ಮಾಜಿ ಶಾಸಕರಾದ ಸ್ವಾಮಿ ರಾವ್ ರಿಗೆ ಅವರಿಂದ ಲಾಭ ಪಡೆದ ಬಿಜೆಪಿ ಸಕಾ೯ರ ಸೂಕ್ತ ಸ್ಥಾನಮಾನ ಕಲ್ಪಿಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ
ಜಿಲ್ಲೆಯ ದೀವರು/ ಈಡಿಗ/ಪೂಜಾರರ ಕಾಂಗ್ರೇಸ್ ಮತಬ್ಯಾಂಕ್ ಒಡೆದು ಸೊರಬ, ಸಾಗರ ಮತ್ತು ತೀಥ೯ಹಳ್ಳಿ ವಿದಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡೂರಪ್ಪರ ಪುತ್ರ ಬಿ.ವೈ.ರಾಘವೇಂದ್ರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರ ಮದು ಬಂಗಾರಪ್ಪರ ವಿರುದ್ದ ಗೆಲ್ಲುವಲ್ಲಿ ಸ್ವಾಮಿ ರಾಯರ ಕೊಡುಗೆ ದೊಡ್ಡದು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಇವರ ಈ ವಯೋಮಾನದಲ್ಲಿ ಇವರಿಂದ ಪಕ್ಷಕ್ಕೆ ಆಗಿರುವ ಅನುಕೂಲ ನೆನಪಿಸಿಕೊಳ್ಳುವಂತೆ ಇವರಿಗೆ ರಾಜ್ಯ ಮಟ್ಟದ ಬೋಡ್೯ ಚೇಮ೯ನ್ ಆಗಿ ಅಥವ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುತ್ತಾರೆಂದು ಬಾವಿಸಿದ್ದು ಹುಸಿ ಆಗಿದೆ.
Comments
Post a Comment