Blog number 1127. ದಿನೇಶ್ ಶಿರವಾಳ ಮತ್ತು ಕೆಳದಿ ಈ.ರಮೇಶ್ ಬಂದಿದ್ದರು, ಅವರ ಹೋರಾಟದ ಕರಪತ್ರ ನೀಡಿದರು. ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪನವರು 1948 ರಲ್ಲಿ ಸ್ಥಾಪಿಸಿದ್ದ ರೈತ ಸಂಘ ಇವರೆಲ್ಲ ಸೇರಿ ಈಗ ಪುನರ್ ಸಂಘಟಿಸಿದ್ದಾರೆ.
#ದಿನೇಶ್_ಶಿರವಾಳ_ಮತ್ತು_ಕೆಳದಿ_ರಮೇಶ್_ನಿನ್ನೆ_ಬಂದಿದ್ದರು.
#ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರು_1_ಜನವರಿ_1948ರಲ್ಲಿ_ಸ್ಥಾಪಿಸಿದ್ದ
#ರೈತಸಂಘ_ಮರು_ಸ್ಥಾಪಿಸಿದ್ದಾರೆ.
#ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ಯುವ_ಪಡೆ_ಇವರದ್ದು.
https://youtu.be/0qhIfPHSBGs
ಸುಮಾರು 75 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ ಕಡಿದಾಳು ಮಂಜಪ್ಪ ಗೌಡರ ನೇತೃತ್ವದಲ್ಲಿ ಬಸವಾನಿ ರಾಮ ಶರ್ಮರು, ಹೆದ್ದೂರು ಹೆಚ್. ಹೆಚ್. ಮಂಜಪ್ಪ ಗೌಡರ ರೈತ ಸಂಘ .
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ ಮುಂತಾದ ಭಾಗಗಳಲ್ಲಿ ಕವಿ, ಸಮಾಜವಾದಿ ದಿನಕರ ದೇಸಾಯಿ ನೇತೃತ್ವದಲ್ಲಿನ ರೈತ ಸಂಘಗಳು ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು.
ಬಡ ರೈತರು, ಗೇಣಿದಾರರು ತಮ್ಮ ಅಸ್ತಿತ್ವಕ್ಕಾಗಿ ಸಂಘಟನೆಗೊಂಡು ಸಂಘರ್ಷ ನಡೆಸಲೇ ಬೇಕಾದ ಪರ್ವ ಕಾಲವದು ಆ ಸಂದರ್ಭದಲ್ಲೇ ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡರು ರೈತ ಸಮಾವೇಷ ನಡೆಸುತ್ತಾರೆ ಅದರಲ್ಲಿ ರಮಾನಂದ ಮಿಶ್ರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಭಾಗವಹಿಸುತ್ತಾರೆ ಇದೆಲ್ಲದರ ಪ್ರೇರಣೆಯಿಂದ ಸಾಗರ ತಾಲ್ಲೂಕಿನಲ್ಲಿ 1- ಜನವರಿ -1948 ರಲ್ಲಿ ಗಣಪತಿಯಷ್ಟ ರೈತ ಸಂಘದ ಸ್ಥಾಪನೆಯ ಸಭೆ ನಡೆಸುತ್ತಾರೆ.
ಈ ಸಭೆಗೆ ಕೆ.ಜಿ. ಒಡೆಯರ್, ಆನಂದಪುರಂನ ಬದರಿನಾರಾಯಣ ಅಯ್ಯಂಗಾರ್,ಬರದಳ್ಳಿ ಚೆನ್ನಬಸಪ್ಪ ಗೌಡರು, ಮರೂರು ರುದ್ರಪ್ಪ ಗೌಡರು, ಶಿರವಂತೆ ವೀರಭದ್ರಪ್ಪ ಗೌಡರು, ತುಂಬೆ ಸುಬ್ರಾಯರು, ಸಾಗರದ ಅಬ್ದುಲ್ ಕರಿಂ ಸಾಹೇಬರು, ಹಳದಿ ರಂಗಪ್ಪನವರು, ರಿಪ್ಪನ್ ಪೇಟೆ ಆನಂದರಾಯರು, ಕಾಂಗ್ರೆಸ್ ನಾಯಕ ದೇವಪ್ಪನವರು, ಸೀತಾರಾಮ ರಾವ್, ಸಾಗರದ ಖ್ಯಾತ ವಕೀಲ ಸ್ವಾತಂತ್ರ್ಯ ಹೋರಾಟಗಾರ ಮೃತ್ಯುಂಜಯ ಬಾಪಟ್ ರವರು, ವಕೀಲ್ ಬಸವಣ್ಣನವರು ಮುಂತಾದ ಪ್ರಮುಖ ನಾಯಕರು ಗಣಪತಿಯಪ್ಪರ ಆಹ್ವಾನದ ಮೇರೆಗೆ ಭಾಗವಹಿಸುತ್ತಾರೆ.
