Blog number 1186. ಎಸ್ ಆರ್ ಕೃಷ್ಣಪ್ಪ ಅವರನ್ನು SRK ಎಂದೇ ಅವರ ವಿದ್ಯಾರ್ಥಿಗಳು ಕರೆಯುತ್ತಾರೆ, ಇವರು ಆನಂದಪುರಂನ ಸಮಸ್ತ ಅಭಿವೃದ್ದಿಯ ಪ್ರೇರಕರಾಗಿದ್ದರು.
#ಎಸ್.ಆರ್.ಕೃಷ್ಣಪ್ಪ.
#ಅವರ ಅಭಿನಂದನಾ ಗ್ರಂಥದಲ್ಲಿ ನನಗೆ ಬರೆಯಲು ಸಿಕ್ಕಿದ ಅವಕಾಶ ನನ್ನ ಪುಣ್ಯ ಎಂದು ಬಾವಿಸಿದ್ದೇನೆ.
ಹಾಗಂತ ನಾನು ಅವರ ಅಭಿನಂದನಾ ಗ್ರಂಥದಲ್ಲಿ ಬರೆದ ಲೇಖನ.
ಅವರನ್ನ ನಮ್ಮ ಬಾಲ್ಯದಲ್ಲಿ ದೂರದಿಂದಲೇ ನೋಡಿದ್ದೆ ಆದರೆ ಅವರ ಜೊತೆ ಕುಳಿತು ಮಾತಾಡಿದ್ದು ಇತ್ತೀಚಿಗೆ, ಅವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಂದಭ೯ ಸಂಪಾದಕರಾದ ಎಸ್.ಎಂ.ಗಣಪತಿ ನನ್ನದೊಂದು ಲೇಖನ ಕೇಳಿದ್ದರು, ಆಗ ನಾನು ನನ್ನ ಅಣ್ಣ ಮತ್ತು ಅಕ್ಕಂದಿರಿಗೆ ಅವರು ಗುರುಗಳು,ನಾನು ಆ ವಯಸ್ಸಿಗೆ ಬರುವಾಗ ವಗ೯ವಾಗಿದ್ದರು ಅಂದೆ ಪರವಾ ಇಲ್ಲ ನೀವು ಜಿಲ್ಲಾ ಪಂಚಾಯತ್ ಸದಸ್ಯರಾದವರು SRK ಬಗ್ಗೆ ನಿಮ್ಮ ಅನುಭವ ಬರೆಯಿರಿ ಅಂದರು.
ನಾನು ಒಂದು ಲೇಖನ ಬರೆದೆ, ಅದರಲ್ಲಿ ನಮ್ಮ ಬಾಲ್ಯದಲ್ಲಿ ಅವರು ಯಾವ ರೀತಿ ಪ್ರೇರಣೆ ಆದರು ಮತ್ತು ಅವರು ಕರೆಸುತ್ತಿದ್ದ ವಿಷೇಷ ಸಾದಕರನ್ನ ನೋಡಿ ಅವರ ಮಾತು ಕೇಳಿ ನಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆ ಆಯಿತು ಹಾಗು ಇಡೀ ಆನಂದಪುರ ಆ ಕಾಲದಲ್ಲಿ ಸಣ್ಣ ಹಳ್ಳಿ ಇಲ್ಲಿನ ಬದರಿನಾರಾಯಣ್ ಅಯ್ಯOಗಾರ ಕುಟುಂಬ ದೊಡ್ಡ ಇನಾಂದಾರರು, ಅವರು ಶಾಸಕರು, ಸಂಸದರು ಮತ್ತು ವಿದ್ಯಾಮಂತ್ರಿಗಳಾದವರು, ಅವರ ಕುಟುಂಬಕ್ಕೆ ಶೃಂಗೇರಿ ಮಠಕ್ಕೆ ವಷ್೯ಕ್ಕೆ 2 ಟನ್ ಗಂದದ ಮರ ಹೋಮ ಹವನಗಳಿಗೆ ನೀಡಲೆಂದೆ 2000 ಎಕರೆ ಕಾಡು ಮೈಸೂರು ಅರಸರು ನೀಡಿದ್ದರು.ಕಾಲ ಬದಲಾದಂತೆ ಅವರಿಗೆ ಆನಂದಪುರಂ ಅಭಿವೃದ್ಧಿಗೆ SRK ಯವರಂತ ಒಬ್ಬ ಗುರಿಕಾರ ಆ ಸಂದಭ೯ದಲ್ಲಿ ಬೇಕಿತ್ತು ಹಾಗಾಗಿ ಇವರ ದೂರದಶಿ೯ ಚಿಂತನೆ ಅಯ್ಯOಗಾರರ ಅಧಿಕಾರ ಸೇರಿ ಆನಂದಪುರಂ ಇವತ್ತು ಮಾದರಿ ಗ್ರಾಮವಾಗಿದೆ ಅನ್ನುವ ಅಥ೯ದ ಲೇಖನ ಬರೆದಿದ್ದೆ ಮತ್ತು ಅದನ್ನ ಸಂಬ೦ದ ಪಟ್ಟವರಿಗೆ ಕಳಿಸಿ ಮರೆತಿದ್ದೆ.
