Blog number 2064. ಹುರುಳಿ ಕಾಳಿನಲ್ಲಿರುವ ಶಕ್ತಿ ಇದರ ರಸ ಹುರುಳಿ ಕಟ್ಟಿನ ರಸ ಕಟ್ಟು ಈಗ ದಿಡೀರ್ ತಯಾರಿಯ ಪೇಸ್ಟ್ ಆಗಿ ಲಭ್ಯವಿದೆ.
#ಒಂದು_ಕಾಲದ_ರೈತರ_ಮನೆಯ_ಎತ್ತಿನ_ಪೌಷ್ಟಿಕ_ಆಹಾರ_ಹುರುಳಿ
#ಬೇಯಿಸಿದ_ಹುರುಳಿಕಾಳು_ನೆನಸಿದ_ಹುರುಳಿ_ನುಚ್ಚು_ಎತ್ತುಗಳಿಗೆ
#ಹುರುಳಿ_ಬೇಯಿಸಿದ_ನೀರು_ಹುಳ್ಳಿ_ಕಟ್ಟು_ನಮ್ಮಂತ_ಹುಳ್ಳಿಕಟ್ಟು_ಪ್ರಿಯರಿಗೆ
#ಹಿಂಗಾರಿನ_ನಂತರದ_ಇಬ್ಬನಿಯಲ್ಲಿ_ಹುರುಳಿ_ಪಸಲು
#ಹುರುಳಿ_ಕಾಳು_ಸಿಪ್ಪೆ_ಬೂಸ_ಹುರುಳಿ_ಗಿಡ_ಕೂಡ_ಜಾನುವಾರು_ಆಹಾರ
#ಈಗ_ಕೃಷಿಯಲ್ಲಿ_ಎತ್ತುಗಳಿಲ್ಲ_ಹುಳ್ಳಿ_ಬೆಳೆಯುವ_ರೈತರೂ_ಇಲ್ಲ
https://youtube.com/shorts/3fcf-CgaHwg?feature=shared
ಎತ್ತು ಮತ್ತು ಕೋಣಗಳನ್ನು ಅವಲಂಬಿಸಿ ಕೃಷಿ ಮಾಡುವ ಕಾಲ ಹೆಚ್ಚು ಕಡಿಮೆ ಮುಗಿದೇ ಹೋಗಿದೆ, ಯಂತ್ರ ಆದಾರಿತ ಕೃಷಿಯಿಂದ ಎತ್ತು ಕೋಣ ಕೊಟ್ಟಿಗೆ ಮತ್ತು ಹುರುಳಿ ಕೂಡ ಇಲ್ಲವಾಗಿದೆ.
ಬಿದನೂರು ನಗರದ ದೇವಗಂಗೆಯಲ್ಲಿ ನಮ್ಮ ದೊಡ್ಡಪ್ಪನ ಮನೆಯಲ್ಲಿ ಎರೆಡು ಜೊತೆ ಹಾಸನದ ಬಿಳಿ ಅಮೃತ ಮಹಲ್ ಜೋಡಿ ಎತ್ತುಗಳಿದ್ದವು ಅದಕ್ಕೆ ಪ್ರತ್ಯೇಕ ಕೊಟ್ಟಿಗೆ ಹೆಚ್ಚು ಬೆಲೆಯ ದೊಡ್ಡ ಎತ್ತುಗಳು ಪೇಟೆಗೆ ಅಕ್ಕಿ ಮಾಡಿಸಲು ದೊಡ್ಡ ಎತ್ತಿನಗಾಡಿಗೆ ಮಾತ್ರ ಸೀಮಿತವಾಗಿತ್ತು ಅದೊಂದು ತರ ಆ ಕಾಲದ ರೈತರಿಗೆ ಅವರ ಅಂತಸ್ತಿನ ಪ್ರದರ್ಶನದ ಬಾಗವೂ ಆಗಿರಬಹುದು.
ಇದರ ಜೊತೆ ಇನ್ನೆರೆಡು ಜೋಡಿ ಸಾದಾರಣ ಎತ್ತುಗಳು ಆದರೆ ಅವು ಹೆಚ್ಚು ಶ್ರಮದ ಕೆಲಸದ ಕೃಷಿ ಮಾಡುವಂತವು ಅವುಗಳಿಗೆ ಕೂಡ ಕೊಟ್ಟಿಗೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಆಗಿರುತ್ತಿತ್ತು.
ಅವುಗಳಿಗೆ ನಿತ್ಯ ಸಂಜೆ ಬೇಯಿಸಿದ ಹುರುಳಿ ಕಾಳು ನೀಡಲೇ ಬೇಕು ಕಾರಣ ಹುರುಳಿಯಲ್ಲಿ ಇರುವ ಪೌಷ್ಟಿಕಾಂಶಗಳು ಮತ್ತು ಶೀಥ ವಾತಾವರಣದಲ್ಲಿ ದೇಹದ ಉಷ್ಣಾಂಶ ಹೆಚ್ಚು ಮಾಡುವ ಗುಣ ಇರುವುದು.
