Skip to main content

#Blog number 1772. ನಿರಂತರವಾಗಿ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚಾರಣೆ 1948 ರಿಂದ ಸತತ 76 ವರ್ಷದಿಂದ ಶಿವಮೊಗ್ಗ ಗಾಂಧೀ ಬಸಪ್ಪರ ಕುಟುಂಬ ನಡೆಸಿಕೊಂಡು ಬರುತ್ತಿದೆ.

#ನೂರಾ_ಐವತ್ತೈದನೆ_ಮಹಾತ್ಮಾಗಾಂದೀಜಿ_ಜನ್ಮದಿನೋತ್ಸವ.

#ಶಿವಮೊಗ್ಗದ_ಗಾಂಧೀಬಸಪ್ಪರ_ಕುಟುಂಬ_76_ವರ್ಷಗಳಿಂದ_ತಪ್ಪದೇ_ಮಹಾತ್ಮಾಗಾಂಧೀಜಿ_ಜನ್ಮದಿನಾಚಾರಣೆ_ಆಚರಣೆ

#ಗಾಂದೀವಾದಿ_ಗಾಂಧೀಬಸಪ್ಪರ_ಶಪಥ_1999ರಿಂದ_ಮುಂದುವರಿಸಿಕೊಂಡು_ಬರುತ್ತಿರುವ_ಅವರ_ಕುಟುಂಬ

#ನಿನ್ನೆ_ಅಂಚೆಯಲ್ಲಿ_ಬಂದ_ಅಹ್ವಾನ_ಪತ್ರಿಕೆ.


