ಆರಿದ್ರಾ_ಮಳೆ_ಹಬ್ಬ
ಈ ವರ್ಷ ಪ್ರಾರಂಭದಲ್ಲೇ ಮುಂಗಾರು ಕ್ಷೀಣಿಸಿದೆ,ಆರಿದ್ರಾ ನಕ್ಷತ್ರದ ಮಳೆ ಕಾಲದಲ್ಲಿ ಆರಿದ್ರಾ ಮಳೆ ಹಬ್ಬ ಆಚರಿಸಲು ರೈತರು ತಯಾರಾಗುತ್ತಿದ್ದಾರೆ.
ಇವತ್ತಿನಿಂದ ಪ್ರಾರಂಭ ಅಂದರೆ 22 -ಜೂನ್ - 2026 ಸೋಮವಾರದಿಂದ ಜುಲೈ -6 ರ ವರೆಗೆ ಆರಿದ್ರಾ ಮಳೆ ಆಗಲಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಲಿ ಎಂಬ ಹರಕೆ ಹಾರೈಕೆಗಳು ಫಲಿಸಲಿ.
ಆರಿದ್ರಾ ಮಳೆ ಹಬ್ಬವು ಕರ್ನಾಟಕದ ಮಲೆನಾಡು ಭಾಗದಲ್ಲಿ ಮುಖ್ಯವಾಗಿ ಶಿವಮೊಗ್ಗ, ಸಾಗರ, ಸೊರಬ ಮುಂತಾದ ಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುವ ಸಾಂಪ್ರದಾಯಿಕ ಮತ್ತು ಪ್ರಕೃತಿ ಆರಾಧನೆಯ ವಿಶೇಷ ಹಬ್ಬವಾಗಿದೆ.
ಮಳೆರಾಯನನ್ನು ಸ್ವಾಗತಿಸಲು ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸಲು ಈ ಹಬ್ಬವನ್ನು ನಡೆಸಲಾಗುತ್ತದೆ.
ಆರಿದ್ರಾ ಮಳೆ ಹುಯ್ಯದಿದ್ದರೆ ದಾರಿದ್ರ್ಯ ಖಚಿತ ಎಂಬುದು ಹಿರಿಯರ ನಂಬಿಕೆ. ಮಳೆಗಾಲದ ಆರಂಭದಲ್ಲಿ ಮಳೆರಾಯನನ್ನು ಒಲಿಸಿಕೊಳ್ಳಲು ರೈತರು ಪ್ರಕೃತಿಯನ್ನು ಪೂಜಿಸುತ್ತಾರೆ.
ಮಲೆನಾಡಿನ ಕೆಲವು ಸಮುದಾಯಗಳು ವಿಶೇಷವಾಗಿ ದೀವರ ಜನಾಂಗ ತಮ್ಮ ಆರಾಧ್ಯ ದೈವವಾದ ಕುಮಾರರಾಮನನ್ನು ಈ ಹಬ್ಬದಲ್ಲಿ ನೆನೆಯುತ್ತಾರೆ.
ಹಬ್ಬದ ಸಂದರ್ಭದಲ್ಲಿ ಸುರಿಯುವ ಮಳೆ ನೀರನ್ನು ಹಿಡಿದಿಟ್ಟು ನಂತರ ದೇವರ ವಿಗ್ರಹಕ್ಕೆ ಅದೇ ನೀರಿನಿಂದ ಅಭಿಷೇಕ ಮಾಡುವ ಪದ್ಧತಿಯೂ ಇದೆ.
ಹಬ್ಬದ ಸಮಯದಲ್ಲಿ ಗ್ರಾಮಗಳಲ್ಲಿ ದೇವಿಯ ಅಡ್ಡ ಪಲ್ಲಕ್ಕಿ ಉತ್ಸವ, ಕೆಂಡಾರ್ಚನೆ ಮತ್ತು ಜನಪದ ಕಲಾ ಮೇಳಗಳನ್ನು ಆಯೋಜಿಸಲಾಗುತ್ತದೆ.
