#ದಕ್ಷಿಣ_ಕನ್ನಡದ_ದೈವಾರಾದನೆ_ಮತ್ತು_ದೈವಗಳು.
ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಸಮೀಪದಲ್ಲಿ ಹರಿಯುವ ಗಂಗಾವಳಿ ನದಿಯಿಂದ ಕೇರಳ ಕಾಸರಗೋಡು ಸಮೀಪದ ಚಂದ್ರಗಿರಿ ನದಿ ಮದ್ಯದ ಪ್ರದೇಶದ ದೈವಾರಾದನೆ ಮತ್ತು ನಂಬಿಕೆಗಳು ಬೇರೆಯ ಪ್ರದೇಶದವರಿಗೆ ಸರಿಯಾಗಿ ಅಥ೯ ಮಾಡಿಕೊಳ್ಳಲು ಕಷ್ಟವೇ ಸರಿ.
ಇಲ್ಲಿನ ದೈವಗಳು ಕಲ್ಲುಕುಟಿಕ ,ಪಂಜುಲಿ೯, ಬೊಬ್ಬಯ೯,ಗುಳಿಗ, ಚಿಕ್ಕು ಹೀಗೆ ಮುಂದುವರಿದು ಕೋಟಿ ಚೆನ್ನಯ್ಯ, ಆಲೀಬೂತ ಕೊರಗಜ್ಜರ ತನಕ 102 ದೈವದ ಸಾವಿರಾರು ಗುಡಿ, ಗರುಡಿ, ದೇವಾಲಯಗಳು ಮತ್ತು ಅದರ ಆರಾದನೆ ಕೊಲಾಗಳು ನಡೆಯುತ್ತಲೇ ಇದೆ, ಇದಕ್ಕೆ ದೈವ ಪಾತ್ರಿಗಳೆಂಬ ಕುಟುಂಬಗಳೇ ಇದೆ.
ಇಲ್ಲಿನ ಬ್ರಾಹ್ಮಣರು,ಜೈನರು, ಬಂಟರಾದಿ ಆಗಿ ಎಲ್ಲಾ ಜಾತಿಯವರು ಮತ್ತು ಮುಸ್ಲಿ೦ ಕ್ರೈಸ್ತ ದಮಿ೯ಯರೂ ಈ ದೈವರಾದನೆ ನಂಬುತ್ತಾರೆ.
ಮಾಪುಳ್ತಿ ಬೂತ, ಆಲೀ ಬೂತ, ಮಾಪಳ್ಳಿ ಬೂತ,ಬ್ಯಾದಿ೯ ಬೂತಗಳೆಂಬ ಮುಸ್ಲಿಂ ದೈವಗಳ ಆರಾದನೆಯೂ ಕಾಸರಗೋಡು ಬಾಗದಲ್ಲಿದೆ.
ಇತ್ತೀಚಿಗೆ ಮಂಗಳೂರಿನ ಕುತ್ತಾರು ಮೂಲ ಸ್ಥಾನದ #ಕೊರಗಜ್ಜ ದೈವರ ಹುಂಡಿಯಲ್ಲಿ ನಿರೋದ್ ಪ್ಯಾಕೆಟ್ ಹಾಕಿದ ಕಿಡಿಗೇಡಿಗಳು ಭಕ್ತರ ದಾರ್ಮಿಕ ಭಾವನೆಗೆ ಕುಂದು ತಂದ ವಿಷಯ ಸುದ್ದಿ ಆಗಿತ್ತು ಸ್ವಲ್ಪ ದಿನದಲ್ಲೇ ಕಿಡಿಗೇಡಿತನ ಮಾಡಿದವರು ಪಶ್ಚಾತ್ತಾಪ ಪಟ್ಟು ದೈವ ಸನ್ನಿದಿಗೆ ಬಂದು ಶರಣಾದ ಸುದ್ದಿ ಈಗ ವೈರಲ್ ಆಗಿದೆ.
ಕೊರಗಜ್ಜರ ಪವಾಡಗಳು ನೂರಾರು ಇದೆ, ಮಕ್ಕಳಿಗೆ ಕಾಯಿಲೆ ಆದಾಗ ವೀಳ್ಯದ ಎಲೆ ಹರಕೆಯಿಂದ ಹಿಡಿದು ಕಳ್ಳತನವಾದ ವಸ್ತು ಸಿಗದಾಗ ಇಲ್ಲಿ ಹರಕೆ ಮಾಡಿದಾಗ ಸಿಕ್ಕುತ್ತದೆ ಎಂಬುದು ಕೂಡ.
