Skip to main content

Blog number 1131. ಶಿವಮೊಗ್ಗದ ಕಾಮ್ರೇಡ್ ಲಿಂಗಪ್ಪನವರಿಗೆ 98ನೇ ವರ್ಷ ಪೂರೈಸಿದ ಸಮಯದಲ್ಲಿ ಸನ್ಮಾನ, ಕ್ರಾಂತಿ ಭಗತ್ ಪತ್ರಿಕೆ ಸಂಪಾದಕರು, ಸದಾ ಕೆಂಪು ಬಣ್ಣದ ಉಡುಗೆ ತೊಡುಗೆ ಎಲ್ಲದೂ ಕೆಂಪು.

#ಕಾಮ್ರೇಡ್_ಲಿಂಗಪ್ಪರ_ನಿಮಗೇನು_ಗೊತ್ತು.

#ಇದೇ_ತಿಂಗಳ_31ಕ್ಕೆ_ಸನ್ಮಾನವಿದೆ

#ಅವರಿಗೆ_98ರ_ಪ್ರಾಯ.

#ಶಿವಮೊಗ್ಗದ_ಕ್ರಾಂತಿ_ಭಗತ್_ಪತ್ರಿಕೆ_ಸಂಪಾದಕರು.

#ಸದಾ_ಸೂಟು_ಬೂಟು_ಹ್ಯಾಟು_ಎಲ್ಲದೂ_ಕೆಂಪು.

