#ಜೋಳದ_ಕಡಕ್_ರೊಟ್ಟಿ
#ಭಾರತೀಯ_ಮೂಲದ_ನೈಸರ್ಗಿಕ_ಪದಾರ್ಥದ_ಬ್ರೆಡ್
#ಮಲೆನಾಡಿನ_ಪತ್ರೋಡೆ_ಗಸಿ_ಕಡಕ್_ಜೋಳದ_ರೊಟ್ಟಿ_ಚಟ್ನಿಪುಡಿ_ಮೊಸರು_ಇವತ್ತಿನ_ಉಪಹಾರ
ನಾನು ಹುಬ್ಬಳ್ಳಿಗೆ ಹೋದರೆ ಬಾಬು ರಾವ್ ಪೇಡಾ, ಕಡಕ್ ರೊಟ್ಟಿ ಖಾಯಂ ತರುವುದು ಪದ್ದತಿ.
ಜೋಳದಿಂದ ತಯಾರಿಸುವ ಈ ಕಡಕ್ ರೊಟ್ಟಿಗೆ 6ರಿಂದ 9 ತಿಂಗಳು ಹಾಳಾಗದೆ ಉಳಿಯುವ ಶೆಲ್ಪ್ ಲೈಪ್ ಇರುವುದರಿಂದ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಜೋಳದ ಕಡಕ್ ರೊಟ್ಟಿ ಪ್ರತಿ ಮನೆಯಲ್ಲು ಸಂಗ್ರಹಿಸಿಡುತ್ತಾರೆ.
ಸಿರಿಧಾನ್ಯ (ಮಿಲೆಟ್ ) ಬಿಳಿ ಜೋಳದಲ್ಲಿರುವ ಪೌಷ್ಟಿಕಾಂಶಗಳಿರುವ ಈ ರೊಟ್ಟಿ ಬಳಕೆಯಿಂದ ಜೀರ್ಣ ವ್ಯವಸ್ಥೆ ಸುದಾರಿಸುತ್ತದೆ, ಬ್ಲಡ್ ಶುಗರ್ ಕಡಿಮೆ ಮಾಡುತ್ತದೆ, ರಕ್ತದ ಒತ್ತಡ ನಿಯಂತ್ರಿಸುತ್ತದೆ ಮತ್ತು ತೂಕ ಇಳಿಯಲು ಸಹಕಾರಿ ಅನ್ನುತ್ತಾರೆ.
ಭಾರತೀಯ ಮೂಲದ ಈ ಜೋಳದ ಕಡಕ್ ರೊಟ್ಟಿಯೂ ಸೇರಿ ಭಾರತದಲ್ಲಿ 150 ವಿದದ ರೊಟ್ಟಿಗಳು ಆಯಾ ಪ್ರದೇಶದ ಬಳಕೆಯಲ್ಲಿದೆ.
ಬೆಳಿಗ್ಗೆ ಹೊಲಕ್ಕೆ ಹೋಗಿ ಸಂಜೆ ಬರುವವರಿಗೆ, ತಿಂಗಳಗಟ್ಟಲೆ ಪ್ರಯಾಣದಲ್ಲಿರುವವರಿಗೆ ಈ ಕಡಕ್ ರೊಟ್ಟಿ ಆರೋಗ್ಯಕರ ಆಹಾರ, ಈ ಕಡಕ್ ರೊಟ್ಟಿಗೆ ಚಟ್ನಿ ಪುಡಿ, ಮೊಸರು, ತರಕಾರಿ ಪಲ್ಯಗಳ ಜೊತೆ ಮತ್ತು ಮಾಂಸಹಾರಿಗಳಿಗೆ ಮಾಂಸದ ಖಾದ್ಯದ ಜೊತೆ ಈ ಕಡಕ್ ರೊಟ್ಟಿ ಅತ್ಯುತ್ತಮ ಕಾಂಬಿನೇಷನ್ ಆಗುತ್ತದೆ.
ಹುಬ್ಬಳ್ಳಿಯಿಂದ ಜೋಳದ ಕಡಕ್ ರೊಟ್ಟಿ ಮಾಡಿ ವಿದೇಶಕ್ಕೆ ರಪ್ತು ಮಾಡುವ ಸಂಸ್ಥೆಯಿಂದ ತಂದಿದ್ದ ಸುಮಾರು ನೂರು ಕಡಕ್ ರೊಟ್ಟಿಯಲ್ಲಿ ಈ ಐದಾರು ಉಳಿದಿದೆ.
ಇವತ್ತು ಬೆಳಿಗ್ಗೆ ನನ್ನ ಉಪಹಾರ ಈ ಕಡಕ್ ಜೋಳದ ರೊಟ್ಟಿ ಚಟ್ನಿ ಪುಡಿ ಮತ್ತು ಮೊಸರು ಮತ್ತು ಮಲೆನಾಡಿನ ಪ್ರಸಿದ್ಧ ಪತ್ರೋಡೆ ಗಸಿ (ಮರಕೆಸದ್ದು) ಮತ್ತು ಕಾಫಿ .
Comments
Post a Comment