ಆನಂದಪುರಂ_ರೈಲ್ವೆಸ್ಟೇಶನ್_ವಡೆ_ವಾಸಣ್ಣ
ಆನಂದಪುರಂ ರೈಲು ನಿಲ್ದಾಣದ ಹೆಸರು ಪ್ರಸಿದ್ದಿಗೆ ಬಂದಿದ್ದೇ ವಾಸಣ್ಣ ತಯಾರಿಸುತ್ತಿದ್ದ ಬಿಸಿ ಬಿಸಿ ಗರಿ ಗರಿ ಉದ್ದಿನ ವಡೆಯಿಂದ.
ಖ್ಯಾತ ಚಲನಚಿತ್ರ ನಟ ಡಾಕ್ಟರ್ #ರಾಜಕುಮಾರ್, ಮುಖ್ಯಮಂತ್ರಿ #ರಾಮಕೃಷ್ಣಹೆಗಡೆ ಕೂಡ ವಾಸಣ್ಣರ ಉದ್ದಿನ ವಡೆ ಸವಿದವರು ಈ ಮಾರ್ಗದಲ್ಲಿ ಆಗಮಿಸುವ ಎಲ್ಲಾ ಸೆಲೆಬ್ರಿಟಿಗಳು -ಜನ ಸಾಮಾನ್ಯರೂ ವಾಸಣ್ಣನ ರೈಲ್ವೆ ಕ್ಯಾಂಟೀನ್ ನ ಉದ್ದಿನ ವಡೆಗೆ ಫಿದಾ ಆಗಿದ್ದರು.
ವಾಸಣ್ಣ ದಂಪತಿಗಳು ಡಬಲ್ ಘೋಡಾ ಬ್ರಾಂಡಿನ ಉತ್ಕೃಷ್ಟ ಉದ್ದಿನ ಬೇಳೆ ನೆನೆಸಿ ನಂತರ ಅದನ್ನು ತಿರುವ ಕಲ್ಲಿನಲ್ಲಿ ಕೈಯಲ್ಲಿ ಅರೆದು ಕಟ್ಟಿಗೆ ಒಲೆಯಲ್ಲಿ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ಕರಿದು ಮುತ್ತುಗದ ಎಲೆಯಲ್ಲಿ ಹಾಕಿ ಜೊತೆಗೆ ಕಾಯಿ ಚಟ್ನಿ ಸುರಿದು ಕೊಡುತ್ತಿದ್ದರು.
ಆ ಕಾಲದಲ್ಲಿ ಗ್ರೈಂಡರ್, LPG ಗ್ಯಾಸ್ ಸ್ಟವ್ ನಮ್ಮ ಊರಿಗೆ ಬಂದಿರಲಿಲ್ಲ.
ಆಗ ಬೆಳಿಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಒಂದು ರೈಲು ಇನ್ನೊಂದು ಬೆಂಗಳೂರಿಂದ ತಾಳಗುಪ್ಪಕ್ಕೆ ಒಂದು ರೈಲು ಬರುತ್ತಿತ್ತು ಇದೇ ರೀತಿ ರಾತ್ರಿ ಎರೆಡು ರೈಲು ಇವೆಲ್ಲವೂ ಕಲ್ಲಿದ್ದಲು ಉರಿಸಿ ಉುಗಿಯಿಂದ ಚಲಿಸುತ್ತಿದ್ದ ಉಗಿ ಬಂಡಿಗಳಾದ್ದರಿಂದ ಅದಕ್ಕೆ ಬೇಕಾದ ನೀರು ಆನಂದಪುರ0 ನಿಲ್ದಾಣದಲ್ಲೇ ತುಂಬಿಸಿಕೊಳ್ಳ ಬೇಕಾದ್ದರಿಂದ ಹೆಚ್ಚು ಸಮಯ ರೈಲು ನಿಲ್ಲುತ್ತಿತ್ತು.
ಪ್ರಯಾಣಿಕರು ವಾಸಣ್ಣನ ಕ್ಯಾಂಟೀನ್ ನಲ್ಲಿ ವಡೆ ಚಟ್ನಿ ತಿಂದವರು ಇನ್ನೊಂದು ಪ್ಲೇಟ್ ಪಾರ್ಸೆಲ್ ರೈಲಿನಲ್ಲಿ ತಿನ್ನಲು ಒಯ್ಯುತ್ತಿದ್ದರು.
ಈ ಮೀಟರ್ ಗೇಜ್ ರೈಲು ಮಾರ್ಗ ಬ್ರಾಡ್ ಗೇಜ್ ಪರಿವರ್ತನೆಗಾಗಿ ರದ್ದು ಮಾಡಿದ ನಂತರ ವಾಸಣ್ಣರ ರೈಲ್ವೆ ಕ್ಯಾಂಟೀನ್ ಕೂಡ ರದ್ದಾಯಿತು.