#ಒಂಟಿ_ದ್ವನಿಯ_ಏಕ_ವ್ಯಕ್ತಿ_ಹೋರಾಟ_ಇವರದ್ದು

#ಜೊತೆಗೆ_ಜಾಗಟೆ_ಶಂಖ

  ನಾನು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಸಭೆಗಳು ಶಿವಮೊಗ್ಗದ ಡಿಸಿಸಿ ಸಭಾಂಗಣದಲ್ಲಿ ನಡೆಯುತ್ತಿತ್ತು ಅಲ್ಲಿ ಪತ್ರಕರ್ತರ ಗ್ಯಾಲರಿಯಲ್ಲಿ ಕೆಂಪು ಟೋಪಿ, ಕೆಂಪು ಕೋಟು, ಕೆಂಪು ಟೈ, ಕೆಂಪು ಪ್ಯಾಂಟು, ಕೆಂಪು ಬೆಲ್ಟ್ ಮತ್ತು ಕೆಂಪು ಸಾಕ್ಸ್ ಬೂಟು ಮಾತ್ರ ಕಪ್ಪು ಧರಿಸಿದ್ದ ಕಾಮ್ರೆಡ್ ಲಿಂಗಪ್ಪ ಹೊಳೆಯುತ್ತಿದ್ದರು.
  ಇವರನ್ನ 1985ರಿಂದ ಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ಕ್ರಾಸಿನ ಸಮಾಜವಾದಿ ಪಿ.ಪುಟ್ಟಯ್ಯನವರ ಪ್ರಕೃತಿ ಮುದ್ರಣಾಲಯದಲ್ಲಿ ನೋಡುತ್ತಿದ್ದ ಪರಿಚಯ ನನ್ನದು ಇವರ #ಕ್ರಾಂತಿ_ಭಗತ್ ಪತ್ರಿಕೆ ಅಲ್ಲೇ ಮುದ್ರಣ ಆಗುತ್ತಿತ್ತು.
  ಆ ಸಂದರ್ಭದಲ್ಲಿ ಸೊರಬದ ರಾಮಚಂದ್ರರ ಸಂಪಾದಕತ್ವದ #ಒಂಟಿ_ಧ್ವನಿ ಕೂಡ ಪ್ರಕೃತಿ ಮುದ್ರಣಾಲಯದಲ್ಲಿ ಮುದ್ರಣ ಆಗುತ್ತಿತ್ತು ಬಹಶಃ ಪುಟ್ಟಯ್ಯನವರು ಉಚಿತವಾಗಿ ಮುದ್ರಿಸಿ ಕೊಡುತ್ತಿದ್ದರು.
   ಕಾಮ್ರೇಡ್ ಲಿಂಗಪ್ಪನವರು ಮತ್ತು A. V. ಶ್ರೀನಿವಾಸರು ಪುಟ್ಟಯ್ಯರ ಹತ್ತಿರ ತೆಗಿ... ತೆಗಿ... ಹತ್ತು ರೂಪಾಯಿ ಅಂತ ಅನ್ನುವುದು ಪುಟ್ಟಯ್ಯನವರು ತಮಾಷೆಯಾಗಿ ನಿಮ್ಮ ಹೆಸರಿನ ಲೆಖ್ಖದ ಪುಸ್ತಕ ನಿಮ್ಮ ಲೆಕ್ಕ ಬರೆದೂ ಬರೆದೂ ತುಂಬಿ ಹೋಯಿತು ಅನ್ನುತ್ತಾ ಹಣ ಕೊಡುವುದು ಅಲ್ಲಿ ಕುಳಿತಿರುತ್ತಿದ್ದ ಗೆಳೆಯರ ಹಾಸ್ಯದ ನಗು ನೋಡುತ್ತಿದ್ದೆ.
   ಒಮ್ಮೆ ಜಿಲ್ಲಾ ಪಂಚಾಯತ್ ಹೊರಗೆ ಯಾವುದೋ ಹೋರಾಟದ ಜನ ಕಾಯುತ್ತಿದ್ದರೂ ಅಧಿಕಾರಿಗಳು ಗಮನಿಸುತ್ತಿಲ್ಲ ಅಂತ ಕಾಮ್ರೇಡ್ ಲಿಂಗಪ್ಪನವರು ಜಿಲ್ಲಾ ಪಂಚಾಯತ್ ಸಭೆ ಒಳಗೇ ಜಾಗಂಟೆ ಬಾರಿಸುತ್ತಾ ಶಂಖ ಉದುವ ಮೂಲಕ ಗಮನ ಸೆಳೆದಾಗ ನಾವೆಲ್ಲ ಅಧಿಕಾರಿಗಳನ್ನು ಮನವಿ ಸ್ವೀಕರಿಸಲು ಒತ್ತಾಯಿಸಿ ಕಳಿಸಿದ ನೆನಪು.
  ಇವರದ್ದೇ ಕೆಂಪು ಬಣ್ಣದ ಮೋಪೆಡ್ ಇವರ 95ನೇ ವರ್ಷದ ಪ್ರಾಯದಲ್ಲೂ ಓಡಿಸುತ್ತಿದ್ದರು ಈಗ ಸಾಧ್ಯವಾಗುತ್ತಿಲ್ಲ ಇವರಿಗೆ 98 ನೇ ವರ್ಷ ಪೂರೈಸಿದ ಕಾರಣ ಇಟ್ಟುಕೊಂಡು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ದಿನಾಂಕ 31- ಡಿಸೆಂಬರ್ -2022ರ ಶನಿವಾರ ಬೆಳಿಗ್ಗೆ 11.45ಕ್ಕೆ ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಹೋಟೆಲ್ ಮಥುರಾ ಪ್ಯಾರಾಡೈಸ್ ಲಾಡ್ಜ್ ನ ಮೂರನೆ ಮಹಡಿಯಲ್ಲಿ ಸನ್ಮಾನ ಕಾರ್ಯಕ್ರಮ ಕಲ್ಲೂರು ಮೇಘರಾಜ್ ಹಮ್ಮಿಕೊಂಡಿದ್ದಾರೆ.
