#ನಿನ್ನೆ_ನನ್ನ_ಅತಿಥಿಗಳು_ಹೊಸತಲೆಮಾರಿನ_ಯುವ_ರಾಜಕಾರಣಿಗಳು
#ನಗರನಿತಿನ್_ಗರ್ತಿಕೆರೆ_ಗ್ರಾಮಪಂಚಾಯತ್_ಅಧ್ಯಕ್ಷ_ಕೃಷ್ಣಮೂರ್ತಿ_ಮಂಡ್ರಿಸಂತೋಷ್_ಮತ್ತು_ಗೆಳೆಯರು
#ರಾಜಕೀಯ_ಪಕ್ಷಗಳು_ಇಂತವರನ್ನು_ಬೆಳೆಸಬೇಕು.
ನನ್ನ ಪೇಸ್ ಬುಕ್ ಪ್ರೆಂಡ್ ಆಗಿರುವ ಬಿದನೂರು ನಗರದ ನಿತಿನ್ ಅವರನ್ನ ಕರೆತಂದು ಮುಖತಃ ಪರಿಚಯ ಮಾಡಿಸಿದವರು ಆಲಗೇರಿ ಮಂಡ್ರಿಯ ವಿದ್ಯುತ್ ಮೋಟಾರ್ ಮಾರಾಟಗಾರರಾದ ಮಂಡ್ರಿ ಸಂತೋಷ್.
ಬಿದನೂರು ನಗರದ ದೇವಗಂಗೆ ನನ್ನ ದೊಡ್ಡಮ್ಮನ ಮನೆ ಇರುವ ಊರು, ಅಲ್ಲಿನ ಐತಿಹಾಸಿಕ ಕೆಳದಿ ಅರಸರ ನೈಸರ್ಗಿಕ ಈಜುಕೊಳದಲ್ಲಿಯೇ ನಾನು ಈಜು ಕಲಿತದ್ದು.
ದೇವಗಂಗೆ ಸಮೀಪದ ಬಸವನಬ್ಯಾಣ ನಗರ ನಿತೀನ್ ಅವರ ಊರು ಈಗಲೂ ಮಳೆಗಾಲದಲ್ಲಿ ಶರಾವತಿ ಹಿನ್ನಿರಿನಿಂದ ದೇವಗಂಗೆ, ಬಸವನಬ್ಯಾಣದ ನಿವಾಸಿಗಳು ವಿದ್ಯಾರ್ಥಿಗಳು ದೋಣಿಯಲ್ಲೇ ನಗರದ ಆಸ್ಪತ್ರೆ ರಸ್ತೆಗೆ ತಲುಪಬೇಕು ಈಗ ಯಾಂತ್ರಿಕೃತ ದೋಣಿಗಳಿದೆ ಆಗ 70 ರ ದಶಕದಲ್ಲಿ ಮರದ ದೋಣಿಗಳು ಹುಟ್ಟು ಹಾಕಿ ದಡ ಮುಟ್ಟಿಸುವ ಅಂಬಿಗರು ಇದ್ದರು.
ನಿತಿನ್ ತೀರ್ಥಹಳ್ಳಿಯಲ್ಲಿ ವಿದ್ಯಾಬ್ಯಾಸ ಮಾಡುವಾಗ ಸ್ಥಳಿಯ ಪತ್ರಿಕೆಗಳಲ್ಲಿ ವರದಿಗಾರಿಕೆ ಮಾಡಿದ ಬಗ್ಗೆ ನಂತರ ಲೇಖಕರಾದ ಬಗ್ಗೆ ವಿವರಿಸಿದರು.
ಇವರ ಜೊತೆ ಹೊಸನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಷಡಕರಾಗಿದ್ದ ಗಂದರಳ್ಳಿ ಡಾಕ್ಟರ್ ನಾರಾಯಣಪ್ಪರ ಸಹೋದರರ ಪುತ್ರ ಗರ್ತಿಕೆರೆಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಅವರ ಇಬ್ಬರು ಗೆಳೆಯರು ಬಂದಿದ್ದರು.
