳು ವರ್ಷದವನಿರುವಾಗ ನಮ್ಮ ತಂದೆ ಜೊತೆ ಸಾಗರದ ನೆಹರೂ ನಗರದ ಇವರ ಮೂಲ ಮನೆಗೆ ಹೋಗಿದ್ದು ನೆನಪಿದೆ ಆಗಲೇ ವಯೋವೃದ್ಧರಾಗಿದ್ದ ಮುತ್ತಣ್ಣರನ್ನು ನೋಡಿದ್ದೆ.
ಮುತ್ತಣ್ಣರ ನಂತರ ನಾಗಪ್ಪಣ್ಣ ವರದಾ ಬಸ್ಸಿನ ಸಂಸ್ಥೆ ಅಭಿವೃದ್ಧಿ ಮಾಡಿದರು, ನಾಗಪ್ಪಣ್ಣರ ಪತ್ನಿ ತಂದೆ ರಾಮನಾಯಕರು ಆ ಕಾಲದಲ್ಲಿ ನಮ್ಮ ಭಾಗದ ದೊಡ್ಡ ಜಮೀನ್ದಾರರು ಶೇರೇಗಾರರೂ ಆಗಿದ್ದರು, ಶಿವಮೊಗ್ಗ ಮಾರ್ಗದ ತುಪ್ಪೂರು ಸಮೀಪದ ಕೋಣೆಹೊಸೂರಿನಲ್ಲಿ ಅವರ ದೊಡ್ಡ ಹಿಡುವಳಿ ಜಮೀನು ಇತ್ತು,ಅವರ ಪುತ್ರ ಈರಣ್ಣ ನಾಯಕರು ದ.ಕ.ಜಿಲ್ಲೆಯಲ್ಲಿ ಹೆಸರುವಾಸಿ ಆದವರು ಮೀನುಗಾರಿಕೆ ಯಾಂತ್ರಿಕ ದೋಣಿ ಹೊಂದಿದವರು, ಇವರ ತಮ್ಮ ಅಂತಣ್ಣ ನಾಯಕರು (ಚಂದ್ರು ತಾಯಿ ಅಣ್ಣಂದಿರು) ಈ ಜಮೀನು ಮುಂಬೈ ಸುಭಾಷ್ ಶೆಟ್ಟರಿಗೆ ಮಾರಾಟ ಮಾಡಿ ಉಡುಪಿ ಜಿಲ್ಲೆಯ ಕೋಟ ಸಮೀಪದ ತೆಕ್ಕಟ್ಟೆಯ ಅವರ ಮೂಲ ಮನೆಗೆ ಹೋದರು ನಂತರ ಈಗ ಈ ಜಮೀನು ಸಾಗರದ ರಾದಾ ಕೃಷ್ಣ ಅಡಿಕೆ ಮಂಡಿಯವರು ಖರೀದಿಸಿದ್ದಾರೆ.
ಬಾಲ್ಯದಲ್ಲಿ ಚಂದ್ರು ನಾನು ಈ ಜಮೀನಿನಲ್ಲಿ ಆಟ ಆಡುತ್ತಿದ್ದ ನೆನಪುಗಳು ಹಸಿರಾಗಿದೆ, ಚಂದ್ರು ಆಗ ತುಂಬಾ ಚುರುಕು ಮತ್ತು ತುಂಟಾಟದ ಗೆಳೆಯ.
ನಾಗಪ್ಪಣ್ಣರ ಜೊತೆ ಅವರ ಪುತ್ರ (ಚಂದ್ರು ಅಣ್ಣ) ಮಂಜುನಾಥ್ ವರದಾ ಬಸ್ಸಿನ ಸಂಸ್ಥೆ ತುಂಬಾ ವರ್ಷ ನಡೆಸಿದರು.
ಚಂದ್ರು ತುಂಬಾ ಅದ್ದೂರಿಯಾಗಿ ಕಟ್ಟಿಸಿರುವ ಮನೆಗೆ ತಮ್ಮ ತಂದೆ ವರದಾ ಬಸ್ಸು ಮಾಲಿಕರಾಗಿದ್ದ ನಾಗಪ್ಪಣ್ಣರ ಸ್ಮರಣಾರ್ಥ #ಅಪ್ಪಯ್ಯ ಎಂದು ನಾಮಕರಣ ಮಾಡಿದ್ದು ತುಂಬಾ ಖುಷಿ ಆಯಿತು ಅವರ ಕುಟುಂಬದಲ್ಲಿ ಆ ಕಾಲದಲ್ಲಿ ಸಾಹಸಿ ಬಸ್ ಉದ್ಯಮ ನಡೆಸಿದ ಮುತ್ತಣ್ಣ ಮತ್ತು ನಾಗಪ್ಪಣ್ಣರ ಕೃಪೆ ಸದಾ ಅವರ ಮಕ್ಕಳ ಮೇಲಿರಲಿ ಎಂದು ಹಾರೈಸುತ್ತಾ ನೂತನ ಗೃಹ ಚಂದ್ರು ದಂಪತಿಗಳಿಗೆ ಆಯುರಾರೋಗ್ಯ ಆಯಸ್ಸು ಐಶ್ವರ್ಯ ದಯಪಾಲಿಸಲಿ ಎಂದು ನಮ್ಮ ಊರ ದೇವರಾದ ಶ್ರೀವರ ಸಿದ್ದಿ ವಿನಾಯಕ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.
Comments
Post a Comment