Blog number 1182.ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ಮೂಲ ವಿಗ್ರಹದ 3d ಸ್ಕ್ಯಾನಿಂಗ್ ನಿಂದ 3d ಪ್ರಿಂಟರ್ ನಲ್ಲಿ ಮೌಲ್ಡ್ ಮಾಡಿ ತಯಾರಿಸಿದ ಶ್ರೀ ವರಸಿದ್ಧಿ ವಿನಾಯಕ ದೇವರ ವಿಗ್ರಹಗಳು.
#ನಮ್ಮೂರ_ವರಸಿದ್ದಿ_ವಿನಾಯಕ_ದೇವರದ್ದು
#ಡಿಸೆಂಬರ್_21ಕ್ಕೆ_ಆಕೃತಿ_3d_ಅವರು_ಸ್ಕ್ಯಾನ್_ಮಾಡಿದ್ದರು
#ಗೋವರ್ದನಅಂಕೋಲೆಕರ್_ಪುತ್ರ_ವಿಶ್ವವಸುಅ೦ಕೋಲೆಕರ್_ಇದನ್ನು_ಮೂರ್ತಿಯಾಗಿಸಿದ್ದಾರೆ.
#ಮೂಲ_ವಿಗ್ರಹಕ್ಕೆ_ಪಾಯಿಂಟ್001_ಕೂಡ_ವ್ಯತ್ಯಾಸವಿಲ್ಲ
ಈ ಹಿಂದೆ 3ಡಿ ತಂತ್ರಜ್ಞಾನದಲ್ಲಿ ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ದೇವರ 3ಡಿ ಸ್ಕ್ಯಾನಿಂಗ್ ಆಕೃತಿ 3ಡಿ ಸಂಸ್ಥೆ ತಾನು ಹೊಸದಾಗಿ ಖರೀದಿಸಿದ 50 ಲಕ್ಷದ 3d ಸ್ಕ್ಯಾನರ್ ನಲ್ಲಿ ಸ್ಕ್ಯಾನ್ ಮಾಡಿ ನಂತರ ಅವರ 3ಡಿ ಪ್ರಿಂಟರ್ ನಲ್ಲಿ ಮೂಲ ವಿಗ್ರಹದ 5 ಇಂಚಿನ ಮಿನಿಯೇಚರ್ ಮೌಲ್ಡ್ ಮಾಡಿಕೊಟ್ಟರು.
https://arunprasadhombuja.blogspot.com/2022/12/blog-number-1141-50.html
ಇದನ್ನು ಪ್ರಖ್ಯಾತ ವಿಶ್ವವ್ಯಾಪಿ ಗಣೇಶ ಪ್ರದರ್ಶನದ ಪ್ರಸಿದ್ಧಿಯ ಗೋವರ್ಧನ ಅಂಕೋಲೆಕರ್ ಅವರು ಅವರ ಪುತ್ರ ಬೆಂಗಳೂರಲ್ಲಿನ ಚಾಮರಾಜಪೇಟೆಯಲ್ಲಿ ಓಂ ಎಂಟರ್ಪ್ರೈಸೆಸ್ ಉದ್ಯಮ ನಡೆಸುವ ವಿಶ್ವವಸು ಅಂಕೋಲೆಕರ್ ಗೆ ಇದನ್ನು ಮೌಲ್ಡ್ ಮಾಡಿಸಿ ಪೈಬರ್ ನಲ್ಲಿ ವಿಗ್ರಹ ಮಾಡಿಸಿ ಸ್ಯಾಂಪಲ್ ಕಳಿಸಲು ತಿಳಿಸಿದ್ದರು.
ಇವತ್ತು ವಿಶ್ವವಸು ಅಂಕೋಲೆಕರ್ 3 ವಿಬಿನ್ನ ಬಣ್ಣದಲ್ಲಿ ಮತ್ತು ಎರೆಡು ಪ್ರತ್ಯೇಕ ಪೀಠದಲ್ಲಿ ಒಟ್ಟು 5 ವರಸಿದ್ದಿ ವಿನಾಯಕ ದೇವರ ವಿಗ್ರಹ ಕಳಿಸಿದ್ದಾರೆ.
ಸೋಮವಾರ ಮೂಲ ಕೃಷ್ಣ ಶಿಲಾ ವಿಗ್ರಹದ ಬಣ್ಣದಲ್ಲಿ ಇನ್ನೊಂದು ವಿಗ್ರಹ ಕಳಿಸಲಿದ್ದಾರೆ ಇದರಲ್ಲಿ ನಾವು ಆಯ್ಕೆ ಮಾಡುವ ವಿಗ್ರಹ ನಮ್ಮ ಬೇಡಿಕೆಗೆ ಅನುಗುಣವಾಗಿ ತಯಾರಿಸಿ ನೀಡಲಿದ್ದಾರೆ ಅದನ್ನು ದೇವಾಲಯದಲ್ಲಿ ಭಕ್ತರಿಗೆ ಖರೀದಿಸಲು ವ್ಯವಸ್ಥೆ ಮಾಡುವ ಉದ್ದೇಶ ಜಾತ್ರಾ ಸಮಿತಿಯ ಮತ್ತು ಟ್ರಸ್ಟ್ ನ ಉದ್ದೇಶವಾಗಿದೆ.
Comments
Post a Comment