Blog number 1850. ಮೇಲ್ಜಾತಿ ಬ್ರಾಹ್ಮಣ ಸಂಘಟನೆ ಬಗ್ಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ. ವಿ. ಸುಬ್ಬಣ್ಣರ ಕರಪತ್ರದ ಬಗ್ಗೆ ಹೆಚ್ಚು ಚರ್ಚೆ ಮತ್ತು ವಿಮರ್ಶೆಗಳಾಗಲಿ.
#ಮೇಲ್ಜಾತಿ_ಸಂಘಟನೆ_ಬಗ್ಗೆ_ಕೆವಿ_ಸುಬ್ಬಣ್ಣರ_ಪ್ರತಿಭಟಿನೆ_ಕರ_ಪತ್ರ
#ಸಾಗರದಲ್ಲಿ_1982ರ_ಪೆಬ್ರುವರಿ_6_ಮತ್ತು_7ರಲ್ಲಿ_ನಡೆದ_ಅಖಿಲ_ಹವ್ಯಕ_ಮಹಾಸಮ್ಮೇಳನದಲ್ಲಿ.
#ದೇಶದ_ಖ್ಯಾತ_ಪತ್ರಕರ್ತ_ಡಿಪಿ_ಸತೀಶ್
#ನಾಡಿನ_ಖ್ಯಾತ_ವಿಮರ್ಶಕ_ಅರವಿಂದ_ಚೊಕ್ಕಾಡಿ
#ಧೀರ_ಹವ್ಯಕ_ಕನ್ನಡಿಗ_ಅನಿವಾಸಿ_ಭಾರತೀಯ_ಶಾಂತರಾಮ_ಹೆಗಡೆಕಟ್ಟೆ
#ಜಾತಿ_ಆಚರಣೆ_ವಿರೋದಿಸಿದ್ದಾರೆ.
ಹೆಗ್ಗೋಡಿನ ನೀನಾಸಂ - ಸಂಸ್ಥೆ ನಾಟಕ ಮತ್ತು ಸಿನಿಮಾ ಜನರಿಗೆ ಹೇಗೆ ಚಿರಪರಿಚಿತವೋ ಹಾಗೆಯೇ ಇದರ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ತಮ್ಮ ವಿಚಾರ ಮತ್ತು ಬರವಣಿಗೆಯಿಂದ ವಿಶ್ವವಿಖ್ಯಾತರು.
ಅಂತರಾಷ್ಟ್ರೀಯ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರು ಶಿವಮೊಗ್ಗ, ಜಿಲ್ಲೆಯ ಸಾಗರ ತಾಲ್ಲೂಕಿನ ಸಣ್ಣ ಹಳ್ಳಿ ಹೆಗ್ಗೋಡಿನವರು ಮತ್ತು ನಮ್ಮ ತಾಲ್ಲೂಕಿನವರು ಅಂತ ನಮಗೆಲ್ಲ ಕೆ.ವಿ.ಸುಬ್ಬಣ್ ಅಂದರೆ ಹೆಮ್ಮೆ.
ಒಮ್ಮೆ ನೀನಾಸಂ ಸಭಾ0ಗಣದಲ್ಲಿ ಸುಬ್ಬಣ್ಣನವರ ಜೊತೆ ಸಭೆ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದೆ, ದೇವಾಡಿಗ ಜಾತಿಯ (ವೀರಪ್ಪ ಮೊಯ್ಲಿ) ಜಾತಿ ಸಮಾವೇಶವದು, ಸಂಘಟಕರು ನನ್ನನ್ನ ಕರೆದಾಗ ನನಗೆ ನಂಬಲಿಕ್ಕೆ ಆಗಲಿಲ್ಲ, ಸಣ್ಣ ಜಾತಿ ಸಮಾವೇಶಕ್ಕೆ ಸುಬ್ಬಣ್ಣ ಬರುವುದು ಅನುಮಾನ ಅಂದೆ. ಇಲ್ಲ ಒಪ್ಪಿದಾರೆ ಮತ್ತು ಸಬಾoಗಣ ಉಚಿತವಾಗಿ ನೀಡಿದ್ದಾರೆ ಅಂದರು.