   ಇವತ್ತು ಆಹ್ವಾನ ಪತ್ರಿಕೆ ನೋಡಿದಾಗ ಇದೆಲ್ಲ ನೆನಪಾಯಿತು.
  ತುಮಕೂರಿನ ಗ್ರಾಮಾಂತರದ ಹುಟ್ಟೂರಿನಿಂದ ಬಾಲ್ಯದಲ್ಲೇ ಮುಂಬೈಗೆ ಹೋಗಿ ಅಲ್ಲಿ ಟ್ಟೆಲರಿಂಗ್‌ ಕಲಿಯುತ್ತಾ ಕಾರ್ಮಿಕ ಸಂಘಟನೆಗಳಲ್ಲಿ ತೊಡಗುತ್ತಾರೆ ಅಲ್ಲಿ ಕಮ್ಯೂನಿಸ್ಟ್ ಪಕ್ಷದ ತತ್ವ ಸಿದ್ಧಾಂತ ಅಳವಡಿಸಿಕೊಂಡವರು ತಮ್ಮ 98ನೇ ವಯಸ್ಸಿನವರೆಗೂ ಮುಂದುವರಿಸಿದ್ದಾರೆ.
   ಮುಂಬೈನಿಂದ ಶಿವಮೊಗ್ಗಕ್ಕೆ ಬಂದು ಮಲ್ಲಿಕಾರ್ಜುನ ಟಾಕೀಸ್ ಎದುರು ತಮ್ಮ ಟೈಲರಿಂಗ್‌ ವೃತ್ತಿ ಜೊತೆಗೆ ಪತ್ರಿಕೆ ಮತ್ತು ಕಾರ್ಮಿಕ ಹೋರಾಟ ಮಾಡುತ್ತಾ, ಕೃಷಿಯೂ ಮಾಡುತ್ತಾ ಸಮಾಜವಾದಿ ಶಾಂತವೇರಿ ಗೋಪಾಲಗೌಡ, ಬಂಗಾರಪ್ಪ, ಜೆ.ಹೆಚ್.ಪಟೇಲರು, ಕೊಣಂದೂರು ಲಿಂಗಪ್ಪ, ಕಾಗೋಡು ತಿಮ್ಮಪ್ಪರಿಂದ ಹಿಡಿದು ಈಗಿನ ಯಡೂರಪ್ಪರ ತನಕ ಎಲ್ಲಾ ಜಿಲ್ಲೆಯ ರಾಜಕಾರಣಿಗಳ ಒಡನಾಟ ಹೊಂದಿದ್ದಾರೆ.
  ಸದಾ ತಮಾಷೆ ಆಗಿ ಮಾತಾಡುತ್ತಾ ಒಬ್ಬ೦ಟಿಯಾಗಿ ವಿಬಿನ್ನವಾದ ಇವರ ಹೋರಾಟಗಳು ವಿಚಿತ್ರ ಅನ್ನಿಸಿದರು ಇವರ ವಿಚಾರಗಳು ಸ್ಪಷ್ಟವಾಗಿದ್ದು ಯಾರ ಗಮನ ಸೆಳೆಯ ಬೇಕೋ ಅವರ ಗಮನ ಸೆಳೆದು ಸಂತ್ರಸ್ಥರಿಗೆ ನ್ಯಾಯ ಕೊಡಿಸುವುದರಲ್ಲಿ ಸಪಲರಾಗಿರುತ್ತಾರೆ.
 ಶಿವಮೊಗ್ಗ ಜಿಲ್ಲಾ ಪಂಚಾಯತ್ CEO  ಐಎಎಸ್ ಶಶಿಕಾಂತ್ ಸೆಂಥಿಲ್ ರಾಜಿನಾಮೆ ಸ್ವೀಕರಿಸಬಾರದೆಂಬ ಇವರು ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಮೆಟ್ಟಿಲ ಮೇಲೆ ಒಬ್ಬಂಟಿ ಹೋರಟದ ಚಿತ್ರ ಪತ್ರಕರ್ತ D. P. ಸತೀಶ್ ರ ಟ್ವಿಟರ್ ನಲ್ಲಿ ಹಾಕಿದ್ದು ವೈರಲ್ ಆಗಿತ್ತು ಅಂದರೆ ಕಾಮ್ರೇಡ್ ಲಿಂಗಪ್ಪ ಎಂತವರೆಂದು ಅರ್ಥವಾದೀತು.
  ಈ ಸಂದರ್ಭದಲ್ಲಿ ಕಾಮ್ರೇಡ್ ಲಿಂಗಪ್ಪನವರು ಶತಾಯುಷಿಗಳಾಗಲಿ, ಆರೋಗ್ಯವಂತರಾಗಿರಲಿ ಮತ್ತು ಅವರ ಸನ್ಮಾನ ಕಾರ್ಯಕ್ರಮ ಅವರಿಗೆ ಹೆಚ್ಚಿನ ಹುಮ್ಮಸ್ಸು ನೀಡಲಿ ಎಂದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...