Skip to main content

Blog number 1800. ನನ್ನ ಹಿರಿಯ ಅತ್ಮೀಯ ಗೆಳೆಯರಾದ ಹಿನ್ನೀರಿನ ಬಂಗಾರದ ಮನುಷ್ಯ ತಿಮ್ಮಣ್ಣ ಇವರ ಪುತ್ರ ಶರಾವತಿ ಹಿನ್ನೀರಿನ ಸಾಹಿತಿ ಜಿ.ಟಿ. ಸತ್ಯನಾರಾಯಣ್ ತಮ್ಮ ತಂದೆಯ ಆತ್ಮಚರಿತ್ರೆ ಅಪ್ಪಯ್ಯ ಎಂಬ ಕೃತಿ ಬಿಡುಗಡೆ ಸಮಾರಂಭ ಏರ್ಪಡಿಸಿದ್ದಾರೆ (29-ಅಕ್ಟೋಬರ್ -2023 ಭಾನುವಾರ) ಈ ಕಾರ್ಯಕ್ರಮ ಸ್ಮರಣೀಯವಾಗಿಸುವ ಅವರ ಪ್ರಯತ್ನಕ್ಕೆ ಅಭಿನಂದನೆಗಳು

#ಹೀಗೂ_ಮಾಡಬಹುದು_ಪುಸ್ತಕ_ಬಿಡುಗಡೆ_ಸ್ಮರಣೀಯವಾಗಿ

#ಕರೂರಿನ_ಶ್ರಮಿಕ_ತಿಮ್ಮಣ್ಣ_ದಂಪತಿಗಳ_58ನೆ_ದಾಂಪತ್ಯ_ಜೀವನದ_ಹೊಸ್ತಿಲಲ್ಲಿ

#ಶರಾವತಿ_ಹಿನ್ನೀರಿನ_ಸಾಹಿತಿ_ಜಿ_ಟಿ_ಸತ್ಯನಾರಾಯಣರ_ಎರೆಡು_ಕೃತಿ_ಬಿಡುಗಡೆ.

#ಇವರ_ಅಪ್ಪಯ್ಯರಿಗೆ_80_ವರ್ಷ_ಅಮ್ಮನಿಗೆ_75.

   ಜಿ.ಟಿ. ಸತ್ಯನಾರಾಯಣ್ ಸಾಗರ ತಾಲೂಕಿನ ತುಮರಿ ಭಾಗದಲ್ಲಿ ಪ್ರಜಾವಾಣಿ ವರದಿಗಾರರಾಗಿದ್ದರು, ಪದವಿ ವ್ಯಾಸಂಗ ಬಿ.ಆರ್.ಪಿಯ ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಡುವಾಗಲೇ ಮೊದಲ ಕೃತಿ ಪ್ರಕಟಿಸಿದ್ದರು ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡಿದರು ನಂತರ ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅನೇಕ ಜನಪರ ಕೆಲಸ ಮಾಡಿದ್ದಾರೆ.
   ಇವರ ಕ್ರಿಯಾಶೀಲತೆ ನಿರಂತರ... ನೋ ನೆಟ್ವರ್ಕ್ ನೋ ವೋಟ್ ಅಭಿಯಾನ, ಅರಣ್ಯ ಭೂಮಿ ಒಳಗಿನ ಕೃಷಿಕರ ಮೂಲಭೂತ ಸೌಲಭ್ಯಕ್ಕಾಗಿ ಹೋರಾಟ, ಶರಾವತಿ ಹಿನ್ನೀರಿನ ಅಸಹಾಯಕರ ಸಹಾಯಕ್ಕಾಗಿ ಕ್ರೌಡಿಂಗ್ ಪಂಡ್ ಅಭಿಯಾನ ಹೀಗೆ ನೂರಾರು.
   ಇವರ ಪೂರ್ವಿಕರು ಈ ಭಾಗದ ಶ್ರೀಮಂತ ಗುತ್ತಿಗೆದಾರರಾಗಿ ಆಸ್ತಿವಂತರಾದವರು ನಂತರ ಮುಳುಗಡೆ ಇತ್ಯಾದಿ ಸಮಸ್ಯೆಯಿಂದ ಎಲ್ಲಾ ಕಳೆದುಕೊಂಡವರು. 
