#ದರ್ಬೆ_ಹುಲ್ಲು
#ಧಾರ್ಮಿಕ_ಆಚರಣೆಯಲ್ಲಿ_ಬಳಕೆ
#ಹಿಂದೂ_ಬೌದ್ದ_ಜೈನ_ಧರ್ಮಿಯರಲ್ಲಿ_ಪವಿತ್ರವೆಂದು_ಪರಿಗಣಿಸಿದ್ದಾರೆ.
#ವೇದ_ಕಾಲದಿಂದಲೂ_ಶ್ರೀಕೃಷ್ಣ_ಭಗವದ್ಗೀತೆಯಲ್ಲಿ_ದರ್ಬೆ_ಉಲ್ಲೇಖವಿದೆ.
#ದ್ಯಾನಕ್ಕೆ_ಆಸನವಾಗಿ_ಪೂಜಾಕಾರ್ಯಗಳಲ್ಲಿ_ಆಯುರ್ವೇದದಲ್ಲಿಯೂ_ದರ್ಬೆ_ಬಳಕೆ.
#Dharbe #Hindu #Buddist #Jainism #Bhagavadgeetha #Religion Yaga #Homa
ಪೂಜಾ ಕಾರ್ಯಕ್ರಮಗಳಲ್ಲಿ ಪುರೋಹಿತರು ಬರೆಸುವ ಪೂಜಾ ಸಾಮಾಗ್ರಿ ಪಟ್ಟಿಯಲ್ಲಿ ಹಣ್ಣು-ಕಾಯಿ - ಅರಿಶಿಣ-ಕುಂಕುಮಗಳ ಜೊತೆ ಈ #ದರ್ಬೆ_ಹುಲ್ಲು ಕಡ್ಡಾಯವಾಗಿ ಬರೆದಿರುತ್ತಾರೆ.
ದರ್ಬೆಯ ಉಂಗುರವನ್ನು ಸಾಮಾನ್ಯವಾಗಿ ಕುಶದ ಉಂಗುರ ಅಥವಾ ದರ್ಬೆಯ ಉಂಗುರ ಎಂದೇ ಕರೆಯುತ್ತಾರೆ.
ಇದು ವಾತಾವರಣದ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವ ಪವಿತ್ರ ಶಕ್ತಿಯನ್ನು ಹೊಂದಿರುವುದರಿಂದ ಪೂಜೆಗಳು ಮತ್ತು ಯಜ್ಞಗಳಲ್ಲಿ ಬಳಸಲ್ಪಡುತ್ತದೆ.
ದರ್ಭೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ....
ದರ್ಬೆ ಹುಲ್ಲು, ವೈಜ್ಞಾನಿಕವಾಗಿ ಡೆಸ್ಮೊಸ್ಟ್ಯಾಕಿಯ ಬೈಪಿನೇಟ (Desmostachya bipinnata) ಎಂದು ಕರೆಯಲ್ಪಡುತ್ತದೆ, ಇದು ಭಾರತದಾದ್ಯಂತ ಬೆಳೆಯುವ ಒಂದು ಬಹುವಾರ್ಷಿಕ ಹುಲ್ಲು.
ಇದು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿದೆ. ಹಿಂದೂ, ಬೌದ್ಧ ಮತ್ತು ಜೈನ ಸಂಪ್ರದಾಯಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಧ್ಯಾನಕ್ಕೆ ಆಸನವಾಗಿ, ಪೂಜಾ ಕಾರ್ಯಗಳಲ್ಲಿ, ಮತ್ತು ಉಂಗುರವಾಗಿ ಧರಿಸಲು ಬಳಸಲಾಗುತ್ತದೆ. ಔಷಧೀಯವಾಗಿ, ಇದು ಜ್ವರ, ಮೂತ್ರ ಸಮಸ್ಯೆಗಳು, ಮತ್ತು ಉರಿಗಳಿಗೆ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ ಪಡೆದಿದೆ.