ಸೂರ್ಯನು ಆರಿದ್ರಾ ನಕ್ಷತ್ರಕ್ಕೆ ಪ್ರವೇಶಿಸಿದಾಗ ಈ ಮಳೆ ಆರಂಭವಾಗುತ್ತದೆ.
ಸಾಮಾನ್ಯವಾಗಿ ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ (ಜೂನ್ 21-22 ರ ಸುಮಾರಿಗೆ) ಆರಿದ್ರಾ ಮಳೆ ಪ್ರಾರಂಭವಾಗುತ್ತದೆ.
ಮುಂಗಾರು ಮಳೆ ತೀವ್ರಗೊಳ್ಳುವ ಕಾಲ ಇದಾಗಿದೆ ಬಿತ್ತನೆಗೆ ಉತ್ತಮ ಸಮಯ ಇದು.
ರೈತರು ಈ ಮಳೆಯನ್ನು ಅತ್ಯಂತ ಶುಭ ಮತ್ತು ಲಾಭದಾಯಕ ಎಂದು ಭಾವಿಸುತ್ತಾರೆ,ಭೂಮಿ ಚೆನ್ನಾಗಿ ತೊಯ್ದು, ಹಸಿಯಾಗುವುದರಿಂದ ಜೋಳ, ರಾಗಿ, ಶೇಂಗಾ ಮುಂತಾದ ಪ್ರಮುಖ ಬೆಳೆಗಳ ಬಿತ್ತನೆಗೆ ಇದು ಸಕಾಲ.
ಕಡು ಬೇಸಿಗೆಯಿಂದ ಕಾಯ್ದಿದ್ದ ಭೂಮಿ ಆರಿದ್ರಾ ಮಳೆಯಿಂದ ಸಂಪೂರ್ಣವಾಗಿ ತಂಪಾಗುತ್ತದೆ.
ಜನಪದ ನಾಣ್ಣುಡಿಗಳು
ಆರಿದ್ರಾ ಮಳೆಯ ಮಹತ್ವವನ್ನು ಸಾರುವ ಹಲವು ಜನಪ್ರಿಯ ಗಾದೆಗಳು ಕನ್ನಡದಲ್ಲಿವೆ
"ಆರಿದ್ರಾ ಮಳೆ ಆರ್ಭಟಿಸಿದರೆ ಧರಣಿ ತಂಪಾದೀತು" ಈ ಮಳೆ ಜೋರಾಗಿ ಬಂದರೆ ಭೂಮಿ ತಂಪಾಗಿ ಉತ್ತಮ ಇಳುವರಿ ಸಿಗುತ್ತದೆ ಎಂಬ ನಂಬಿಕೆ.
"ಆರಿದ್ರೆಯಲ್ಲಿ ಬಿತ್ತಿದರೆ ದರಿದ್ರನೂ ಬದುಕಾನು" ಈ ಸಮಯದಲ್ಲಿ ಬಿತ್ತನೆ ಮಾಡಿದರೆ ಅತ್ಯಂತ ಬಡವನಿಗೂ ಉತ್ತಮ ಬೆಳೆ ಸಿಗುತ್ತದೆ ಎಂಬುದು ಇದರ ಅರ್ಥ.
ಆರಿದ್ರಾ ನಕ್ಷತ್ರದ ಅಧಿಪತಿ ಶಿವ ರುದ್ರ ಹಾಗಾಗಿ ಈ ಸಮಯದಲ್ಲಿ ಸುರಿಯುವ ಮಳೆಯನ್ನು ಪ್ರಕೃತಿಯ ಆಶೀರ್ವಾದ ಎಂದು ಪರಿಗಣಿಸಲಾಗುತ್ತದೆ.
ಬಿತ್ತನೆ ಬೀಜಗಳನ್ನು, ಕೃಷಿ ಉಪಕರಣಗಳನ್ನು ಮತ್ತು ಎತ್ತುಗಳನ್ನು ಪೂಜಿಸಿ ಈ ವರ್ಷ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿ ಕೃಷಿ ಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲು ಈ ಹಬ್ಬ ಕಾರಣವಾಗಿದೆ.
