Blog number 2066. ಹುರುಳಿ ಪದಾರ್ಥ ಅತಿಥಿಗಳಿಗೆ ಬಡಿಸಿದರೆ ಅವರ ಸ್ಟೇಟಸ್ ಕಡಿಮೆ ಆಗುತ್ತೆ ಎಂಬ ನಂಬಿಕೆ ಆಚರಣೆ ಇತ್ತೀಚಿನ ದಿನಗಳ ತನಕ ಇದ್ದಿತ್ತು.
#ಹುರುಳಿ_ಕಟ್ಟು_ಮತ್ತು_ಸಾಮಾಜಿಕ_ಅಂತಸ್ತು
#ಕೃಷಿ_ಕಾರ್ಮಿಕರಿಗೆ_ಮೀಸಲಿಡುತ್ತಿದ್ದ_ಆಮ್ರಗಳು
#ದೇಶಿ_ತಳಿ_ಹುರುಳಿಯಲ್ಲಿನ_ರುಚಿ_ಆರೋಮಾ
#ಹೈಬ್ರಿಡ್_ತಳಿಯಲ್ಲಿ_ಇಲ್ಲ
#ಈಗ_ದೊಡ್ಡವರ_ಮನೆಯ_ವಿಶೇಷ_ಕಾರ್ಯಕ್ರಮದಲ್ಲಿ_ಹುಳ್ಳಿಕಟ್ಟಿನ_ಸ್ಪೆಷಲ್_ಮೆನು
ಈಗೆಲ್ಲ ನಮ್ಮ ಹಳ್ಳಿಗಳ ಶ್ರೀಮಂತ ಭೂ ಮಾಲಿಕರ ಮನೆಯಲ್ಲಿ ಹುಳ್ಳಿಕಟ್ಟು ಆಕರ್ಷಕ ಮೆನು ಆಗಿದೆ ಆದರೆ ಕೆಲವು ದಶಕದ ಹಿಂದೆ ಹುಳ್ಳಿ ಕಟ್ಟು ಶ್ರಮ ಜೀವಿಗಳ ಬಡವರ #ಆಮ್ರ ಆಗಿತ್ತು.
ಆಗ ಹುರುಳಿಗೆ ಬೆಲೆ ಇರಲಿಲ್ಲ ಮತ್ತು ಇದು ರೈತರ ಮನೆಯ ಬೇಸಾಯದ ಎತ್ತುಗಳಿಗೆ ನೀಡುವ ಪೌಷ್ಟಿಕ ಆಹಾರ ಮಾತ್ರ ಎಂಬ ನಂಬಿಕೆ ಆಗಿತ್ತು.
ಮನೆಯ ಆಳುಗಳಿಗೆ ನೀಡುವ ಊಟದಲ್ಲಿ ಈ ಹುಳ್ಳಿಕಟ್ಟು ಬಡಿಸುತ್ತಿದ್ದರು ಅದರ ರುಚಿ - ಅರೋಮ - ಪೌಷ್ಟಿಕತೆಗೆ ಸಾಮಾಜಿಕ ಸ್ಥಾನಮಾನ ಮಾತ್ರ ಇರಲೇ ಇಲ್ಲ.
ವಿಶೇಷ ಸಮಾರಂಭದಲ್ಲಿ ಹುಳ್ಳಿ ಕಟ್ಟು ನಿಶೇಧವಾಗಿತ್ತು ಮತ್ತು ಅತಿಥಿಗಳಿಗೆ ಹುಳ್ಳಿ ಕಟ್ಟು ಬಡಿಸುವುದು ಕೂಡ ಆತಿಥ್ಯ ಆಗಿರಲಿಲ್ಲ.
ಈಗ ಎಲ್ಲೆಡೆ ಸಿಗುವ ಹೈಬ್ರಿಡ್ ಹುರುಳಿ ಕಾಳಿನಲ್ಲಿ ರುಚಿ ಇಲ್ಲ ಘಮ ಇಲ್ಲ, ಕಡೂರು ಭಾಗದ ಅರೆಮಲೆನಾಡು ಪ್ರದೇಶದ ರೈತರು ಈಗಲೂ ದೇಶಿ ತಳಿ ಆಗಿರುವ ಕಪ್ಪು ಹುರುಳಿ ಬೆಳೆಯುತ್ತಾರೆ ಅದಕ್ಕೆ ಕೊಂಚ ಬೆಲೆ ಜಾಸ್ತಿ ಅದರಲ್ಲಿ ಆ ಕಾಲದ ಹುರುಳಿಯ ರುಚಿ - ಘಮ ಇದೆ.
ರುಚಿಕರವಾದ ಹುಳ್ಳಿಕಟ್ಟಿನ ಪೇಸ್ಟ್ ಸಂಪ್ರದಾಯಿಕವಾಗಿ ತಯಾರಿಸಿ ಮಾರಾಟ ಮಾಡುವ ಹೆಬ್ರಿ ಸಮೀಪದ ಸೀತಾನದಿಯ ಸತ್ಯನಾರಾಯಣ ಭವನದ ಅನಿಲ್ ಸಂಪರ್ಕ ಸಂಖ್ಯೆ 94482 47128.
ಇವರು ನೀವು ಆರ್ಡರ್ ಮಾಡಿದರೆ ನಿಮ್ಮ ಸ್ಥಳಕ್ಕೆ ತಲುಪಿಸುತ್ತಾರೆ.
ಒಂದು ಕಾಲದಲ್ಲಿ ಹುರುಳಿ ಕಟ್ಟಿಗೆ ಇದ್ದ ನಿಕೃಷ್ಟ ಸ್ಥಾನಮಾನ, ಕೇವಲ ಬಡವರ ಆಹಾರ ಆಗಿದ್ದು ಈಗ ಬದಲಾದ ಕಾಲದಲ್ಲಿ ಶ್ರೀಮಂತರ ಮನೆಯ ವಿಶೇಷ ಕಾರ್ಯಕ್ರಮದಲ್ಲಿ ಬಹು ಮುಖ್ಯ ಸ್ಥಾನ ಪಡೆದಿದೆ.
Comments
Post a Comment