Skip to main content

4040. ಬ್ಲಾಕ್ ಡಾಗ್ ಸ್ಕಾಚ್ ವಿಸ್ಕಿ ಹೆಸರಿಗೆ ಕಾರಣ


ಬ್ಲ್ಯಾಕ್_ಡಾಗ್_ಸ್ಕಾಚ್_ವಿಸ್ಕಿ_ಬ್ರಾಂಡ್_ಇತಿಹಾಸ

   ಪ್ರಸಿದ್ಧವಾದ ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಈ ಸ್ಕಾಚ್ ವಿಸ್ಕಿ ಇತಿಹಾಸ ತುಂಬಾ ರೋಚಕವಾಗಿದೆ,
ಇದು ಸ್ಕಾಟ್‌ಲ್ಯಾಂಡ್‌ನಲ್ಲಿ ಹುಟ್ಟಿ, ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಬೆಳೆದ ಕಥೆ ಇಲ್ಲಿದೆ.

ಈ ಬ್ಲಾಕ್ ಡಾಗ್ ಬ್ರಾಂಡ್ ನಾಯಿ ಹೆಸರಲ್ಲ ಮೀನಿನ ಗಾಣಕ್ಕೆ ಸುರಿಯುವ ಕೃತಕ ಆಹಾರ ವಸ್ತುವಿನ ಹೆಸರು ಬ್ಲಾಕ್ ಡಾಗ್ ಈ ಸ್ಕಾಚ್ ವಿಸ್ಕಿಗೆ ಇಡುತ್ತಾರೆ.

​  ಬ್ರಿಟಿಷ್ ಭಾರತಕ್ಕಾಗಿ ಸಿದ್ಧವಾದ ​ಈ ಕಥೆ ಆರಂಭವಾಗುವುದು 1883 ರಲ್ಲಿ ಸ್ಕಾಟ್‌ಲ್ಯಾಂಡ್‌ನ ಲೀತ್  ಎಂಬಲ್ಲಿ.

   ಬೊಂಬಾಯಿಯಲ್ಲಿ 'ಫಿಪ್ಸನ್ ಅಂಡ್ ಕಂಪನಿ' ಎಂಬ ಮದ್ಯದ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದ ಬ್ರಿಟಿಷ್ ಉದ್ಯಮಿ ಹರ್ಬರ್ಟ್ ಮುಸ್ಗ್ರೇವ್ ಫಿಪ್ಸನ್ ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತೀಯ ಗಣ್ಯರಿಗಾಗಿ ಒಂದು ಪ್ರೀಮಿಯಂ ಸ್ಕಾಚ್ ವಿಸ್ಕಿಯನ್ನು ಆಮದು ಮಾಡಿಕೊಳ್ಳಲು ಬಯಸಿದರು.

  ​ಅದಕ್ಕಾಗಿ ಅವರು ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಮಾಸ್ಟರ್ ಬ್ಲೆಂಡರ್ ಆದ #ಜೇಮ್ಸ್_ಮ್ಯಾಕಿನ್ಲೇ ಅವರಿಗೆ ಆರ್ಡರ್ ನೀಡಿದರು.

   ಮ್ಯಾಕಿನ್ಲೇ ಅವರು ಸುದೀರ್ಘ ಸಮುದ್ರ ಪ್ರಯಾಣದಲ್ಲೂ ತನ್ನ ಗುಣಮಟ್ಟವನ್ನು ಕಳೆದುಕೊಳ್ಳದ, ಕುಡಿಯಲು ಅತ್ಯಂತ ಮೃದುವಾದ  ಒಂದು ವಿಸ್ಕಿಯನ್ನು ಸಿದ್ಧಪಡಿಸಿದರು.

​ #ಬ್ಲ್ಯಾಕ್_ಡಾಗ್ ಎಂಬ ಹೆಸರು ಬರಲು ಕಾರಣವೇನೆಂದರೆ
​ಈ ಹೆಸರಿನ ಹಿಂದೆ ಯಾವುದೇ ನಾಯಿಯ ಕಥೆಯಿಲ್ಲ, ಬದಲಿಗೆ ಇದಕ್ಕೊಂದು ಮೀನುಗಾರಿಕೆಯ ನಂಟಿದೆ!.

  ​ಫಿಪ್ಸನ್ ಕಂಪನಿಯ 19 ವರ್ಷದ ಬ್ರಿಟಿಷ್ ಉದ್ಯೋಗಿ #ವಾಲ್ಟರ್_ಸ್ಯಾಮ್ಯುಯೆಲ್_ಮಿಲಾರ್ಡ್ ಎಂಬಾತನನ್ನು ಈ ವಿಸ್ಕಿಯ ತಯಾರಿಕೆಯನ್ನು ನೋಡಿಕೊಳ್ಳಲು 1884 ರಲ್ಲಿ #ಸ್ಕಾಟ್‌ಲ್ಯಾಂಡ್‌ಗೆ ಕಳುಹಿಸಲಾಯಿತು.

