https://youtu.be/exQtyuXrWAk?feature=shared
#ಮನೆ_ತುಂಬಾ_ಶ್ವಾನಗಳದ್ದೇ_ದರ್ಬಾರ್
#ಮಗಳು_ಅಳಿಯ_ಬಂದಿದ್ದಾರೆ_ಅವರ_ಮಿನಿಯೇಚರ್_ಪಿಂಚರ್_ಮತ್ತು_ಹಸ್ಕಿ_ಬಂದಿದೆ.
#ನಮ್ಮ_ಪ್ರೀತಿಯ_ಶಂಭೂರಾಮ_ಜಾನ್ಸಿ_ಕಾಳು_ಸೇರಿ_ಐವರಾಗಿದ್ದಾರೆ.
ಮಗಳು ಬೆಂಗಳೂರಲ್ಲಿ ಸಾಕಿರುವ ಈ ಮಿನಿಯೇಚರ್ ಪಿಂಚರ್ ಬ್ರೌನಿ ಶಂಭೂರಾಮನಿಗಿಂತ ದೊಡ್ಡವ ಮೂರು ವರ್ಷದವನು ಅವನ ಗಾತ್ರ ಅಷ್ಟೇ ತೂಕ 4 ಕಿಲೋ ದಾಟುವುದಿಲ್ಲ ಶಂಭೂರಾಮನಿಗೆ ಎರೆಡೂವರೆ ವರ್ಷ ಮತ್ತು ತೂಕ 50 ಕೆಜಿ.
ಹಸ್ಕಿ ಹೆಸರು ಬೀಮಾ ಇವರೆಲ್ಲರಿಗಿಂತ ಸಣ್ಣವ ಎರೆಡು ವರ್ಷ ಎಲ್ಲರೂ ಜಗಳವಿಲ್ಲದೆ ಅವರವರ ತಳಿತಕ್ಕ ವರ್ತನೆ ಜೊತೆ ಅನೋನ್ಯವಾಗಿ ಇದ್ದಾರೆ.
ನಾನು ಬ್ರೌನಿಗೆ ಕರೆಯುವುದು ಕೆಂಚಪ್ಪ ಅಂತ ತುಂಬಾ ಸೂಕ್ಷ್ಮ, 360 ಡಿಗ್ರಿಯಲ್ಲಿ ತನ್ನ ಸುತ್ತ ಪರಿಸರ ಗಮನಿಸುತ್ತಿರುತ್ತಾನೆ, ಭಯ ಇಲ್ಲ.
ಅವನ ಊಟ ತಿಂಡಿ ಅವನ ಗಾತ್ರಕ್ಕೆ ತಕ್ಕಂತೆ ದೊಡ್ಡ ಬೆಕ್ಕು ತಿನ್ನುವಷ್ಟು ಆಹಾರ ಮಾತ್ರ.
ಅವನ ಒಂದು ವಿಶೇಷ ಸ್ವಭಾವ ಎಂದರೆ ಇವನ ಎತ್ತರದಲ್ಲಿರುವ ಇವನ ಸುತ್ತಲಿನ ವಸ್ತುಗಳು ಇವನದ್ದೆ ಅಂತ ತೀರ್ಮಾನಿಸಿ ಬಿಡುತ್ತಾನೆ ಅದನ್ನು ಯಾರೂ ಮುಟ್ಟುವಂತಿಲ್ಲ , ತೆಗೆಯಲು ಕೈ ಚಾಚಿದರೆ ಬೊಗಳಿ ತನ್ನದು ಎಂದು ಎಚ್ಚರಿಸುತ್ತಾನೆ, ಇನ್ನೂ ಮುಂದುವರಿದರೆ ತನ್ನ ದಂತ ಪಂಕ್ತಿ ತೋರಿಸುತ್ತಾನೆ ಅದಕ್ಕೂ ಮೀರಿದರೆ ಕಚ್ಚುತ್ತಾನೆ.
Comments
Post a Comment