#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ ಅಂಕಣ ಭಾಗ -2.
(ಕೆ.ಆರುಣ್ ಪ್ರಸಾದ್)
ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಘಟನೆ ಯಾಕೆ ಕುಗ್ಗಿದೆ?
ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಕಾಂಗ್ರೇಸ್ ಪಕ್ಷದ ಸಂಘಟನೆ ಈಗ ಏಕಿಲ್ಲ ಎಂದು ಪರಿಶೀಲಿಸಿದರೆ ಪರಸ್ಪರ ಕಾಲು ಏಳೆಯುವ, ಕುತಂತ್ರ ಮಾಡುವವರಿಂದ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ.
ಸಮಥ೯ರನ್ನ, ಅಹ೯ರನ್ನ ಸದಾ ಮೂಲೆಗುಂಪು ಮಾಡಲು ಒಂದು ಗುಂಪು ತಯಾರಾಗಿ ಬಿಡುತ್ತದೆ ಅದನ್ನ ಅಧಿಕಾರ ಇದ್ದವರು ಪೋಷಿಸುತ್ತಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ತೀ.ನಾ.ಶ್ರೀನಿವಾಸ್ ರನ್ನ ತರಾತುರಿಯಿಂದ ಕೆಳಗಿಳಿಸಿದರು ಇದಕ್ಕೆ ಯಾವುದೇ ಕಾರಣ ತಿಳಿಸಲಿಲ್ಲ, ಲೋಕ ಸಭಾ ಮಧ್ಯOತರ ಚುನಾವಣೆಯಲ್ಲಿ ಸ್ಪದಿ೯ಸಲು ಅಭ್ಯಥಿ೯ಯೇ ಇಲ್ಲ ಎಂಬ ತೀಮಾ೯ನ ಮಾಡಿಬಿಟ್ಟರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯಥಿ೯ ಮಂಜುನಾಥ ಭಂಡಾರಿ ಸ್ಪದಿ೯ಸಿದ್ದಾಗ ಕಾ೦ಗ್ರೇಸ್ ಮುಖಂಡರುಗಳೇ ಜೆಡಿಎಸ್ ಅಭ್ಯಥಿ೯ ಗೀತಾ ಶಿವರಾಜ್ ಕುಮಾರರಿಗೆ ಬೆಂಬಲಿಸಿದ್ದರು.
ಈಗಿನ ಲೋಕಸಭಾ ಚುನಾವಣಾ ಸಂದಭ೯ದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅದ್ಯಕ್ಷರುಗಳನ್ನ ದಿಡೀರ್ ಆಗಿ ಬದಲಾಯಿಸಿದ್ದು ಅಲ್ಲಿ ಬಿನ್ನಮತಕ್ಕೆ ಕಾರಣ ಆಗಿದೆ.
ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿಯ ಸಂಗಮೇಶರಿಗೆ ಮಂತ್ರಿ ಸ್ಥಾನ ದೊರೆಯದಂತೆ ಮಾಡಿ ಮೂಲೆಗುOಪು ಮಾಡಲಾಗಿದೆ.
ಮುಖಂಡರುಗಳು ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾ ಗೋಷ್ಟಿ, ಸಭೆ ಸಮಾರಂಭದಲ್ಲಿ ಮುಖ ತೋರಿಸಿದರೆ, ಕಾಯ೯ಕತ೯ರು ಸೋಷಿಯಲ್ ಮೀಡಿಯಾದಲ್ಲಿ ಮುಖ ತೊರಿಸುತ್ತಾರೆ.
ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ಬಿಟ್ಟರೆ ಬೇರೆಲ್ಲ ಕ್ಷೇತ್ರಗಳನ್ನ ಕಳದು ಕೊಂಡಿರುವ ಕಾಂಗ್ರೇಸ್ ಪಕ್ಷಕ್ಕೆ 1775 ಬೂತ್ ಗಳಲ್ಲಿ ಸರಿಯಾಗಿ ಸಮಿತಿಗಳನ್ನು ಕೂಡ ರಚಿಸಲಾಗಿಲ್ಲವೆಂದರೆ ಇನ್ನು ಚುನಾವಣೆ ಹೇಗೆ ನಡೆಸ ಬಹುದು?
ಕಾಯ೯ಕತ೯ರಲ್ಲೂ ತಮ್ಮ ಪಕ್ಷದ ಅಭ್ಯಥಿ೯ ಇಲ್ಲದೇ ಇರುವುದು ಅವರ ಉತ್ಸಾಹಕ್ಕೆ ಭಂಗ ಬಂದಿದೆ, ಸಮ್ಮಿಶ್ರ ಅಭ್ಯಥಿ೯ಯ ಪಕ್ಷ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲೂ ಇಲ್ಲದಿರುವುದು, ಅನೇಕ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಕಚೇರಿಯೂ ಇಲ್ಲದಿರುವುದು ಕಾಂಗ್ರೇಸ್ ಕಾಯ೯ಕತ೯ರಿಗೆ ಹುಮ್ಮಸ್ಸು ತರುತ್ತಿಲ್ಲ.
ಗ್ರಾಮೀಣ ಪ್ರದೇಶ, ಪರಿಶಿಷ್ಟ ಕಾಲೊನಿಗಳಲ್ಲೂ ಮೋದಿ ಹವಾ, ಯುವ ಜನಾಂಗಗಳಲ್ಲಿ ಸಜಿ೯ಕಲ್ ಸ್ಟೈಕ್ ಉOಟು ಮಾಡಿರುವ ಮೊದಿ ಅಲೆ ಜಿಲ್ಲೆಯ ಕಾ೦ಗ್ರೇಸ್ ಕಾಯ೯ಕತ೯ರಿಗೆ ಚುನಾವಣೆ ಕಬ್ಬಿಣದ ಕಡಲೆ ಆಗಿದೆ.
ವಾಸ್ತವಾoಶ ಮರೆಮಾಚಿ ನಾವೇ ಗೆಲ್ಲುತ್ತೇವೆ, ಡಿಕೆ ಶಿವಕುಮಾರ್ ಮ್ಯಾಜಿಕ್ ಮಾಡುತ್ತಾರೆ, ನಮ್ಮದೆ ಸಕಾ೯ರ, ಕೊನೆಯ ದಿನದಲ್ಲಿ ಹಣದ ಶಕ್ತಿ ಎಂತಲ್ಲ ಹೇಳುತ್ತಾರಾದರೂ ಗ್ರಾಮೀಣ ಕಾಂಗ್ರೇಸ್ ಕಾಯ೯ಕತ೯ನಿಗೆ ಇರುವ ಅನುಮಾನ ಅಪನಂಬಿಕೆ ಹಾಗೇ ಉಳಿದು ಬಿಟ್ಟಿದೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment