ಪುಸ್ತಕ ಓದುವ ಅಭ್ಯಾಸ ಇದ್ದರೆ ಜೈಲಲ್ಲಿ ಜೀವಾವದಿ ಕೂಡ ಕಳೆಯಬಹುದು ಆದರೆ ಇತ್ತೀಚಿಗೆ ಮೊಬೈಲ್ ಪೋನ್ನನ ವಾಟ್ಸ್ ಆಪ್, ಪೇಸ್ ಬುಕ್ ಗಳು ನಮ್ಮಲ್ಲಿನ ಓದಿನ ಹವ್ಯಾಸ ಮತ್ತು ಅದಕ್ಕೆ ಬೇಕಾದ ಸಮಯ ನಮಗೆ ಗೊತ್ತಾಗದಂತೆ ಕಸಿದುಕೊಂಡು ಬಿಟ್ಟಿದೆ.
ಬರೆಯುವುದಂತೂ ಸಾಧ್ಯವೇ ಇಲ್ಲ ಎಂಬOತೆ ಆಗಿಬಿಟ್ಟಿದೆ ಇದರ ಮಧ್ಯ ವಾಟ್ಸ್ ಅಪ್ ಗಳು ಪೇಸ್ ಬುಕ್ ಗಳು ನೆಮ್ಮದಿಯನ್ನು ಹಾಳು ಮಾಡಿದೆ.
ಇಲ್ಲಿ ಬರುವ ಸತ್ಯದ ರೂಪದ ಸುಳ್ಳುಗಳು ಅದನ್ನ ಪೇಕು ಅಂತ ಕಡೆಗಾಣಿಸಲು ಸಾಧ್ಯವೇ ಇಲ್ಲ.
ಬೇರೆಯವರ ಗೋಡೆ (waII) ನಲ್ಲಿ ಇದ್ದಕ್ಕಿದ್ದ೦ತೆ ಬಂದು ಕಾಲೆತ್ತಿ ಮೂತ್ರ ಮಾಡುವವರು, ಹಾವಾಗಿ ಬುಸುಗುಡುವವರು, ರಾತ್ರಿ ಮೇಲೆ ಬಾವುಲಿ ಆಗುವವರ ಹಾವಳಿ ಬೇರೆ.
ಇನ್ನೊಬ್ಬರನ್ನ ಅವಹೇಳನ ಮಾಡುವ ವಿಕೃತ ವಿಚಾರವಂತರು, ಟ್ರೋಲ್ ಮಾಡುವ ಅಂದಾಬಿಮಾನಿಗಳು, ಅವರವರ ದಮ೯ ಜಾತಿಗಾಗಿ ಯಾವುದಕ್ಕೂ ತಯಾರಿರುವ ದಮ೯ ಯೋದರು ಇವರ ಮಧ್ಯ ರಾಜಕೀಯ ಪಕ್ಷಗಳ ಕಟ್ಟಾಳು ಅವರವರ ಪಕ್ಷಗಳ ನೂರಾರು ಉಪ ಸಂಸ್ಥೆಗಳ ಕಾವಲಗಾರರು ಇವರೆಲ್ಲ ನಮ್ಮ ನಿದ್ದೆ ಕೆಡಿಸುತ್ತಾರೆ ಜೊತೆಗೆ ಅಶ್ಲೀಲ ಬೈಯ್ಗುಳ ಆದರೂ ಕೆಟ್ಟ ಚಟದಂತೆ ಮೊಬೈಲ್ ಅಂಟಿಬಿಟ್ಟಿದೆ.
ಈ ಪುಸ್ತಕ ಪಾಲ್ ಬ್ರOಟನ್ ಎಂಬ ಇಂಗ್ಲೀಷ್ ಅನ್ವೇಶಕ ನಿಗೂಡ ಭಾರತದಲ್ಲಿ ಹುಡುಕಾಟ ಮಾಡಿ ಅಂತಿಮವಾಗಿ ರಮಣ ಮಹಷಿ೯ಯಲ್ಲಿ ಗುರುವನ್ನ ಕಾಣುವ ಈ ಪುಸ್ತಕ 5 ವಷ೯ದಿOದ ಓದಲಾಗದ್ದು ಕರೋನಾದಿಂದ ಸಾಧ್ಯವಾಯಿತು.
Comments
Post a Comment