#ಶ್ರದ್ಧಾಂಜಲಿಗಳು
12- ಜೂನ್ -2021
1984ರಲ್ಲಿ ಸಾಗರದಲ್ಲಿ ದಲಿತ ಸಂಘರ್ಷ ಸಮಿತಿಯಲ್ಲಿ ಇವರ ಹೋರಾಟದ ಹಾಡುಗಳನ್ನು ಗೆಳೆಯ ಕುಗ್ವೆ ವಸಂತ ಕುಮಾರ್ ಜೊತೆ ಅದರ೦ತೆ ವಿಶ್ವನಾಥ ಗೌಡರ ರೂಂನಲ್ಲಿ ತಾಲೀಮು ಮಾಡುತ್ತಿದ್ದ ನೆನಪಾಯಿತು.
#ಅವರೇ_ಬರೆದ
#ನಾನು_ಸತ್ತರೆ_ನೀವು_ಅಳುವಿರಿ_ನಿಮ್ಮ_ಕೂಗು_ಕೇಳಿಸದು
#ಅರ್ಥಗರ್ಬಿತ_ಕವನ_ಓದುವ_ಮೂಲಕ_ಶ್ರದ್ಧಾಂಜಲಿ_ಅರ್ಪಿಸೋಣ
ನಾನು ಸತ್ತರೆ ನೀವು ಅಳುವಿರಿ
ನಿಮ್ಮ ಕೂಗು ನನಗೆ ಕೇಳಿಸದು
ನನ್ನ ನೋವಿಗೆ ಈಗಲೇ ಮರುಗಲಾಗದೇ
ನೀವು ಹೂಮಾಲೆ ಹೊದಿಸುವಿರಿ
ನೋಡಲಾದೀತೇನು ನನಗೆ
ಚೆಂದನೆಯ ಹೂವೊಂದ ಈಗಲೇ
ನೀಡಲಾಗದೇ
ನನ್ನ ಗುಣಗಾನ ಮಾಡುವಿರಿ
ನನಗೆ ಕೇಳೀತೇ ಹೇಳಿ
ಒಂದೆರಡು ಹೊಗಳಿಕೆಯ ಮಾತು
ಈಗಲೇ ಆಡಲಾರಿರೇ ..
ನನ್ನ ತಪ್ಪುಗಳನ್ನು ಮನ್ನಿಸುವಿರಿ
ನನಗರಿವಾಗುವುದೇ ಇಲ್ಲ
ಜೀವ ಇರುತ್ತಾ ಕ್ಷಮಿಸಲಾಗದೇ ...
ನನ್ನ ಅನುಪಸ್ಥಿತಿಗೆ ಕೊರಗುವಿರಿ
ನನಗೆ ತಿಳಿಯುವುದೇ ಇಲ್ಲ
ಈಗಲೇ ಭೇಟಿ ಮಾಡಲೇನು ..
ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ
ಮನೆಯತ್ತ ಧಾವಿಸುವಿರಿ ಶ್ರದ್ಧಾಂಜಲಿ ಹೇಳೋ ಬದಲು ಈವಾಗಲೇ
ಸುಖ ದುಃಖ ಹಂಚಿಕೊಳ್ಳಲಾಗದೇನು .
ಮಿಂಚಿ ಹೋಗುವ ಮುನ್ನ ಹಂಚಿ
ಬಾಳುವ ಬದುಕು ಸಹ್ಯವಲ್ಲವೇನು .....
ಡಾ. ಸಿದ್ಧಲಿಂಗಯ್ಯನವರ ಭಾವನಾತ್ಮಕ ಕವಿತೆ.
Comments
Post a Comment