Blog number 1207. ಜಾರ್ಜ್ ಪರ್ನಾಂಡಿಸ್ ವಿಶಿಷ್ಟ ವ್ಯಕ್ತಿತ್ವ ಭಾಗ 1. ಸ್ವತಃ ತಮ್ಮ ಬಟ್ಟೆ ಒಗೆದು ಸೋಪಿನ ಪುಡಿ ಶಿಪಾರಸ್ಸು ಮಾಡಿದ ಜಾರ್ಜ್
#ವಿಶಿಷ್ಟ ವ್ಯಕ್ತಿತ್ವದ ಜಾಜ್೯(1)
ಕೇರಳ ರಾಜ್ಯದ ಯುವಕ 200O ಇಸವಿಯಿಂದ ಸೋಪಿನ ಪುಡಿಯ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಎಲ್ಲಾ ಬ್ಯಾಂಕ್‌ಗಳಿಗೆ ಅಲೆದಾಡಿ ಸುಸ್ತಾಗಿದ್ದ.
ಸಮತಾ ಪಾಟಿ೯ಯ ಕಾಯ೯ಕತ೯ನಾಗಿದ್ದ ಆತ ಒಮ್ಮೆ ದೆಹಲಿಯಲ್ಲಿ ಸಾಲ ಕೊಡಿಸಿ ಅಂತ ಜಾಜ್೯ರಿಗೆ ಮನವಿ ನೀಡಿದ್ದ.
ಜಾಜ್೯ ಯಾವುದೋ ಬ್ಯಾಂಕ್ ಒಂದರ ಚೇಮ೯ನರಿಗೆ ಶಿಪಾರಸ್ಸು ಮಾಡಿದ್ದರಿಂದ ಆ ಯುವಕ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿ ಆದನು, ಇದಕ್ಕೆ ಸಹಾಯ ಮಾಡಿದ ಜಾಜ್೯ರಿಗೆ ಒಂದು ಕೃಜ್ಞತೆ ಪತ್ರ ಅದರ ಜೊತೆ ಅವನು ತಯಾರಿಸುವ ಒಂದು ಸೋಪಿನ ಪುಡಿ ಪೊಟ್ಟಣ ಮಾದರಿ ತೋರಿಸಲು ಕಳಿಸಿದ್ದ.
ಕೆಲವು ದಿನದ ನಂತರ ಆ ಯುವಕನಿಗೆ ದೇಶದ ಪ್ರತಿಷ್ಠಿತ ಪಂಚತಾರ ಹೋಟೆಲ್ ಆದ ಲೀಲಾ ಪ್ಯಾಲೇಸ್ ನಿಂದ ಪ್ರತಿ ತಿಂಗಳು 6 ಟನ್ ಸೋಪಿನ ಪುಡಿಯ ಆಡ೯ರ್ ಅಂಚೆಯಲ್ಲಿ ಬಂದಾಗ ಯುವ ಉದ್ಯಮಿ ತಬ್ಬಿಬ್ಬಾಗಿದ್ದ.
ವಾಸ್ತವ ಏನಾಗಿತ್ತೆ೦ದರೆ, ಆ ಯುವಕ ಕಳಿಸಿದ ಸೋಪಿನ ಪುಡಿಯನ್ನ ಸ್ವತಃ ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುವ ರಕ್ಷಣಾ ಸಚಿವರು ಬಳಸಿದಾಗ ಅವರಿಗೆ ಆ ಸೋಪಿನ ಪುಡಿಯ ಕಾಯ೯ಕ್ಷಮತೆ ಹಿಡಿಸಿತು ಹಾಗಾಗಿ ಅವರು ಲೀಲಾ ಪ್ಯಾಲೇಸ್ ನ ಮಾಲಿಕರಾದ ನಿವೃತ್ತ ಕನ೯ಲ್ ರಿಗೆ ಪತ್ರ ಬರೆದು "ಈ ಸೋಪಿನ ಪುಡಿ ನಾನು ಸ್ವತಃ ಬಳಸಿ ನೋಡಿದ್ದೇನೆ ಉತ್ತಮವಾಗಿದೆ ಹಾಗಾಗಿ ಹೊಸದಾಗಿ ಉದ್ಯಮ ಸ್ಥಾಪನೆ ಮಾಡಿರುವ ಕೇರಳದ ಯುವಕನಿಗೆ ನಿಮ್ಮ ಸಂಸ್ಥೆಗೆ ಬೇಕಾದ ಸೋಪಿನ ಪುಡಿ ಖರೀದಿಸಬಹುದೆಂದು ತಿಳಿಸಿದ್ದರಿಂದ" ಈ ಆಡ೯ರ್ ಬಂದಿತ್ತು.
ಕೆ. ಅರುಣ್ ಪ್ರಸಾದ್.
ಜಾಜ್೯ ರ ಸಮತಾ ಪಾಟಿ೯ಯ ಕನಾ೯ಟಕದ ರಾಜ್ಯ ಪ್ರದಾನದಶಿ೯ ಆಗಿದ್ದಾಗಿನ ಸ್ವಂತ ಅನುಭವಗಳು.
Comments
Post a Comment