Blog number 1153. ನಮ್ಮ ಊರ ಗ್ರಾಮ ಪಂಚಾಯತ್ ಅಧ್ಯಕ್ಷರು ಜೆ. ಶಿವಾನಂದ ನನ್ನ ಆಫೀಸಿನಲ್ಲಿ,ಇವರ ಕುಟುಂಬ ಶರಾವತಿ ಮುಳುಗಡೆ ಸಂತ್ರಸ್ಥರದ್ದು, ಇವರ ತಂದೆ ಜಟ್ಟಪ್ಪ ಇವರಿಗೆ ಬಗರ್ ಹುಕುಂ ಜಮೀನು ಮಂಜೂರಾಗಿದ್ದು 1993ರಲ್ಲಿ.
#ಗೇರುಬೀಸಿನ_ಶಿವಾನಂದ_ನೂತನ_ಅಧ್ಯಕ್ಷರು.
#ಸಾಗರ_ತಾಲ್ಲೂಕಿನ_ಯಡೇಹಳ್ಳಿ_ಗ್ರಾಮಪಂಚಾಯತ್
#ಅನೇಕ_ವಿಚಾರಗಳಲ್ಲಿ_ಮುಂದಿರುವ_ಯಡೇಹಳ್ಳಿ_ಗ್ರಾಮಪಂಚಾಯತ್
ಕೆಳದಿ ಅರಸರು ಕಿರಾತಕರಿಂದ ಯಡೇಹಳ್ಳಿ ಕೋಟೆ ವಶಪಡಿಸಿಕೊಂಡರೆಂಬ ಇತಿಹಾಸ ಇದೆ ನಂತರ ರಾಜ ವೆಂಕಟಪ್ಪ ನಾಯಕ ಮತ್ತು ರಂಗೋಲಿ ಪ್ರವೀಣೆ ಬೆಸ್ತರ ಕುಲದ ಚಂಪಕಾಳ ದುರಂತ ಪ್ರೇಮದ ಸ್ಮಾರಕ ಚಂಪಕ ಸರಸ್ಸು ನಿರ್ಮಾಣ ತಾಜ್ ಮಹಲ್ ಗಿಂತ ಮೊದಲೇ ನಿಮಾ೯ಣ ಮಾಡಿ ಆನಂದಪುರಂ ಎಂದು ನಾಮಕರಣವಾಯಿತು.
ಆಗಿನಿಂದಲೂ ಈ ಪ್ರದೇಶ ಮಾತ್ರ ಯಡೇಹಳ್ಳಿ ಆಗಿಯೇ ಉಳಿಯಿತು, ಯಡೇಹಳ್ಳಿ ಮತ್ತು ಆನಂದಪುರಂ ಎಂದು ವಿಭಜಿಸುವ ಪುರಾತನ ತಾವರೆಕೆರೆ (ಈಗಿನ ಗೌರಿಕೆರೆ) ಇದೆ ಇದರ ವಿಶೇಷ ಅಂದರೆ ಕೆರೆ ತುಂಬಿ ಕೋಡಿ ಬಿದ್ದು ಶರಾವತಿ ನದಿ ಸೇರಿ ಜೋಗದ ಜಲಪಾತ ಸೇರಿ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರಿದರೆ ಈ ಕೆರೆಯ ತೂಬಿನ ನೀರು ಅಂಬ್ಲಿಗೊಳ ಜಲಾಶಯ ಸೇರಿ ನಂತರ ವರದಾ ನದಿ ಮೂಲಕ ತುಂಗಭದ್ರ ಡ್ಯಾಂ ಸೇರಿ ಆಂದ್ರ ಪ್ರದೇಶದಲ್ಲಿ ಹರಿದು ಕೃಷ್ಣಾ ನದಿ ಮೂಲಕ ಬಂಗಾಳ ಕೊಲ್ಲಿಯ ಸೇರುವ ಸಮತೋಲದ ತಾವರೆಕೆರೆ ನೀರು ಎರೆಡು ಸಮುದ್ರ ಸೇರುವ ಆಪರೂಪದ ವಿಶೇಷತೆ ಹೊಂದಿದೆ.
ಇಲ್ಲಿ ಮೂರು ಅಕ್ಕಿ ಗಿರಣಿ, ಪೆಟ್ರೋಲ್ ಪಂಪ್, ಮೂರು ಬೈಕ್ ಶೋ ರೂಂ, ಎರೆಡು ಚರ್ಚ್, ಒಂದು ಮಸೀದಿ, ಮೂರು ದೇವಸ್ಥಾನ, ಮೂರು ಬ್ಯಾಂಕ್, ಒಂದು ಖಾಸಾಗಿ ಪದವಿ ಕಾಲೇಜ್, ಪ್ರೌಡ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಇಲ್ಲಿದೆ.
