ಸಾರ್ವಜನಿಕ ಪ್ರದೇಶದಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸುವ DB (ಡೆಸಿಬಲ್) ಎಷ್ಟಿರಬೇಕು ಎಂದು ಪೋಲಿಸ್ ಇಲಾಖೆ ರಾಜ್ಯದಾದ್ಯಂತ ನೋಟೀಸು ನೀಡುತ್ತಿದೆ ಉಲ್ಲಂಘಿಸಿದರೆ ಕೇಸ್, ದಂಡ ಮತ್ತು ಶಿಕ್ಷೆ ಇದೆ.
#ಇದನ್ನು_ಅಳೆಯುವ_ಮೆಷಿನ್_Nomack
#ಸ್ಮಾರ್ಟ್_ಪೋನ್_ನಲ್ಲಿ_ಆಪ್_ಇದೆಯಂತೆ
#ಡೆಸಿಬಲ್_ಶಬ್ದ_ಮಾಲಿನ್ಯದ_ಅಳತೆಯ_ಪದ.
ನಿನ್ನೆ ಪೋಲಿಸ್ ಇಲಾಖೆ ಎಲ್ಲಾ ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಕಲ್ಯಾಣ ಮಂಟಪಗಳಿಗೆ ನೋಟೀಸ್ ನೀಡಿದೆ ಅದರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಶಬ್ದ ಮಾಲಿನ್ಯದ ನಿಯಂತ್ರಣದ ವಿದಿ ನಿಯಮ 2001 ಮತ್ತು ಅದರ 2010ರ ಅಮೆಂಡ್ ಮೆಂಟ್ ಪ್ರಕಾರ 1986ರ ನಿಯಮದಡಿ ನಿಗದಿ ಮಾಡಿದ ಮಾಪಕ (ಡಿಸಿಬಲ್) ಶಬ್ದಕ್ಕಿಂತ ಕಡಿಮೆ ಸೌಂಡ್ ಸಿಸ್ಟಂನಲ್ಲಿ ಹಾಕಬಹುದು ಮತ್ತು ನಿಯಮಕ್ಕಿಂತ ಹೆಚ್ಚು ವಾಲ್ಯೂಮ್ ನಲ್ಲಿ Loud speaker ಹಾಕಿದರೆ Noice pollution Act ಅಡಿ ಕಾನೂನು ರೀತ್ಯ ಕೇಸು / ದಂಡ ಪಾವತಿಸಬೇಕು ಎಂಬ ನೋಟೀಸ್ ನೀಡಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಎಲ್ಲರೂ ಅನಿವಾಯ೯ವಾಗಿ ಪಾಲಿಸುತ್ತಾರೆ ಇದಕ್ಕೆ ಕೆಲ ದಿನಗಳ ಕಾಲಾವಕಾಶ ಬೇಕಾಗಬಹುದು.
ಶಬ್ದ ಮಾಲಿನ್ಯ ಅಳತೆಯ ಡೆಸಿಬಲ್ ಹಗಲಿನಲ್ಲಿ ವಸತಿ ಪ್ರದೇಶದಲ್ಲಿ 55 DB ಮತ್ತು ರಾತ್ರಿ 45 DB ಮೀರಬಾರದೆಂದಿದೆ.
ಇದನ್ನು ಅಳೆಯುವ Nowack ಯಂತ್ರ ಪೋಲಿಸ್ ಇಲಾಖೆ ಸದ್ಯದಲ್ಲೇ ಹೊಂದಲಿದೆ, ಸ್ಮಾರ್ಟ್ ಫೋನಿನಲ್ಲಿ ಆ್ಯಪ್ ಒಂದನ್ನು ಬಳಸಿ ಶಬ್ದ ಮಾಲಿನ್ಯ ಅಳತೆ ಮಾಡಬಹುದೆಂದು ಸುದ್ದಿ ಇದೆ.
ಅಣು ಬಾಂಬ್ ಸಿಡಿದರೆ ಅದರ ಶಬ್ದ 1100. DB ಇರುತ್ತದಂತೆ, ೦.22 ರಿವಾಲ್ವರ್ ಸಿಡಿದರೆ 140 DB, ಕಾರಿನ ಹಾರನ್ ಶಬ್ದ 107 ರಿಂದ 109 DB, ಸಿನಿಮಾ ಮಂದಿರದಲ್ಲಿ 85 DB,
85 DB ಯಿಂದ 95 DB ಅಂದರೆ 85 DB ಹತ್ತುಪಟ್ಟು ಹೆಚ್ಚಂತೆ.
ಗ್ರೇನೇಡ್ ಸಿಡಿದರೆ 160 ರಿಂ 180 DB, ಜೆಟ್ ಇಂಜಿನ್ ಶಬ್ದ 150 DB.
1600 ವಾಟ್ಸ್ ಸ್ಪೀಕರ್ 112 DB ಆದರೆ 100 ವಾಟ್ಸ್ ಸ್ಟೀಕರ್ 100 DB.
Comments
Post a Comment