#ನನ್ನ_ಪ್ರೀತಿಯ_ಬೀಮನಕೊಣೆಯ_PLDB_ಬ್ಯಾಂಕ್.
#ಉತ್ಸಾಹಿ_ಯುವ_ಅಧ್ಯಕ್ಷ_ವ_ಶಂ_ರಾಮಚಂದ್ರ_ಭಟ್ಟರು
ಈಗ ಕೃಷಿಗಾಗಿ ಸಾಲ ನೀಡಲು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳು ತಾಮುಂದು ಅಂತ ಮುಂದು ಬರುತ್ತಿದೆ, ಕೈಗಾರಿಕೆ ಸಾಲದ ರೀತಿ ಪ್ರಾಜೆಕ್ಟ್ ರಿಪೋಟ್೯ ಇಂಜಿನಿಯರಿಂದ ತಯಾರಿಸಿ ಜಮೀನು ದಾಖಲೆ ನೀಡಿದರೆ ಒಂದೇ ಸಾರಿಗೆ ಕೇಳಿದಷ್ಟು ಲಕ್ಷ ರೂಪಾಯಿ ರೈತರ ಅಕೌಂಟ್ ಗೆ ಬಂದು ಬೀಳುತ್ತದೆ.
ಆದರೆ 90ರ ದಶಕದಲ್ಲಿ ರೈತರಿಗೆ ಸಾಲ ನೀಡುತ್ತಿರಲಿಲ್ಲ ಈ ಬ್ಯಾಂಕ್ ಗಳು, ಆಗ ಸ್ಥಳಿಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಗಳೇ ರೈತರ ಕೈ ಹಿಡಿಯುತ್ತಿತ್ತು.
1993 ರಲ್ಲಿ ಮೊದಲಿಗೆ ನನ್ನ ಜಮೀನಿಗೆ ತಂತಿ ಬೇಲಿ, ಬಾವಿ, ಪಂಪ್ ಸೆಟ್ ಗೆ ಸಾಲ ಪಡೆದ ನಾನು, ಈಗ ರಬ್ಬರ್ ಬೆಳೆಗೆ ಸಾಲ ಪಡೆದು, ರಬ್ಬರ್ ಪಸಲು ಮಾರಿ ರಬ್ಬರ್ ಸಾಲದ ಕಂತು ಕಟ್ಟುವ ತನಕದ ನನ್ನ ಅನುಭವದ ಕಥೆ ಇದೆ.
ಸ್ನೇಹ ಮಯಿ ಸಿಬ್ಬಂದಿಗಳು ಇಲ್ಲಿದ್ದಾರೆ ರೈತರಿಗೆ ಅಜಿ೯ ತುಂಬಿಸುವುದರಿಂದ ಹಿಡಿದು ಅವರಿಗೆ ನೇರ ಹಣ ತಲುಪಿಸುವ ತನಕ ಜವಾಬ್ದಾರಿ ವಹಿಸುತ್ತಾರೆ.
2021 ರ ಅಥಿ೯ಕ ವರ್ಷದ ಅಂತಿಮ ಮಾಚ್೯ 31 ಆದ್ದರಿಂದ ಕಂತಿನ ಹಣ ಪಾವತಿಗೆ ಹೋದಾಗ ವಿಶಾಲವಾದ ಬ್ಯಾಂಕಿನ ಕಟ್ಟಡ ನೋಡಿದಾಗ ಇದೆಲ್ಲ ನೆನಪಾಯಿತು.
ನೂತನ ಅಧ್ಯಕ್ಷರಾದ ಉತ್ಸಾಹಿ ಯುವ ರಾಜಕಾರಣಿ ವ. ಶಂ.ರಾಮಚಂದ್ರ ಭಟ್ಟರು ಅವರ ಕೊಠಡಿಗೆ ಕರೆದು ಮಾತಾಡಿದರು, ಅವರ ಹಾಲಿ ಕನಸು ಬೀಮನ ಕೋಣೆಯ ಭೂ ಅಭಿವೃದ್ದಿ ಬ್ಯಾಂಕ್ ಮುಖಾಂತರ ರಾಜ್ಯ ಮಟ್ಟದ ಕೃಷಿ ಮೇಳ ನಡೆಸುವುದು, ಇದಕ್ಕೆ ಸುಮಾರು 30 ಲಕ್ಷದ ವೆಚ್ಚದ ಅಂದಾಜು ಮಾಡಿದ್ದಾರೆ, ಇದಕ್ಕೆ ಬ್ಯಾಂಕಿನ ಹಣ ಬಳಸದೇ ನಡೆಸುವ ಉದ್ದೇಶ ಇವರದ್ದು, ಇವರ ಉದ್ದೇಶಿತ ಕಾರ್ಯಕ್ಕೆ ಸ್ಥಳಿಯ ಶಾಸಕರಾದ ಹರತಾಳು ಹಾಲಪ್ಪನವರು ಎಲ್ಲಾ ರೀತಿಯ ಸಹಕಾರದ ಭರವಸೆ ನೀಡಿದ್ದು ಮತ್ತು ದಮ೯ಸ್ಥಳದ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲು ಒಪ್ಪಿರುವುದು ಮತ್ತು ಈಗಾಗಲೇ 80 ಕ್ಕೂ ಮಿಕ್ಕಿ ಸ್ಟಾಲ್ ಗಳು ನೊಂದಾಯಿಸಿರುವುದು ವಿವರಿಸಿದರು.
ನವೆಂಬರ್ ನಲ್ಲಿ ದಿನಾಂಕ ನಿಗದಿ ಆಗಿದೆ ಅಂದರು , ಬಂದ ರೈತರನ್ನು ಬನ್ನಿ ಅಣ್ಣಾ ಅಂತ ಗೌರವದಿಂದ ಸಂಭೋದಿಸಿ, ಕರೆದು ಮಾತಾಡುವ ಇವರ ಕ್ರಮ ರೈತರ ಮೆಚ್ಚುಗೆ ಕಾರಣ ಆಗಿದೆ.
ನಮ್ಮ ಸಂಸ್ಥೆಯಿಂದ ಇವರ ಉದ್ದೇಶಿತ ಕೃಷಿ ಮೇಳಕ್ಕೆ ಹತ್ತು ಸಾವಿರ ದೇಣಿಗೆಯ ಭರವಸೆ ನೀಡಿದೆ.
ವ. ಶಂ.ಭಟ್ಟರು ನೂರಾರು ಸಂಘಟನೆಗಳಲ್ಲಿ ಜವಾಬ್ದಾರಿ ವಹಿಸಿದ ಅನುಭವ ಮತ್ತು ಹಿಡಿದ ಕೆಲಸ ಪೂಣ೯ ಮಾಡುವ ತನಕ ವಿರಮಿಸದ ನಾಯಕತ್ವ ಹೊಂದಿರುವುದರಿಂದ ರಾಜ್ಯದಲ್ಲೇ ದಾಖಲೆ ಆಗಿ ಮೊದಲ ಕೃಷಿ ಅಭಿವೃದ್ದಿ ಬ್ಯಾಂಕ್ ನ ಕೃಷಿ ಮೇಳದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ.
Comments
Post a Comment