   ಜಿ.ಟಿ. ಸತ್ಯನಾರಾಯಣರ ತಾಯಿಯ ಸಹೋದರರಾದ ಬಾಬಣ್ಣ, ಅಂಗಡಿ ಯಂಕಪ್ಪ ನನಗೆ ಹೆಚ್ಚು ಆತ್ಮೀಯರು ನಾನು 1999ರಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದಾಗ ತನು-ಮನ-ಧನ ಸಹಾಯದ ಜೊತೆ ನನ್ನ ಜೊತೆ ಇದ್ದವರು.
   ಇವರ ತಂದೆ ತಿಮ್ಮಣ್ಣ ರಾಜಕುಮಾರರ ಸಿನಿಮಾದಂತೆ ಶರಾವತಿ ಹಿನ್ನೀರಿನ ಬಂಗಾರದ ಮನುಷ್ಯ ಇವರು ನನ್ನ ಹಿರಿಯ ಸ್ನೇಹಿತರು ಎನ್ನಲು ನನಗೆ ಯಾವಾಗಲೂ ಹೆಮ್ಮೆ.
  ತುಮರಿಯಲ್ಲಿ ನಡೆದ ನನ್ನ ಎಲ್ಲಾ ಸಭೆಗೆ ತಿಮ್ಮಣ್ಣ ಭಾಗಿ ಆಗಿದ್ದಾರೆ, 13 ದಿನ ಸಾಗರ ತಾಲೂಕಿನ ಅಭಿವೃದ್ದಿಗಾಗಿ ಒತ್ತಾಯಿಸಿ ನಡೆಸಿದ ಪಾದಯಾತ್ರೆ ತುಮರಿಗೆ ಬಂದಾಗ, ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಜನಜಾಗೃತಿಗಾಗಿ 7 ದಿನ ಎತ್ತಿನಗಾಡಿ ಯಾತ್ರೆ ತುಮರಿ ತಲುಪಿದಾಗ ಮತ್ತು 2013ರಲ್ಲಿ ತುಮರಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ರಾಜಣ್ಣ ಜೈನ್ ಪಿಡಿಓ  (ನಿವೃತ್ತ ಸೈನಿಕರು ) ಅವ್ಯವಹಾರ ಬಯಲು ಮಾಡಿದ್ದಕ್ಕೆ ಜೈಲಿಗೆ ಹಾಕಿದ್ದನ್ನು ವಿರೋದಿಸಿ ತುಮರಿ ಸರ್ಕಲ್ ನಲ್ಲಿ ಸಭೆ ನಡೆಸಿದಾಗ ಜಿ.ಟಿ. ತಂದೆ ತಿಮ್ಮಣ್ಣ ನನ್ನ ಪಕ್ಕದಲ್ಲೇ ಪ್ರತಿಭಟನಾ ಸಭೆಯಲ್ಲಿ ಕುಳಿತಿದ್ದರು.
  2009ರಲ್ಲಿ ತುಮರಿಯಿಂದ ಕರೂರಿನ ತನಕ ಕಾಗೋಡು ತಿಮ್ಮಪ್ಪರ ಪರ ಪ್ರಚಾರದ ಪಾದಯಾತ್ರೆಗೆ ಸಿಗಂದೂರು ಪೆಟ್ರೋಲ್ ಪಂಪ್  ನಾರಾಯಣ ರಾವ್, ದಿವ೦ಗತ ಕೊಯಾ ಸಾಹೇಬರು ಮತ್ತು ನನ್ನನ್ನು ಜಿ.ಟಿ. ಆಹ್ವಾನಿಸಿದ್ದರು ಅವತ್ತು ಜಡ್ಡಿನ ಬೈಲು ಪಟೇಲರ ಮನೆಯಲ್ಲಿ ಉಪಹಾರದ ಜೊತೆ ಸಭೆ ಕೂಡ ನಡೆಸಿದ್ದ ನೆನಪುಗಳು ಹಸಿರಾಗಿದೆ.
  ಒಮ್ಮೆ ಜಿ.ಟಿ.ಗೆ ವಿವಾಹ ಸಂಬಂದ ಮಾತಾಡಲು ಇವರ ಮನೆಗೆ ಪರಿಚಯಸ್ಥರ ಜೊತೆ ಹೋದಾಗ ಮಲೆನಾಡಿನ ಘಮ ಘಮಿಸುವ ಅನ್ನ ರುಚಿಕಟ್ಟಾದ ನಾಟಿ ಕೋಳಿ ಬೋಜನ ಸವಿದದ್ದು ಮರೆಯಲು ಸಾದ್ಯವಿಲ್ಲ.
