Blog number 1120. ತೀರ್ಥಹಳ್ಳಿಯ ಟಿ.ಕೆ.ರಮೇಶ್ ಶೆಟ್ಟರ ಬೇಟಿ ಇವತ್ತು ಆಯಿತು, ಕಳೆದ ವರ್ಷ ಸಾಧ್ಯವಾಗಿರಲಿಲ್ಲ ನಮ್ಮಿಬ್ಬರ ಪರಿಚಯ ಮಾಡಿಸುವ ಆರ್.ಎಂ. ಧರ್ಮಕುಮಾರ್ ಪ್ರಯತ್ನ.
#ಮುಂಗಾರು_ಪತ್ರಿಕೆ_ವಡ್ಡರ್ಸೆ_ರಘುರಾಮ_ಶೆಟ್ಟರ_ಶಿಷ್ಯರು
#ತೀರ್ಥಹಳ್ಳಿ_ಪತ್ರಕರ್ತರ_ಸಂಘದ_ಮಾಜಿ_ಅಧ್ಯಕ್ಷರು
#ಹಾಲಿ_ತೀರ್ಥಹಳ್ಳಿ_ತಾಲ್ಲೂಕ್_ಸಾಹಿತ್ಯ_ಪರಿಷತ್_ಅಧ್ಯಕ್ಷರು.
#ಇವತ್ತು_ನನ್ನ_ಅವರ_ಬೇಟಿ
ಟಿ.ಕೆ.ರಮೇಶ್ ಶೆಟ್ಟರ ಪೇಸ್ ಬುಕ್ ಲೇಖನ ಎಲ್ಲಾ ನೋಡುತ್ತಿರುತ್ತೇನೆ ತುಂಬಾ ಆಸಕ್ತಿದಾಯಕವಾಗಿರುವ ಅವರ ಲೇಖನಗಳಿಂದ ಆಪ್ತರೆನ್ನಿಸಿದ್ದರೂ ಮುಖತಃ ಪರಿಚಯ ಆಗಿರಲಿಲ್ಲ.
ನಮಗಿಬ್ಬರಿಗೂ ಕಾಮನ್‌ಪ್ರೆಂಡ್ ಆರ್.ಎಂ.ದರ್ಮಕುಮಾರ್ ತೀರ್ಥಹಳ್ಳಿಯವರಾದರೂ ನಮ್ಮ ಊರಿನಲ್ಲಿ ತುಂಬಾ ಪ್ರಸಿದ್ಧಿ ಪಡೆದ ಜನಾನುರಾಗಿ ಕೃಷಿ ಅಧಿಕಾರಿ.
ಒಮ್ಮೆ ದರ್ಮಕುಮಾರ್ ಮತ್ತು ಟಿ.ಕೆ.ರಮೇಶ್ ಶೆಟ್ಟರು ಸಮೀಪದ ಹೊಸಗುಂದದ ದೇವಸ್ಥಾನದಲ್ಲಿ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಹೋಗುವಾಗ ನಮ್ಮಲ್ಲಿಗೆ ಬಂದಾಗ ನಾನಿರಲಿಲ್ಲವಾದ್ದರಿಂದ ಕಳೆದ ವರ್ಷ ಬೇಟಿ ಆಗಿರಲಿಲ್ಲ.
ಇವತ್ತು ಟಿ.ಕೆ.ರಮೇಶ್ ಶೆಟ್ಟರ ಕುಟುಂಬ ಸಾಗರದ ಅವರ ಆಪ್ತರ ಮದುವೆಗೆ ಹೋದವರು ಸಂಜೆ ನಮ್ಮಲ್ಲಿಗೆ ಬಂದಿದ್ದರು, ಮೊನ್ನೆಯಷ್ಟೆ ನಮ್ಮಲ್ಲಿಗೆ ಬಂದಿದ್ದ ಅರವಿಂದ ಚೊಕ್ಕಾಡಿಯವರು ಟಿ.ಕೆ.ರಮೇಶ್ ಶೆಟ್ಟರ ಬಗ್ಗೆ ಮಾತಾಡಿದ್ದರು.
ತೀರ್ಥಹಳ್ಳಿಯ ಅವರ ಅಂತರಂಗ ವಾರಪತ್ರಿಕೆ, ಅವರ ಪೆಟ್ರೋಲ್ ಪಂಪ್, ಅವರ ಮನೆಯ ತುಂಗಾ ನದಿಯ ಪಕ್ಕದ ಇವರು ನಿರ್ಮಿಸಿದ ಅಟ್ಟಣಿಗೆ, ಮುಂಗಾರು ಪತ್ರಿಕೆ, ರಘುರಾಮ ಶೆಟ್ಟರು, ತೀರ್ಥಹಳ್ಳಿ ಛಲಗಾರ ಪತ್ರಿಕೆ ಸಂಪಾದಕರಾಗಿದ್ದ ಗಣಪತಿಯವರು, ಈಗ ಪತ್ರಿಕೆ ನಡೆಸುವ ಅವರ ಪುತ್ರ ನಿಶಾ೦ತ್ , ಲಕ್ಷ್ಮೀಷ್ ಪತ್ರಿಕೆ ಲಕ್ಷ್ಮೀಷ್ ಹೀಗೆ ಅನೇಕ ವಿಚಾರ ಪರಿಚಯದ ಆಪ್ತತೆಯಲ್ಲಿ ಬಂದು ಹೋಯಿತು.
ಟಿ.ಕೆ.ರಮೇಶ್ ಶೆಟ್ಟರ ಪರಿಚಯ ತುಂಬಾ ಸಂತೋಷ ತಂದಿತು.
Comments
Post a Comment