Blog number 988. ಹಂದಿಗೋಡು ನಿಗೂಡ ಕಾಯಿಲೆ ಪೀಡಿತರ ಧ್ವನಿಯಾಗಿದ್ದ, ಸ್ವತಃ ಹಂದಿಗೋಡು ಕಾಯಿಲೆಯಿಂದ ನರಳುತ್ತಿದ್ದ ದಲಿತ ನಾಯಕ ಗೆಳೆಯ ರಾಜೇಂದ್ರ ಬಂದಗದ್ದೆ ಅವರಿಗೆ ಶ್ರದ್ದಾ೦ಜಲಿಗಳು
#ಹಂದಿಗೋಡು_ಕಾಯಿಲೆಗೆ_ಔಷದಿ_ಕಂಡುಹಿಡಿಯುವುದು_ಯಾವಾಗ?
#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿ_ಯಾವಾಗ?
#ಹಂದಿಗೋಡು_ನಿಗೂಡ_ಕಾಯಿಲೆಗೆ_ಬಲಿಯಾದ_ದಲಿತ_ಪರ_ಹೋರಾಟಗಾರ
#ಹಣ_ಅಧಿಕಾರದಿಂದ_ದೂರವಿದ್ದು_ದಲಿತರ_ಪರ_ಧ್ವನಿಯಾಗಿದ್ದ_ವಿದ್ಯಾವಂತ
#ಸ್ವಾತಂತ್ರ್ಯದ_ಅಮೃತ_ಮಹೋತ್ಸವದಲ್ಲಿ_ಕಪ್ಪು_ಬಾವುಟ_ಪ್ರದರ್ಶಿಸಿದ್ದರು
#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ದಯಾಮರಣ_ನೀಡಿ_ಎ೦ಬ_ಬೇಡಿಕೆ_ಸಲ್ಲಿಸಿದ್ದರು.
#ಗೆಳೆಯ_ರಾಜೇಂದ್ರಬ೦ದಗದ್ದೆ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗಾಗಿ_ದೇವರಲ್ಲಿ_ಪ್ರಾರ್ಥಿಸುತ್ತೇನೆ.
ರಾಜೇಂದ್ರ ಬಂದಗದ್ದೆ ಪರಿಶಿಷ್ಟ ಜಾತಿಯ ಚೆನ್ನಯ್ಯ ಸಮಾಜ ಸಂಘಟನೆ ಮಾಡಿದ ದಲಿತ ಮುಖಂಡ ಆ ಸಮಾಜದ ರಾಜ್ಯ ಉಪಾದ್ಯಕ್ಷ.
ತನ್ನ ಹುಟ್ಟೂರಾದ ಹಂದಿಗೋಡಿನ ನಿಗೂಡ ಕಾಯಿಲೆಗೆ ಇವರ ವಂಶದವರೆಲ್ಲ ಬಲಿಯಾಗಿದ್ದು ಕಣ್ಣಾರೆ ನೋಡಿದವರು ಈ ರಾಜೇಂದ್ರ ಬಂದಗದ್ದೆ ಅಷ್ಟೇ ಅಲ್ಲ 1975 ರಿಂದ ಹಂದಿಗೋಡು ಕಾಯಿಲೆಯ ತೀವ್ರ ಪರಿಣಾಮ ಅನುಭವಿಸಿದ ನತದೃಷ್ಟ ಜನ ನಾಯಕ.
ಎಸ್.ಎಸ್.ಎಲ್.ಸಿ. ತನಕ ವಿದ್ಯಾಬ್ಯಾಸ ಪಡೆದ ಶ್ರಮಜೀವಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲಿಲ್ಲ, ಚುನಾವಣಾ ರಾಜಕಾರಣ ಮಾಡಲಿಲ್ಲ ಆದರೆ ಇವರ ಸಹಾಯ ಪಡೆದು ಗೆದ್ದ ರಾಜಕಾರಣಿಗಳು ಈ ಸಂಪನ್ನ ದಲಿತ ನಾಯಕನಿಗೆ ಅಥವ ಇವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ದಯಪಾಲಿಸಲಿಲ್ಲ.
ಕುಮಾರ ಸ್ವಾಮಿ ಮುಖ್ಯಮಂತ್ರಿ ಆದಾಗ ಇಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಮೊದಲ ರಾಜ್ಯದ ಮುಖ್ಯಮಂತ್ರಿ.
