Skip to main content

Blog number 1163. ನಮ್ಮೂರ ಗನ್ನಿ ಸಾಹೇಬರಿಗೆ ಮೆಕ್ಕಾ ಯಾತ್ರೆ ಮಾಡಿಸುವಾಗ ಎದುರಾದ ಸವಾಲುಗಳು.

#ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು.#
    ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ.
      ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ  ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ.
     2006ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಎಂಬ ನಮ್ಮ ಊರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿ ಪ್ರತಿಷ್ಟಾಪನೆ ನಡೆಯಿತು, ಅಲ್ಲಿವರೆಗೆ ಇಡಿ ಹೋಬಳಿಯಲ್ಲಿ ಗಣಪತಿ ದೇವಸ್ಥಾನವೇ ಇರಲಿಲ್ಲ, ಯಡೇಹಳ್ಳಿಯಲ್ಲಿ ಎರಡು ಚಚ್೯ ಮತ್ತು ಒಂದು ಮಸೀದಿ ಇತ್ತು, ಗಣಪತಿ ದೇವಸ್ಥಾನದ ದೇವರ ವಿಗ್ರಹ ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಿಂದ ಕೃಷ್ಣ ಶಿಲೆಯಲ್ಲಿ ಕೆತ್ತಿಸಿ ತಂದಾಗ ವಿಗ್ರಹವನ್ನ ಯಡೇಹಳ್ಳಿ ವೃತ್ತದಿಂದ ಡಾ.ವಿಶ್ವಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ದೇವಸ್ಥಾನದವರೆಗೆ ನಾನು ಗನ್ನಿಸಾಹೇಬರು ಒಟ್ಟಾಗಿ ಹೋದೆವು.          ಅಲ್ಲಿ ಕ್ರಿಶ್ಚಿಯನ್ ಅಂದ ಕಲಾವಿದ ಒಲೆರಿಯನ್ ಡಿಸೋಜ ಮತ್ತು ದಲಿತ ಕಲಾವಿದ ಬೋರಯ್ಯ ಸಣ್ಣ ರಸ ಮಂಜರಿ ಕಾಯ೯ಕ್ರಮ ನಡೆಸಿಕೊಟ್ಟರು, ದೇವರ ವಿಗ್ರಹ ಗಭ೯ಗುಡಿಯ ಒಳಕ್ಕೆ ಹೋಗುವಾಗ ಅಚಾನಕ್ಕಾಗಿ ನನ್ನ ಬಾಯಿ೦ದ ಒಂದು ಮಾತು ಹೊರಬಿತ್ತು.
       " ಗನ್ನಿ ಸಾಹೇಬರೆ ದೇವರ ಸತ್ಯವಿದ್ದರೆ ಈ ವಷ೯ ನಿಮ್ಮನ್ನ ಮೆಕ್ಕಾ ಯಾತ್ರೆಗೆ ಕಳಿಸುತ್ತೇನೆ, ಹಾಗಾದರೆ ಈ ದೇವಸ್ಥಾನ ಕಟ್ಟಿಸಿದ ಪುಣ್ಯ ಗ್ಯಾರಂಟಿ ನನಗೆ ತಲುಪಿದಂತೆ ಆಗುತ್ತೆ " ಅಂದೆ ಅದಕ್ಕೆ ಪ್ರತ್ಯುತ್ತರವಾಗಿ ಅವರು ಗ್ಯಾರಂಟಿ ಆಗೇ ಆಗುತ್ತೆ ಅಂತ ಕೈ ಮುಗಿದರು.
