ಐದು ನೂರು ವರ್ಷದ ಹಿಂದೆ ಹಾಸನ ಜಿಲ್ಲೆಯ ರಾಮದೇವರ ಕಟ್ಟೆ ಪ್ರದೇಶದಲ್ಲಿ ಈ ತಳಿಯ ಭತ್ತ ಅಭಿವೃದ್ದಿ ಆಯಿತಂತೆ.
ಈ ಬಾಗದ ರೈತರು ಆಗಿನ ಮೈಸೂರು ರಾಜರ ಆಳ್ವಿಕೆಯಲ್ಲಿದ್ದಾಗ ರಾಜರಿಗೆ ತೆರಿಗೆ ನೀಡಲು ವಿಫಲರಾದಾಗ ತಾವು ಬೆಳೆದ ರಾಜ ಮುಡಿ ಅಕ್ಕಿ ರಾಜರಿಗೆ ತೆರಿಗೆ ಆಗಿ ನೀಡಿದರು ನಂತರ ಇದು ಪದ್ಧತಿ ಆಯಿತು ಮತ್ತು ರಾಜ ಪರಿವಾರ, ಸ್ಯೆನಿಕರು ಹಾಗೂ ಕುಸ್ತಿ ಪಟುಗಳಿಗೆ ಈ ಅಕ್ಕಿ ಬೇಕೇ ಬೇಕಾದ್ದರಿಂದ ಮೈಸೂರು ಮಹಾರಾಜರಿಗಾಗಿಯೇ ಇದನ್ನು ಬೆಳೆದು ಸಮಪಿ೯ಸುತ್ತಿದ್ದರಿಂದಲೂ (ಮುಡಿಪಾಗಿ ಇಡುತ್ತಿದ್ದರಿಂದ) ರಾಜ ಮುಡಿ ಅಂತ ಹೆಸರು ಬಂತು ಅಂತಲೂ ಹೇಳುತ್ತಾರೆ.
ಈಗ ಕನಾ೯ಟಕ ಸಕಾ೯ರದ ಕೃಷಿ ಇಲಾಖೆ ಈ ತಳಿಗೆ ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ (ಭೂಗೋಳಿಕ ತಳಿ ಸೂಚಕ) ಸದ್ಯದಲ್ಲೇ ದೊರಕಿಸಿ ಕೊಡುವ ಪ್ರಯತ್ನದಲ್ಲಿದೆ.
ಎಕರೆಗೆ ಅತಿ ಕಡಿಮೆ ಇಳುವರಿ ಕೆಂಪು ಬಣ್ಣದ ದಪ್ಪ ಅಕ್ಕಿ ರೋಗ ನಿರೋದಕ ಶಕ್ತಿ ಹೊಂದಿದೆ, ಒಮ್ಮೆ ನೀವು ಬಳಿಸಿದರೆ ಬಿಡುವುದಿಲ್ಲ.
ಇದನ್ನು ಮೈಸೂರಿನ ನಟರಾಜ್ ಎಂಬುವವರು ರೈತರಿಂದ ನೇರವಾಗಿ ಖರೀದಿಸಿ ಆಸಕ್ತರಿಗೆ ತಲುಪಿಸುತ್ತಿದ್ದಾರೆ.
ನಾನು ಇವರಿಂದ ಖರೀದಿಸಿ ಬಳಸುತ್ತಿದ್ದೇನೆ ರಾಜ ಮುಡಿ ಅಕ್ಕಿಗೆ ಸರಿ ಸಮನಾದ ಅಕ್ಕಿ ನನಗೆ ಬೇರೆ ಕಂಡಿಲ್ಲ.
ನಟರಾಜ ಪೋನ್ ನಂಬರ್ 9844461074 ಮತ್ತು ವಾಟ್ಸಪ್ 8310980935.
Comments
Post a Comment