#ಕನ್ನಡದ_ಮೊದಲ_ಶಾಸನ
#ತಾಳಗುಂದ_ಕನ್ನಡ_ಶಾಸನ
#ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ತಾಳಗುಂದದಲ್ಲಿದೆ
#ಇದನ್ನು_ಉತ್ಖನದಿಂದ_ಸಂಶೋಧಿಸಿದ
#ಡಾಕ್ಟರ್_ಟಿ_ಎಂ_ಕೇಶವರಿಗೆ_ಹೃದಯ_ಪೂರ್ವಕ_ಅಭಿನಂದನೆ_ಸಲ್ಲಿಸಿದ
#ಶಿವಮೊಗ್ಗ_ಜಿಲ್ಲೆಯ_ಇತಿಹಾಸ_ಸಂಶೋಧಕ_ರಮೇಶ್_ಬಿ_ಹಿರೇಜಂಬೂರ್
#ಕನ್ನಡ_ನಾಡು_ನುಡಿಗಾಗಿ_ಈ_ಅಮೋಘ_ಇತಿಹಾಸದ_ಸಂಶೋದನೆ
#ಸುವರ್ಣಾಕ್ಷರದಲ್ಲಿ_ಬರೆದಿಡಬೇಕಾದ_ಮಹತ್ತರ_ಕಾರ್ಯ.
#History #kannada #Talagunda #Kadamba #Halmidi #Shivamogga #Shikaripura #DrTMKeshava
#Rameshhirejambur
ಕನ್ನಡದ ಮೊದಲ ಶಾಸನ ತಾಳಗುಂದ ಶಾಸನದ ಸಂಶೋದನೆ.
ಈ ಸಂಶೋಧನೆ ಮಾಡಿದವರು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ಅದೀಕ್ಷಕರಾಗಿದ್ದ ಡಾ. ಟಿ.ಎಂ. ಕೇಶವರವರು.
ಇವರನ್ನು ಅಭಿನಂದಿಸಿ ತಮ್ಮ ಪೇಸ್ ಬುಕ್ ನಲ್ಲಿ ಲೇಖನ ಬರೆದವರು ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್. ಬಿ. ಹಿರೇಜಂಜೂರ್.
ಕನ್ನಡ ನಾಡು ನುಡಿಗಾಗಿ ಈ ಅಮೋಘ ಇತಿಹಾಸದ ಸಂಶೋದನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಹತ್ತರ ಕಾರ್ಯ.
ರಮೇಶ್ ಬಿ. ಹಿರೇಜಂಬೂರ್ ಅವರ ಲೇಖನ ನಾಡಿನ ಸಮಸ್ತ ಕನ್ನಡಿಗರಿಗಾಗಿ ಮತ್ತು ಇತಿಹಾಸ ಆಸಕ್ತರಿಗಾಗಿ ಇಲ್ಲಿದೆ ಓದಿ....
#ಇವರ_ಹೆಸರು_ಶ್ರೀಕೇಶವ_ತಿರುಮಲೈ ( Keshava Thirumalai)
ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡ ಪ್ರೇಮಿಯೂ ಇವರನ್ನು ಎದೆಯಲ್ಲಿಟ್ಟುಕೊಳ್ಳಬೇಕಾದ ವ್ಯಕ್ತಿ.
ಕನ್ನಡದ ಶಾಸನ ಪುರಾತನತೆಯನ್ನು ಕ್ರಿ.ಶ.450ಕ್ಕೂ ಹಿಂದೆ ಕೊಂಡೋಯ್ದ ಮಹಾಪುರುಷರು.
ತಾಳಗುಂದ ಉತ್ಖನನದ ರೂವಾರಿಗಳಾಗಿರುವ ಇವರು ಅತಿ ಆಸಕ್ತಿಯಿಂದ
ತಾಳಗುಂದದ ಸಿಂಹ ಕಟಾಂಜನ ಪತ್ತೆ ಹಚ್ಚಿ, ಕನ್ನಡಕ್ಕೆ ಮತ್ತಷ್ಟು ಹಿರಿಮೆಯನ್ನು ನೀಡಿದ್ದಾರೆ.
