Blog number 1156. ನಿಂತ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿ ಸಮಯ ತೋರಿಸಿದಂತೆ ಧನಾತ್ಮಕವಾಗಿ ತಾಳ್ಮೆಯಿಂದ ನಿರೀಕ್ಷಿಸಿ, ನಿಮ್ಮ ಒಳಿತು ಭಗವಂತನ ಅರಿವಿನಲ್ಲಿದೆ. ಎಲ್ಲಾ ದುರ್ದೆಷೆಗಳಲ್ಲಿ ನೀತಿ ಪಾಠ ಲಭ್ಯವಿದ್ದೇ ಇದೆ.
#ಇಂತವುಗಳನ್ನು_ಹೆಕ್ಕಿ_ಕಳಿಸುತ್ತಾರೆ_ನಿಟ್ಟೂರು_ರವೀಶ್
#ಇದು_ನಿತ್ಯ_ಸತ್ಯ_ಮತ್ತು_ಪ್ರತಿಯೊಬ್ಬರು_ಅಳವಡಿಸಿ_ಕೊಳ್ಳಬೇಕಾದ್ದೆ.
#ನಾನು_ನನ್ನ_ಜೀವನದಲ್ಲಿ_ಕಷ್ಟ_ಮತ್ತು_ನಷ್ಟಗಳನ್ನು
#ಲಾಭಕ್ಕೆ_ಮತ್ತು_ನೆಮ್ಮದಿಗೆ_ಪರಿವರ್ತಿಸಿಕೊಳ್ಳುತ್ತಿರುತ್ತೇನೆ.
#ನನ್ನ_ನೂತನ_ಉದ್ಯಮ_ರಾಜ್ಯದಾದ್ಯಂತ_ವಿಸ್ತರಿಸುವ_ಅಂತಿಮ_ತಯಾರಿಯ_ಹಂತದಲ್ಲಿ.
#ಈ_ನುಡಿಮುತ್ತುಗಳು_ಯಶಸ್ಸು_ಹಾರೈಸಿ_ನೀಡಿದ_ಮಂತ್ರಾಕ್ಷತೆಯ೦ತೆ.
*ಎಲ್ಲಾ ದುರ್ದೆಷೆಗಳಲ್ಲೂ ಧನಾತ್ಮಕ ಅಂಶ ಇದ್ದೇ ಇರುತ್ತದೆ*
*ಕೆಟ್ಟು ನಿಂತ ಗಡಿಯಾರ ದಿನಕ್ಕೆ ಎರೆಡು ಬಾರಿ ಸರಿ ವೇಳೆ ತೋರಿಸಿದಂತೆ*
*ತಾಳ್ಮೆಯಿಂದ ಧನಾತ್ಮಕವಾಗಿ ಕಾಯಿರಿ*
*ದೇವರಿಗೆ ಗೊತ್ತು ನಿಮಗೆ ಯಾವುದು ಒಳ್ಳೆಯದೆಂದು*
ಪ್ರತ್ಯುತ್ತರವಾಗಿ ನಾನು ನನ್ನ ಜೀವನದಲ್ಲಿ ಕಷ್ಟ ಮತ್ತು ನಷ್ಟಗಳನ್ನು ಲಾಭಕ್ಕೆ ಮತ್ತು ನೆಮ್ಮದಿಗೆ ಪರಿವರ್ತಿಸಿಕೊಳ್ಳುತ್ತಿರುತ್ತೇನೆ ಅಂತ ಬರೆದು ಅಂತಹ ಅನೇಕ ಜೀವನದ ಸಂದಿಗ್ದತೆಗಳನ್ನು ಎದುರಿಸಿದ ಸಂದರ್ಭಗಳನ್ನು ನೆನಪಿಸಿಕೊಂಡೆ.
ಅನೇಕ ಪ್ರಯೋಗಗಳನ್ನು ಮಾಡಿ ಲಾಭ-ನಷ್ಟ, ಮಾನ-ಅವಮಾನಗಳ ಬೇವು ಬೆಲ್ಲದಂತೆ ಸವಿಯುವ ಜೀವನ ನನ್ನ ಒಬ್ಬನದ್ದೇನಲ್ಲ ಎಲ್ಲಾ ಪ್ರಯತ್ನ ಶೀಲರ ಮತ್ತು ಪ್ರಯತ್ನ ಮಾಡದೇ ಇದ್ದವರ ಜೀವನದಲ್ಲೂ ಸ೦ಭವಿಸುತ್ತಿರುತ್ತದೆ.
ಆದರೆ ನಮ್ಮ ನಮ್ಮ ಅನುಭವ ನಮಗೇ ಸುಖಾನುಭವ ಆದ್ದರಿಂದ ನಮ್ಮದೇ ವಿಶೇಷ ಅನ್ನಿಸುವುದು ಸಹಜ.
"ಜೀವನದಲ್ಲಿ ಏನೆಲ್ಲ ಸಾದನೆ ಮಾಡಲು ಹೋಗಿ ನೀವು ಏನೆಲ್ಲ ಕಳೆದುಕೊಂಡಿದ್ದರೂ ಈ ಸಾದನೆಯ ಹಾದಿಯಲ್ಲಿ ನಿಮಗೆ ಸಿಕ್ಕಿರುವ ಸಂಪರ್ಕಗಳನ್ನು ಮುಂದಿನ ಸಾದನೆಗೆ ಬಳಸಿಕೊಳ್ಳಿ ಅದು ಕಳೆದದ್ದನ್ನೆಲ್ಲ ಕೂಡಿಸಿಕೊಟ್ಟೀತು" ಅಂತ ಒಂದು ದೊಡ್ಡ ಪ್ರಹಾರದಿಂದ ಸಂಪೂರ್ಣ ಕಳೆದುಕೊಂಡು ಹತಾಶನಾಗಿದ್ದಾಗ ಮಿತ್ರರಾದ ಪತ್ರಕರ್ತ ಶೃಂಗೇಶ್ ಹೇಳಿದಾಗ ಅರೆ ಹೌದಲ್ಲ ಅನ್ನಿಸಿ ನಿರಾಸೆಗೆ ಬೆನ್ನು ಹಾಕಿದ್ದು ನೆನಪಾಯಿತು.
2023ರ ಹೊಸ ವಷ೯ದಲ್ಲಿ ಅನೇಕರಿಗೆ ಅವಕಾಶ ಕಲ್ಪಿಸಿ ಅವರನ್ನು ನನ್ನ ಜೊತೆ ಯಶಸ್ವಿ ಉದ್ದಿಮೆದಾರರನ್ನಾಗಿಸುವ ನೂತನ ಉದ್ಯಮ ಒಂದನ್ನು ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆಯ ಅಂತಿಮ ಹಂತದಲ್ಲಿರುವಾಗ ಈ ನುಡಿಮುತ್ತುಗಳು ಯಶಸ್ಸಿಗೆ ಹಾರೈಸುವ ಮಂತ್ರಾಕ್ಷತೆಗಳು ಅನ್ನಿಸಿತು.
Comments
Post a Comment