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಘವೇಂದ್ರರ ಪರವಾಗಿ ಪ್ರಚಾರದಲ್ಲಿದ್ದಾರೆ ಲಂಚ್ ಬ್ರೇಕ್ ನಲ್ಲಿ ಊಟಕ್ಕಾಗಿ ನಮ್ಮ #ಮಲ್ಲಿಕಾ_ವೆಜ್ ಗೆ ಬಂದವರು ನನ್ನ ಬೇಟಿಗೆ ನನ್ನ ಕಛೇರಿಗೆ ಬಂದಿದ್ದರು.
ನಾನು ಸುಮ್ಮನೆ ಮಾತಿನ ಮಧ್ಯೆ ಅವರನ್ನ ಪ್ರಸ್ತುತ ಚುನಾವಣಾ ವಿಚಾರವಾಗಿ ಮಾತಿಗೆಳೆದೆ, ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಜಾತಿ ಪಕ್ಷದ ಹುಚ್ಚು ಅಮಲಿನಲ್ಲಿರುತ್ತಾರೆ ಆದರೆ ಇವರಿಬ್ಬರೂ ಚುನಾವಣೆಯ ವಾಸ್ತವ ಅರಿತಿದ್ದಾರೆ.
ಇವರಿಬ್ಬರು ಈಡಿಗ ಸಮುದಾಯದ ಯುವ ನಾಯಕರು ಇವರ ಬೆಂಬಲ ಬಿಜೆಪಿಯ ಅಭ್ಯರ್ಥಿಗೆ, ಇವರಿಗೆ ಕಾಂಗ್ರೇಸ್ ಪಕ್ಷದ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂಪಾಯಿ ಮತ್ತು ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕಳೆದ ಲೋಕಸಭಾ ಚುನಾವಣೆಯ ಲೀಡ್ ಕಡಿಮೆ ಮಾಡುತ್ತದೆ ಎಂಬ ಆತಂಕವಿದೆ ಮತ್ತು ತಮ್ಮ ಪಕ್ಷ ಗೆಲ್ಲುತ್ತದೆಂಬ ಹುಮ್ಮಸ್ಸು ಅವರಲ್ಲಿದೆ.
ಇವರೆಲ್ಲ ರಾಜಕೀಯ ಮಾತ್ರ ನಂಬಿದವರಲ್ಲ ಸ್ವಂತ ಕೃಷಿ ಮತ್ತು ವ್ಯಾಪಾರ ವ್ಯವಹಾರ ಕೂಡ ಹೊಂದಿದ್ದಾರೆ ಈ ರೀತಿ ವಿಧ್ಯೆ ತಿಳುವಳಿಕೆ ಜ್ಞಾನದ ಇಂತಹ ಯುವಕರನ್ನು ನಾನು ಮೆಚ್ಚುತ್ತೇನೆ.
ನಾನು ಕಳೆದ 10 ವರ್ಷದಿಂದ ರಾಜಕೀಯ ನಿವೃತ್ತಿ ಹೊಂದಿರುವುದರಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದಿರುವುದರಿಂದ ನನ್ನ ಬೇಟಿಗೆ ಬರುವವರಿಗೆ ಯಾವುದೇ ರಾಜಕಾರಣದ ಚರ್ಚೆಗೆ ಲಘು ಬಿಗು ಇರುವುದಿಲ್ಲವಾದ್ದರಿಂದ ಇಂತಹ ಯುವಕರು ಹೆಚ್ಚು ಮಾತಾಡುತ್ತಾರೆ ಇದರಿಂದ ಚುನಾವಣೆಯ ಒಂದು ರೀತಿ ಸಮೀಕ್ಷೆ ಆಗುತ್ತದೆ.
ಇವರ ರಾಜಕೀಯ ಭವಿಷ್ಯ ಕೂಡ ಉಜ್ವಲವಾಗಲಿ ಎಂದು ಹಾರೈಸಿ ಚಹಾದೊಂದಿಗೆ ಬೀಳ್ಕೊಟ್ಟೆ.
Comments
Post a Comment