  ಅವತ್ತು ಜಿ.ಟಿ. ತನಗೆ ಮದುವೆ ಆಗುವ ಕನ್ಯೇ ಬಗ್ಗೆ ತಮ್ಮ ಅಬಿಪ್ರಾಯ ವ್ಯಕ್ತ ಪಡಿಸುತ್ತಾ ಒಂದು ಮಾತು ಹೇಳಿದ್ದು ನನ್ನ ಮಗ ಇವತ್ತು ನೆನಪಿಸುತ್ತಾನೆ ಅವರು "ಮಂತ್ರಮಾಂಗಲ್ಯದ ವಿದಿ ವಿಧಾನದ ವಿವಾಹ ಆಗಬೇಕು ಮತ್ತು ದಕ್ಷಿಣ ಕನ್ನಡ ಮೂಲದವನಾದ್ದರಿಂದ ವರದಕ್ಷಿಣೆ ಬಗ್ಗೆ ಕಾನ್ಪ್ಯೂಶನ್ ಇದೆ " ಅಂದಿದ್ದು.
    ಬಹುಶಃ ಆಗಲೇ ಅವರು ತಮ್ಮ ಸಂಗಾತಿ ಆಯ್ಕೆ ಮಾಡಿಕೊಂಡಿರಬೇಕು ನಂತರ ಕ್ರೈಸ್ತ ಧರ್ಮದ ಬಾಳ ಸಂಗಾತಿ ಮತ್ತು ಪುತ್ರನ ಜೊತೆ ತಮ್ಮ ಪ್ರೀತಿಯ ತಂದೆ ತಾಯಿ ಜೊತೆ ಅಡಿಕೆ ಮತ್ತು ಇತರ ಕೃಷಿ ಜೊತೆ ಓದು -ಬರಹ -ಜನ ಜಾಗೃತಿ -ಚಳವಳಿ - ರಾಜಕಾರಣ- Youtube ಚಾನಲ್ - ಅಂಕಣ ಬರಹದ ಜೊತೆ ಈಗ 80 ವರ್ಷ ಪ್ರಾಯದ ಇವರ ತಂದೆಯ ಜೀವನ ಚರಿತ್ರೆ #ಅಪ್ಪಯ್ಯ ಮತ್ತು ಇನ್ನೊಂದು #ನೆನಪು_ನದಿಯಾಗಿ ಕೃತಿ ಇದೇ ಭಾನುವಾರ 29- ಅಕ್ಟೋಬರ್ - 2023ರಂದು ಮಾಜಿ ಸಚಿವ ಕಾಗೋಡು - ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದಾರೆ.
   ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ನೆಲ್ಲು ಕುಂಟೆ, ಪತ್ರಕತ೯ ಶಶಿಸಂಪಳ್ಳಿ, ಹೋರಾಟಗಾರ ಹಾಗು ವಕೀಲರಾದ ಶ್ರೀಪಾಲ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಇವರ ಕೃತಿಗಳ  ಪ್ರಕಾಶಕರಾದ ಯು.ಎಸ್.ಮಹೇಶ್ ಅತಿಥಿಗಳಾಗಿ ಭಾಗವಹಿಸುವರು.
  ವಿಶೇಷ ಅತಿಥಿ ಆಗಿ ಬರುವ ಕೊಪ್ಪದ ಸುದೀರ್ ಕುಮಾರ್ ಮುರುವಳ್ಳಿ ಇವರ ಅಪ್ಪಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ ನನಗೆ ಇವರ ಪರಿಚಯ ಇಲ್ಲ ಆದರೆ ಇವರ ಮಾತುಗಳಿಗೆ ನಾನು ಅಭಿಮಾನಿ.
