#ವಿದಾನಪರಿಷತ್_ನಲ್ಲಿ_ಸದಸ್ಯ_ಸಿದ್ಧಿ_ಸೀಮೆಎಣ್ಣೆ_ಪಡಿತರದಲ್ಲಿ_ವಿತರಿಸಲು_ಒತ್ತಾಯಿಸಿದರು
#ಕೇಂದ್ರಸರ್ಕಾರ_ಉಚಿತ_ಅಡುಗೆ_ಅನಿಲ_ಸಿಲೆಂಡರ್_ಸಂಪರ್ಕ_ನೀಡುವ_ಮೂಲಕ_ದೇಶ_ಸೀಮೆಎಣ್ಣೆ_ಮುಕ್ತಮಾಡಿದೆ.
#ಬೆಂಗಳೂರಲ್ಲಿ_ಖಾಸಾಗಿ_ಸೀಮೆಎಣ್ಣೆ_85_ರಿಂದ_100_ರೂಗೆ_ಲಭ್ಯ.
ಕೇಂದ್ರ ಇಂದನ ಸಚಿವರಾದ ರಾಮ ನಾಯಕರು 28- ನವೆಂಬರ್ -2003 ರಲ್ಲಿ ಕೆರೋಸಿನ್ ಆಮದು ಕಡಿತಗೊಳಿಸಲು ಆದೇಶಿಸುತ್ತಾರೆ.
ಇವರಿಗೆ ದೇಶದ ಲಾರಿ ಮಾಲಿಕರ ಒತ್ತಾಯವೂ ಕಾರಣ ಏನೆಂದರೆ ಪಡಿತರ ವ್ಯವಸ್ಥೆಯ ಸೀಮೆ ಎಣ್ಣೆ ಕಳ್ಳ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಡಿಸೇಲ್ ಗೆ ಕಲಬೆರಕೆ ಆಗುತ್ತಿದೆ ಇದರಿಂದ ಅನೇಕ ಲಾರಿ ಮಾಲಿಕರು ಕಡಿಮೆ ಬಾಡಿಗೆಯಲ್ಲಿ ಸಾಗಾಣಿಕೆ ಮಾಡುತ್ತಾರೆ ಇದರಿಂದ ಪರಿಸರಕ್ಕೂ ಹಾನಿ, ಸರ್ಕಾರದ ಸಹಾಯದನ ಕೂಡ ದುರ್ಬಳಕೆ ಎಂಬ ಮುಖ್ಯ ಕಾರಣ.
ಭಾರತ 1.2 ಮಿಲಿಯನ್ ಬ್ಯಾರಲ್ ಸೀಮೆ ಎಣ್ಣೆ ವಾರ್ಷಿಕ ಆಮದು ಮಾಡಿ ಅದಕ್ಕೆ ಸಹಾಯಧನ ನೀಡಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುತ್ತಿದ್ದ ಸೀಮೆ ಎಣ್ಣೆ ಶೇಕಡಾ 99 ದುರುಪಯೋಗ ಆಗುತ್ತಿದೆ ಎಂಬ ಸರ್ಕಾರದ ವರದಿಯೂ ಇದೆ.
ಹಾಗಾಗಿ ಮೋದಿಯವರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡಿ ಸೀಮೆ ಎಣ್ಣೆ ಮುಕ್ತ ಭಾರತ ಮಾಡಿದೆ.
ವಿದ್ಯುತ್ ಸಂಪರ್ಕ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ, ನಿರಂತರ ವಿದ್ಯುತ್ ನೀಡಲಾಗದ ಪ್ರದೇಶದಲ್ಲಿ ಜನ ದೀಪಕ್ಕಾಗಿ ಸೀಮೆ ಎಣ್ಣೆ ವಿತರಣೆ ಮಾಡಲು ಒತ್ತಾಯಿಸುತ್ತಾರೆ ಆದರೆ ಕೇಂದ್ರ ಸರ್ಕಾರ ಸಹಾಯಧನ ವ್ಯವಸ್ಥೆಯಲ್ಲಿ ಪಡಿತರ ಮೂಲಕ ಸೀಮೆ ಎಣ್ಣೆಯನ್ನು ವಿತರಿಸುವ ಪ್ರಮಯವೇ ಇಲ್ಲ.
ಜನತೆ ಸೋಲಾರ್ ಅಥವ ಬ್ಯಾಟರಿ ಆದಾರದಲ್ಲಿ ದೀಪ ಬೆಳಗಿಸಿಕೊಳ್ಳಬೇಕಷ್ಟೆ ಅಷ್ಟಕ್ಕೂ ಸೀಮೆ ಎಣ್ಣೆ ಬೇಕೇ ಬೇಕೆಂದರೆ ಓಪನ್ ಮಾರ್ಕೆಟ್ ನಲ್ಲಿ 85 ರಿಂದ 100 ರೂ ಗೆ ಒಂದು ಲೀಟರ್ ಸೀಮೆ ಎಣ್ಣೆ ಖರೀದಿಸಬೇಕು.