ಬೌದ್ಧರು ಮತ್ತು ಹಿಂದೂಗಳು ಧ್ಯಾನಕ್ಕಾಗಿ ದರ್ಬೆ ಚಾಪೆಗಳನ್ನು ಬಳಸುತ್ತಾರೆ.
ಇದು ದೇಹದ ಶಕ್ತಿಯನ್ನು ಹೊರಹೋಗದಂತೆ ತಡೆದು, ಶಕ್ತಿಯನ್ನು ದೇಹದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ.
ಯಜ್ಞ, ಹವನ, ಮತ್ತು ಪೂಜೆಗಳ ಸಮಯದಲ್ಲಿ ಪುರೋಹಿತರು ದರ್ಬೆಯನ್ನು #ಉಂಗುರ ಮಾಡಿ ಬಲಗೈಯ ಉಂಗುರದ ಬೆರಳಿಗೆ ಧರಿಸುತ್ತಾರೆ.
ದರ್ಬೆ ಹುಲ್ಲಿನ ಸುತ್ತಲೂ ದುಷ್ಟ ಶಕ್ತಿಗಳು ಬರುವುದಿಲ್ಲ ಎಂದು ನಂಬಲಾಗುತ್ತದೆ, ಹಾಗಾಗಿ ಹೋಮಕುಂಡದ ಸುತ್ತಲೂ ದರ್ಬೆಯನ್ನು ಇಡಲಾಗುತ್ತದೆ.
ಪೂಜಾ ಸ್ಥಳಗಳನ್ನು ಮತ್ತು ಮನೆಗಳನ್ನು ಶುದ್ಧೀಕರಿಸಲು ದರ್ಬೆಯನ್ನು ನೀರಿನಲ್ಲಿ ಅದ್ದಿ ಸಿಂಪಡಿಸುತ್ತಾರೆ.
ದರ್ಬೆಯ ಕಷಾಯ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗಿ, ಜ್ವರ ಮತ್ತು ಮೂತ್ರದ ಉರಿ ಕಡಿಮೆಯಾಗುತ್ತದೆ.
ಬೇರನ್ನು ಜಜ್ಜಿ ಗಾಯದ ಮೇಲೆ ಇಟ್ಟರೆ ರಕ್ತಸ್ರಾವ ನಿಂತು, ಗಾಯ ಬೇಗನೆ ಗುಣವಾಗುತ್ತದೆ.
ಎಳ್ಳೆಣ್ಣೆಯಲ್ಲಿ ದರ್ಭೆಯನ್ನು ಕುದಿಸಿ ಚರ್ಮರೋಗಗಳಾದ ತೊನ್ನು, ಕಜ್ಜಿ, ಮತ್ತು ಹುಳುಕಡ್ಡಿಗಳಿಗೆ ಹಚ್ಚುತ್ತಾರೆ.
ದರ್ಬೆಯನ್ನು ಅನಾದಿ ಕಾಲದಿಂದಲೂ ಪೂಜಾ ಕೈಂಕರ್ಯಗಳಲ್ಲಿ ಉಪಯೋಗಿಸಿಕೊಂಡು ಬರಲಾಗಿದೆ.
ವೇದಗಳ ಕಾಲದಿಂದಲೂ ದೇವರ ಆಸನದ ಜಾಗದಲ್ಲಿ ಗ್ರಹಣಕ್ಕೆ ಮುನ್ನ ದರ್ಬೆಯನ್ನು ಇರಿಸುವ ಪದ್ಧತಿ ಆಚರಣೆಯಲ್ಲಿದೆ.
ಸ್ವತಃ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ದರ್ಬೆಯನ್ನು ಧ್ಯಾನಾಸನಗಳ ಭಾಗ ಎಂದು ಉಪದೇಶಿಸಿದ್ದಾನೆ.
ದರ್ಬೆಯು ಇಂದ್ರನ ವಜ್ರಾಯುಧವಿದ್ದಂತೆ,ದರ್ಬೆಯನ್ನು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೇ ಭೂ ಲೋಕಕ್ಕೆ ಭಗವಂತನು ಕಳಿಸಿದ್ದಾನೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ಧ್ಯಾನದ ಸಮಯದಲ್ಲಿ ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಿಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತೆ ಎನ್ನಲಾಗುತ್ತೆ.