        ಅದರಂತೆ ಗನ್ನಿ ಸಾಹೇಬರು ಮೆಕ್ಕಾ ಯಾತ್ರೆಗೆ ಅಜಿ೯ ಸಲ್ಲಿಸಿದಾಗ ಸಕಾ೯ರದಿಂದ ಆಯ್ಕೆ ಆದರು ಅದಕ್ಕೆ ನಿಗದಿ ಮಾಡಿದ ಹಣ ನಾನು ಡಿ.ಡಿ.ಮೂಲಕ ಪಾವತಿ ಮಾಡಿದೆ, ಅವರು ತಮ್ಮ ದಮ೯ದ ಪವಿತ್ರ ಯಾತ್ರೆಗೆ ತಯಾರಿ ನಡೆಸಿದರು ಅಷ್ಟರಲ್ಲೆ ಈ ಅನುಮಾನದ ಅಪವಾದ ಶುರುವಾಯಿತು.
         ನಮ್ಮಿಬ್ಬರ ಉತ್ಸಾಹಕ್ಕೆ ಒಂದು ರೀತಿ ತಣ್ಣಿೀರು ಎರಚಿದ೦ತೆ ಆಯಿತು, ಗನ್ನಿ ಸಾಹೇಬರು ಯಾರು ಏನೇ ಹೇಳಿದರೂ ನಾನು ಮೆಕ್ಕಾ ಯಾತ್ರೆ ಮಾಡ್ತಿನಿ ಅಂದರಾದರೂ ನನಗೂ೦ದು ಅಳಕು ಇತ್ತು. ಅನ್ಯ ದಮ೯ದವರ ಹಣದಲ್ಲಿ ಮುಸ್ಲಿಂರು ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಆಗುವುದಾದರೆ ಸರಿ ಅಲ್ಲ ಅಂತ ಅನ್ನಿಸುತ್ತಿತ್ತು.
       ಅವರ ಸಂಬಂದಿ ಕೆಲ ಯುವಕರು ಗನ್ನಿಸಾಹೇಬರನ್ನ ಹಿಂದಿನಿಂದ ಅವರ ಸಂಬಂದಿ ಮತ್ತು ಗೆಳೆಯರ ಎದುರು ಹಿಯಾಳಿಸುತ್ತಿದ್ದರು, ಇದೇ ಸಂದಭ೯ದಲ್ಲಿ ಉತ್ತರ ಪ್ರದೇಶದ ಮೌಲ್ವಿಗಳ ಒಂದು ದೊಡ್ಡ ತಂಡ  ಆನಂದಪುರಂನ ಮಸೀದಿಗೆ ಬಂದರು ಆ ದಿನ ಶುಕ್ರವಾರದ ನಮಾಜು ಬೇರೆ, ನಮಾಜು ಮುಗಿದ ನಂತರ ಈ ಜಿಜ್ಞಾಸೆಗೆ ಉತ್ತರ ಅವರಿ೦ದ ಕೇಳಿದರು, ಅನೇಕ ಗನ್ನಿ ಸಾಹೇಬರ ಆಪ್ತರಿಗೆ ಮತ್ತು ಕೆಲ ಕುಹಕಿಗಳಿಗೆ ಏನು ಉತ್ತರ ಬರಬಹುದು ಅಂತ ಕುತೂಹಲವಿತ್ತು.
          ಮುಸ್ಲಿ೦ ಪಂಡಿತರು ಈ ಬಗ್ಗೆ ಇರುವ ಪತ್ವಾ ಏನಂತ ತಿಳಿಸಿದರು ಅದೇನೆಂದರೆ ಯಾರೇ, ಯಾವ ದಮ೯, ಯಾವುದೇ ಜಾತಿ, ಯಾವ ದೇಶದವರೂ  ಮುಸ್ಲಿಂ ದಮ೯ದವರನ್ನ ಮಾತ್ರ ಮೆಕ್ಕಾ ಯಾತ್ರೆಗೆ ಕಳಿಸಬಹುದು, ಇದು ಅವರ ನೆರವಿಂದ ಹೋದವರಿಗೆ ಹರಾಂ ಅಲ್ಲ ಮತ್ತು ಮೆಕ್ಕಾ ಯಾತ್ರೆ ಮಾಡಿದವರಿಗಿಂತ ಮೆಕ್ಕಾ ಯಾತ್ರೆ ಮಾಡಿಸಿದವರಿಗೆ  ಡಬಲ್ ಪುಣ್ಯ ಅಂತ ಅಂದರು, ನಮ್ಮ ಗನ್ನಿ ಸಾಹೇಬರಿಗೆ ಇದರಿಂದ ತುಂಬಾ ನಿರಾಳವಾಯಿತು, ನನಗೂ ಸಂತೋಷವಾಯಿತು.
