#ಪಿತೃ_ಪಕ್ಷ
#ಮಹಾಲಯ_ಅಮಾವಾಸ್ಯೆ
#ಸರ್ವಪಿತೃ_ಅಮಾವಾಸ್ಯೆ
#Mahalayaamavasye #Pitrupaksha #Mahabharatha #Karna #Crow
ಇವತ್ತು ಮಹಾಲಯ ಅಮಾವಾಸ್ಯೆ ಇದು ಪಿತೃ ಪಕ್ಷದ ಕೊನೆಯ ದಿನ.
ಮಹಾಲಯ ಅಮಾವಾಸ್ಯೆ ದಿನ ಬಹಳ ವಿಶೇಷ, ಸಾಮಾನ್ಯವಾಗಿ ಪೂರ್ವಜರು ಮೃತಪಟ್ಟ ತಿಥಿ, ದಿನಗಳು ನೆನಪಿದ್ದರೆ ಅಂಥವರಿಗೆ ಆಯಾ ತಿಥಿಯಂದೇ ಶ್ರಾದ್ಧ ಕರ್ಮ ನೆರವೇರಿಸುತ್ತಾರೆ.
ಆದರೆ ಹಿಂದಿನ ಕಾಲದಲ್ಲಿ ಯಾರಾದರೂ ಮೃತಪಟ್ಟಿದ್ದು ಅವರು ಯಾವ ತಿಥಿಯಲ್ಲಿ ಮೃತರಾದರು ಎಂದು ತಿಳಿಯದೇ ಇದ್ದರೆ ಅಥವಾ ಹಿಂದೆ ಪೂರ್ವಜರು ಮೃತಪಟ್ಟ ದಿನಾಂಕಗಳು, ತಿಥಿಗಳು ನೆನಪಿರದೇ ಇದ್ದರೆ ಅಂಥವರಿಗೆ ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತೃ ಅಮಾವಾಸ್ಯೆ ದಿನ ಶ್ರಾದ್ಧ ಕರ್ಮ, ಪಿಂಡ, ತರ್ಪಣ ಬಿಡುವುದು ವಾಡಿಕೆ.
ಈ ರೀತಿ ಮಾಡುವವರಿಗೆ ಸರ್ವಪಿತೃಗಳ ಆಶೀರ್ವಾದ ಇರುತ್ತದೆ ಮತ್ತು ಶುಭ ಫಲವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ವರ್ಷದ ಪ್ರತಿ ಮಹಾಲಯ ಅಮಾವಾಸ್ಯೆಯಂದು ಅಗಲಿದ ಪಿತೃ ದೇವತೆಗಳಿಗೆ ತರ್ಪಣವನ್ನು ಅರ್ಪಿಸಬೇಕು ಎಂಬ ನಂಬಿಕೆ ಮತ್ತು ಆಚರಣೆ ಇದೆ.
ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಅಂತ್ಯ ಮತ್ತು ದುರ್ಗಾ ಪೂಜೆಯ ಆರಂಭವನ್ನು ಸೂಚಿಸುವ ಪವಿತ್ರ ದಿನ.
ದುರ್ಗಾ ದೇವಿ ಭೂಮಿಗೆ ಆಗಮಿಸುವುದನ್ನು ಸಂಕೇತಿಸುವ ಈ ದಿನ ಅತ್ಯಂತ ಶುಭಕರ.
ಈ ದಿನ ಪೂರ್ವಜರಿಗೆ ತರ್ಪಣ ಮತ್ತು ಪಿಂಡದಾನ ಮಾಡುವ ಪುಣ್ಯಕಾರ್ಯಗಳಿಗೆ ಹೆಚ್ಚಿನ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.