ಅವತ್ತಿನ ಸಭೆಯಲ್ಲಿ ಸುಬ್ಬಣ್ಣರ ಬಾಷಣ ಸಣ್ಣ ಜಾತಿಗಳ ಶೂದ್ರರಿಗೆ ಒ೦ದು ಆಶಾದಾಯಕವಾದ ದಿಕ್ಷೂತಿಯ ನೀತಿ ಪಾಠವಾಗಿತ್ತು, ರಾಮಮನೋಹರ ಲೋಹಿಯಾ ಅವರ ಸಮಾಜವಾದದ ಅನುಯಾಯಿ ಆಗಿದ್ದ ಸುಬ್ಬಣ್ಣ ಸಮಾಜವಾದದ ವಿಚಾರಧಾರೆ ಹೊಂದಿದವರು ಹಾಗಾಗಿ ಅವರ ಮಾತನ್ನ ಗಮನವಿಟ್ಟು ಆಲೈಸುತ್ತಿದ್ದೆ..........
" ದೇಶದಲ್ಲಿ ಮೇಲ್ಜಾತಿಗಳ ಸಂಘಟನೆಗಳು ಅವಶ್ಯವಿಲ್ಲ, ಅದರಿಂದ ಸಮಾಜಕ್ಕೆ ಮಾರಕ ಆದರೆ ಅಸಂಘಟಿತ ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕು ಮತ್ತು ಸವಲತ್ತುಗಳಿಗಾಗಿ ಸಂಘಟಿತರಾಗಬೇಕು " ಎಂಬ ಮಾತು ಸ್ವತಃ ಬ್ರಾಹ್ಮಣರಾದ ಹಾಗೂ ವಿಚಾರವಾದಿ ಸುಬ್ಬಣ್ಣರ ಬಾಯಲ್ಲಿ ಬ೦ದಿದ್ದರ ತಾತ್ಪಯ೯ ಅವರಿಂದಲೆ ಕೇಳಬೇಕೆಂದುಕೊಂಡೆ.
ಸಬೆಯ ಮಧ್ಯದಲ್ಲಿ ಅವರು ವಿರಾಮದ ಮೂಡಿನಲ್ಲಿ ಇದ್ದಾಗ, " ಸುಬ್ಬಣ್ಣ ಮೇಲ್ಜಾತಿಗಳು ಯಾಕೆ ಸಂಘಟಿತರಾಗಬಾರದು, ಸಂಘಟಿತರಾದರೆ ಸಮಾಜಕ್ಕೆ ಯಾವ ರೀತಿ ಮಾರಕ ? ನನಗೆ ಸರಿಯಾಗಿ ಅಥ೯ವಾಗಿಲ್ಲ"... ಅಂದೆ, ಅದಕ್ಕೆ ಅವರು ನೀಡಿದ ವಿವರಣೆ
"ಬ್ರಾಹ್ಮಣರು ಸಾವಿರಾರು ವಷ೯ದಿಂದ ತಮ್ಮ ಆಚರಣೆಗಳಿಂದ ಸಂಘಟಿತರಾಗೇ ಇದ್ದಾರೆ, ಅವರಿಗೆ ಸಣ್ಣ ಜಾತಿಗಳ0ತೆ ಅವರ ಹಕ್ಕು, ಸವಲತ್ತುಗಳಿಗಾಗಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ಇಂತಹ ಉದ್ದೇಶದ ಸಂಘಟನೆ ಪ್ರಾರಂಭಿಸಿದರೆ ದೇಶದ ಇತರ ಜಾತಿಗಳನ್ನ ಅವು ಶೋಷಣೆ ಮಾಡಲು ಕಾರಣವಾಗುತ್ತೆ ಆದ್ದರಿಂದ ಅದರ ಅವಶ್ಯಕತೆ ಇಲ್ಲ."
"ಆದರೆ ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಸವಲತ್ತುಗಳಿಗಾಗಿ ಸಂಘಟಿತರಾಗದಿದ್ದರೆ ಸಂಘಟಿತ ದೊಡ್ಡ ಜಾತಿಗಳಿಂದ ಉಳಿಗಾಲ ಇಲ್ಲ" ಅಂದರು.
ಅವರ ಮಾತು ಸರಿಯಾಗಿ ಚಿಂತನೆ ಮಾಡಿದರೆ ಎಷ್ಟು ಅಥ೯ಗಬಿ೯ತ ಅಂತ ಅಥ೯ ಆಗುತ್ತೆ.