ದಿನಾಂಕ 4- ಜನವರಿ -1948 ರಂದು ಮರತ್ತೂರಿನಲ್ಲಿ ಇನ್ನೊಂದು ರೈತ ಸಂಘದ ಸಭೆ ಮೃತ್ಯುಂಜಯ ಬಾಪಟ್ ರ ಅಧ್ಯಕ್ಷತೆಯಲ್ಲಿ ನಡೆದು ಅವರ ಆದೇಶದಂತೆ ಡಿ.ಮೂಕಪ್ಪನವರು ಅಧ್ಯಕ್ಷರಾಗಿ, ಸಂಸ್ಥಾಪಕ ಗಣಪತಿಯಪ್ಪ ಕಾರ್ಯದರ್ಶಿ ಆಗುತ್ತಾರೆ ನಂತರ ನಡೆಯುವುದೇ ಐತಿಹಾಸಿಕ ಕಾಗೋಡು ರೈತ ಚಳವಳಿ.
ಇದೇ ರೈತ ಸಂಘ 70 ವರ್ಷದ ನಂತರ ಡಾ. ಹೆಚ್.ಗಣಪತಿಯಪ್ಪ ಸ್ಥಾಪಿತ 1948 #ತಾಲ್ಲೂಕ್_ರೈತ_ಸಂಘ_ಸಾಗರ ಅಂತ ಪುನರ್ ಸ್ಥಾಪನೆ ಆಗಿ ತಾಲ್ಲೂಕಿನಾದ್ಯಂತ ಹೊಸ ಯುವಕರ ಪಡೆ ಸಕ್ರಿಯವಾಗಿರುವುದು ನೋಡುತ್ತಿದ್ದೆ.
ನ್ಯಾಯಕ್ಕಾಗಿ ಗಾಂಧೀ ಮಾರ್ಗದಲ್ಲಿ ವಿನೂತನ ಹೋರಾಟಗಳು ಜನರ ಗಮನ ಸೆಳೆಯುತ್ತಿದೆ ಈ ಸಂಘಟನೆಯ ಅಧ್ಯಕ್ಷ ದಿನೇಶ್ ಶಿರವಾಳರ ಕಂಚಿನ ಕಂಠದ ಕರಾರುವಕ್ಕಾದ ಮಾತುಗಳು ಅವರ ಬಾಡಿ ಲಾಂಗ್ವೇಜ್ ನನಗೆ ಇಷ್ಟ ಆಗಿತ್ತು.
ಪರಸ್ಪರ ಬೇಟಿ ಆಗಿರಲಿಲ್ಲ ನಿನ್ನೆ ಮಧ್ಯಾಹ್ನ ದಿನೇಶ್ ಶಿರವಾಳ ಮತ್ತು ಇವರ ಜೊತೆ ಹೆಗಲು ಜೋಡಿಸಿರುವ ಇನ್ನೊಬ್ಬ ಹೋರಾಟಗಾರ ಕೆಳದಿಯ ಈ ರಮೇಶ್ ಬಂದಿದ್ದರು.
38 ವಷ೯ದ ದಿನೇಶ್ ಶಿರವಾಳ ಚಿಕ್ಕ೦ದಿನಿ೦ದ ತಾಯಿ ಜೊತೆ ತಾವು ಬೆಳೆದ ತರಕಾರಿ ತಲೆ ಮೇಲೆ ಹೊತ್ತು ನಿತ್ಯ ಸಾಗರದ ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದ, ಸುಖ ಸಾಗರ ಹೋಟೆಲ್ ನಲ್ಲಿ ಕೆಲಸ ಮಾಡಿದ್ದು, ಬೆಂಗಳೂರಲ್ಲಿ ಕರ್ನಾಟಕ ಬ್ರಿವರಿಸ್ ನಲ್ಲಿ ದಿನಗೂಲಿ ವೃತ್ತಿ, ನಂತರ ಟ್ರಾಕ್ಟರ್ ಖರೀದಿಸಿ ಬಾಡಿಗೆ, ಈಗ ಇವರ ತಂದೆ ನಾರಾಯಣಪ್ಪ ತಾಯಿ ಚೌಡಮ್ಮರ ಪಿತ್ರಾರ್ಜಿತ ಆಸ್ತಿ ನಾಲ್ಕು ಎಕರೆಯಲ್ಲಿ ಸ್ಟತಃ ಕೃಷಿ ಮಾಡುತ್ತಾ, ಏಳು ವರ್ಷದಿಂದ ತಮ್ಮ ಕನಸಿನ ಮನೆಯ ಗೋಡೆಗಳನ್ನು ಇವರು ಮತ್ತು ಇವರ ಪತ್ನಿ ಇಬ್ಬರೇ ಕಟ್ಟಿದ ತನಕ ಮಾತಾಡಿದೆವು.