  ಚಿಕ್ಕಮಗಳೂರು - ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕರಾವಳಿ ಭಾಗದಲ್ಲಿ ಕಷ್ಟವಿತ್ತು ಆ ಕಾಲದಲ್ಲಿ ಘಟ್ಟದಲ್ಲಿ ಅಡಿಕೆ ಬೆಳೆಗಾರರ ಕೃಷಿ ಕೆಲಸಕ್ಕಾಗಿ ಸಾವಿರಾರು ಜನ ಸೇರೆಗಾರನೆಂಬ ಗುತ್ತಿಗೆದಾರನ ಆಳುಗಳಾಗಿ ಬಂದವರು ಅನೇಕರು ಇಲ್ಲೇ ನೆಲೆಸಿದ್ದಾರೆ ಕಾರಂತರ ಚೋಮನ ದುಡಿಯಲ್ಲಿ ಇಂತವರದ್ದೇ ಕಥೆ (ಈ ಕಥೆ ಸಿನಿಮಾ ಆದಾಗ ಸಾಗರದ ಎಸ್.ಎಸ್. ಕುಮುಟಾ ಪುತ್ರಿ ಪದ್ಮಾ ಕುಮುಟಾ ಈ ಸಿನಿಮಾದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದರು)
 ನನ್ನ ಅಜ್ಜಿ ಕೂಡ ಇದೇ ರೀತಿ ವಲಸೆ ಬಂದವರು, ಎಲ್ಲಾ ಜಾತಿಯವರೂ ಬಂದಿದ್ದಾರೆ ಜೊತೆಗೆ ಅವರ ದೈವ ಆಚರಣೆ -ಜಕುಣಿ - ಆಹಾರ -ಯಕ್ಷಗಾನ - ಕುಂದಾಪುರ ಕನ್ನಡ ಬಾಷೆ ಹೊಯ್ಕು - ಬರ್ಕು ಇತ್ಯಾದಿ ಎಲ್ಲಾ ಮುಂದುವರಿದಿದೆ ಹಾಗೂ ನಾವು ಫಟ್ಟದ ಕೆಳಗಿನವರು ಎಂಬ ಅಘೋಷಿತ ನೆಂಟಿನೊಂದಿಗೆ ಒಗ್ಗಟ್ಟು ಮುಂದುವರೆದಿದೆ.
  ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಓದಿ ರಾಣಿ ಚಂಪಕಾಳ ಸ್ಮಾರಕ ಹುಡುಕಿ ಹೋಗಿ ನೋಡಿ (19- ನವೆಂಬರ್‌- 2020) ನಂತರ ನನ್ನ ಕಾದಂಬರಿ ಬಗ್ಗೆ ವಿಮರ್ಶೆ ಬರೆದಿದ್ದರು ಇಲ್ಲಿ ಕ್ಲಿಕ್ ಮಾಡಿ ಓದಿ... https://arunprasadhombuja.blogspot.com/2020/11/blog-post_19.html
   ಜಿ.ಟಿ. ಸತ್ಯನಾರಾಯಣ್ ಸಾಗರದ ಬಹುಸಂಖ್ಯಾತ ದೀವರ ಒಕ್ಕೂಟವಾದ ಈಡಿಗ ಸಮುದಾಯದವರೇ ಆದ ಕರಾವಳಿಯ ಪೂಜಾರರು (ಜನಾರ್ದನ ಪೂಜಾರಿ ಜಾತಿ) ಇವರು ಕಾಂಗ್ರೇಸ್ ಪಕ್ಷದ ಕಟ್ಟಾಳು ಇವರ ಅನುಭವ ವಿದ್ಯಾರ್ಹತೆಗಳು ಈ ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳ ಬೇಕು, ಇವರನ್ನು ಸಾಗರ ತಾಲೂಕಿನ ಬಗರ್ ಹುಕುಂ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು ಇವರ ಗೆಳೆಯರು ಕಾಗೋಡು ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಒತ್ತಾಯಿಸಿದ್ದಾರೆ ಈ ಸಂದರ್ಭದಲ್ಲಿ ನಾನು ಇದನ್ನು ಅನುಮೋದಿಸುತ್ತೇನೆ.
    ಕಾರ್ಯಕ್ರಮ ಯಶಸ್ವಿ ಆಗಲಿ ಮತ್ತು ಪುಸ್ತಕ ಆದಷ್ಟು ಬೇಗ ನನ್ನ ಕೈ ಸೇರಲಿ ಅದರಲ್ಲಿ ನನ್ನ ಹಿರಿಯ ಮಿತ್ರ ತಿಮ್ಮಣ್ಣರ ಜೀವನದ ಸಾರ ಓದುವ ತವಕದಲ್ಲಿ ಇದ್ದೇನೆ ಇದು ನನ್ನ ಅಜ್ಜಿ ಅಂತವರೆಲ್ಲ ಘಟ್ಟ ಹತ್ತಿ ಬಂದವರ ಕಥೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...