ಸಸ್ಯಹಾರಿಗಳ ಪದ್ಧತಿ ಪ್ರಕಾರ ತರ್ಪಣ, ಪಿಂಡದಾನ ನಡೆದರೆ ಮಾಂಸಹಾರಿಗಳಲ್ಲಿ ಪೂರ್ವಜರ ಬಾವಚಿತ್ರಗಳಿಗೆ ಪೂಜೆ ಮಾಡಿ ಅವರು ಜೀವಿಸಿದ್ದಾಗ ಅವರಿಗೆ ಇಷ್ಟದ ಮಾಂಸ ಹಾರಿ ಅಡುಗೆ, ಅವರಿಗೆ ಇಷ್ಟವಾಗಿದ್ದ ಮಧ್ಯಪಾನ ಮತ್ತು ದೂಮಪಾನ ವಸ್ತುಗಳನ್ನ ಎಡೆ ಇಟ್ಟು ಲೋಬಾನದ ಆರತಿ ಬೆಳಗಿ ಕಾಗೆಗಳಿಗೆ ಸಮರ್ಪಿಸುತ್ತಾರೆ.
ಪಿತೃ ಪಕ್ಷದ ಈ ರೀತಿಯ ಅದ್ದೂರಿ ಆಚರಣೆಗಳು ಹಾಸನ-ಮಂಡ್ಯ ಮತ್ತು ಮೈಸೂರು ಭಾಗದ ಒಕ್ಕಲಿಗರಲ್ಲಿ ಹೆಚ್ಚು.
ಕರಾವಳಿ ಭಾಗದಲ್ಲಿ ಅಳಿಯ ಸಂತಾನದ ಆಚರಣೆಯಂತೆ ದೈವದ ಮನೆಯ ಜಕಣಿ ಎನ್ನುವ ದಿನ ಈ ರೀತಿ ಮಾತೃಗಳಿಗೆ ಎಡೆ ಇಡುವ ಪದ್ದತಿ ಇದೆ.
ಸನಾತನ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ,ನಂಬಿಕೆಗಳ ಪ್ರಕಾರ ಈ 15 ದಿನಗಳಲ್ಲಿ, ಪೂರ್ವಜರು ತಮ್ಮ ಕುಟುಂಬವನ್ನು ಆಶೀರ್ವದಿಸಲು ಭೂಮಿಗೆ ಬರುತ್ತಾರೆ.
ಅವರ ಆತ್ಮದ ಶಾಂತಿಗಾಗಿ ಈ ಅವಧಿಯಲ್ಲಿ ಪಿಂಡದಾನ, ತರ್ಪಣ ಇತ್ಯಾದಿಗಳನ್ನು ಮಾಡಲಾಗುತ್ತದೆ.
ಪೂರ್ವಜರ ಹೆಸರಿನಲ್ಲಿ ಸರಿಯಾದ ಆಚರಣೆಗಳೊಂದಿಗೆ ತರ್ಪಣ ಇತ್ಯಾದಿಗಳನ್ನು ಮಾಡುವುದರಿಂದ ಸಂತಾನ ವೃದ್ಧಿಯಾಗುವುದು ಮತ್ತು ಪೂರ್ವಜರ ಆಶೀರ್ವಾದದಿಂದ ಒಬ್ಬ ವ್ಯಕ್ತಿಯು ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎನ್ನಲಾಗಿದೆ.
ಶಾಸ್ತ್ರಗಳ ಪ್ರಕಾರ, ಪಿತೃ ಪಕ್ಷದ 15 ದಿನಗಳ ಅವಧಿಯಲ್ಲಿ ನೀವು ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ, ಹೊಸ ವ್ಯಾಪಾರ, ವ್ಯವಹಾರವನ್ನು ಪ್ರಾರಂಭಿಸುವಂತಹ ಶುಭ ಕಾರ್ಯಗಳನ್ನು ಮಾಡಬಾರದು.
ಪಿತೃ ಪಕ್ಷದ ಅವಧಿಯಲ್ಲಿ ನೀವು ಈ ಶುಭ ಕಾರ್ಯಗಳನ್ನು ಮಾಡುವುದರಿಂದ ಪಿತೃಗಳ ಅತೃಪ್ತಿಗೆ ಕಾರಣರಾಗಬಹುದು.
ಇದರಿಂದ ನೀವು ಮಾಡಿದ ಶುಭ ಕಾರ್ಯಗಳಲ್ಲಿ ವೈಫಲ್ಯವನ್ನು ಕೂಡ ಎದುರಿಸುವಂತಾಗಬಹುದು ಎಂಬುದು ಆಚರಣೆಯಲ್ಲಿದೆ.