ಆದ್ದರಿಂದ ಎತ್ತುಗಳನ್ನು ಕೃಷಿಗಾಗಿ ಪೋಷಿಸಲು ರೈತರು ಸುಗ್ಗಿ ಕೊಯಿಲು ಮುಗಿಯುವ ಮೊದಲು ಹಿಂಗಾರು ಮಳೆ ಸಮಯದಲ್ಲಿ ತಮ್ಮ ಖುಷ್ಕಿ ಭೂಮಿ ಉಳುಮೆ ಮಾಡಿ ಹುರುಳಿ ಬೀಜ ಬಿತ್ತುತ್ತಾರೆ ಹುರುಳಿ ಇಬ್ಬನಿಯಲ್ಲೇ ಪಸಲು ಬರುವ ಬೆಳೆ ಇದಕ್ಕೆ ಆಡು ಭಾಷೆಯಲ್ಲಿ ಹುಳ್ಳಿ ಅನ್ನುತ್ತಾರೆ ಮತ್ತು Horse gram ಅಂತ ಇಂಗ್ಲೀಷ್ ನಲ್ಲಿ.
ಹುರುಳಿ ಕಾಳು ಕಟ್ಟಿದ ಮೇಲೆ ಹುರುಳಿ ಗಿಡ ಬೇರು ಸಮೇತ ಕೈಯಲ್ಲೇ ಕೀಳಬೇಕು ನಂತರ ಬಿಸಿಲಲ್ಲಿ ಒಣಗಿಸಿ ಹುರುಳಿ ಬೀಜ ಬೇರೆ ಮಾಡಿ, ಹುರುಳಿ ಸಿಪ್ಪೆ ಹುರುಳಿ ಗಿಡಗಳ ಬೂಸ ಕೂಡ ಜಾನುವಾರ ಆಹಾರವಾಗಿ ಬಳಸುತ್ತಾರೆ, ಹುರುಳಿ ಕಾಳು ಸಂಗ್ರಹಿಸಿ ವರ್ಷ ಪೂರ್ತಿ ಎತ್ತುಗಳಿಗೆ ಬೇಯಿಸಿದ ಹುರುಳಿ ಕಾಳು ನೀಡುತ್ತಾರೆ, ಬಸಿದ ಹುಳ್ಳಿ ಕಟ್ಟು (ನೀರು) ಅದಕ್ಕೆ ರುಚಿಗೆ ತಕ್ಕ ಮೆಣಸು - ಹುಳಿ - ಉಪ್ಪು ಸೇರಿಸಿ ಬೇಯಿಸಿದರೆ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಹುಳಿಯಾಗಿ ಹುಣಸೆ - ಅಮಟೆಕಾಯಿ - ಮಾವಿನಕಾಯಿ - ಹುಳಿಮಾವಿನ ಹಣ್ಣು ಕೂಡ ಆಯಾ ಕಾಲಕ್ಕೆ ತಕ್ಕಂತೆ ಬಳಸುತ್ತಾರೆ.
ಆದ್ದರಿಂದ ಹುರುಳಿ ಬೇಯಿಸುವರ ಮನೆಗೆ ಸುತ್ತಮುತ್ತಲಿನ ಮನೆಯವರು ಪಾತ್ರೆ ಜೊತೆಗೆ ಹುರುಳಿ ಕಟ್ಟಿಗಾಗಿ ಕಾಯುತ್ತಿದ್ದರು.
ಹುರುಳಿ ಕೊಯಿಲು ಕಷ್ಟದ ಕೆಲಸ ಇದಕ್ಕೆ ಕೃಷಿ ಕಾರ್ಮಿಕರ ಬಳಸಿದರೆ ಅವರಿಗೆ ದುಬಾರಿ ವೇತನ ನೀಡಿದರೆ ಹುರುಳಿ ಬೇಸಾಯ ದುಬಾರಿ ಆದ್ದರಿಂದ ಆಗೆಲ್ಲ ಹುರುಳಿ ಕೊಯಿಲು ಮಾಡಲು ಶಾಲಾ ವಿದ್ಯಾರ್ಥಿಗಳನ್ನು ಕಡಿಮೆ ಸಂಬಳದಲ್ಲಿ ಪ್ರತಿ ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಬಳಸುತ್ತಿದ್ದರು ಇದರಿಂದ ಕಡಿಮೆ ಕೃಷಿ ವೆಚ್ಚದಲ್ಲಿ ಹುರುಳಿ ಸುಗ್ಗಿ ಆಗುತ್ತಿತ್ತು.
ಆದರೆ ಈಗ ಬದಲಾದ ಕಾಲದಲ್ಲಿ ಕೃಷಿಗಾಗಿ ಎತ್ತುಗಳಿಲ್ಲ ಮತ್ತು ಅವುಗಳ ಪೋಷಣೆಗೆ ಬೇಕಾದ ಹುರುಳಿಯೂ ಬೆಳೆಯುವುದಿಲ್ಲ.
ಆದರೆ ಹುಳ್ಳಿಕಟ್ಟು ಪ್ರಿಯರಿಗಾಗಿ ದಿಡೀರ್ ಹುರುಳಿ ಕಟ್ಟಿನ ಪೇಸ್ಟ್ ಮಾರುಕಟ್ಟೆಯಲ್ಲಿದೆ ಮೊನ್ನೆ ಮಣಿಪಾಲಿಂದ ಬರುವಾಗ ಸೀತಾಕಟ್ಟೆಯ ಹೋಟೆಲ್ ನಿಂದ ತಂದ #ಕುಲ್ತಾ_ಕಡಿ ಬ್ರಾಂಡಿನ ಹುಳ್ಳಿ ಕಟ್ಟು ಅತ್ಯುತ್ತಮ ಉತ್ಪನ್ನವಾಗಿದೆ.
Comments
Post a Comment