        ನಮ್ಮ ಶ್ರೀವರ ಸಿದ್ಧಿವಿನಾಯಕ ದೇವಾಲಯದಲ್ಲಿ ಗನ್ನಿ ಸಾಹೇಬರಿಗೆ ಬೀಳ್ಕೊಡುಗೆಯ ಅಭಿನಂದನಾ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದೆವು ಸಾಗರದಿಂದ ತೀನಾ.ಶ್ರೀನಿವಾಸ, ಕೋಯಾ ಸಾಹೇಬರು, ಪುತ್ತೂರಾಯರು, ನಾರಾಯಣ್ ರಾವ್, ಅಮೃತ್ ರಾಸ್ ಎಲ್ಲಾ ಬಂದಿದ್ದರು.
      ಊರ ದೇವಸ್ಥಾನ ಕಟ್ಟಿಸಿದ್ದು ನಮ್ಮ ಹೆತ್ತವವರ ಪುಣ್ಯದಿಂದ ಅಂತ ಬಾವಿಸಿದ್ದೇನೆ ಅದೇ ರೀತಿ ಗನ್ನಿ ಸಾಹೇಬರಿಗೆ ಮೆಕ್ಕಾ ಯಾತ್ರೆ ಮಾಡಿಸಿದ್ದು ಕೂಡ.
  ಈ ವಷ೯ ಜನವರಿ 28ಕ್ಕೆ ದೇವಾಲಯದಲ್ಲಿ 14 ನೇ ವಾಷಿ೯ಕೊತ್ಸವ ರಥ ಉತ್ಸವದ ಸಂದಭ೯ದಲ್ಲಿ ಇದೆಲ್ಲ ನೆನಪಾಯಿತು, ಗನ್ನಿಸಾಹೇಬರು ಇರುವವರೆಗೆ ಊರಲ್ಲಿ ಕೋಮು ಸೌಹಾದ೯ವೇ ಬೇರೆ ಆನಂದಪುರದ ಇತಿಹಾಸದಲ್ಲಿ ಯಾರೆಷ್ಟು ಪ್ರಯತ್ನಿಸಿದರು ಹಿಂದೂ ಮುಸ್ಲಿಂ ಗಲಾಟೆ ಆಗಿಲ್ಲ ಇವತ್ತೂ ಹಿಂದೂ ಮುಸ್ಲಿಂ ಬಾಯಿ ಬಾಯಿ ಇದಕ್ಕೆ ಉದಾಹರಣೆ ಎಂಬಂತೆ ನವೆಂಬರ್ ನಲ್ಲಿ ನಡೆದ ನನ್ನ ಮಗಳ ಮದುವೆ ಸಮಾರಂಭದಲ್ಲಿ ಮುಸ್ಲಿ೦ ಬಾಂದವರೆಲ್ಲ ಒಂದಾಗಿ ಬಂದು ನೂತನ ದಂಪತಿಗಳಿಗೆ ಶುಭ ಹಾರೈಸಿ ನಂತರ ನನಗೆ ಶಾಲು ಹೊದಿಸಿ ಹೂವಿನ ಹಾರ ತೊಡಿಸಿ ಗನ್ನಿ ಸಾಹೇಬರ ಹೆಸರಲ್ಲಿ ನೆನಪಿನ ಕಾಣಿಕೆ ನೀಡಿದ್ದು ಪುನಃ ನನಗೆ ಆನಂದಬಾಷ್ಪ ಉoಟು ಮಾಡಿತು.
#Can a Hindu organise a Mecca pilgrimage to his Muslim friend? A news was being circulated in our village that Mecca pilgrimage of such nature is forbidden#
  This was a rare scenario hence the natives had little or no knowledge about this. This was coupled with jealousy. These all caused strain to the person who was preparing for the pilgrimage. The same was happening with the hindu who was arranging the means, people said he has lost his mind as he is sending a muslim for a pilgrimage.
  