ತಾಳಗುಂದದ ಕದಂಬರ ಸ್ಥಂಭ ಶಾಸನದಲ್ಲಿ ಉಲ್ಲೇಖವಾಗಿರುವ ಶಾತಕರ್ಣಿ ಎಂಬ ಶಬ್ದವು ಇವರನ್ನು ತುಂಬಾ ಚಿಂತನೆಗೆ ಒಳಪಡಿಸಿದೆ.
ಇಲ್ಲಿ ಶಾತವಾಹನರ ಕುರಿತಾದ ಇನ್ನಷ್ಟು ವಿವರ ಸಿಗಬಹುದು ಆ ಮೂಲಕ ಕರುನಾಡಿನ ಶಾಸನೋಕ್ತ ಪುರಾತನತೆಯನ್ನು ಕ್ರಿಸ್ತ ಪೂರ್ವದಲ್ಲೂ ಕಾಣಬಹುದು ಎಂಬ ಮಹದಾಸೆಯಿಂದ 2013-14ನೇ ಸಾಲಿನಲ್ಲಿ ಪ್ರಾಯೋಗಿಕ ಉತ್ಖನನ ಪ್ರಾರಂಭಿಸಿದ ಕೇಶವಸರ್ ರವರಿಗೆ ಸಿಕ್ಕಿದ್ದು "#ಕನ್ನಡದ_ಮೊದಲ_ಶಾಸನ". ಚಿನ್ನ ಹುಡುಕಲು ಹೊರಟವರಿಗೆ ವಜ್ರ ಸಿಕ್ಕಿದಂತಾಯಿತು.
ಉತ್ಖನನದ ಅನುಕ್ಷಣದಲ್ಲೂ ಕಣ ಕಣವನ್ನೂ ಪರಾಂಬರಿಸುತ್ತಿದ್ದ ಕೇಶವ ಸರ್ ಗೆ "ಸಿಂಹ ಕಟಾಂಜನ " ರಚನೆ ಗೋಚರಿಸಿತು.
ಅದರ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಖಂಡಿಸಿದ ಅಕ್ಕರಗಳ
ಸಾಲುಗಳು ಒಂದಷ್ಟು ಆಸಕ್ತಿ ಹೆಚ್ಚಿಸಿದವು.
ತುಂಬಾ ಪಳೆಯುಳಿಕೆ ರೂಪದಲ್ಲಿದ್ದ ಶಾಸನವನ್ನು ಎಚ್ಚರಿಕೆಯಿಂದ ಸ್ವಚ್ಚಗೊಳಿಸಿ ಅದರ ಪ್ರತಿ ಪಡೆದು ಅಧ್ಯಯನಗೈದಾಗ ಆ ಅಕ್ಕರಗಳು ಹುಣ್ಣಿಮೆಯ ಪ್ರಭೆಯಾಗಿ ಪ್ರಜ್ವಲಿಸಿದವು.
ಮತ್ತೆ ಮತ್ತೆ ಮೂಲ ಪ್ರತಿಯಲ್ಲಿನ ಲಿಪಿಯ ಪ್ರತಿವಕ್ರತೆ
ಮತ್ತು ಲಿಪಿ ವಿನ್ಯಾಸವನ್ನು ಪರೀಕ್ಷಿಸಿ ಶಾಸನ ಮಾಹಿತಿಯನ್ನು ದೃಡಪಡಿಸಿಕೊಂಡು ಅದನ್ನು ಹಲವಾರು ಸುಪ್ರಸಿದ್ಧ ಹಿರಿಯ ಇತಿಹಾಸಕಾರರಲ್ಲಿ ಚರ್ಚಿಸಿ ಖಚಿತ ಮಾಡಿಕೊಂಡು ಸ್ಪಷ್ಟವಾದ ನಿಖರವಾದ ಮಾಹಿತಿಯೊಂದಿಗೆ ವರದಿಯನ್ನು ASI ಗೆ ನೀಡಿದರು.
ASI ಡಿಸೆಂಬರ್ 2016 ರಲ್ಲಿ ಅಧಿಕೃತ ವರದಿ ಬಿಡುಗಡೆ ಮಾಡಿತು.
