ನಿಂತಲ್ಲೇ ಯಾವುದೇ ವಿಷಯ ಅಥವ ವ್ಯಕ್ತಿಯ ಮೇಲೆ ಹಾಡು ಬರೆದು ಅದಕ್ಕೆ ರಾಗ ಸಂಯೋಜಿಸಿ ಹಾಡುವ ಕಲೆ ಬೋರಯ್ಯರಲ್ಲಿತ್ತು, ಎಲ್ಲೇ ಸಾಂಸ್ಕೃತಿಕ ಕಾಯ೯ಕ್ರಮ ಇದ್ದರೂ ಅದನ್ನ ನೋಡಲು ಎಷ್ಟೇ ದೂರ ಇದ್ದರೂ ತಮ್ಮ ಇಳಿ ವಯಸ್ಸಿನಲ್ಲಿ ಸೈಕಲ್ ಹತ್ತಿ ಹೊರಟು ಬಿಡುತ್ತಿದ್ದರು.
ಸಂಗೀತ ಕಲಿತವರು, ಹಾರ್ಮೋನಿಯಂ ತಬಲ ಕೂಡ ಕರಗತ ಮಾಡಿಕೊಂಡವರು.
ಇವರ ತಂದೆ ರೈಲ್ವೆ ಇಲಾಖೆ ಕೆಲಸಕ್ಕೆ ಮಂಡ್ಯದಿಂದ ಬಂದವರು ಇಲ್ಲೇ ನೆಲೆನಿಂತವರು, ಬೋರಯ್ಯನವರು ಆನಂದಪುರದಲ್ಲೆ ವಿದ್ಯಾಬ್ಯಾಸ ಮಾಡಿ ಅರಣ್ಯ ಇಲಾಖೆ ಸೇರಿ ಸೇವೆ ಸಲ್ಲಿಸಿ ನಿವೃತ್ತರಾದವರು.
ನಿವೃತ್ತಿ ನಂತರ ನಮ್ಮ ಗ್ರಾಮ ಪಂಚಾಯತನ ಬಸವನ ಹೊಂಡದಲ್ಲಿ ಕೃಷಿ ಮಾಡಿಕೊಂಡಿದ್ದರು 1995ರಲ್ಲಿ ಯಡೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ನಮ್ಮ ಊರ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಪ್ರತಿಷ್ಟಾಪನೆಗೆ ದೂರದ ಕೋಲಾರ ಜಿಲ್ಲೆಯ ಶಿವಾರಪಟ್ಟಣದಿಂದ ಶ್ರೀ ಕೃಷ್ಣ ಶಿಲಾ ವಿಗ್ರಹ 2006ರಲ್ಲಿ ಬಂದಾಗ ದೇವಾಲಯದಲ್ಲಿ ತಮ್ಮ ಹಾರ್ಮೋನಿಯೊಂದಿಗೆ ಭಕ್ತಿ ಗೀತೆಗಳಿಂದ ಸ್ವಾಗತಿಸಿದವರು ದಲಿತ ಹಾಡುಗಾರರಾದ ಬೋರಯ್ಯನವರು ಮತ್ತು ಊರಿನ ಅಂದ ಕಲಾವಿದ ಒಲೇರಿಯನ್ ಡಿಸೋಜರವರು.
15ನೇ ವರ್ಷದ ಜಾತ್ರಾ ಸಂದಭ೯ದಲ್ಲಿ ನಮ್ಮ ಊರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಆಗಿದ್ದ ನಿವೃತ್ತ ಪಾರೆಸ್ಟರ್ ಮತ್ತು ಹುಟ್ಟು ಕಲಾವಿದರಾದ ಎ.ಕೆ.ಬೋರಯ್ಯ ಇಹಲೋಕ ತ್ಯಜಿಸಿದ್ದಾರೆ.
ತಮ್ಮ ವಯೋ ಸಂಬಂದಿ ಅನಾರೋಗ್ಯದಲ್ಲೂ ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಬಂದು ಕೆಲ ಭಕ್ತಿ ಗೀತೆ ಹಾಡುತ್ತಿದ್ದದ್ದು ನಮಗೆಲ್ಲ ನೆನಪು ಮತ್ತು ಅವರ ಅಗಲಿಕೆ ಒಂದು ನೋವು.
Comments
Post a Comment