#ವರದಾ_ನದಿ
#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ವರದಾಮೂಲದಲ್ಲಿ_ಉಗಮ.
#ಬನವಾಸಿ_ಮೂಲಕ_ಹರಿದು_ಹಾವೇರಿ_ಜಿಲ್ಲೆಯ_ಗಳಗನಾಥದಲ್ಲಿ
#ತುಂಗಭದ್ರ_ನದಿಗೆ_ಸಂಗಮ_ಅಗುತ್ತದೆ.
#Varadariver #Shivamogga #Sagar #Uttarakannadadistrict #Banavasi #Galaganatha #Haveridistrict #Tungabadra
ವರದಾ ನದಿ ತುಂಗಭದ್ರಾ ನದಿಯ ಪ್ರಮುಖ ಉಪನದಿ ಇದರ ಉದ್ಭವ ಸ್ಥಳ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಾ ಮೂಲ.
ಪುರಾಣದಲ್ಲಿ ವರದಾ ನದಿ ಉಗಮದ ಬಗ್ಗೆ ಎರೆಡು ಕಥೆಗಳಿದೆ...
ಮೊದಲನೆಯದು ಶೃಂಗಋಷಿ ಒಮ್ಮೆ ತೀವ್ರ ತಪಸ್ಸಿನಲ್ಲಿದ್ದು, ಬ್ರಹ್ಮಹತ್ಯಾದೋಷ ಮಾಡಿದ್ದಕ್ಕಾಗಿ ವಿಷ್ಣುವಿನಿಂದ ಕ್ಷಮೆ ಕೇಳುತ್ತಿದ್ದನು. ಶ್ರೀಮನ್ನಾರಾಯಣನು ಅವನ ಮುಂದೆ ಪ್ರತ್ಯಕ್ಷನಾಗಿ ಋಷಿಯ ತಲೆಯ ಮೇಲೆ ಗಂಗಾಜಲವನ್ನು ಸುರಿದನು. ಈ ಗಂಗಾಜಲವು ವರದಾ ನದಿಯನ್ನು ರೂಪಿಸಿತು.
ಇನ್ನೊಂದು ಪುರಾಣ ಕಥೆ ಶಿವ ರೌದ್ರವತಾರ ತಾಳಿದಾಗ ಅವನ ತಾಪವಿಳಿಸಲು ವಿಷ್ಣು ಶಂಖದಲ್ಲಿ ಭಾಗಿರಥಿ ಜಲ ಶಿವನಿಗೆ ಅಭಿಷೇಕ ಮಾಡಿದ ನೀರೆ ವರದಾ ನದಿ ಆಯಿತೆಂದು.
ಸಾಗರ ಪಟ್ಟಣದಿಂದ ಆವಿನಹಳ್ಳಿ ರಸ್ತೆಯ ಇಕ್ಕೇರಿ ಅಘೋರೇಶ್ವರ ದೇವಾಲಯದ ವೃತ್ತದಲ್ಲಿ ಎಡಕ್ಕೆ ಸಾಗಿದರೆ ವರದಾ ನದಿ ಉಗಮ ಸ್ಥಳ ವರದಾ ಮೂಲ ಇದೆ.
ಈ ನದಿಗೆ ಸಾಗರ ಪಟ್ಟಣದಲ್ಲಿ ಆಣೆಕಟ್ಟು ನಿರ್ಮಿಸಿ ಕೆಲ ದಶಕಗಳ ಕಾಲ ಸಾಗರದ ಪಟ್ಟಣ ವಾಸಿಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿತ್ತು.
ಈಗ ಶರಾವತಿ ನದಿ ನೀರು ಸಾಗರ ಪಟ್ಟಣದ ನಿವಾಸಿಗಳಿಗೆ ಸರಬರಾಜು ಆಗುವುದರಿಂದ ವರದಾ ನದಿ ನೀರು ಬಳಸುತ್ತಿಲ್ಲ.
ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯಲ್ಲಿ ಅನೇಕ ಹೊಳೆ ನದಿಗಳನ್ನು ಕೂಡಿಕೊಂಡು ಸುಮಾರು 200 ಕಿಲೋ ಮೀಟರ್ ವರದಾ ನದಿ ಹರಿಯುತ್ತದೆ.
ಸೊರಬ ತಾಲ್ಲೂಕಿನ ಬಂಕಸಾಣದಲ್ಲಿ ದಂಡಾವತಿ ನದಿ ವರದಾ ನದಿಯಲ್ಲಿ ವಿಲೀನವಾಗುತ್ತದೆ.
ಕದಂಬರ ಬನವಾಸಿಯು ವರದಾ ನದಿ ತಟದಲ್ಲಿದೆ ಕದಂಬರ ಶೌರ್ಯ ಸಾಹಸಕ್ಕೆ ವರದಾ ನದಿ ಸಾಕ್ಷಿ ಆಗಿದೆ.
ಹತ್ತನೆ ಶತಮಾನದ ಆದಿಕವಿ ಪಂಪಾ ಬನವಾಸಿ ಮತ್ತು ವರದಾ ನದಿ ಬಗ್ಗೆ ತಮ್ಮ ಮಹಾ ಕಾವ್ಯ #ವಿಕ್ರಮಾರ್ಜುನ_ವಿಜಯದಲ್ಲಿ ಉಲ್ಲೇಖಿಸಿದ್ದಾರೆ....
ಪಂಪನ ಮಹಾಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನನ ಪಟ್ಟಾಭಿಷೇಕದ ಸಂದರ್ಭದಲ್ಲಿ ಬನವಾಸಿ ಪ್ರದೇಶದ (ಆಧುನಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ) ಸೌಂದರ್ಯದ ಆಗಾಗ್ಗೆ ವಿವರಣೆಗಳು ಮತ್ತು #ವರದಾ_ನದಿಯ ನೀರನ್ನು ಅರ್ಜುನನ ತಲೆಯ ಮೇಲೆ ಚಿಮುಕಿಸುವುದು ( ಅಭಿಷೇಕ ) ಕವಿಯ ಬನವಾಸಿ ಪ್ರದೇಶದ ಬಾಂಧವ್ಯವನ್ನು ಸೂಚಿಸುತ್ತದೆ. "ಆರಂಕುಸಮಿತ್ತೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಮತ್ತು ಪುಟ್ಟದಿರ್ದೊಡೆ ಮರಿದುಂಬಿಯಾಗಿ ಗಂಡು ಕೋಗಿಲೆಯಾಗಿ ನಂದನವನದೊಳ್ ಬನವಾಸಿ ದೇಶದೊಳ್ " ಎಂಬ ಸಾಲುಗಳ ಮೂಲಕ ಬನವಾಸಿಯ ಬಗೆಗಿನ ಗಾಢವಾದ ಬಾಂಧವ್ಯವನ್ನು ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಗಳಗನಾಥದಲ್ಲಿ ವರದಾ ನದಿ ಮತ್ತು ತುಂಗಾಭದ್ರ ನದಿ ಸಂಗಮ ಆಗುತ್ತದೆ.
Comments
Post a Comment