ಸೀಮೆ ಎಣ್ಣೆ 1846 ರಲ್ಲಿ ಕೆನಡಿಯನ್ ಅಬ್ರಾಹಿಂ ಪಿಂಕೋ ಜಸ್ನರ್ ಕಂಡು ಹಿಡಿಯುತ್ತಾರೆ ಆಗ ಇದನ್ನು ಎಕ್ಸ್ಲೆಂಟ್ ಲ್ಯಾಂಪ್ ಪ್ಯೂಯಲ್ ಅಂತಾನೆ ಜನಪ್ರಿಯ ಆಗುತ್ತದೆ.
UK, ಆಫ್ರಿಕಾ, ನಾರ್ವೆ ಮತ್ತು ಚಿಲಿಯಲ್ಲಿ ಸೀಮೆ ಎಣ್ಣೆಗೆ ಪ್ಯಾರಾಫಿನ್ ಎಂದು ಹೆಸರು.
ಲ್ಯಾಂಪ್ ಆಯಿಲ್ ಕೋಲ್ ಆಯಿಲ್ ಅಂತಲೂ ಕರೆಯುವ ಕೆರೋಸಿನ್ ನನ್ನು ಜೆಟ್ ಇಂಜಿನ್ ಮತ್ತು ರಾಕೆಟ್ ಇಂಜಿನ್ ನಲ್ಲಿ ಬಳಸುತ್ತಾರೆ.
1851 ರಲ್ಲಿ ಸಾಮ್ಯೂಯಲ್ ಮಾರ್ಟಿನ್ ಕಿಯಲ್ ಲ್ಯಾಂಪ್ ಆಯಿಲ್ ಅಧಿಕೃತ ಮಾರಾಟದ ಅನುಮತಿ ಪಡೆದು ಮಾರಾಟ ಪ್ರಾರಂಬಿಸಿದ್ದು ವಿಶ್ವದಾದ್ಯಂತ ಬಹು ಬೇಡಿಕೆ ಪಡೆದಿತ್ತು.
2003ರಿಂದ ಭಾರತದೇಶ ಸೀಮೆ ಎಣ್ಣೆ ಆಮದು ಕಡಿತ ಗೊಳಿಸುತ್ತಾ 2018ರಿಂದ ಸಂಪೂರ್ಣ ಆಮದು ನಿಲ್ಲಿಸಿದೆ, ಖಾಸಾಗಿ ಸಂಸ್ಥೆಗಳು ಆಮದು ಮಾಡಿ ಮಾರಾಟ ಮಾಡಬಹುದಾದರೂ ಸಕಾ೯ರದ ಸಹಾಯ ಧನ ಇಲ್ಲದಿರುವುದರಿಂದ ದುಭಾರಿ ಬೆಲೆ ಅಂದರೆ ಡಿಸೇಲ್ ಧರಕ್ಕೆ ಸಮನಾಗಿರುವುದರಿಂದ ಜನ ಸಾಮಾನ್ಯರು ಖರೀದಿಸುವುದಿಲ್ಲ ಮತ್ತು ಡಿಸೇಲ್ ಗೆ ಕಲಬೆರಕೆ ಮಾಡುವ ಕಾಳಸಂತೆ ಕೋರರಿಗೂ ಲಾಭವಿಲ್ಲ ಆದ್ದರಿಂದ ಭಾರತ ದೇಶ ಸಬ್ಸಿಡಿ ಸೀಮೆ ಎಣ್ಣೆ ಮುಕ್ತ ದೇಶವಾಗಿದೆ.
ಅನಿವಾರ್ಯ ಸಂದರ್ಭದಲ್ಲಿ ಬೆಳಕಿಗಾಗಿ ಪರ್ಯಾಯ ದೀಪಗಳು ಪೇಟೆಯಲ್ಲಿ ಲಭ್ಯವಿದೆ, ಸಂಪ್ರದಾಯಿಕ ಸೀಮೆಎಣ್ಣೆ ದೀಪ, ಲಾಟೀನು, ಪೆಟ್ರೋಮ್ಯಾಕ್ಸ್, ಸೀಮೆ ಎಣ್ಣೆ ಸ್ಟವ್ ಗಳು ಮುಂದಿನ ದಿನದಲ್ಲಿ ವಸ್ತು ಸಂಗ್ರಹಾಲಯದಲ್ಲಿ ಮಾತ್ರ ನೋಡಲು ಸಿಗುತ್ತದೆ.
ಸೀಮೆ ಎಣ್ಣೆ ಬ್ಲಾಕ್ ಮಾರ್ಕೆಟ್ ನಿಯಂತ್ರಣ ಮಾಡಲು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪ್ರಾರಂಭ ಆಗಿ ಮೋದಿಯವರ ಸಕಾ೯ರದಲ್ಲಿ ಸಂಪೂರ್ಣ ನಿಯಂತ್ರಣ ಆಗಿದೆ. (ಆಯಾ ಪಕ್ಷಗಳು ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಬಹುದು😀)
Comments
Post a Comment