ಮಲೆನಾಡು ಹಾಗೂ ಅರೆಮಲೆನಾಡು ಭಾಗಗಳಲ್ಲಿ ವಿಶೇಷವಾಗಿ ಶಿವಮೊಗ್ಗ, ಸಾಗರ, ಸೊರಬ, ಶಿಕಾರಿಪುರ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುವ ದೀವರ ಜನಾಂಗದವರು ಕೃಷಿಯನ್ನೇ ಉಸಿರಾಗಿಸಿಕೊಂಡವರು
ಮುಂಗಾರಿನ ಅತ್ಯಂತ ಪ್ರಮುಖ ಮಳೆಯಾದ ಆರಿದ್ರೆಯನ್ನು ಅವರು ತಮ್ಮ ಸಂಸ್ಕೃತಿಯ ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ.
ಬೇಸಿಗೆಯ ಬಳಿಕ ಬೀಳುವ ಮೊದಲ ಮಳೆಗಳಿಗೆ ಭೂಮಿ ತೊಯ್ದು, ಆರಿದ್ರಾ ನಕ್ಷತ್ರದ ಆರಂಭದ ವೇಳೆಗೆ ಭೂಮಿ ತಾಯಿ ಋತುಮತಿ ರಜಸ್ವಲೆ ಆಗಿದ್ದಾಳೆ ಎಂದು ನಂಬಲಾಗುತ್ತದೆ.
ಹಬ್ಬದ ದಿನದಂದು ಭೂಮಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ ಅಂದು ಯಾವುದೇ ಕಾರಣಕ್ಕೂ ಭೂಮಿಯನ್ನು ಅಗೆಯುವುದು, ಉಳುವುದಾಗಲಿ ಅಥವಾ ನೇಗಿಲು ಮುಟ್ಟುವುದಾಗಲಿ ಮಾಡುವುದಿಲ್ಲ. ತಾಯಿಗೆ ನೋವಾಗಬಾರದು ಎಂಬುದು ಇದರ ಹಿಂದಿನ ಶ್ರದ್ಧೆ.
ವಿಶಿಷ್ಟ ಆಹಾರ ಪದ್ಧತಿ ಕೋಳಿ ಸಾರು - ಕಡುಬು / ರೊಟ್ಟಿ
ದೀವರ ಸಮುದಾಯದ ಆರಿದ್ರಾ ಹಬ್ಬದ ಪ್ರಮುಖ ಆಕರ್ಷಣೆಯೇ ಅಂದಿನ ವಿಶೇಷ ಅಡುಗೆ.
ಸಿದ್ಧಪಡಿಸಿದ ಈ ಖಾದ್ಯವನ್ನು ಮೊದಲು ತೋಟದ ಒಲೆಯಲ್ಲಿ ಅಥವಾ ಮನೆಯ ದೇವರ ಕೋಣೆಯಲ್ಲಿ ಭೂಮಿ ತಾಯಿಗೆ ಮತ್ತು ಪಿತೃಗಳಿಗೆ ಹಿರಿಯರಿಗೆ 'ಎಡೆ' ನೈವೇದ್ಯ)ಇಟ್ಟು ಪೂಜಿಸಲಾಗುತ್ತದೆ ಆ ನಂತರ ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿಯುತ್ತಾರೆ.
ಸಸ್ಯಹಾರಿಗಳಲ್ಲಿ ಈ ಹಬ್ಬದ ದಿನದಂದು ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಮಾವಿನಹಣ್ಣಿನ ಸೀಕರಣೆ ಮತ್ತು ಮಂಡಕ್ಕಿಯನ್ನು ತಿನ್ನುವ ವಾಡಿಕೆ ಉತ್ತರ ಕರ್ನಾಟಕದಲ್ಲಿ ಇದೆ.
