Blog number 2081. ಭಾಗ - 2. ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಸಂಶೋದಕರ ಸರಣಿ ಲೇಖನಗಳು. ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್
#ಬಾಗ_2.
#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಸಂಶೋದಕರುಗಳ_ಸರಣಿ
#ನವೀನ್_ಕುಮಾರ್_ಶಿರಾಳಕೊಪ್ಪ_ಪ್ರಜಾವಾಣಿ_ವರದಿಗಾರರು
#ತಾಳಗುಂದ_ಶಾಸನಗಳ_ಬಗ್ಗೆ_ಕದಂಬರ_ಇತಿಹಾಸದ_ಬಗ್ಗೆ_ಬೆಳಕು_ಚೆಲ್ಲಿದವರು
#ಕದಂಬ_ಸಾಮ್ರಾಜ್ಯ_ಕಟ್ಟಿದ_ಕನ್ನಡದ_ರಾಜ_ಮಯೂರ_ವರ್ಮ
#ಕೇವಲ_ರಾಜ್ಯಬಾರ_ಮಾತ್ರ_ಮಾಡಲಿಲ್ಲ_ತಾಳಗುಂದದಲ್ಲಿ_ನಳಂದಾ_ವಿಶ್ವವಿದ್ಯಾಲಯಕ್ಕೆ
#ಸರಿಸಮನಾದ_ಕದಂಬ_ವಿಶ್ವವಿಧ್ಯಾಲಯಕೂಡ_ಸ್ಥಾಪಿಸಿದ್ದು_ವಿಶೇಷ.
https://youtu.be/JB3dbBM4wbY?feature=shared
ನಾನು ಇತಿಹಾಸ ಆಸಕ್ತ, ಇತಿಹಾಸದ ಬಗ್ಗೆ ಪ್ರಾಮಾಣಿಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವವರ ಬಗ್ಗೆ ನನಗೆ ವಿಶೇಷ ಅಭಿಮಾನ ನಮ್ಮ ಜಿಲ್ಲೆಯ ಬೆಳಕಿಗೆ ಬಾರದ ಇತಿಹಾಸದ ದಾಖಲೆಗಳ ಮೇಲೆ ಬೆಳಕು ಚೆಲ್ಲುವವರಿಗೆ ನಾನು ನಿರಂತರ ಬೆಂಬಲ ನೀಡುತ್ತೇನೆ ಮತ್ತು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ತನು-ಮನ-ಧನ ಸಹಾಯ ಮಾಡುವುದು ನನ್ನ ಹವ್ಯಾಸ.
ನಾನು ದಾಖಲಿಸಿದ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ಇತಿಹಾಸ ಸಂಶೋದಕರಾದ ನವೀನ್ ಕುಮಾರ್ ಯೂಟ್ಯೂಬ್ ಸಂದರ್ಶನದ ಕೆಲ ಕಂತುಗಳು ಇತಿಹಾಸ ಆಸಕ್ತರಿಗಾಗಿ ಪ್ರಕಟವಾಗಲಿದೆ ಭಾಗ - 2 ರಲ್ಲಿ ಅವರು #ಬಂದಳಿಕೆಯ ಉತ್ಕನನ ಏಕೆ ಆಗ ಬೇಕು? ಎಂದು ವಿವರಿಸಿದ್ದಾರೆ.
ಕದಂಬ ಸಾಮ್ರಾಜ್ಯ ಕಟ್ಟಿದ ಕನ್ನಡದ ರಾಜ ಈ ಭಾಗದ ಹವ್ಯಕ ಬ್ರಾಹ್ಮಣರ ರಾಜ ಮಯೂರ ವರ್ಮ ಕೇವಲ ರಾಜ್ಯಬಾರ ಮಾತ್ರ ಮಾಡಲಿಲ್ಲ ಇಲ್ಲಿ ನಾಲಂದ ವಿಶ್ವವಿದ್ಯಾಲಯಕ್ಕೆ ಸರಿಸಮನಾದ ಕದಂಬ ವಿಶ್ವವಿಧ್ಯಾಲಯ ಕೂಡ ಸ್ಥಾಪಿಸಿದ್ದ.
