#ಮುಳ್ಳು_ಸೌತೆ
#ಉತ್ತರಕನ್ನಡ_ಜಿಲ್ಲೆಯಲ್ಲಿ_ಹಾಲಕ್ಕಿ_ಮಹಿಳೆಯರು
#ಸಾಗರ_ತಾಲ್ಲೂಕಿನ_ದೀವರ_ಮಹಿಳೆಯರು
#ಜೋಯಿಡಾದ_ಕುಣುಬಿ_ಮಹಿಳೆಯರು_ಮಾತ್ರ_ಈ_ತಳಿ_ಸಂರಕ್ಷರಾಗಿದ್ದಾರೆ.
#ನಾಟಿ_ಮುಳ್ಳು_ಸೌತೆ_ಬೆಳೆಯುವವರು_ಕಡಿಮೆ
#ಇದೇ_ಆಕೃತಿ_ಆದರೆ_ರುಚಿ_ಇಲ್ಲದ_ಹೈಬ್ರೀಡ್_ಸೌತೆ_ಮಾರುಕಟ್ಟೆಯಲ್ಲಿದೆ.
#tendercocumber #ಎಳೆಸೌತೆ #vegetables #vegrestaurant #vegitables #rawveganfood #ಸಹಜಕೃಷಿ #ಸಾವಯವಕೃಷಿ #apmcmarket #karwar #joida #ankola #honnavara #kumata #sagar #soraba #Halakki #kunbi #DIVARU
ಸೌತೆಯ ಮೂಲ ಭಾರತ ದೇಶ ಆಗಿದೆ, ಇದು ಫ್ರಾನ್ಸ್ ನಲ್ಲಿ 9ನೇ ಶತಮಾನದಲ್ಲಿ, ಇಂಗ್ಲೇಂಡ್ ನಲ್ಲಿ 14ನೇ ಶತಮಾನದಲ್ಲಿ ಮತ್ತು ಅಮೇರಿಕಾದಲ್ಲಿ 16ನೇ ಶತಮಾನದಲ್ಲಿ ಬಳಕೆಗೆ ಬಂತಂತೆ.
ರೋಮ್ ಚಕ್ರಾದಿಪತಿಗಳಿಗೆ ವರ್ಷದ 365 ದಿನವೂ ಊಟದ ಟೇಬಲ್ ಮೇಲೆ ಸೌತೆ ಇರಲೇ ಬೇಕಾಗಿದ್ದರಿಂದ ಸೌತೆ ಬೆಳೆಯುವ ಕೃತಕ ಪಯಾ೯ಯ ವ್ಯವಸ್ಥೆ ಅಲ್ಲಿ ಕಂಡುಕೊಂಡಿದ್ದರಂತೆ.
ಮುಂಗಾರು ಮಳೆ ಮುಕ್ತಾಯದ ದಿನಗಳಾದ ಈ ತಿಂಗಳು ಮತ್ತು ಮುಂದಿನ ತಿಂಗಳು ಮುಳ್ಳುಸೌತೆಯ ಸವಿಯಲು ಸಕಾಲ.
ರೈತರು ಬೆಳೆದ ಎಳೆಯ ಮುಳ್ಳು ಸೌತೆ ಈಗ ಕಾರವಾರದ ಪೋಲಿಸ್ ಠಾಣೆ ರಸ್ತೆಯಲ್ಲಿ, ಅಂಕೋಲದ ಸಿನಿಮಾ ಟಾಕೀಸ್ ವೃತ್ತದಲ್ಲಿ, ಕುಮಟಾದ ರೈಲ್ವೆ ನಿಲ್ದಾಣದ ವೃತ್ತದಲ್ಲಿ, ಹೊನ್ನಾವರದ ಬಂದರು ರಸ್ತೆಯಲ್ಲಿ ಮತ್ತು ಸಾಗರದ ನಗರ ಸಭೆ ಎದರು ಮಾರಾಟಕ್ಕೆ ರೈತರು ತರುತ್ತಿದ್ದಾರೆ.
ಮಾರಟಕ್ಕೆ ಬಂದ ಕೆಲವೇ ಕ್ಷಣದಲ್ಲಿ ಮುಳ್ಳು ಸವತೆಕಾಯಿ ಖಾಲಿ ಆಗಿ ಬಿಡುತ್ತದೆ.
ಮುಳ್ಳುಸೌತೆಯ೦ತದೇ ಒ0ದು ಹೈಬ್ರೀಡ್ ತಳಿ ಇದೆ ಆದರೆ ಮುಳ್ಳುಸೌತೆಯ ರುಚಿ ಮತ್ತು ಆರೋಮ ಅದರಲ್ಲಿಲ್ಲ.
ಇದರಲ್ಲಿ ಅನೇಕ ವಿದದ ವ್ಯಂಜನ, ಸಿಹಿ ತಿಂಡಿ ಮತ್ತು ದೋಸೆ ಮಾಡುತ್ತಾರೆ ಆದರೆ ಎಳೆಯ ಮುಳ್ಳು ಸೌತೆ ತುಂಡರಿಸಿ ಜೀರಿಗೆ ಮೆಣಸು, ಉಪ್ಪು ಮತ್ತು ವಾಟೆ ಹುಳಿ ಮಿಶ್ರಣದ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ.
Comments
Post a Comment