ಈ ಲೇಖನ ಅವರಿಗೆ ಹಿಡಿಸಿತಂತೆ ಹಾಗಾಗಿ ಅವರು ನನ್ನ ಭೇಟಿ ಮಾಡಲು ನನ್ನ ಕಛೇರಿಗೆ ಬಂದಾಗ ನನಗೆ ಏನು ಹೇಳಬೇಕು ಅಂತ ತೊಚಲಿಲ್ಲ, ಅವರ ಕಾಲಿಗೆ ನಮ್ಮಣ್ಣ, ಅವರ ಅನೇಕ ಶಿಷ್ಯರು ಕಾಲಿಗೆ ಬಿದ್ದು ಆಶ್ರೀವಾದ ಬೇಡಿದಾಗ ಅವರಲ್ಲಿ ನಾನೊಬ್ಬನಾಗಿದ್ದೆ.
ಇದೇ ಜನವರಿ 29ಕ್ಕೆ 2017ಕ್ಕೆ ಅಭಿನಂದನಾ ಗ್ರಂಥ ಬಿಡುಗಡೆ ಅಂತ ಕರೆಯೋಲೆ ಬಂದಿದೆ ಜೊತೆಯಲ್ಲಿ ಅಭಿನಂದನಾ ಗ್ರಂಥ ಅದರಲ್ಲಿ ನನ್ನ ಲೇಖನ 9ನೆ ಪುಟದಲ್ಲಿ ಅಗ್ರ ಲೇಖನವಾಗಿ ಪ್ರಕಟಿಸಿದ್ದಾರೆ.
ಈ ಗ್ರಂಥದಲ್ಲಿ ಆನಂದಪುರಂನಲ್ಲಿನ ಅವರ ಅನುಭವ ದಾಖಲಿಸಿದ್ದಾರೆ ನನಗೂ ಗೊತ್ತಿರಲಿಲ್ಲದ ವಿಷಯ ಆದರಲ್ಲಿದೆ, ಭಾರತದ ಮೊದಲ ಒನ್ ಮ್ಯಾನ್ ಬ್ಯಾಂಕ್ ಆನಂದಪುರಂಗೆ ಮಂಜೂರಾಗಿತ್ತು ಅದರ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಬಂದಿದ್ದರು ಅಂತ.
ಇನ್ನೂ ಅನೇಕ ವಿಷಯ ಅದರಲ್ಲಿದೆ ಅವರ ಬಲ್ಲವರು ಮತ್ತು ಆನಂದಪುರಂನ ಇತಿಹಾಸದ ಬಗ್ಗೆ ಆಸಕ್ತಿ ಇದ್ದವರು ಈ ಪುಸ್ತಕ ಖರೀದಿಸಿ ಓದಬಹುದು, ನಾನು 10 ಪುಸ್ತಕ ಖರೀದಿ ಮಾಡಿದ್ದೇನೆ ಎಲ್ಲಾ ಪ್ರಸ್ತಕದಲ್ಲೂ ಅವರು ಸಹಿ ಮಾಡಿದ್ದಾರೆ ಅವರ ವಿದ್ಯಾಥಿ೯ಗಳಾದವರಿಗೆ ಕಳಿಸಿ ಕೊಟ್ಟಿದ್ದೆನೆ.
ಈ ಅಭಿನಂದನಾ ಗ್ರಂಥದಲ್ಲಿ ನಾ ಬರೆದ ಲೇಖನ ಮತ್ತು ಅವರು ಬರೆದ ಆನಂದಪುರದಲ್ಲಿನ ಅವರ ಅನುಭವದ ಲೇಖನ ಲಗತ್ತಿಸಿದ್ದೇನೆ.
Comments
Post a Comment