ಕೊರಗಜ್ಜರಿಗೆ ಪ್ರಿಯವಾದ ಹುರುಳಿ ಬಸಲೇ ಸಾರು, ಮೀನು, ಕೋಳಿ, ಚಕ್ಕಲಿ, ಶೇಂದಿ ನೈವೇದ್ಯ ಸೇವೆ ಇದೆ.
ಕೊರಗಜ್ಜರ ಸಾನ್ನಿಧ್ಯದಲ್ಲಿ ಸಂಜೆ 7 ರ ನಂತರ ಸ್ತ್ರಿಯರಿಗೆ ಪ್ರವೇಶ ಇಲ್ಲ, ರಾತ್ರಿ ದೀಪ ಬೆಳಗಿಸುವಂತಿಲ್ಲ ಎಂಬ ನಿಯಮ ಇದೆ.
ತುಳುನಾಡಿನ ಪವರ್ ಫುಲ್ ದೈವ #ಕೊರಗಜ್ಜರ ಮೂಲ ಕಥೆ ಏನೆಂದರೆ ಪಣಂಬೂರಿನ ಕೊರಗ ಜನಾಂಗದ ಓಡಿ ಮತ್ತು ಅಚ್ಚು ಮೈರದಿ ದಂಪತಿಗೆ ಗಂಡು ಮಗು ಹುಟ್ಟುತ್ತದೆ ಆ ಮಗುವಿಗೆ ತನಿಯಾ ಎಂದು ನಾಮಕರಣ ಮಾಡುತ್ತಾರೆ.
ತನಿಯ ಹುಟ್ಟಿದ 30 ದಿನದಲ್ಲೇ ತಂದೆ ತಾಯಿ ಕಳೆದುಕೊಂಡು ಅನಾಥನಾದ ತನಿಯಾನನ್ನು ಶೇಂದಿ ವ್ಯಾಪಾರ ಮಾಡುವ ಮೈರಕ್ಕ ಬೈದದಿ ಮತ್ತು ಅವಳ ಮಗು ಚಿನ್ನಯ್ಯ ತಂದು ಸಾಕುತ್ತಾರೆ ನಂತರ ದಿನದಲ್ಲಿ ಅನೇಕ ಪವಾಡಗಳು ತನಿಯ ನಿಂದ ನಡೆಯುತ್ತದೆ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಹರಕೆ ಸಲ್ಲಿಸಲು 7 ಜನರು ಹೊರುವಷ್ಟು ವಸ್ತುಗಳು ಬಾಲಕ ತನಿಯ ಒಬ್ಬನೇ ಹೊತ್ತಿ ನಡೆಯುವ ವಿಸ್ಮಯ ಜನರಿಗೆ ತಿಳಿಯುತ್ತದೆ ನಂತರ ಮಾಯವಾಗುವ ತನಿಯನೇ ಕೊರಗಜ್ಜನಾಗಿ ನಂಬಿದವರನ್ನು ಕಾಪಾಡುತ್ತಾನೆ,ದೈವ ಸ್ಥಾನಕ್ಕೆ ಅಪಚಾರ ಮಾಡಿದರೆ ತೀವ್ರ ಶಿಕ್ಷೆಗೆ ಒಳಪಡಿಸುತ್ತಾನೆಂಬುದೇ ಮೊನ್ನೆಯ ಕೊರಗಜ್ಜರ ಹುಂಡಿಗೆ ಕಾಂಡೋಮ್ ಹಾಕಿದ ಕಿಡಿಗೇಡಿಗಳು ಅನುಭವಿಸಿದ ನಿಜ ಕಥೆ.
ಸಮಾಜದಲ್ಲಿ ಕೀಳು ಜಾತಿಯವನೆಂದು ಕಡೆಗಾಣಿಸಿದ ಬೇಡರ ಕಣ್ಣಪ್ಪನಿಗೆ ದೇವರು ಪ್ರತ್ಯಕ್ಷವಾಗಿ ವರ ನೀಡಿದಂತೆಯೇ ತನಿಯ ಕೂಡ ಸಮಾಜದಲ್ಲಿ ಜಾತಿ ತಾರತಮ್ಯ ಮೀರಿ ದೇವರಾಗಿ ಎಲ್ಲಾ ದಮಿ೯ಯರಲ್ಲಿ ಭಯ ಭಕ್ತಿಯುಂಟು ಮಾಡಿರುವುದು ವಿಶೇಷವೇ ಆಗಿದೆ.
Comments
Post a Comment