ಹಿಂದೂಗಳಲ್ಲಿ ಮಾಂಸಾಹಾರವನ್ನು ಅನುಮತಿಸುವ ಜಾತಿಗಳಿಗೆ ಸೇರಿದವರಾಗಿದ್ದರೆ ಉದಾಹರಣೆಗೆ ಕ್ಷತ್ರಿಯರು, ಶೂದ್ರಜಾತಿಗಳಿಗೆ ಸೇರಿದವರಾಗಿದ್ದರೆ ಅವರ ಪೂರ್ವಜರು ಮಾಡಿದಂತೆ ಅವರು ಮಾಂಸಾಹಾರವನ್ನು ಸೇವಿಸುವುದನ್ನು ಮುಂದುವರಿಸಬಹುದು.
ಶ್ರಾದ್ಧ ಪಕ್ಷ ಅಥವಾ ಪಿತೃ ಪಕ್ಷದಲ್ಲಿ ಏನು ತಿಂದರೂ ಅದು ಅವರವರ ಪೂರ್ವಜರಿಗೆ ಹೋಗುತ್ತದೆ ಎಂದು ನಂಬಲಾಗಿದೆ.
ಆದ್ದರಿಂದ ಅವರ ಪೂರ್ವಜರು ಮಾಂಸಾಹಾರವನ್ನು ಸೇವಿಸುತ್ತಿದ್ದರೆ ಅವರು ಮಾಂಸವನ್ನು ಸಹ ತಿನ್ನಬಹುದು.
ಆದರೆ ಮಾಂಸ ಸೇವಿಸದವರಿಗೆ, ಅವರು ಮಾಂಸಹಾರಿ ಕುಟುಂಬದಲ್ಲಿ ಇದ್ದರೂ ಸಹ ಅವರಿಗೆ ಅದನ್ನು ಬಡಿಸಲು ಸಾಧ್ಯವಿಲ್ಲ.
ಆದ್ದರಿಂದ ಆಚರಿಸುತ್ತಿರುವ ಪಿತೃಪಕ್ಷದ ಅವರ ಪೂರ್ವಜರು ತಮ್ಮ ಜೀವಿತಾವಧಿಯಲ್ಲಿ ಮಾಂಸವನ್ನು ಸೇವಿಸದಿದ್ದರೆ ಅವರಿಗೆ ಮಾಂಸವನ್ನು ಎಡೆಗೆ ಬಡಿಸಲು ಸಾಧ್ಯವಿಲ್ಲ.
#ಪಿತೃ_ಪಕ್ಷ_ಆಚರಣೆ_ವಿಧಾನ
ಪಿತೃ ಪಕ್ಷದಲ್ಲಿ ನಿರ್ದಿಷ್ಟವಾಗಿ ಮಹಾಲಯ ಅಮಾವಾಸ್ಯೆಯಂದು ಪೂರ್ವಜರ ಭಾವಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಪೂಜಿಸಲಾಗುತ್ತದೆ.
#ಎಡೆ_ಇಡುವುದು:
ಪೂರ್ವಜರು ಅಸುನೀಗಿದ ದಿನದ ತಿಥಿಯನ್ನು ನೆನಪಿನಲ್ಲಿಟ್ಟುಕೊಂಡು ಆ ದಿನದಂದು ವಿಶೇಷವಾಗಿ 'ಎಡೆ' ಇಡಲಾಗುತ್ತದೆ. ಇದು ಊಟದ ಎಲೆಯಲ್ಲಿ ಹಾಲು, ಮೊಸರು, ತುಪ್ಪ, ಅಕ್ಕಿ, ದಾಲ್, ತರಕಾರಿಗಳು ಮುಂತಾದ ಸಸ್ಯಹಾರವನ್ನು ಒಳಗೊಂಡಿರುತ್ತದೆ.
#ಕಾಗೆಗಳಿಗೆ_ಆಹಾರ_ಅರ್ಪಣೆ ತಯಾರಿಸಿದ ಆಹಾರವನ್ನು ಕಾಗೆಗಳಿಗೆ ಅರ್ಪಿಸಲಾಗುತ್ತದೆ, ಕಾಗೆಗಳು ಪೂರ್ವಜರ ಸಂಕೇತವೆಂದು ನಂಬಲಾಗಿದೆ.