ಶ್ರಮ ಜೀವಿ, ಕೃಷಿಕ ಮತ್ತು ಜನರ ಜೊತೆ ಬೆರೆಯುವ, ಓದುವ ಬರೆಯುವ ಜೊತೆಗೆ ಸಂಘಟನೆಯ ಚತುರತೆಗಳ ಹೊಂದಿರುವ ದಿನೇಶ್ ಶಿರವಾಳ ಅತ್ಯುತ್ತಮ ವಾಗ್ಮಿ ಕೂಡ ಆಗಿದ್ದಾರೆ.
ಇವರ ವಿಚಾರ ಸರಣಿಯ ವಿಚಾರವಂತ ಯುವ ಪಡೆಯನ್ನು ತಾಲ್ಲೂಕಿನ ಆದ್ಯಂತ ಸಂಘಟಿಸಿದ್ದಾರೆ. ನಾಳೆ ಸೋಮವಾರ ತಾಳಗುಪ್ಪದಿಂದ ಸಾಗರದ ತಾಲ್ಲೂಕ್ ಕಛೇರಿವರೆಗೆ ನ್ಯಾಯದ ನಡಿಗೆ ಎಂಬ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಇದರ ಕರಪತ್ರ ನೀಡಿದರು ಈ ಹೋರಾಟ ಅಲ್ಲಿನ ರೈತರ ದಾರಿ ಸಮಸ್ಯೆ ಮತ್ತು ಮಠಕ್ಕೆ ದಾನವಾಗಿ ನೀಡಿದ ಜಮೀನು ಸೈಟ್ ಆಗಿ ಮಾರಾಟದ ವಿರುದ್ಧವಂತೆ.
ರಾಮಕೃಷ್ಣ ಹೆಗಡೆಯವರು ಮತ್ತು ಗುಂಡೂರಾಯರು ಮುಖ್ಯಮಂತ್ರಿ ಆಗಿದ್ದಾಗ ಅವರ ವಿಶೇಷ ಕಾಯ೯ದರ್ಶಿಗಳಾಗಿದ್ದ ತಾಳಗುಪ್ಪದ ರಾಮಪ್ಪನವರ ಕುಟುಂಬ ಮಠಕ್ಕೆ ಐದು ಎಕರೆ ದಾನ ನೀಡಿತ್ತಂತೆ.
ಇತ್ತೀಚಿಗೆ ಬಡವರ ಪರ ಹೋರಾಟ ಮಾಡುವ ಯುವಕರೇ ಇಲ್ಲವಾಗಿದ್ದಾರೆ,ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದಾರೆ, ಅನ್ಯಾಯದ ವಿರುದ್ದ ಪ್ರತಿಭಟನೆ ಮಾಡಿದರೆ ಪಕ್ಷ - ನಾಯಕರ ವಿರೋದ ಕಟ್ಟಿಕೊಂಡು ನಷ್ಟ ಅನುಭವಿಸಬೇಕೆಂಬ ಭಯದಿಂದ ಅವರೆಲ್ಲ ಸೇಪರ್ ಜೋನ್ ಆದ ರಾಜಕೀಯ ವೇದಿಕೆಗಳಲ್ಲಿ ಕರಗಿ ಹೋಗಿದ್ದರಿಂದ ತಾಲ್ಲೂಕಿನಲ್ಲಿ ನ್ಯಾಯದ ಪರವಾದ ಕೂಗು ಕ್ಷೀಣವಾಗಿತ್ತು ಈ ಸಂದಭ೯ದಲ್ಲಿ ನನ್ನ ಗುರು ಗಣಪತಿಯಪ್ಪರ ತತ್ವ ಸಿದ್ಧಾಂತದ ರೈತ ಸಂಘ ಪುನಃ ಸಂಘಟಿಸಿ ನ್ಯಾಯದ ಪರ ಹೋರಾಟಕ್ಕೆ ತೊಡಗಿರುವ ದಿನೇಶ್ ಶಿರವಾಳ, ಕೆಳದಿ ರಮೇಶ್, ಗಣಪತಿಯಪ್ಪರ ಪುತ್ರ ಹೊಯ್ಸಳ ಮತ್ತು ಇವರ ಜೊತೆ ಕೈ ಜೋಡಿಸಿದ ಎಲ್ಲಾ ಜನಪರ ಕಾಳಜಿಯ ಹೋರಾಟಗಾರ ಯುವಕರಿಗೆ ಅಭಿನಂದಿಸುತ್ತೇನೆ.
Comments
Post a Comment