ಇವತ್ತು ನಾನು ಪೋಸ್ಟ್ ಮಾಡಿದ ಶಾಂತಾರಾಮ ಹೆಗಡೆ ಕಟ್ಟೆ ಸಂದರ್ಶನಕ್ಕೆ ಖ್ಯಾತ ಪತ್ರಕರ್ತ ಡಿ.ಪಿ. ಸತೀಶ್ ಪ್ರತಿಕ್ರಿಯಿಸಿ ತಾವು ಜಾತಿ ಸಂಘಟನೆಗಳಿಂದ ದೂರ ಮತ್ತು ಸಮಾಜದಲ್ಲಿ ಶೋಷಿತರು ದಮನಿತರಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮಾತ್ರ ಜಾತಿ ಸಂಘಟನೆಗಳು ಮಾತ್ರ ಜಾತಿ ಸಂಘಟನೆ ಮಾಡಲು ಹಕ್ಕು ಹೊಂದಿದ್ದಾರೆ ಎಂದಾಗ ನನಗೆ ಕೆ.ವಿ.ಸುಬ್ಬಣ್ಣರ ಜೊತೆ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ದೇವಾಡಿಗ ಜಾತಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದಾಗ ಅವರಾಡಿದ ಮಾತು ಅದಕ್ಕೆ ಅವರು ನೀಡಿದ ವಿವರಣೆ ನೆನಪಾಯಿತು ಅದನ್ನು ಇಲ್ಲಿ ದಾಖಲಿಸಿದ್ದೇನೆ.
ಖ್ಯಾತ ವಿಮರ್ಶಕ, ಬರಹಗಾರರಾದ #ಅರವಿಂದ_ಜೊಕ್ಕಾಡಿ ಅವರು ನನ್ನ ಅತಿಥಿ ಆಗಿದ್ದಾಗ ಇಂತಹದೇ ವಿಚಾರದಲ್ಲಿ ಅವರು ಹೇಳಿದ್ದು "ಅರ್ಚಕರ ಮೇಲಿನ ಲೋಪಗಳು ಆರೋಪಗಳನ್ನು ಬ್ರಾಹ್ಮಣ ಸಂಘಟನೆಗಳು ಸಮರ್ಥಿಸಿಕೊಳ್ಳಬಾರದು" ಎಂಬುದು.
ಇಡಗುಂಜಿಯ ಮುಜರಾಯಿ ದೇವಸ್ಥಾನದ ಪಂಕ್ತಿ ಭೇದದ ಬಗ್ಗೆ ಸಾಮಾಜಿಕ ಜಾಲ ತಾಣದ ಚರ್ಚೆಯಲ್ಲಿ ಅನೇಕರು ಸಮರ್ಥಿಸಿಕೊಳ್ಳುವ ವಿಪರೀತ ಜಾತಿ ಪ್ರೇಮದ ಬಗ್ಗೆ ಪರ ವಿರೋದಗಳು ನೋಡುತ್ತಿದ್ದೇವೆ.
1982ರ ಪೆಬ್ರುವರಿ 6 ಮತ್ತು 7 ರಂದು ಸಾಗರದಲ್ಲಿ ನಡೆದ ಅಖಿಲ ಹವ್ಯಕ ಮಹಾ ಸಮ್ಮೇಳನದಲ್ಲಿ ಕೆ.ವಿ. ಸುಬ್ಬಣ್ಣ ಮುದ್ರಿಸಿ ಹಂಚಿದ ಕರಪತ್ರ ಹವ್ಯಕ ಜಾತಿ ಸಮಾವೇಶಕ್ಕೆ ಅವರು ವ್ಯಕ್ತ ಪಡಿಸಿದ ತೀವ್ರ ಪ್ರತಿಭಟನೆ ಆಗಿತ್ತು.
ಆ ಕರ ಪತ್ರದಲ್ಲಿ ಕೆ.ವಿ.ಸುಬ್ಬಣ್ಣ "ಜಾತಿ ಪದ್ಧತಿ ತಪ್ಪೆಂದು ಎಲ್ಲರೂ ಒಪ್ಪುತ್ತಾರೆ, ಮಠಾದೀಶರು ಬಹಿರಂಗವಾಗಿ ಧ್ವನಿ ಎತ್ತುತ್ತಾರೆ ಆದರೆ ಆಚರಣೆಯಲ್ಲಿ ಮಾತ್ರ ಹಾಗೆ ನಡೆದು ಕೊಳ್ಳುವುದಿಲ್ಲ" ಎಂದು ನಮೂದಿಸಿದ್ದಾರೆ.
Comments
Post a Comment