#ದಾನ_ಕಾರ್ಯ
ಪಿತೃಪಕ್ಷದ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರ ದಾನ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂಬ ನಂಬಿಕೆ ಇದೆ.
#ಬ್ರಾಹ್ಮಣ_ದಾನ
ಬ್ರಾಹ್ಮಣರಿಗೆ ದವಸ ಧಾನ್ಯಗಳನ್ನು ದಾನ ಮಾಡುವುದರಿಂದ ಪಿತೃಗಳು ಪ್ರಸನ್ನರಾಗುತ್ತಾರೆ ಎಂಬ ಸಂಪ್ರದಾಯವಿದೆ.
#ಪೂರ್ವಜರ_ಆಶೀರ್ವಾದ
ಈ ಆಚರಣೆಗಳ ಮೂಲಕ ಪೂರ್ವಜರು ಭೂಮಿಗೆ ಬಂದು ಆಶೀರ್ವಾದ ಮಾಡುತ್ತಾರೆ ಎಂದು ನಂಬಲಾಗುತ್ತದೆ.
ಮಹಾಭಾರತ ಯುದ್ಧದಲ್ಲಿ ಪೌರಾಣಿಕ ದಾನಿ ಕರ್ಣ ಮರಣಹೊಂದಿದಾಗ ಅವನ ಆತ್ಮವು ಸ್ವರ್ಗಕ್ಕೆ ಹೋದಾಗ ಅವನು ತೀವ್ರ ಹಸಿವಿನಿಂದ ಬಳಲುತ್ತಿದ್ದನು ಆದರೆ ಅವನು ಮುಟ್ಟಿದ ಯಾವುದೇ ಆಹಾರವು ತಕ್ಷಣವೇ ಚಿನ್ನವಾಗುತ್ತಿತ್ತು.
ಕರ್ಣ ಮತ್ತು ಸೂರ್ಯ ಇಂದ್ರನ ಬಳಿಗೆ ಹೋಗಿ ಈ ಪರಿಸ್ಥಿತಿಗೆ ಕಾರಣವನ್ನು ಕೇಳಿದರು.
ಇಂದ್ರ ಕರ್ಣನಿಗೆ ನಿನ್ನ ಜೀವನದುದ್ದಕ್ಕೂ ಚಿನ್ನವನ್ನು ದಾನ ಮಾಡಿದ್ದೀಯ ಆದರೆ ಶ್ರಾದ್ಧದಲ್ಲಿ ನಿನ್ನ ಪೂರ್ವಜರಿಗೆ ಎಂದಿಗೂ ಆಹಾರವನ್ನು ದಾನ ಮಾಡಿಲ್ಲ ಎಂದು ಹೇಳಿದನು ಆದ್ದರಿಂದ ಕುರು ಪೂರ್ವಜರು ಅವನನ್ನು ಶಪಿಸಿದರು ಎನ್ನುತ್ತಾರೆ.
ಕರ್ಣನು ತನ್ನ ಪೂರ್ವಜರ ಬಗ್ಗೆ ತಿಳಿದಿಲ್ಲದ ಕಾರಣ ಅವನು ಅವರ ನೆನಪಿನಲ್ಲಿ ಏನನ್ನೂ ದಾನ ಮಾಡಲಿಲ್ಲ ಎಂದು ಹೇಳುತ್ತಾನೆ.
ಕರ್ಣನು 15 ದಿನಗಳ ಅವಧಿಗೆ ಭೂಮಿಗೆ ಹಿಂತಿರುಗಲು ಅನುಮತಿ ನೀಡಲಾಯಿತು ಇದರಿಂದ ಅವನು ಅವರಿಗೆ ಶ್ರಾದ್ಧವನ್ನು ಮಾಡಿ ಅವರ ನೆನಪಿನಲ್ಲಿ ಆಹಾರ ಮತ್ತು ನೀರನ್ನು ದಾನ ಮಾಡುತ್ತಾನೆ
. ಈ ಅವಧಿಯನ್ನು ಈಗ ಪಿತೃ ಪಕ್ಷ ಎಂದು ಕರೆಯಲಾಗುತ್ತದೆ.
Comments
Post a Comment