ಉತ್ಖನನದ ವೇಳೆಯಲ್ಲಿ ದೊರೆತ ಪ್ರತಿಕಣದ ಮಾಹಿತಿ ದಾಖಲಿಸಿರುವ ಶ್ರೀಯುತರು
ಶಾಸನವನ್ನು ಅತ್ಯಂತ ವೈಜ್ಞಾನಿಕವಾಗಿ ಅದು ಮೊದಲಿದ್ದ ಸ್ಥಿತಿಯಲ್ಲೇ ಇರಿಸಿದ್ದಾರೆ.
ವಿಘಟಕವಲ್ಲದ ವಸ್ತುಗಳಿಂದ ಅದನ್ನು ಭದ್ರಪಡಿಸಿ ಅದರ ಸಂಪೂರ್ಣ ಚಿತ್ರಗಳನ್ನು ಸೆರೆ ಹಿಡಿದು ಅತ್ಯಂತ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡಿದ್ದಾರೆ.
ಅತ್ಯಂತ ಹಳೆಯ ಹಾಗೂ fragmented ಸ್ಥಿತಿಯಲ್ಲಿದ್ದ ಶಾಸನವನ್ನು ತಾನಿದ್ದ ಮೊದಲಿನ ಸ್ವಸ್ಥಿತಿಯಲ್ಲಿ ಹಾಗೂ ಸ್ವ ನೆಲೆಯಲ್ಲಿ ಸಂರಕ್ಷಿಸಿಟ್ಟಿರುವುದು ನಿಜಕ್ಕೂ ಅವರ ಮೇರು ಜ್ಞಾನದ ಪ್ರತಿಕತೆಯನ್ನು ಬಿಂಬಿಸುತ್ತದೆ.
ಕನ್ನಡದ ಶಾಸನ ಎಂದು ನಿಖರವಾದ ವಾದ ಹೊಂದಿರುವ ಹಾಗೂ ಶಾಸನದ ಅವಧಿಯ ವಿಷಯದಲ್ಲಿ ಲಿಪಿಶಾಸ್ತ್ರದ ಸ್ಪಷ್ಟ ಪರಿಜ್ಞಾನ ಹಾಗೂ ಅನುಭವದ ಹಿನ್ನಲೆಯಲ್ಲಿ ವರದಿ ಸಿದ್ಧಪಡಿಸಿ ಕನ್ನಡಿಗರಿಗೆ ಅರ್ಪಿಸಿರುವ ಕೇಶವ ಸರ್ ಗೆ ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗರೂ ಯಾವತ್ತೂ
ಋಣಿಯಾಗಿದ್ದಾರೆ.
ಪ್ರಸ್ತುತ ASI ಯಿಂದ ನಿವೃತ್ತಿ ಹೊಂದಿರುವ ಶ್ರೀಯುತರು ಈ ಶಾಸನದ ಕುರಿತಾಗಿ ವಿಶೇಷ ಆಸಕ್ತಿವಹಿಸಿ ಪ್ರತಿಯೊಬ್ಬ ಕನ್ನಡಿಗರ ಕಣ್ಮಣಿಯಾಗಿದ್ದಾರೆ.
ಪೂಜ್ಯರೇ... ನಿಮಗೆ ಈ ಕರ್ನಾಟಕದ ಎಲ್ಲಾ ಕನ್ನಡಿಗರ ಪರವಾಗಿ ಈ ನೆಲದ ಮಕ್ಕಳಾದ ನಾವು ಅನಂತ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ. ಇಂತಹ ಮಹೋನ್ನತ ಕಾರ್ಯಕ್ಕೆ ಎಲ್ಲಾ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಖಂಡಿತಾ ಪಡೆದಿದ್ದೀರಿ.
ಸ್ನೇಹಿತರೇ ಈ ನೆಲದ ಪವಿತ್ರತೆ ಮತ್ತು ಪುರಾತನತೆಯನ್ನು ಜಗದಗಲಕ್ಕೆ ತೆರೆದಿಟ್ಟ ಈ ಪೂಜ್ಯರ ಈ ಪವಿತ್ರ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸಿ.
ಇಂದ:
#ರಮೇಶ_ಬಿ_ಹಿರೇಜಂಬೂರು
Comments
Post a Comment