#ಗೌರಿಹಬ್ಬ_ಗಣೇಶಹಬ್ಬದ_ವಿಶೇಷ
#ಗೌರಿಹಬ್ಬದ_ಬಗ್ಗೆ_ಪೌರಾಣಿಕ_ಮತ್ತು_ಜನಪದ_ಕಥೆಗಳ_ಉಲ್ಲೇಖವಿದೆ.
#ಕೆರೆಗೆ_ಹಾರದ_ಕಥೆ_ಗೌರಿ_ಕಥೆಯೂ_ಆಗಿದೆ.
#Gowri #Ganesha #Festivel
#Ganapathi #Parvathi
ಮೊದಲ ದಿನ ತಾಯಿ #ಸ್ವರ್ಣಗೌರಿಯ ಹಬ್ಬ ಅದರ ಮರು ದಿನವೇ #ಗಣೇಶನ ಹಬ್ಬ.
ಇವತ್ತು ಗೌರಿ ಹಬ್ಬ ಆಚರಿಸಲಾಗುತ್ತಿದೆ ನಾಳೆ ಗಣೇಶನ ಹಬ್ಬ.
ಗೌರಿಯು ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ.
ತದಿಗೆ ದಿನದಂದು ಗೌರಿಯನ್ನು ಸರ್ವಲಂಕೃತ ಭೂಷಿತಳಾಗಿ ಪೂಜಿಸಿ, ಮೊರದ ಬಾಗಿನವನ್ನು ಕೊಟ್ಟು ಭಕ್ತರು ಆಶೀರ್ವಾದವನ್ನು ಪಡೆಯುತ್ತಾರೆ.
ಮರುದಿದಂದು ಗೌರಿಯ ಮಗ ಗಣಪತಿಯು ಬಂದು ಕಡುಬು ಹಾಗೂ ಮೋದಕಗಳನ್ನು ತಿಂದು ಸರ್ವರನ್ನು ಆಶೀರ್ವದಿಸಿ ತನ್ನ ತಾಯಿಯೊಡನೆ ಕೈಲಾಸಕ್ಕೆ ತೆರಳುತ್ತಾನೆ ಎಂಬುದು ನಂಬಿಕೆ ಮತ್ತು ಆಚರಣೆ ಆಗಿದೆ.
ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.
ಸಾಮಾನ್ಯವಾಗಿ ಈ ಹಬ್ಬ #ಭಾದ್ರಪದ_ಚೌತಿಯ ದಿನದಂದು ಬರುತ್ತದೆ.
ಆ ದಿನ ಯಾರೂ ಚಂದ್ರನನ್ನು ನೋಡಬಾರದು,ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ.
ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.
#ಜಾನಪದದಲ್ಲಿ_ಗೌರಿ_ಕಥೆ
ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ #ಭಾದ್ರಪದ_ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ.
ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ.
ಒಮ್ಮೆ ಬಹಳ ಬರಗಾಲ ಬಂದು ಕೆರೆ ಕೊಳ್ಳಗಳೆಲ್ಲ ವರ್ಷಗಟ್ಟಲೆ ಬತ್ತಿ ಹಾಹಾಕಾರ ಎದ್ದೇಳುತ್ತದೆ,ಜನ ದನಗಳಿಗೆ ಕುಡಿವ ನೀರು ಕೂಡ ಇಲ್ಲದೇ ಕಂಗಾಲಾಗುತ್ತಾರೆ.
ಬುಡಬಡಿಕೆಯವನೊಬ್ಬ "ಮುತ್ತೈದೆಯೊಬ್ಬಳನ್ನು ಕೆರೆಗೆ ಹಾರ (ಬಲಿ) ಕೊಡುವುದಾದರೆ ಕೆರೆ ತುಂಬುವಷ್ಟು ಮಳೆಯಾಗುತ್ತದೆ" ಎಂದು ಹೇಳಿ ಹೋಗುತ್ತಾನೆ.
ಆಗ ಊರ ಗೌಡನಿಗೆ ಚಿಂತೆ ಆಗುತ್ತದೆ ಯಾರು ಇದಕ್ಕೆ ಒಪ್ಪುತ್ತಾರೆ ಎಂದು.
ಆಗ ಅವನ ಹಿರಿ ಸೊಸೆ #ಗೌರಿ ಮುಂದೆ ಬಂದು "ಮಳೆ ಬಂದು ಕೆರೆ ತುಂಬಿದಲ್ಲಿ ಮುತ್ತೈದೆಯನ್ನು ಬಲಿ ಕೊಡುವುದಾಗಿ ಹರಕೆ ಹೊತ್ತುಕೊಳ್ಳಿ ಕೆರೆ ತುಂಬಿದಲ್ಲಿ ತಾನು ಆ ಹರಕೆಯನ್ನು ನೆರವೇರಿಸುತ್ತೇನೆ" ಎಂದು ಹೇಳುತ್ತಾಳೆ.
ಅದರಂತೆಯೇ ಗೌಡನು ಹರಕೆ ಹೊತ್ತುಕೊಳ್ಳುತ್ತಾನೆ ಕಾಕತಾಳೀಯವೋ ಎಂಬಂತೆ ಅದೇ ವರ್ಷ ತುಂಬಾ ಮಳೆ ಸುರಿದು ಕೆರೆ ಕೊಳ್ಳಗಳೆಲ್ಲ ತುಂಬಿ ತುಳುಕುತ್ತವೆ.
ಮಾವನಿಗೆ ಕೊಟ್ಟ ಮಾತಿನಂತೆ ಗೌರಿ ಆ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ ಅವಳ ತಂಗಿ 'ಗಂಗೆ' ( ಕಿರಿ ಸೊಸೆ ) ಕೂಡ ಮರುದಿನ ಅಕ್ಕನ ಅಗಲಿಕೆಯ ನೋವು ತಾಳಲಾಗದೆ ತಾನೂ ಕೆರೆಗೆ ಹಾರವಾಗುತ್ತಾಳೆ.
ಈ ಗೌರಿಯನ್ನು ನೆನಪಿಸಿಕೊಂಡು ಆ ಕೆರೆಯಿಂದ ಒಂದು ತಂಬಿಗೆ ನೀರನ್ನು ತಂದು ಪೂಜಿಸಿ ಮತ್ತೆ ಅದೇ ಕೆರೆಗೆ ಬಿಡುವ ಆಚರಣೆ ಜಾರಿಗೆ ಬಂದಿರಬಹುದು.
ಮಲೆನಾಡಿನ ಕೆಲವೆಡೆ ಗೌರಿಯನ್ನು ಬಿಟ್ಟ ಬಳಿಕ ಗಂಗೆಯನ್ನೂ ತಂದು ಪೂಜಿಸುವ ಆಚರಣೆ ಇದೆ.
Comments
Post a Comment