Blog number 1109. ಶಿವಮೊಗ್ಗ ಜಿಲ್ಲೆಯ ಆನೆ - ಚಿರತೆ ರೈತರ ಬೆಳೆ ಸಂರಕ್ಷಣೆಗಾಗಿ ಜೀವ ತ್ಯಾಗ .ಪಶ್ಚಿಮ ಘಟ್ಟದ ಕಾಡು ಪ್ರಾಣಿಗಳು ಜನವಸತಿ ಕೇಂದ್ರಗಳಿಗೆ ಪ್ರವೇಶಿಸುವುದು ಏಕೆ? ಜೀವ ಕಳೆದುಕೊಳ್ಳುವುದು ಯಾಕೆ? ದಟ್ಟ ಅರಣ್ಯದಲ್ಲಿ ವನ್ಯಜೀವಿಗಳಿಗೆ ಏನು ಕೊರತೆ ಆಗುತ್ತಿದೆ? ವನ್ಯ ಸಂರಕ್ಷಣ ಕಾನೂನು ಬಾರತೀಯ ವನ್ಯಜೀವಿಗಳ ಜೀವನ ಕ್ರಮ ಅಧ್ಯಯನ ಮಾಡಿ ಜಾರಿಗೆ ತಂದದ್ದಾ? ಅಥವ ವಿದೇಶಿ ಕ್ರಮದ ಅನುಕರಣೆಯ ?
#ಕಸ್ತೂರಿ_ರಂಗನ್_ವರದಿಯಲ್ಲಿ_ಅತಿ_ಹೆಚ್ಚು_ಭೂಪ್ರದೇಶ_ಅರಣ್ಯಕ್ಕೆ_ಸೇರಿದೆ
#ಈ_ಮದ್ಯೆ_ಈ_ಎರೆಡು_ಘಟನೆ_ನೀಡುವ_ಸಂದೇಶ_ಏನು?
#ಎರೆಡು_ತಿಂಗಳ_ಹಿಂದೆ_ಕಾಡಾನೆ_ರೈತರು_ಪಸಲು_ರಕ್ಷಣೆಗೆ_ಬೇಲಿಗೆ_ವಿದ್ಯುತ್_ನೀಡಿದ್ದರಿಂದ_ಮೃತ_ಪಟ್ಟಿದ_ಘಟನೆ.
#ನಿನ್ನೆ_ನಮ್ಮ_ಊರಿನ_ಸಮೀಪದಲ್ಲಿ_ಉರುಳಿಗೆ_ಸಿಲುಕಿ_ಸತ್ತ_ಚಿರತೆ.
70 ವಷ೯ದ ಹಿಂದಿನ ದಟ್ಟ ಅರಣ್ಯ ಶಿವಮೊಗ್ಗ ಜಿಲ್ಲೆಯಲ್ಲಿದ್ದಾಗ ಕಾಡಾನೆ , ನರಭಕ್ಷಕಗಳ ಹಾವಳಿ ಇದ್ದಿತ್ತೆಂಬ ಅನೇಕ ಘಟನೆಗಳು ದಾಖಲಾಗಿದೆ ಆದರೆ ಈಗ ಅರಣ್ಯ ಪ್ರದೇಶವನ್ನೆಲ್ಲ ಜನವಸತಿ ಕೇಂದ್ರಗಳಾಗಿಸಿ ಆಗಿದೆ.
ಸಂರಕ್ಷಿತ ಅರಣ್ಯದ ಗಡಿ ನಿಗದಿ ಆಗಿದೆ, ವನ್ಯ ಪ್ರಾಣಿಗಳ ಸಂರಕ್ಷಣೆಗಾಗಿ ಹಂದಿಯಂತ ಪ್ರಾಣಿಗಳನ್ನೂ ರೈತರು ಪಸಲು ಸಂರಕ್ಷಣೆಗಾಗಿ ಕೊಂದರೆ ಜೈಲಿಗೆ ಹಾಕುವ ಕಾನೂನಿದ್ದರೂ ಕಾಡಾನೆ, ಚಿರತೆಗಳು ಜೀವ ಕಳೆದ ಎರೆಡು ಘಟನೆಗೆ ಕಾರಣ ಏನು?
ಪಸಲು ರಕ್ಷಣೆಗಾಗಿ ಬೇಲಿಗೆ ವಿದ್ಯುತ್ ಹರಿಸಿದ ರೈತರಿಂದ ಆನೆ ಹತ್ಯೆ ಅಂತ ಜೈಲು ಕೇಸು ಮಾಡಬಹುದು ಅದೇ ರೀತಿ ಚಿರತೆ ಮೊಲ ಅಥವ ಕಾಡು ಹಂದಿಯ ಬೇಟೆಗಾಗಿ ಹಾಕಿದ್ದ ತಂತಿಯ ಉರುಳಿನಲ್ಲಿ ಸಿಲುಕಿ ನರಳಿ ಸತ್ತದ್ದಕ್ಕೆ ಕಾರಣರಾದವರನ್ನು ಬಂದಿಸಬಹುದು.
ಆದರೆ ಇಲ್ಲಿ ಸರಿಯಾದ ರೀತಿಯಲ್ಲಿ ಸಂಶೋದನೆ ಆಗಬೇಕು ಕಾಡು ಪ್ರಾಣಿಗಳು ಜನವಸತಿ ಕೇಂದ್ರದ ಒಳಗೆ ಬರಲು ಕಾರಣ ಏನು?
Comments
Post a Comment