777 ಎಕರೆ ಪ್ರದೇಶದಲ್ಲಿ ದೇಶದಲ್ಲೇ ಪ್ರಥಮವಾದ ಅರಣ್ಯದ ಮಧ್ಯೆ ಇರುವ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಇದೆ ಗ್ರಾಮದ ಇರುವಕ್ಕಿಯಲ್ಲಿದೆ.
ರಾಜ್ಯದಲ್ಲೇ ಪ್ರಥಮ ಬಗರ್ ಹುಕುಂ ಹಕ್ಕು ಪತ್ರ ವಿತರಣೆ ಮಾಡಿದ ಗ್ರಾಮ ಇದು.
ಯಡೇಹಳ್ಳಿಯ ಎರೆಡು ಶತಮಾನದ ಹಿಂದಿನ ಬ್ರಿಟೀಷ್ ಬಂಗ್ಲೆ ಈಗ ಪ್ರವಾಸಿ ಮಂದಿರವಾಗಿದೆ, ಇದು ಆನಂದಪುರಂ ತಾಲ್ಲೂಕ್ ಆಗಿದ್ದಾಗ (1835 ರಿಂದ 1885 ರ ವರೆಗೆ ) ತಾಲ್ಲೂಕ್ ಕಛೇರಿ ಆಗಿತ್ತು, ಸಾಗರ ತಾಲೂಕಿನ ಪ್ರಥಮ ನ್ಯಾಯಾಲಯ ಇಲ್ಲೇ ಇತ್ತು, ಶರಾವತಿ ಸಂತ್ರಸ್ಥರ ಪರಿಹಾರದ ನ್ಯಾಯಾಲಯ ಕೂಡ ಇದಾಗಿತ್ತು, ಬಂಗಾರಪ್ಪನವರು ಯುವ ವಕೀಲರಾಗಿ ಶರಾವತಿ ಸಂತ್ರಸ್ಥರ ಪರ ಇಲ್ಲಿ ವಕಾಲತ್ತು ವಹಿಸಿ ಭಾಗವಹಿಸಿದ್ದರು.
ಪ್ರಸಿದ್ಧ ಆರ್ಕಾಲಾಜಿಸ್ಟ್ ಬೆಂಜಮನ್ ರೈಸ್, ಪ್ರಖ್ಯಾತ ನರಭಕ್ಷಕ ಹುಲಿ ಶಿಕಾರಿಗಾರ ಕೆನತ್ ಆಂಡರ್ಸನ್ ಈ ಬ್ರಿಟಿಶ್ ಬಂಗಲೆಯಲ್ಲಿ ತಂಗಿದ್ದ ದಾಖಲೆ ಇದೆ.
ಈ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಗೇರ್ ಬೀಸ್ ಶಿವಾನಂದ ಶ್ರಮ ಜೀವಿ, ತನ್ನ ಸ್ವಂತ ಶ್ರಮದಿಂದ ಇವತ್ತು 12 ಕ್ವಿಂಟಾಲ್ ಕೆಂಪಡಿಕೆ ಪಡೆಯುವ ಅಡಿಕೆ ಬೆಳೆಗಾರ ಆಗಿದ್ದಾರೆ.
ಇವರ ಕುಟುಂಬ ಶರಾವತಿ ಮುಳುಗಡೆ ಸಂತ್ರಸ್ಥರದ್ದು ಇವರ ತಂದೆ ಜಟ್ಟಪ್ಪ ಮಡೆನೂರು ಡ್ಯಾಂ ನಲ್ಲಿ ಇದ್ದಿದ್ದೆಲ್ಲ ಕಳೆದುಕೊಂಡು ಗೇರು ಬೀಸಿನ ಹೊಳೆ ದಂಡೆಗೆ ಜೀವನ ಆರಸಿ ಬಂದವರು ಆಗ ಈ ಊರಿಗೆ ರಸ್ತೆ ಇಲ್ಲ, ಶಾಲೆ ಇಲ್ಲ ಕರೆಂಟ್ ಇಲ್ಲವಾಗಿತ್ತು, ಜಟ್ಟಪ್ಪ ಈ ಭಾಗದಲ್ಲಿ ದೇವರ ಗಾಡಿಗರಾಗಿ ಜನರ ಗೌರವಗಳಿಸಿದ್ದರು.
