ಶಾಂತವೇರಿ ಗೋಪಾಲಗೌಡರನ್ನು ದ್ವಿತೀಯ ಮಹಾ ಚುನಾವಣೆ 1957 ರಲ್ಲಿ ಸೋಲಿಸಿದ ಸಾಗರ - ಹೊಸನಗರ- ತೀಥ೯ಳ್ಳಿ ವಿದಾನ ಸಭಾ ಕ್ಷೇತ್ರದ ಮತದಾರರು, ಇದೊಂದು ರಾಜಕೀಯ ದುರಂತದ ಇತಿಹಾಸ
#ದ್ವಿತೀಯ_ಮಹಾ_ಚುನಾವಣೆ_1957.
#ಶಾ೦ತವೇರಿ_ಗೋಪಾಲ_ಗೌಡರ_ಸೋಲು
1957 ರ ದ್ವಿತೀಯ ಮಹಾ ಚುನಾವಣೆಯಲ್ಲಿ ಪುನಃ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಸೋಷಲಿಸ್ಟ್ ಪಾಟಿ೯ಯಿಂದ ಶಾಂತವೇರಿ ಗೋಪಾಲಗೌಡರು ವಿದಾನ ಸಭೆಗೆ ಸ್ಪರ್ದಿಸುತ್ತಾರೆ.
ಪ್ರತಿಸ್ಪದಿ೯ಯಾಗಿ ಪುನಃ ಕಾಂಗ್ರೇಸ್ ನಿಂದ ಆನಂದಪುರದ ಎ.ಆರ್. ಬದರಿನಾರಾಯಣ ಅಯ್ಯಂಗಾರರು ಸ್ಪರ್ಧಿಸುತ್ತಾರೆ.
ಭೂ ಮಾಲಿಕರುಗಳೆಲ್ಲ ಸಂಘಟಿತರಾಗಿರುತ್ತಾರೆ, ಚುನಾವಣೆಗೆ ಬೇಕಾದ ಸಂಪನ್ಮೂಲ ಸಂಗ್ರಹಿಸಿರುತ್ತಾರೆ ಈ ಮೂಲಕ ಒಗ್ಗಟ್ಟಿನಿಂದ ಗೇಣಿದಾರರಾದ ದೀವರ ಮತ ವಿಭಜನೆ ಮಾಡುತ್ತಾರೆ.
ಇದಕ್ಕೆ ವಾಮ ಮಾರ್ಗವೂ ಬಳಸುತ್ತಾರೆ ಹೊಸನಗರ ತಾಲ್ಲೂಕಿನ ಕೊಡಸೆಯ ದೀವರ ನಾಯಕರ ಮನೆಯ ಮದಲೆ ಚೌಡಿ ಹಬ್ಬ ಇದಕ್ಕೆ ವೇದಿಕೆ ಆಗಿ ಬಳಸಿಕೊಳ್ಳುತ್ತಾರೆ 50 ರಿಂದ 70 ಕುರಿಗಳ ಬಾಡು ಊಟದ ಔತಣ ಕೂಟದಲ್ಲಿ ನೂರಾರು ದೀವರ ಮುಖಂಡರು ಮತ್ತು ಸಾವಿರಾರು ಜನರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಬದರಿನಾರಾಯಣ ಅಯ್ಯಂಗಾರರಿಗೆ ಮತ ನೀಡುವ ಭರವಸೆ ನೀಡುತ್ತಾರೆ ಅದರಂತೆ ನಡೆಯುತ್ತಾರೆ ಇದು ಗೋಪಾಲಗೌಡರ ಸೋಲಿಗೆ ಕಾರಣ ಆಗುತ್ತದೆ.
ಮುಂದೆ ಬದರಿನಾರಾಯಣ ಅಯ್ಯಂಗಾರರು ಅನೇಕ ಬಾರಿ ಶಾಸಕರಾಗುತ್ತಾರೆ, ಒಮ್ಮೆ ವಿದಾನ ಪರಿಷತ್ ಸದಸ್ಯರಾಗುತ್ತಾರೆ, ರಾಜ್ಯದ ವಿದ್ಯಾ ಮಂತ್ರಿಗಳಾಗುತ್ತಾರೆ, ಒಮ್ಮೆ ಸಂಸದರಾಗುತ್ತಾರೆ.
ಹೀಗೆ ಗೇಣಿ ರೈತರ ಹೋರಾಟಕ್ಕೆ ಬೆಂಬಲಿಸಿ ಸಮಾಜವಾದಿ ಮುಖಂಡರಾದ ಲೋಹಿಯಾ, ಜೇಪಿ, ಜಾಜ್೯ ಪನಾ೯೦ಡೀಸ್ ಅದಿಯಾಗಿ ಅನೇಕ ನಾಯಕರನ್ನ ಕಾಗೋಡು ಚಳವಳಿಯಲ್ಲಿ ಭಾಗವಹಿಸುವಂತೆ ಮಾಡಿ ಚಳವಳಿ ನಿರಂತರವಾಗಿರಿಸಿ ನಂತರ ಜೈಲು ಸೇರಿ ಮೊದಲ ಮಹಾ ಚುನಾವಣೆಯಲ್ಲಿ ವಿದಾನ ಸಭಾ ಸದಸ್ಯರಾಗಿ ಆಯ್ಕೆ ಆಗಿ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಸಂಘಟಿಸಿ ದಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮದಲ್ಲಿ ಜಹಗಿರಿದಾರರ ರೈತ ಹೋರಾಟ, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರ ಸಹೋದರ ನಂಜಪ್ಪನವರ ವಿರುದ್ಧ ನಡೆಸಿದ ಸಂಗ್ರಾಮ "ಮೊಟ್ಟೆ ದೊಡ್ಡಿ ಪ್ರಕರಣ " , ಮೈಸೂರು ಮಹಾರಾಜರ ದಸರಾ ಉತ್ಸವ ಬಗ್ಗೆ ನಡೆಸಿದ ಹೋರಾಟ ಹೀಗೆ ಶಾಸನ ಸಭೆಯ ಒಳಗೆ ಹೊರಗೆ ಅನ್ಯಾಯ ಶೋಷಣೆಯ ವಿರುದ್ಧ ಧ್ವನಿಯಾಗಿ ಘಜಿ೯ಸಿದ್ದ ಶಾಂತವೇರಿ ಗೋಪಾಲಗೌಡರನ್ನು ಮತದಾರ ಕೈ ಕೊಟ್ಟು ಸೋಲಿಸಿದ್ದು ಒಂದು ದುರಂತ ಇತಿಹಾಸ.
Comments
Post a Comment