   ಮಿಲಾರ್ಡ್‌ಗೆ ಗೂಳ ಮತ್ತು ಗಾಳ ಹಾಕಿ ಮೀನು ಹಿಡಿಯುವ  ಹವ್ಯಾಸವಿತ್ತು, ನಮ್ಮಲ್ಲಿ ಗಾಳದಲ್ಲಿ ಮೀನು ಹಿಡಿಯಿಲು ಎರೆಹುಳ ಇತ್ಯಾದಿ ಸುರಿಯುವಂತೆ ಸ್ಕಾಟ್‌ಲ್ಯಾಂಡ್‌ನ ನದಿಗಳಲ್ಲಿ ಸಾಲ್ಮನ್ ಮೀನುಗಳನ್ನು ಹಿಡಿಯಲು ಗಾಳಕ್ಕೆ ಬಳಸುತ್ತಿದ್ದ Fly (ಕೃತಕ ಮೀನಿನ ಆಹಾರ) ವಸ್ತುವಿಗೆ ಬ್ಲ್ಯಾಕ್ ಡಾಗ್ ಎಂದು ಹೆಸರಿತ್ತು.

​ಜೇಮ್ಸ್ ಮ್ಯಾಕಿನ್ಲೇ ತಯಾರಿಸಿದ ವಿಸ್ಕಿಯ ರುಚಿಗೆ ಮನಸೋತ ಮಿಲಾರ್ಡ್ ತನಗೆ ಅತ್ಯಂತ ಪ್ರಿಯವಾದ ಆ ಮೀನು ಹಿಡಿಯುವ ಗಾಳದ Fly ನೆನಪಿಗಾಗಿ ಈ ವಿಸ್ಕಿಗೆ #ಮಿಲಾರ್ಡ್_ಬ್ಲ್ಯಾಕ್_ಡಾಗ್"ಎಂದು ಹೆಸರಿಟ್ಟರು.

​ ದಶಕಗಳ ಕಾಲ ಈ ಬಾಟಲಿಯ ಮೇಲಿನ ಲೇಬಲ್‌ನಲ್ಲಿ "ಸರ್ ವಾಲ್ಟರ್ ಮಿಲಾರ್ಡ್" ಎಂದು ಬರೆಯಲಾಗಿತ್ತು ಆದರೆ ನಿಜ ಏನೆಂದರೆ ವಾಲ್ಟರ್ ಮಿಲಾರ್ಡ್‌ಗೆ ಬ್ರಿಟಿಷ್ ಸರ್ಕಾರ ಎಂದಿಗೂ "ಸರ್" (Knighthood) ಪದವಿ ನೀಡಿರಲಿಲ್ಲ! 

  ಬ್ರ್ಯಾಂಡ್‌ಗೆ ಒಂದು ರಾಜಮನೆತನದ ಅಥವಾ ಗಾಂಭೀರ್ಯದ ಲುಕ್ ಕೊಡಲು ಮಾರ್ಕೆಟಿಂಗ್‌ಗಾಗಿ ಹಾಗೆ ಬಳಸಲಾಗಿತ್ತು.

​​ಮೊದಮೊದಲು ಈ ವಿಸ್ಕಿಯನ್ನು ಸ್ಕಾಟ್‌ಲ್ಯಾಂಡ್‌ನಲ್ಲೇ ಬಾಟಲಿಂಗ್ ಮಾಡಿ ಭಾರತಕ್ಕೆ ತರಲಾಗುತ್ತಿತ್ತು ಆದರೆ ನಂತರದ ದಿನಗಳಲ್ಲಿ ಭಾರತದ ಮಾರುಕಟ್ಟೆ ಇದನ್ನು ಸಂಪೂರ್ಣವಾಗಿ ಬದಲಾಯಿಸಿತು.

​1992 ರ ಬದಲಾವಣೆ ಭಾರತದಲ್ಲಿದ್ದ ಭಾರಿ ಆಮದು ಸುಂಕವನ್ನು  ತಪ್ಪಿಸಲು, ಯುನಿಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಸಂಸ್ಥೆಯು ಸ್ಕಾಟ್‌ಲ್ಯಾಂಡ್‌ನಿಂದ ವಿಸ್ಕಿಯ ಮೂಲ ದ್ರವವನ್ನು ನೇರವಾಗಿ ತರಿಸಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇಲ್ಲೇ ಬಾಟಲಿಂಗ್ ಮಾಡಲು ಆರಂಭಿಸಿತು.

 ಇದರಿಂದಾಗಿ ಇದರ ಬೆಲೆ ಭಾರತೀಯರಿಗೆ ಕೈಗೆಟುಕುವಂತಾಯಿತು.