ನಮ್ಮ ತಂದೆ ಆನಂದಪುರಂ ವಿಲೇಜ್ ಪಂಚಾಯತ್ ಸದಸ್ಯರಾದಾಗ ತಿರುಮಲಾಚಾರ್ ಚೇರ್ ಮನ್ ,ವೈಸ್ ಚೇರ್ ಮನ್ ಟಿಪ್ ಟಾಪ್ ಇಬ್ರಾಹಿ೦ ಸಾಹೇಬರು (ಈಗ ಸಾಗರದ ಟಿಪ್ ಟಾಪ್ ಸಂಸ್ಥೆ ಮಾಲಿಕರು )ಆಗ ಶಾಸಕರು ಎಲ್ ಟಿ ತಿಮ್ಮಪ್ಪ ಹೆಗ್ಗಡೆ ಇವರೆಲ್ಲರ ಸಹಕಾರದಿಂದ ಗೇರ್ ಬೀಸಿಗೆ ಸೇತುವೆ ಶಾಲೆ ಬಂದಿತ್ತು.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಕರೆಂಟು, ರಸ್ತೆ, ಮತ್ತು ಬಗರ್ ಹುಕುಂ ಹಕ್ಕು ಪತ್ರ, ಬಾವಿಗಳು, ಪಿಕ್ ಅಪ್ ಎಲ್ಲಾ ಮಾಡಲು ಸಾಧ್ಯವಾಯಿತು ಅವಾಗ ಕಾಗೋಡು ತಿಮ್ಮಪ್ಪ ಈ ಕ್ಷೇತ್ರದ ಶಾಸಕರಾಗಿದ್ದರು.
ಈ ಪಂಚಾಯತ್ ಕೇಂದ್ರ ಸ್ಥಳದಲ್ಲಿ ನನ್ನ ಮನೆ ಇದೆ, ನನ್ನ ಎಲ್ಲಾ ರಾಜಕೀಯ ಹೋರಾಟದಲ್ಲಿ ನನ್ನ ಜೊತೆ ಇದ್ದ ಯುವಕರೆ ಈಗ ಇಲ್ಲಿನ ಗ್ರಾಮ ಪಂಚಾಯತ್ ಆಡಳಿತ ಮತ್ತು ವಿರೋದ ಪಕ್ಷದಲ್ಲಿದ್ದಾರೆ ಆದ್ದರಿಂದ ಗೆದ್ದವರು ಮತ್ತು ಸೋತವರೂ ನನ್ನ ಆಪ್ತ ಶಿಷ್ಯರೆ.
ಈಗಿನ ಅಧ್ಯಕ್ಷ ಶಿವಾನಂದ್, ಹಿಂದಿನ ಅವಧಿ ಅಧ್ಯಕ್ಷ ಇರುವಕ್ಕಿ ಗಣಪತಿ, ಅವಕಾಶ ವಂಚಿತ ನಾರಿ ಲೋಕಪ್ಪ , ಗೇರ್ ಬೀಸ್ ನಟರಾಜ, ವಕೀಲರಾದ ಘಂಟಿನ ಕೊಪ್ಪದ ಶಿವಕುಮಾರ್ ನನ್ನ ಜೊತೆ ಪಂಜಾಬ್ ಪ್ರವಾಸ ಮಾಡಿದ ಕಿರಿಯ ಮಿತ್ರ.
ಯಾವತ್ತೂ ಬರುವ ಶಿವಾನಂದ್ ಇವತ್ತು ನಮ್ಮ ಊರಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಂದಿದ್ದರಿಂದ ನಮ್ಮ ಸಂಸ್ಥೆ ಪರವಾಗಿ ಗೌರವ ನೀಡುವ ಸಂದರ್ಭದಲ್ಲಿ ವಿಶ್ವವ್ಯಾಪಿ ಗಣೇಶ ಪ್ರಸಿದ್ಧಿಯ ಗೋವರ್ದನ ಅಂಕೋಲೆಕರ್ ಅವರಿಂದ ಸನ್ಮಾನಿಸಿದೆವು, ನನ್ನ ಸಹೋದರ ನಾಗರಾಜ್, ಇನ್ನೊಬ್ಬ ಗೆಳೆಯ ಗೇರ್ ಬೀಸ್ ನಾಗರಾಜ್ ಜೊತೆಗೆ ಇದ್ದರು.
Comments
Post a Comment