ಶಿಕಾರಿಪುರ ತಾಲ್ಲೂಕಿನಲ್ಲಿ ಇನ್ನೂ ದಾಖಲಾಗದ ಇತಿಹಾಸ ಸಾಕಷ್ಟಿದೆ, ಶಿಲಾಶಾಸನಗಳ ಅಶ್ವಿನಿ ಧೇವತೆ ಎಂದು ಇತಿಹಾಸಕಾರರು ಕರೆಯುವ ಬೆಂಜಮನ್ ಲೇವಿಸ್ ರೈಸ್ ಬರೆದ ಮಾತು ಇವರು ಉಲ್ಲೇಖಿಸುತ್ತಾರೆ "Richest antiquity in Mysore state is Shikaripura" ಅದರಂತೆ ಇಲ್ಲಿನ ಉತ್ಕನನಗಳು ನಡೆದರೆ ಕರ್ನಾಟಕದ ಮೂಲ ಇತಿಹಾಸದ ಚರಿತ್ರೆ ಶಿಕಾರಿಪುರದಿಂದ ತೆರೆದುಕೊಳ್ಳುತ್ತದೆ ಎಂಬ ಆಶಾ ಭಾವನೆ ಇವರದ್ದು.
ಬಿಹಾರದ ರಾಜಗೀರ್ ನಲ್ಲಿ ಕ್ರಿ.ಶ. 427 ರಲ್ಲಿ ಕುಮಾರ ಗುಪ್ತ ಎರಡು ಸಾವಿರ ಶಿಕ್ಷಕರಿಂದ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದ ನಲಂದಾ ವಿಶ್ವವಿದ್ಯಾಲಯಕ್ಕಿಂತ ಮೊದಲೇ ತಾಳಗುಂದದಲ್ಲಿ ಅಂತಹ ಒಂದು ವಿಶ್ವವಿದ್ಯಾಲಯ ಇತ್ತು ಮಯೂರ ವರ್ಮ ತಾಳಗುಂದ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಕಂಚಿಗೆ ಹೋಗುತ್ತಾರೆ ನಂತರ ರಾಜ್ಯಬಾರ ವಹಿಸಿಕೊಂಡು ಉತ್ತರ ಭಾರತದಿಂದ ಮೂರು ಸಾವಿರ ಬ್ರಾಹ್ಮಣ ಪಂಡಿತರನ್ನ ತಾಳಗುಂದ ವಿಶ್ವವಿದ್ಯಾಲಯಕ್ಕೆ ಕರೆತರುತ್ತಾನೆ.
ಮಯೂರ ವರ್ಮನ ಪುತ್ರಿ ಅಥವ ಸಹೋದರಿಯನ್ನು (ಕದಂಬ ಕನ್ಯೆ) ನಳಂದಾ ವಿಶ್ವವಿದ್ಯಾಲಯ ಸ್ಥಾಪಿಸಿದ ಕುಮಾರ ಗುಪ್ತನಿಗೆ ವಿವಾಹ ಮಾಡಿಕೊಡುತ್ತಾನೆ ತಾಳಗುಂದ ಮತ್ತು ನಳಂದಾಕ್ಕೆ ಇರುವ ಅಂತರ 2000 ಕಿ.ಮಿ. ಹೀಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾ ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನೆಗೆ ಆಗ್ರಹಿಸುತ್ತಾರೆ.
ಶಿವಮೊಗ್ಗ ಜಿಲ್ಲೆಯ ಇಂತಹ ಎಲೆ ಮರೆಯ ಕಾಯಿಯಂತ ಇತಿಹಾಸ ಸಂಶೋದಕರಿಗೆ ಶಿವಮೊಗ್ಗ ಜಿಲ್ಲೆಯ ನಾಡು-ನುಡಿ-ಜಲದ ಬಗ್ಗೆ ಅಭಿಮಾನ ಹೊಂದಿದಂತವರು ಹೆಚ್ಚು ಹೆಚ್ಚು ಬೆಂಬಲಿಸಬೇಕೆಂದು ವಿನಂತಿಸುತ್ತೇನೆ.
(ನಾಳೆ ಭಾಗ - 3 ಇನ್ಪೋಸಿಸ್ ಶ್ರೀಮತಿ ಸುಧಾ ಮೂರ್ತಿ ತಾಳಗುಂದ ಬೇಟಿ ವಿವರ.)
Comments
Post a Comment