ವಾಸಣ್ಣರ ರೈಲ್ವೆ ಕ್ಯಾಂಟೀನ್ ಎಷ್ಟು ಹೆಸರುಗಳಿಸಿತ್ತೆಂದರೆ ದೂರದ ಊರಲ್ಲಿ ನಮ್ಮ ಊರು ಆನಂದಪುರಂ ಅಂದರೆ ಅವರು ರೈಲ್ವೆ ಸ್ಟೇಶನ್ ವಡೆ ಬಗ್ಗೆ ನೆನಪು ಮಾಡುವಷ್ಟು.
ಅನಂದಪುರಂನಲ್ಲಿಯೇ
#ದೇವರಕಣ್ಣು ಸಿನೆಮಾ #ಅಕಸ್ಮಿಕ ಸಿನೆಮಾ ಆನಂದಪುರಂ ರೈಲುನಿಲ್ದಾಣದಲ್ಲಿ ಚಿತ್ರಿಕರಣ ಮಾಡಿದ್ದರು.
#ರಾಜಕುಮಾರ್_ಲೋಕೇಶ್_ಅನಂತನಾಗ್_ಆರತಿ_ದೀರೆಂದ್ರಗೋಪಾಲ್_ಆಗಿನ_ಮುಖ್ಯಮಂತ್ರಿ_ರಾಮಕೃಷ್ಣಹೆಗಡೆ
#ವಾಸಣ್ಣರ_ಕೈರುಚಗೆ_ಪ್ರಶಂಸಿದ್ದರು
ಕುಂದಾಪುರ ತಾಲ್ಲೂಕಿನ ಶಂಕರನಾರಾಯಣದ ಕೊಂಕಣಿ ದೈವಜ್ಞ ಬ್ರಾಹ್ಮಣ #ವಾಸಣ್ಣ ಮತ್ತು ಪತ್ನಿ #ರತ್ನಮ್ಮ ಆನಂದಪುರಕ್ಕೆ ಬಂದಿದ್ದು 1971-72ರಲ್ಲಿ ಅವತ್ತಿನಿಂದ ಆನಂದಪುರಂ ರೈಲ್ವೆ ನಿಲ್ದಾಣದ ರೈಲ್ವೆ ಕ್ಯಾಂಟೀನ್ ನಡೆಸಲು ಪ್ರಾರಂಬಿಸಿದವರು ರೈಲು ಮಾರ್ಗ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಪರಿವರ್ತನೆ ಕಾಮಗಾರಿಗಾಗಿ ಈ ರೈಲು ಮಾರ್ಗ ರದ್ದಾಗುವವರೆಗೆ ವಾಸಣ್ಣರ ಕ್ಯಾಂಟೀನ್ ಚಾಲು ಇತ್ತು.
ಆ ಕಾಲದಲ್ಲಿ ಉಗಿ ಇಂಜಿನ್ ರೈಲುಗಳಾದ್ದರಿಂದ ಈ ಮಾರ್ಗದ ಎಲ್ಲಾ ರೈಲು ಇಂಜೆನ್ ಗಳಿಗೆ ಬೇಕಾದ ನೀರು ಆನಂದಪುರಂನಲ್ಲೇ ತುಂಬಿಸಿಕೊಳ್ಳಬೇಕಾದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ವಾಸಣ್ಣನ ಕ್ಯಾಂಟೀನ್ ನಲ್ಲಿ ಸ್ವಾದಿಷ್ಟ ಇಡ್ಲಿ, ಉದ್ದಿನ ವಡೆ, ಮಸಾಲೆ ವಡೆ ಗಟ್ಟಿ ಚಟ್ನಿಯೊಂದಿಗೆ ತಿಂದು ಚಹ ಕುಡಿದು ಮುಂದಿನ ಪ್ರಯಾಣ ಮಾಡಲು ಕಾಲಾವಕಾಶ ಸಿಗುತ್ತಿತ್ತು.
ಪ್ರಾರಂಭದಲ್ಲಿ ವಾಸಣ್ಣ ದಂಪತಿಗಳೇ ಎಲ್ಲಾ ಕೆಲಸ ಮಾಡಿ ಕೊಳ್ಳುತ್ತಿದ್ದರು, ಕೈಯಲ್ಲೇ ಅಕ್ಕಿ, ಉದ್ದಿನಬೇಳೆ ಕಲ್ಲಿನಲ್ಲಿ ರುಬ್ಬಿಕೊಳ್ಳುತ್ತಿದ್ದರು ನಂತರ ಆನಂದಪುರಂನ #ತಿಂಡಿಕೃಷ್ಣಣ್ಣನ ಸಹೋದರ #ವೆಂಕಟೇಶ್ ಮತ್ತು #ರಾಮಣ್ಣ ಜೊತೆಗೆ ಸೇರಿಕೊಂಡರು.
