ಕಳೆದ_ವರ್ಷ_ಈ_ಆನೆ_ಮಾಡಿದಷ್ಟು_ಸುದ್ದಿ_ಬೇರಾವ_ಕಾಡಾನೆ_ಮಾಡಿರಲಿಲ್ಲ.
ನೆನಪು ಮಾಡಿಕೊಳ್ಳಿ ಒಂದು ವರ್ಷದ ಹಿಂದೆ ಈ ಆನೆಯ ಬಿಂದಾಸ್ ಸಂಚಾರದ ಬಗ್ಗೆ ಮತ್ತು ಅಂದಿನ ಭಯದ ದಿನಗಳ ಬಗ್ಗೆ ಈ ಆನೆ ಸೆರೆಹಿಡಿಯುವ ತನಕ ಈ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು.
ತೀಥ೯ಹಳ್ಳಿಯಿಂದ ಸಂಚಾರ ಪ್ರಾರಂಬಿಸಿ ಯಡೂರು, ಹುಲಿಕಲ್, ಹೊಸಂಗಡಿ- ಹೆನ್ನಾಬೈಲು ಮತ್ತು
ಸಿದ್ದಾಪುರದಲ್ಲೆಲ್ಲ ಸಂಚರಿಸಿತ್ತು.
ಇಷ್ಟೆಲ್ಲಾ ಬಿಂದಾಸ್ ಆಗಿ ತಿರುಗಾಡಿದ ಆನೆ ಕುತ್ತಿಗೆಯಲ್ಲಿ ರೇಡಿಯೋ ಕಾಲರ್ ಇತ್ತು ಇದರ ಸಹಾಯದಿಂದಲೇ ಈ ಆನೆ ಯನ್ನು ಕುಂದಾಪುರ ಸಮೀಪದ ಹೊಸಂಗಡಿಯ ಹೆನ್ನಾಬೈಲಿನಲ್ಲಿ ಸೆರೆ ಹಿಡಿದು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಬಿಟ್ಟಿದ್ದರು
ಈ ಆನೆ ಮಾಡಿದಷ್ಟು ಸುದ್ದಿ ಬೇರಾವ ಕಾಡಾನೆ ಮಾಡಿರಲಿಲ್ಲ
ಇದು ಬಿಂದಾಸ್ ಆಗಿ ಹಗಲು - ರಾತ್ರಿ ಊರೊಳಗೆ ಸಂಚರಿಸುತ್ತಿದ್ದರಿಂದ ಎಲ್ಲರ ಸೆಲ್ ಫೋನ್ ನಲ್ಲಿ ಇದರ ಪೋಟೋ ದಾಖಲಾಯಿತು.
ಬಹುಶಃ ಕಾಡಾನೆಯೊಂದು ಮಲೆನಾಡಿನಲ್ಲಿ ಯಾರಿಗೂ ತೊಂದರೆ ಕೊಡದೆ ಈ ರೀತಿ ಊರೊಳಗೆ ಬಿಂದಾಸ್ ಆಗಿ ಸಂಚರಿಸಿದ್ದು ಇದೇ ಮೊದಲು.
ಈ ಕಾಡಾನೆ ದಿನಕ್ಕೆ 50 KM ನಡೆಯುತ್ತಿತ್ತು, ಹುಲಿಕಲ್ ಘಾಟ್ ನಲ್ಲಿ ಸಂಚರಿಸುತ್ತಿದ್ದ ವಾಹನಗಳ ಅಕ್ಕಪಕ್ಕದಲ್ಲೇ ನಡೆಯುತ್ತಾ ಘಾಟಿ ಇಳಿದಿತ್ತು.
ಸಿದ್ದಾಪುರದ ಸಮೀಪದ #ಹೆನ್ನಾಬೈಲಿನ_ಬಾಮಿಕುಮ್ಕಿಯಲ್ಲೇ ಎರಡು ದಿನ ಉಳಿದಿತ್ತು.
ಅಲ್ಲೇ ಇದನ್ನು ಸೆರೆ ಹಿಡಿದು ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿತ್ತು.
ರೇಡಿಯೊ ಕಾಲರ್ ಇದ್ದಿದ್ದರಿಂದ ಅರಣ್ಯ ಇಲಾಖೆಗೆ ಈ ಆನೆ ಚಲನವಲನದ ಮಾಹಿತಿ ಸುಲಭವಾಗಿ ದೊರೆಯಿತು.
ರೇಡಿಯೊ ಕಾರಿಡಾರ್ ಎಷ್ಟು ಉಪಯುಕ್ತ ಅಂತ ಜನ ಸಾಮಾನ್ಯರಿಗೆ ಈ ಆನೆಯಿಂದ ತಿಳಿಯುವಂತಾಯಿತು.
ದಪ್ಪ ದಪ್ಪನಾದ ಮರದ ದಿಮ್ಮಿಗಳನ್ನ ಒಂದರ ಪಕ್ಕ ಒಂದು ಜೋಡಿಸಿ ಮಾಡಿದ ಆನೆ ಬಂದಿಖಾನೆಗೆ ಇಂಗ್ಲೀಷ್ ಹೆಸರು ಕ್ರಾಲ್.
ಶಿವಮೊಗ್ಗದ ಸಕ್ರೆಬೈಲಿನ ಆನೆ ಬಿಡಾರದ ಕ್ರಾಲ್ ನಲ್ಲಿ ರೆಡಿಯೋ ಕಾಲರ್ ಆನೆ ಅರಾಮಾಗಿ ಆರೋಗ್ಯವಾಗಿ ಇತ್ತು.
ಬಹುಶಃ ಈಗ ಸಕ್ರೆಬೈಲಿನ ಸಾಕಾನೆ ಆಗಿ ಪರಿವರ್ತನೆಯಾಗಿ ಅಲ್ಲೇ ಇರಬೇಕು.
ಈಗ ಈ ಆನೆ ಎಲ್ಲದೆ? ...ಬಗ್ಗೆ ಮಾಹಿತಿ ಇದ್ದವರು ತಿಳಿಸಿ...
ಕಳೆದ ವರ್ಷದ ಈ ರೇಡಿಯೊ ಕಾಲರ್ ಆನೆ ಸಂಚಾರ ನೆನಪಿದೆಯಾ? ...
#wildelephant #radiocoller #siddapura #thirthahalli #sakrebylu #shivamogga
Comments
Post a Comment