#ಮಂಜಮ್ಮ_ಜೋಗತಿ_ಇವತ್ತು_ನಮ್ಮ_ಅತಿಥಿ
ಬಳ್ಳಾರಿ ಜಿಲ್ಲೆಯ ಮರಿಯಮ್ಮನ ಹಳ್ಳಿಯ ಮಂಜಮ್ಮ ಜೋಗತಿ ಆತ್ಮಕಥೆ #ನಡುವೆ_ಸುಳಿವ_ಹೆಣ್ಣು (ಆರುಣ್ ಜೋಳದ ಕೂಡ್ಲಿಗೆ ನಿರೂಪಣೆ ) ಓದಿದರೆ ಗೊತ್ತಾಗುತ್ತದೆ ಇವರು ಸಾಗಿ ಬಂದ ಜೀವನದ ಹಾದಿ ಎಷ್ಟು ಕಲ್ಲು ಮುಳ್ಳಿನ ದೆಂದು.
ಕುಮಾರ ಬಿ. ಮಂಜುನಾಥ ಶೆಟ್ಟಿ ಮಂಜಮ್ಮ ಜೋಗತಿ ಆಗುವುದು ಇದಕ್ಕಾಗಿ ಹೊಸಪೇಟೆಯ ಹುಲಗಿಯ ಹುಲಿಗಮ್ಮ ದೇವಾಲಯದಲ್ಲಿ ಮುತ್ತು ಕಟ್ಟಿಸಿಕೊಂಡು ದೀಕ್ಷೆ ಪಡೆಯುವುದು, ಇದರಿಂದ ಕುಟುಂಬದಿಂದ ದೂರವಾಗುವುದು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುವುದು, ನಂತರ ಜೀವನಕ್ಕಾಗಿ ಬಿಕ್ಷಾಟನೆ, ಅತ್ಯಾಚಾರಕ್ಕೆ ಒಳಗಾಗುವುದು, ಅವಮಾನ ನೋವುಗಳ ಸರಮಾಲೆ ಮದ್ಯದಲ್ಲಿ ಜೋಗತಿ ನೃತ್ಯ ಕಲಿತು ಅದರ ಪ್ರದಶ೯ನ ಪ್ರಾರಂಬಿಸಿ ನಂತರ ಇವರ ಕಲಾಸೇವೆಗಾಗಿ ಕನಾ೯ಟಕ ಜನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಸಂದೇಶ ಪ್ರಶಸ್ತಿ, ತಾಯಮ್ಮ ಮಲ್ಲಯ್ಯ ದತ್ತಿನಿದಿ ಪ್ರಶಸ್ತಿ ಮತ್ತು ಸಮಾಜ ಸಖಿ ಪ್ರಶಸ್ತಿಗಳು ಇವರನ್ನ ಅರಸಿಕೊಂಡು ಬಂದಿತು.
ಯಡ್ಯೂರಪ್ಪರ ರಾಜ್ಯ ಸಕಾ೯ರ ಇವರನ್ನ ಕನಾ೯ಟಕ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದೆ, ಇವತ್ತು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವರ ಉತ್ತರ "ನನ್ನನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಂತ ಟೀವಿಲಿ ಬರುತ್ತಿದೆ ಅಂದಾಗ ನಾನು ನಂಬಲೇ ಇಲ್ಲ, ನಾನು ಅರ್ಜಿ ಹಾಕಿಲ್ಲ ಯಾರಿಗೂ ಅಧ್ಯಕ್ಷರನ್ನಾಗಿ ಮಾಡಿ ಅಂತ ಬೇಡಿಲ್ಲ" ಅಂತ.
ಸಕಾ೯ರ ಬೆಂಗಳೂರಲ್ಲಿ ನಿಮಗೆ ಮನೆ ನೀಡಿರಬೇಕು ಅಂದೆ "ಇಲ್ಲ ನಾನು ಬಳ್ಳಾರಿ ಜಿಲ್ಲೆ ಮರಿಯಮ್ಮನ ಹಳ್ಳಿಯಲ್ಲೇ ಇದ್ದು ರಾಜ್ಯಾದಾದ್ಯಂತ ಅಕಾಡೆಮಿಗೆ ಕೆಲಸ ಪ್ರವಾಸ ಮಾಡುತ್ತೇನೆ" ಅಂದರು.
ತೃತಿಯ ಲಿಂಗಿ ಒಬ್ಬರನ್ನ ಅವರ ಕಲಾ ಪ್ರಕಾರ ಗುರುತಿಸಿ ಅಧ್ಯಕ್ಷರನ್ನಾಗಿಸಿದ ಸಕಾ೯ರ ಮತ್ತು ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಅಭಿನಂದನೀಯರು.
Comments
Post a Comment