ದೇವರ ಕಣ್ಣು ಎಂಬ ಸಿನಿಮಾ ಇದೇ ನಿಲ್ದಾಣದಲ್ಲಿ ಚಿತ್ರಿಕರಣ ಆಗಿತ್ತು ಲೋಕೇಶ್, ಅನಂತನಾಗ್ ಅಂಬರೀಷ್, ಆರತಿ, ದೀರೇಂದ್ರ ಗೋಪಾಲ್, ಶಕ್ತಿ ಪ್ರಸಾದ್, NS ರಾವ್ ತಾರಾಗಣದಲ್ಲಿ ಆಗಿನ ಖ್ಯಾತ ನಿರ್ದೇಶಕರಾದ YR ಸ್ವಾಮಿ ನಿರ್ದೇಶಿಸಿದ್ದರು ಆಗ ವಾಸಣ್ಣರ ರೈಲ್ವೆ ಕ್ಯಾಂಟೀನ್ ಈ ಸಿನಿಮಾದ ಕೇಂದ್ರ ಬಿಂದು ಆಗಿತ್ತು.
ಆನಂದಪುರಂ ರೈಲು ನಿಲ್ದಾಣ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರು ತನ್ನ ರಾಣಿಯ ಸ್ಮರಣಾಥ೯ ನಿರ್ಮಿಸಿರುವ ಇಲ್ಲಿನ ಸುಂದರ #ಚಂಪಕಸರಸ್ಸುವಿನ ದೃಶ್ಯ ನಿರ್ದೇಶಕ #YR_ಸ್ವಾಮಿ ಚೆನ್ನಾಗಿ ಬಳಸಿಕೊಂಡಿದ್ದಾರೆ.
ವಾಸಣ್ಣ ನೀಳ ಕಾಯದ ಸ್ಪುರದ್ರೂಪಿ,ಯಾವಾಗಲೂ ಕೈಯಲ್ಲಿ ಸಿಗರೇಟು,ಹಾಸ್ಯದ ಹೊನಲು ಹರಿಸುವ ಹಾಸ್ಯಚಟಾಕಿ ಹಾರಿಸುತ್ತ ಸುತ್ತಲಿನ ಪರಿಸರ ಲವಲವಿಕೆ ಉಂಟು ಮಾಡುತ್ತಿದ್ದ ಸ್ನೇಹ ಜೀವಿ ಆಗಿದ್ದರು.
ಅವರಿಗೆ ಅವರ ಸುಪ್ರಸಿದ್ದ ವಡೆಯ ರೆಸಿಪಿ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೆ ಅವರ ಪ್ರಕಾರ ಕಡೆದ ಉದ್ದಿನ ಬೇಳೆ ಹಿಟ್ಟು ಎಷ್ಟು ನಿದಾನವಾಗಿ ಹೆಚ್ಚು ಬಾರಿ ಕೈಯಲ್ಲಿ ತಿರುವುತ್ತಾ ರುಬ್ಬುತ್ತೀರೋ ಅಷ್ಟು ಹೆಚ್ಚು ರುಚಿ ವಡೆಗೆ ಬರುತ್ತದೆ ಆದರೆ ಗ್ರೈಂಡರ್ ನಲ್ಲಿ ರುಬ್ಬಿದರೆ ರುಚಿ ಮತ್ತು ವಡೆಯ ಸಂಖ್ಯೆ ಕೂಡ ಕಡಿಮೆ ಅನ್ನುತ್ತಿದ್ದರು.
ಮಗಳು ನಾಗಲಕ್ಷ್ಮಿ ನಮ್ಮೂರು ಸಮೀಪದ ಯಡೇಹಳ್ಳಿ ಸಮೀಪದ ಗೇರ್ ಬೇಸಿನ #ವೆಂಕಟೇಶ_ಮೇಸ್ತ್ರಿ ಪುತ್ರ #ಸತೀಶ್ ರ ಜೊತೆ ವಿವಾಹ ಆಗಿ ಸಾಗರದಲ್ಲಿ ನೆಲೆಸಿದ್ದಾರೆ.
ವಾಸಣ್ಣ ದಂಪತಿ ಈಗಿಲ್ಲ ಆದರೆ ಇವರ ಕೈ ರುಚಿಯ ಉಪಹಾರ ಸೇವಿಸಿದ ಅನೇಕರು ನನಗೆ ವಾಸಣ್ಣರ ಬಗ್ಗೆ ಪೇಸ್ ಬುಕ್ ನಲ್ಲಿ ಚಿತ್ರ -ಲೇಖನ ಬರೆಯುವಂತೆ ಒತ್ತಾಯಿಸುವಂತ ಜನಪ್ರಿಯತೆ ವಾಸಣ್ಣನವರದ್ದು.
ಇವತ್ತಿಗೂ ಜನ ನೆನೆಸುವ ರೈಲ್ವೆ ಕ್ಯಾಂಟೀನ್ ವಾಸಣ್ಣ ಹಣ ಆಸ್ತಿ ಗಳಿಸಲಿಲ್ಲ ಆದರೆ ಇಡೀ ದಕ್ಷಿಣ ಭಾರತ ರೈಲ್ವೆಯಲ್ಲಿ ಪ್ರಖ್ಯಾತಿಗಳಿಸಿದ್ದರು.
#vade #vasanna #ananfapuram #railwaystation
#canteen #Rajkumar #akasmika #devarakannu
#famousperson #celebrity
Comments
Post a Comment