  ಗಾಂದೀ ಬಸಪ್ಪನವರು (1913-1999) ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ದಾಂತದಿಂದ ಪ್ರೇರೇಪಿತರಾದ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಬಂದ ಸಂತೋಷದ ಮಧ್ಯದಲ್ಲೇ ಗಾಂಧೀ ಹತ್ಯೆಯ ದುಃಖದಲ್ಲಿ ಹೆಚ್ಚು ನೊಂದವರು ಶಿವಮೊಗ್ಗದ ಗಾಂಧೀ ಬಸಪ್ಪನವರು.
  1999 ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸುವ ಮುನ್ನ ತಮ್ಮ ಇಡೀ ಕುಟುಂಬದವರಿಂದ ಇವರು ತೆಗೆದುಕೊಂಡ ಶಪಥ ಏನೆಂದರೆ ಅವರ ತಿಥಿ ಬೇಕಾದರೆ ಆಚರಿಸದೆ ಬಿಡಿ ಆದರೆ ಅವರು ಗಾಂಧೀಜಿ ಹತ್ಯೆ ನಂತರದಿಂದ ತಪ್ಪದೇ ಆಚರಿಸಿಕೊಂಡು ಬಂದ #ಗಾಂದೀ_ಜಯಂತಿ ಮಾತ್ರ ನಿರಂತರ ನಡೆಸಬೇಕು ಎಂಬುದು.
  ಶಿವಮೊಗ್ಗದ ಇವರ ಮನೆಗೆ ವಂದೇ ಮಾತರಂ ನಿಲಯ ಎಂಬ ಹೆಸರು ಇದೆ ಗಾಂದೀ ಬಸಪ್ಪರ ಇಡೀ ಕುಟುಂಬದವರ ಹೆಸರ ಮುಂದೆ ಗಾಂಧೀ ಅಂತಲೇ ಇದೆ ಈ ಮೂಲಕ ಶಿವಮೊಗ್ಗದ ಗಾಂಧೀ ಬಸಪ್ಪ ಕುಟು೦ಬ ತಮ್ಮ ತಂದೆಯ ಅಂತಿಮ ಆಸೆ ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ.
     ಪ್ರತಿ ವಷ೯ ಗಾಂಧೀ ಜಯಂತಿ ಇಡೀ ಕುಟುಂಬದ ಸದಸ್ಯರು ಸೇರಿ ಗಾಂಧೀ ಅಭಿಮಾನಿಗಳನ್ನು ಸೇರಿಸಿ ದೊಡ್ಡ ಹಬ್ಬದಂತೆ ಗಾಂದೀ ಜಯಂತಿ ಆಚರಿಸುತ್ತಾರೆ.
   ಶಿವಮೊಗ್ಗದ ಖ್ಯಾತ ವಕೀಲರಾದ ವೆಂಕಟ ಸುಬ್ಬ ಶಾಸ್ತ್ರೀ 1924ರ ಬೆಳಗಾವಿ ಅಧಿವೇಷನದಲ್ಲಿ ಗಾಂಧೀ ಅವರ ಪ್ರಭಾವದಿಂದ ಗಾಂಧೀಜಿಯವರನ್ನು ಶಿವಮೊಗ್ಗಕ್ಕೆ ಕರೆ ತರುವ ಸತತ ಪ್ರಯತ್ನ 1927 ರಲ್ಲಿ ಈಡೇರುತ್ತದೆ.
  ಶಿವಮೊಗ್ಗದ ನ್ಯಾಷನಲ್ ಲಾಡ್ಜ್ (ಶಿವಮೊಗ್ಗದ ಕೇಂದ್ರ ಅ0ಚೆ ಇಲಾಖೆ ಎದರು ನಂತರ ಅದು ಬೃಂದಾವನ ಹೋಟೆಲ್ ಆಗಿತ್ತು) ನಲ್ಲಿ ಒಂದು ವಾರ ಗಾಂದೀಜಿ ಮತ್ತು ಕಸ್ತೂರ ಬಾ ದಂಪತಿಗಳು ತಂಗುತ್ತಾರೆ.
   ಈ ಅವಧಿಯಲ್ಲಿ ಗಾಂಧೀಜಿ ಆನಂದಪುರಂ, ಸಾಗರ (16- ಆಗಸ್ಟ್ - 1927), ನಗರ - ತೀರ್ಥಹಳ್ಳಿ - ಭದ್ರಾವತಿ ಪ್ರವಾಸ ಮಾಡುತ್ತಾರೆ.
  14 ಆಗಸ್ಟ್ 1927 ರಲ್ಲಿ ಶಿವಮೊಗ್ಗದ ಉದ್ಯಾನವನದಲ್ಲಿ ಸ್ವಾತಂತ್ರ್ಯದ ಮಹತ್ವ ತಿಳಿಸುವ ಗಾಂಧೀಜಿಯವರ ಸಾರ್ವಜನಿಕ ಸಭೆ ನಡೆಯುತ್ತದೆ ಇದರ ಸ್ಮರಣೆಗಾಗಿ  ಈ ಉದ್ಯಾನವನಕ್ಕೆ #ಗಾಂಧೀ_ಪಾರ್ಕ್  ಎ೦ಬ ಹೆಸರು ಇಡಲಾಗುತ್ತದೆ.
   ಗಾಂಧೀಜಿ ಶಿವಮೊಗ್ಗಕ್ಕೆ ಬಂದ ನೆನಪಿಗಾಗಿ ಪುರ ಪ್ರಮುಖರು  ಪ್ರಮುಖ ವ್ಯಾಪಾರಿ ಕೇಂದ್ರಕ್ಕೆ #ಗಾಂಧೀ_ಬಜಾರ್ ಎಂದು ನಾಮಕರಣ ಮಾಡುತ್ತಾರೆ.
  ಗಾಂಧೀಜಿ ತಂಗಿದ್ದ ನೆನಪಿಗಾಗಿ ನ್ಯಾಷನಲ್ ಲಾಡ್ಜ್ ಮಾಲಿಕರು ಲಾಡ್ಜ್ ಎದರು ಎರೆಡು ತೆಂಗಿನ ಸಸಿ ಗಾಂದೀಜಿ ಮತ್ತು ಕಸ್ತೂರ ಬಾ ರಿಂದ ನೆಡೆಸಿದ್ದರು.
  ಗಾಂಧೀಜಿ ಶಿವಮೊಗ್ಗದಲ್ಲಿ ಗಾಂಧೀ ಪಾರ್ಕಿನಲ್ಲಿ 14 - ಆಗಸ್ಟ್ - 1927 ರ ಸಭೆ ನಡೆಸಿದ ಇಪ್ಪತ್ತು ವರ್ಷಕ್ಕೆ ಸರಿಯಾಗಿ ಅಂದರೆ 14- ಆಗಸ್ಟ್ - 1947 ರ ರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.
   ಶಿವಮೊಗ್ಗದ 100 ಅಡಿ ರಸ್ತೆಗೆ #ಗಾಂಧೀ_ಬಸಪ್ಪ_ರಸ್ತೆ, ತುಂಗಾ ಚಾನಲ್ ವೃತ್ತಕ್ಕೆ #ಗಾಂಧೀ_ಬಸಪ್ಪ_ವೃತ್ತ ಎಂದು ಸರ್ಕಾರ ನಾಮಕರಣ ಮಾಡಿದೆ.
   ಸತತ 51 ವರ್ಷ ಶಿವಮೊಗ್ಗದ ಗಾಂಧೀಬಸಪ್ಪರು ನಡೆಸಿಕೊಂಡು ಬಂದ ಗಾಂಧೀ ಜಯಂತಿ ಅವರ ಕುಟುಂಬ 25 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದೆ ಇದು (2 ಅಕ್ಟೋಬರ್ 2023) 76ನೆ ವರ್ಷದ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚರಣೆ ಆಚರಣೆ ಈ ಕುಟುಂಬಕ್ಕೆ.
 ಒಂದು ಕುಟುಂಬ ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಇದು ಇಡೀ ದೇಶದಲ್ಲೇ ಅದ್ವಿತಿಯ.
     ತಂದೆಯ ಶಪಥಕ್ಕೆ ಚ್ಯುತಿ ಬಾರದಂತೆ ಮಹಾತ್ಮಾಗಾಂಧಿ ಜಯಂತಿ ನಡೆಸುತ್ತಿರುವ ಗಾಂಧಿ ಬಸಪ್ಪ ಕುಟುಂಬಕ್ಕೆ ಅಭಿನಂದಿಸೋಣ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...