#ನಿನ್ನೆಯ_ಗೊಜಮೊಟ್ಟೆಯ_ಕಪ್ಪೆಗಳ_ಬಗ್ಗೆ_ಮಾಹಿತಿ_ಕೇಳಿದ್ದೆ
#ಪರಿಸರ_ಕಾಳಜಿಯ_ಬೆಳ್ಳೂರುನಾಗರಾಜ್_ಈ_ಕಪ್ಪೆಗಳ_ಬಗ್ಗೆ_ಮಾಹಿತಿ_ನೀಡಿದ್ದಾರೆ.
#ಈ_ಕಪ್ಪೆಯ_ವೈಜ್ಞಾನಿಕ_ಹೆಸರು_Clinotarsus_curtipes
#ದೇಶಿ_ಹೆಸರು_ಮಲಬಾರ್_ಪ್ರಾಗ್_ಬೈ_ಕಲರ್ಡ್_ಪ್ರಾಗ್
#ಪರಿಸರ_ಪ್ರೇಮಿ_ಬೆಳ್ಳೂರು_ನಾಗರಾಜರಿಗೆ_ದನ್ಯವಾದಗಳು.
https://youtu.be/X246K0Y-GHE
ಒಂದೊಂದು ಜಾತಿ ಕಪ್ಪೆಗಳದ್ದು ಒಂದೊಂದು ರೀತಿಯ ಜೀವನ ಶೈಲಿ ಇರುತ್ತದೆ, ಹಲವು ಜಾತಿ ಕಪ್ಪೆಗಳು ಗೊದಮೊಟ್ಟೆಯಿಂದ ಮರಿ ಕಪ್ಪೆಗಳಾಗುತ್ತವೆ, ಕೆಲವು ಜಾತಿಗಳಲ್ಲಿ ಗೊದಮೊಟ್ಟೆಯ ಹಂತವೇ ಇಲ್ಲದೆ ಮೊಟ್ಟೆಗಳಿಂದ ನೇರವಾಗಿ ಮರಿ ಕಪ್ಪೆಗಳಾಗುತ್ತವೆ, ಇನ್ನು ಕೆಲವು ಗೊದಮೊಟ್ಟೆಗಳು 1-2 ತಿಂಗಳಲ್ಲಿ ಮರಿಕಪ್ಪೆಗಳಾಗುತ್ತವೆ.
ವೀಡಿಯೋದಲ್ಲಿರುವ ಕಪ್ಪೆಗಳಿಗೆ bicolored frog ಅಥವಾ Malabar frog ಎನ್ನುತ್ತಾರೆ, ಕನ್ನಡದಲ್ಲಿ ದ್ವಿವರ್ಣ ಕಪ್ಪೆ ಎನ್ನಬಹುದು. ಈ ಕಪ್ಪೆಗಳು ಗೊದಮೊಟ್ಟೆ ಹಂತದಲ್ಲೇ 8-10 ತಿಂಗಳು ಕಳೆಯುತ್ತವೆ, ಕೆರೆ ಅಥವಾ ಜಲಾಶಯಗಳಲ್ಲಿ ಕಪ್ಪನೆಯ ದೊಡ್ಡ
ಗೊದಮೊಟ್ಟೆಯ ಹಿಂಡುಗಳನ್ನು ನೋಡಿರಬಹುದು, ಇವು ಗೊದಮೊಟ್ಟೆ ಹಂತದಲ್ಲಿ 8-10 ತಿಂಗಳು ಕಳೆಯುವುದರಿಂದ ಇವುಗಳು ಬದುಕುಳಿಯಲು ವರ್ಷ ಪೂರ್ತಿ ನೀರಿರುವ ಜಲಮೂಲ ಇರಲೇಬೇಕು. ಮುಂಗಾರು ಶುರುವಾಗುತ್ತಿದ್ದಂತೆ ಗೊದಮೊಟ್ಟೆ ಹಂತ ಮುಗಿಸಿ, ಕಪ್ಪೆಗಳಾಗಿ ರಾಶಿ ರಾಶಿ ಕಪ್ಪೆಗಳು ಕಾಡಿನತ್ತ ಸಾಗುತ್ತವೆ.ಪಶ್ಚಿಮಘಟ್ಟಗಳಿಗೆ ಸೀಮಿತವಾದ ಈ ಕಪ್ಪೆಗಳಿಗೆ ವರ್ಷಪೂರ ನೀರಿರುವ ಜಲಮೂಲ ಬೇಕೇ ಬೇಕು, ಇತ್ತೀಚಿಗೆ ಮಲೆನಾಡಿನ ಹಳ್ಳಕೊಳ್ಳಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತಿರುವುದರಿಂದ ಇವುಗಳ ಸಂತಾನೋತ್ಪತ್ತಿಗೆ ಹಿನ್ನೆಡೆಯಾಗಿತ್ತು,ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಮಳೆಗಾಲ ಚನ್ನಾಗಿ ಆಗಿರುವುದರಿಂದ ಇವುಗಳ ಸಂಖ್ಯೆ ಹೆಚ್ಚಾಗಿರುವಂತೆ ಕಂಡು ಬಂದರೂ ಬಹಳಷ್ಟು ಕಪ್ಪೆಗಳು ರಸ್ತೆಯಲ್ಲೇ ಜೀವ ಬಿಡುತ್ತಿವೆ, ವೈಜ್ಞಾನಿಕ ಹೆಸರು Clinotarsus curtipes.
ಈ ಕಪ್ಪೆಗಳ ಗಾತ್ರ ಇದಕ್ಕಿಂತ ಕೊಂಚ ದೊಡ್ಡದಾಗ ಬಹುದು ಮತ್ತು ಕಪ್ಪೆಗಳ ಆಯಸ್ಸು ಗರಿಷ್ಟ 20 ವರ್ಷ.
Comments
Post a Comment