This is what I and my respected senior friend Sri Ghanni Saab had gone through in the year of 2007. There is a valid reason for the Mecca pilgrimage, as I had promised in Sri Varasiddhi Vinayaka Temple of our village.
 
In the year of 2006, A Ganapati Temple was consecrated in our village Yadehalli, (Anandapuram Hobli, Sagara Taluk, Shivamogga District). Till then there was not a single Ganapati Temple in the entire Hobli. There were two churches and a Mosque in Yadehalli.

The idol of Ganapati was sculpted by the renowned national awardee Shivarapattana Sculptor.

 When this sculpture was brought to Yadehalli, a procession took place from yadehalli circle to temple for taking the idol to temple.   Sri Vishwapati Shastriji lead  the procession, where I followed with Sri Ghani Saab. There was a small orchestra was organised by singers Valerian D'Souza and Boraiah.
 When the sculpture was being placed in the sanctum of the temple, out of nowhere, suddenly I said "Gani Saheb ji, if the God's grace is there, i will send you for Mecca Pilgrimage this year. By that way I will earn the 'punya' of constructing this temple.." For which he responded, " yes it will be" and folded his hands in a namaskar..
 
As the god's will had it, when Ganni saab ji was selected for Mecca pilgrimage by the government when he filed an application. I paid the prescribed amount via Demand Draft, he started the preparations for his holy pilgrimage. Then started all these venomous news started to circulate that a hindu cannot fund a Muslim's pilgrimage.

It was a drawback for us. Nevertheless Ghani Saheb Ji said that he is going to go to Mecca no matter whatever the people speculate. But i was really nervous and in dilemma that if such funding for a pilgrimage is explicitly forbidden by the religion, then it's not right, what should be done? It was a 'dharma sankata' for me.
 Some young relatives were criticising Ghani saab ji  behind his back, infront of his family and friends. 
 
At this time, a large group of Maulvis from Uttar Pradesh visited Anandapur Mosque. It was a Friday, after the Namaz, people raised this issue infront of the maulvis for further clarification and assistance.  Both the well wishers and criticisers, were equally curious about the possible explanations from the Maulvis.
 
The Maulvis explained that anyone from any religion, caste, or of any nationality can send a muslim for a Mecca pilgrimage, whoever goes by such funding, it's not forbidden for them, nor its a sin. Also the person who is funding for the pilgrimage earns more punya than the one who is going. Ganni Saab was relieved to hear that and I was delighted.

We organised a function in temple to bid adieu to Ghani saab. Sri Ti.Na Srinivas, Khoya Saheb, Narayan Rao, Amrut Ras and many other came from Sagara to attend this event.

I feel that constructing the village temple was by the blessings of my parents, and also i feel that the Mecca Pilgrimage was also because of the blessings of my parents. Ghani Saab was a dear friend of my father.
 It's been 14 year, on 28th of January. I remembered all this at thi occasion. Till Ghani Saab was alive, thr communal harmony was ensured. In the history of our village, no matter how many times anyone has tried to lit the fire of communal riots, it didn't work. Even today Hindus, Muslims, Christians live in harmony.
 On the occasion of my daughter's wedding, muslims of village came together, they wished the newlyweds, later they congratulated me by giving a memento in the name of Late Sri Ghani Saab. This brought tears of joy in my eyes. This is an instance how harmoniously we all live in this village.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