ಕರ್ನಾಟಕವು 1970 ರಿಂದ 2023 ರವರೆಗೆ ಸುಮಾರು 21 ವರ್ಷಗಳ ಕಾಲ ಮಳೆ ಕೊರತೆಯನ್ನು ಅನುಭವಿಸಿದೆ.
1972 ರಲ್ಲಿ ಭಾರತದ ಇತಿಹಾಸದಲ್ಲಿ ಅತ್ಯಂತ ಭೀಕರ ಹವಾಮಾನ ಬರಗಾಲಗಳಲ್ಲಿ ಒಂದಾಗಿದ್ದು, ಇದು ಭಾರಿ ಕೃಷಿ ಸಂಕಷ್ಟಕ್ಕೆ ಕಾರಣವಾಯಿತು.
1979 1982 ಮತ್ತು 1987 ನೈಋತ್ಯ ಮಾನ್ಸೂನ್ ವ್ಯಾಪಕ ವೈಫಲ್ಯದಿಂದಾಗಿ 1987 ರಲ್ಲಿ ಶತಮಾನದಷ್ಟು ಕಡಿಮೆ ಮಳೆಯಾಗಿದ್ದು, ರಾಜ್ಯಾದ್ಯಂತ ಪ್ರಮುಖ ಬರಗಾಲಗಳು ಉಂಟಾಗಲು ಕಾರಣವಾಯಿತು.
2002, 2004, ಮತ್ತು 2009: ಎಲ್ ನಿನೊ ಪ್ರೇರಿತ ಮಾನ್ಸೂನ್ ವೈಫಲ್ಯಗಳು ತೀವ್ರ ಬರಗಾಲದ ತೀವ್ರತೆ ಮತ್ತು ವ್ಯಾಪಕ ಬೆಳೆ ವೈಫಲ್ಯಕ್ಕೆ ಕಾರಣವಾಯಿತು.
2014 ಮತ್ತು 2015 ಸತತ ದುರ್ಬಲ ಮಾನ್ಸೂನ್ ವರ್ಷಗಳು ಸತತ ಬರಗಾಲಕ್ಕೆ ಕಾರಣವಾಯಿತು ಇದರ ಪರಿಣಾಮವಾಗಿ ಕುಡಿಯುವ ನೀರಿನ ತೀವ್ರ ಕೊರತೆ ಮತ್ತು ಜಲಾಶಯಗಳ ಮಟ್ಟ ಕುಸಿತ ಉಂಟಾಯಿತು.
2016 ದಶಕಗಳಲ್ಲಿಯೇ ಅತ್ಯಂತ ಒಣ ಮಳೆಯಾದ ನೈಋತ್ಯ ಮಾನ್ಸೂನ್ ದುರ್ಬಲಗೊಂಡ ಕಾರಣ ರಾಜ್ಯ ಸರ್ಕಾರವು 139 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿತು.
2023 ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ತೀವ್ರ ಮಳೆ ಕೊರತೆಗಳಲ್ಲಿ ಒಂದೆಂದು ಗುರುತಿಸಲಾಗಿದೆ.
ಆಗಸ್ಟ್ 2023 ರಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಿದ್ದರಿಂದ ರಾಜ್ಯವು 236 ತಾಲ್ಲೂಕುಗಳಲ್ಲಿ 195 ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿತ್ತು.
ಈ ವರ್ಷ ಪ್ರಾರಂಭದಲ್ಲಿ ಮುಂಗಾರು ಮಳೆ ಕೊರತೆ ಆಗಿದ್ದರೂ ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ ಆಗಲಿದೆ ಎಂಬ ರೈತರ ಆಶಾ ಭಾವನೆ ಹುಸಿ ಆಗದಿರಲಿ.
ನಿಮ್ಮ ಅನಿಸಿಕೆ ಏನು ಈ ವರ್ಷ ಮುಂದಿನ ದಿನಗಳಲ್ಲಿ ಮಳೆ ಸುರಿಯಬಹುದಾ ?...
#mansoon #ARIDRA #rain #mansoonseason
#DIVARU #malnadu #westernghats
Comments
Post a Comment