ಹೋಮ ಹವನಾದಿಗಳಲ್ಲಿ ದರ್ಬೆಯನ್ನು ಹೋಮಕುಂಡದ ಸುತ್ತ 4 ಬದಿಯಲ್ಲೂ ಇರಿಸಲಾಗುತ್ತೆ.
ಈ ಕ್ರಮವನ್ನು ಪರಿಸ್ಥರಣ ಎನ್ನುತ್ತಾರೆ ಅಂದ್ರೆ ಇದು ದೇವರ ಆಸನ ಎಂದರ್ಥ.
ದರ್ಭೆಯಿಂದ ಮಾಡುವ ಪವಿತ್ರವನ್ನು ಪುರುಷನು ತನ್ನ ಬಲಕೈ ಯ ಉಂಗುರದ ಬೆರಳಿಗೆ ಧರಿಸುತ್ತಾನೆ.
ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ,ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ, 3 ಎಳೆಯ ದರ್ಭೆಯನ್ನ ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ, 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ.
ಮನೆಯಲ್ಲಿ ನಾವು ಮಾಡುವ ಯಾವುದೇ ಕಾರ್ಯಕ್ರಮದ ಮೊದಲಿಗೆ “ಪುಣ್ಯಾಹವಾಚನ”ಎಂಬುದಾಗಿ ಮಾಡುತ್ತಾರೆ ಅಂದರೆ ಕಾರ್ಯಕ್ರಮ ನಡೆಯುವ ಜಾಗದ ಶುದ್ದೀಕರಣ ಇಲ್ಲಿ ದರ್ಭೆಯ ಒಂದು ಗೊಂಚಲನ್ನು ಹಿಡಿದು ಅದರ ತುದಿಯಿಂದ ಎಲ್ಲ ಪೂಜಾ ಸಾಮಗ್ರಿಗಳ ಮೇಲೂ ಆ ಜಾಗದ ಪ್ರತೀ ಮೂಲೆಗಳಲ್ಲೂ ಹಾಗೂ ಅಲ್ಲಿರುವವರ ಮೇಲೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ.
ಶ್ರಾವಣ ಮಾಸದ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯು ಯಾತಯಾಮವಾಗದೇ ಯಾವತ್ತೂ ಕಾರ್ಯಗಳಿಗೆ ಬಳಸಬಹುದು.
ಬೇರೆ ಅಮಾವಾಸ್ಯೆಯಂದು ತಂದ ದರ್ಭೆಯನ್ನು ಒಂದು ತಿಂಗಳು ಮಾತ್ರ ಬಳಸಬೇಕು.
ಹುಣ್ಣಿಮೆಯಂದು ತಂದ ದರ್ಭೆಯು 15 ದಿನಗಳ ಕಾಲ ಶುದ್ಧ.
ಮಹಾಲಯ ಅಮಾವಾಸ್ಯೆಯಂದು ತಂದ ದರ್ಭೆಯು 6 ತಿಂಗಳು ಶುದ್ಧ.
ಭಾನುವಾರ ತಂದರೆ 1 ವಾರ.
ಆಯಾಯ ದಿನ ತಂದರೆ ಆಯಾಯ ದಿನ ಮಾತ್ರ ಶುದ್ಧ.
ಶ್ರಾವಣ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯ ಜೊತೆಗೆ ಉಳಿದದ್ದನ್ನು ಸೇರಿಸಿದರೆ ಎಲ್ಲವೂ ಶುದ್ಧವಾಗಿ ಯಾವಾಗಲೂ ಬಳಸಬಹುದು.
ಈ ರೀತಿ ಭಾರತೀಯ ಮೂಲದ ಬಹುವಾರ್ಷಿಕ ದರ್ಭೆ ಹುಲ್ಲು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಆಯುರ್ವೇದ ಶಾಸ್ತ್ರದಲ್ಲಿ ಬಳಕೆಯಲ್ಲಿದೆ.
Comments
Post a Comment