   ಪ್ರಸ್ತುತ ಈ ಬ್ರ್ಯಾಂಡ್ ವಿಶ್ವದ ಅತಿ ದೊಡ್ಡ ಮದ್ಯ ತಯಾರಿಕಾ ಸಂಸ್ಥೆಯಾದ 'ಡಿಯಾಜಿಯೊ' ಒಡೆತನದಲ್ಲಿದೆ.

​  ಬಾಲಿವುಡ್ ಸಿನಿಮಾ ಕನೆಕ್ಷನ್
​ಭಾರತದಲ್ಲಿ ಬ್ಲ್ಯಾಕ್ ಡಾಗ್ ಬೆಳೆಯಲು 70 ಮತ್ತು 80ರ ದಶಕದ ಬಾಲಿವುಡ್ ಸಿನಿಮಾಗಳು ದೊಡ್ಡ ಕಾರಣ. 

  ಸಿನಿಮಾಗಳಲ್ಲಿ ದೊಡ್ಡ ಡಾನ್ ಅಥವಾ ವಿಲನ್ ಆಗಿರುವವರು ಬ್ಲ್ಯಾಕ್ ಡಾಗ್ ವಿಸ್ಕಿ ಕುಡಿಯುವುದೇ ಒಂದು ಟ್ರೆಂಡ್ ಆಗಿತ್ತು.

​ಮುಖ್ಯವಾಗಿ 1988 ರ ಅಮಿತಾಭ್ ಬಚ್ಚನ್ ಅವರ ಶಹನ್‌ಶಾ ಸಿನಿಮಾದಲ್ಲಿ ಖ್ಯಾತ ವಿಲನ್ ಅಮರೀಶ್ ಪುರಿ (ಜೆ.ಕೆ. ಪಾತ್ರದಲ್ಲಿ) ಈ ವಿಸ್ಕಿಯನ್ನು ಆರ್ಡರ್ ಮಾಡುತ್ತಾ ಹೇಳುವ ಡೈಲಾಗ್ ಇಂದಿಗೂ ಫೇಮಸ್ ಆಗಿದೆ ಅದು ​"ಜಬ್ ಭೀ ಮೇನ್ ಗೋರಿ ಹಸೀನೋ ಕೊ ದೇಖ್ತಾ ಹೂಂ, ಮೇರೆ ದಿಲ್ ಮೇ ಕಾಲೇ ಕುತ್ತೇ ಭೌಂಕನೇ ಲಗ್ತೇ ಹೈಂ,ತಬ್ ಮೇನ್ ಬ್ಲ್ಯಾಕ್ ಡಾಗ್ ವಿಸ್ಕಿ ಪೀತಾ ಹೂಂ."

​  ಇಂದಿನ ಬ್ಲ್ಯಾಕ್ ಡಾಗ್
​ಇತ್ತೀಚಿನ ವರ್ಷಗಳಲ್ಲಿ ಈ ಬ್ರ್ಯಾಂಡ್ ತನ್ನ ಹಳೆಯ ಶೈಲಿಯನ್ನು ಬದಲಾಯಿಸಿ ಇಂದಿನ ಯುವ ಪೀಳಿಗೆಗೆ ತಕ್ಕಂತೆ ಹೊಸ ರೂಪ ಪಡೆದಿದೆ. 

  ಇದರ ಲೇಬಲ್ ಮೇಲೆ ಈಗ ಮೀನು ಹಿಡಿಯುವ ಆ Fishing Fly ಚಿತ್ರವನ್ನು ಮತ್ತು ಒಬ್ಬ ಮನುಷ್ಯನ ಚಿತ್ರವನ್ನು ಆಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ.

​ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಲಿಂಕ್‌ವುಡ್ ಡಿಸ್ಟಿಲರಿಯಿಂದ ಬರುವ ಸಿಂಗಲ್ ಮಾಲ್ಟ್‌ಗಳನ್ನು ಬಳಸಿ ಇದನ್ನು ತಯಾರಿಸಲಾಗುವುದರಿಂದ ಇಂದಿಗೂ ಇದು ತನ್ನ ಹಳೆಯ ಮರದ ಪರಿಮಳ ಹಾಗೂ ಜೇನುತುಪ್ಪದಂತಹ ಸೌಮ್ಯ ಸಿಹಿಯ ರುಚಿಯನ್ನು ಉಳಿಸಿಕೊಂಡಿದೆ.

 #Disclaimer "ಮದ್ಯಪಾನ ಆರೋಗ್ಯಕ್ಕೆ ಹಾನಿಕರ"/ "ಇದು ಕೇವಲ ಮಾಹಿತಿ ಉದ್ದೇಶದ ಲೇಖನವಾಗಿದ್ದು, ಮದ್ಯಪಾನವನ್ನು ಪ್ರೋತ್ಸಾಹಿಸುವುದಿಲ್ಲ".

#BrandBuilding #internationa #storytelling 
#scoth #fishingfly #name #labels

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...