1975 ರಿಂದ ಈ ಕಾಯಿಲೆಯಿಂದ ನರಳಿದ ರಾಜೇಂದ್ರ ಬಂದಗದ್ದೆ ಅನುಭವಿಸಿದ ದೈಹಿಕ ನೋವು ಮತ್ತು ಅನುಭವಿಸಿದ ಮಾನಸಿಕ ಯಾತನೆ ಬೇರೆಯವರಿಗೆ ಅಥ೯ವಾಗಲಾರದು.
ಮಗನ ವಿವಾಹ ಆಗಿದೆ ಖಾಸಾಗಿ ಉದ್ಯೋಗ ಮಾಡುತ್ತಾ ಇವರಿಂದ ಬೇರೆ ಇದ್ದಾರೆ, ಮಗಳ ವಿವಾಹ ಆಗಿದೆ ಅಳಿಯ ಚಾಲಕ ವೃತ್ತಿ ವೃತ್ತಿ ಮಾಡುತ್ತಾ ಇವರ ಜೊತೆ ಇದ್ದಾರೆ.
ಕಳೆದ ಹತ್ತು ವರ್ಷದಿಂದ ಈ ನಿಗೂಡ ಕಾಯಿಲೆಯ ಅನುಭವಿಸಲಾಗದ ನೋವಿಗಾಗಿ ರಾಜೇಂದ್ರ ಬಂದಗದ್ದೆ ಹೆಚ್ಚು ಮಧ್ಯಪಾನ ಸೇವಿಸಿ ನೋವು ಮರೆಯುತ್ತಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ದೇಶದಾದ್ಯಂತ ಸಂಭ್ರಮ ಪಡುವಾಗ ಇವರು ಇವರ ಸಮಾಜದ ಪರಿಸ್ಥಿತಿಗಾಗಿ ಕಪ್ಪು ಬಾವುಟ ಪ್ರದರ್ಶಿಸಿ ಧರಣಿ ನಡೆಸಿದರು.
ಹಂದಿಗೋಡು ಕಾಯಿಲೆ ಪೀಡಿತರ ನೋವು-ದುಃಖ-ದುಮ್ಮಾನ ಸ್ವತಃ ಅನುಭವಿಸುತ್ತಿದ್ದ ರಾಜೇಂದ್ರ ಬಂದಗದ್ದೆ ಸರ್ಕಾರಗಳ ನಿರಾಸಕ್ತಿಯಿಂದ ಹತಾಶರಾಗಿ ಸರ್ಕಾರಕ್ಕೆ ಹಂದಿಗೋಡು ಕಾಯಿಲೆ ಪೀಡಿತರಿಗೆ ದಯಾಮರಣ ನೀಡಿ ಎಂದು ಅರ್ಜಿ ಸಲ್ಲಿಸಿದ್ದರೆಂದರೆ ಅರ್ಥವಾದೀತು ಇವರ ದಯಾನೀಯ ಪರಿಸ್ಥಿತಿ.
ಬಡವರು- ದಲಿತರು -ಅವರ ನಾಯಕರು - ಉಹೂಂ ಅವರನ್ನು ಮನುಷ್ಯರೆಂದು ಸಮಾಜ ಗುರುತಿಸುವುದು ಸಾಧ್ಯವೇ ಇಲ್ಲ, ಹಾಗಾಗಿ ಹಂದಿಗೋಡು ನಿಗೂಡ ಕಾಯಿಲೆ ಪೀಡಿತರ ಪರವಾಗಿ ಹೋರಾಡಿದ ದಲಿತ ಮುಖಂಡ ರಾಜೇಂದ್ರ ಬಂದಗದ್ದೆ, ಈ ಹಿಂದೆ ತಾಲ್ಲುಕು ಬೋರ್ಡ್ ಸದಸ್ಯೆ ಆಗಿದ್ದ ಸಮಾಜವಾದಿ ಗೋಪಾಲಗೌಡರ ಶಿಷ್ಯೆ ಹಂದಿಗೋಡು ಮಾಸ್ತಮ್ಮ ಕೂಡ ಈ ಶಾಪಗ್ರಸ್ತ ಹಂದಿಗೋಡು ಕಾಯಿಲೆಯಿಂದ ಜೀವ ಕಳೆದುಕೊಂಡವರ ಸಾಲಿಗೆ ಸೇರಿದ್ದಾರೆ.
#ಸರ್ಕಾರಗಳು_ಯಾರಿಗಾಗಿ_ಯಾಕಾಗಿ?
Comments
Post a Comment