Blog number 1181. ಗಂಜಿ ಮನೆತನದವರೇ ಒಂದು ಕಾಲದ ಮಲೆನಾಡಿನಲ್ಲಿ ಮರ ಅರಣ್ಯದಿಂದ ಮರ ಕತ್ತರಿಸಿ ಅವಶ್ಯಕತೆಯ ಆಕಾರದ ಮರ ಮಟ್ಟು ತಯಾರಿಸುತ್ತಿದ್ದರು, ಮರ ಕತ್ತರಿಸುವ ಮೊದಲು ಮರದಲ್ಲಿರುವ ದೈವ- ಬೂತಗಳಿಗೆ ಪ್ರಾರ್ಥಿಸಿ ಮನೆ ಕಟ್ಟುವ ಯಜಮಾನನಿಂದ ಮೊದಲ ಕೊಡಲಿ ಪೆಟ್ಟು ಸಾಂಕೇತಿಕವಾಗಿ ಹಾಕಿಸಿ ಮರ ಕೊಯ್ಯುವ ಪಾಪ ಮಾಲಿಕನಿಗೆ ವರ್ಗಾಯಿಸುತ್ತಿದ್ದರು.
#ಮರ_ಕಡಿತಲೆ_ಮಾಡಿ_ಕೊಡುವುದು
#ಮರ_ಕೊಯ್ಯುವ_ಯಂತ್ರಗಳಿಲ್ಲದ_ಕಾಲದಲ್ಲಿ
#ಕರಾವಳಿಯ_ಗಂಜಿಯವರೆ_ಮಲೆನಾಡಿನ_ಮರಮಟ್ಟು_ತಯಾರಕರು.
#ವನದೇವತೆಯ_ಆರಾಧಕರು_ಗಂಜಿ_ಮನೆತನದವರು.
ಮರ ಮಟ್ಟುಗಳನ್ನ ಕಾಡಿನಿ೦ದ ಕಡಿದು ಉಪಯೋಗಕ್ಕೆ ಬೇಕಾದ ಆಕಾರರಕ್ಕೆ ಕೊಯ್ಯುವ ಕೆಲಸ ಮಾಡುವವರಿಗೆ ಗಂಜಿಯವರು ಎನ್ನುತ್ತಾರೆ ಅವರೆಲ್ಲರ ಹೆಸರಿನ ಮುಂದೆ ಗಂಜಿ ಬರುತ್ತದೆ ಉದಾಹರಣೆಗೆ ಅವರಲ್ಲಿ ಗಣಪ ಎಂಬ ಹೆಸರಿದ್ದರೆ ಅವರು ಗಂಜಿ ಗಣಪ ಅಂತ.
ಇವರು ವನದೇವಿಯ ಭಕ್ತರು, ಬೇಕಾದ ಸೂಕ್ತ ಮರ ಆಯ್ಕೆ ಮಾಡಿದ ಮೇಲೆ ಸುತ್ತ ಮುತ್ತ ಯಾವುದೇ ದೇವಾಲಯವಿದ್ದರೆ ಆ ಮರ ಕಡಿಯುವುದಿಲ್ಲ, ಶಕುನಗಳನ್ನ ಹೆಚ್ಚು ನಂಬುತ್ತಾರೆ, ಎಲ್ಲವೂ ಸರಿಯಾದ ಮರ ಆಯ್ಕೆ ಮಾಡಿದ ಮೇಲೆ ಯಾರಿಗೆ ಆ ಮರ ಬಳಕೆ ಆಗುತ್ತದೆ ಆ ಮನೆಯ ಯಜಮಾನನಿOದ ಮೊದಲ ಕೊಡಲಿ ಕಚ್ಚು ಹಾಕಿಸುತ್ತಾರೆ ಯಾಕೆಂದರೆ ಆ ಮರದಲ್ಲಿ ಯಾವುದೇ ಅಗೋಚರ ಶಕ್ತಿ ಇದ್ದರೆ ಗಂಜಿಯವರಿಗೆ ಬಾಧಿಸದಿರಲಿ ಎಂದು ಮರ ಕಡಿದ ಪಾಪ ತಮಗೆ ತಟ್ಟಬಾರದು ಎಂಬುದು ಅವರ ಉದ್ದೇಶ.
ಬೇಕಾಬಿಟ್ಟ ಕಾಡು ಕಡಿಯುವವರು ಇವರಲ್ಲ, ನೂರು ಮರ ಇದ್ದರೆ ಅದರಲ್ಲಿ ಒಂದು ಮರ ಮಾತ್ರ ಇವರ ಆಯ್ಕೆ.
ಇವರುಗಳು ಪಶ್ಚಿಮ ಘಟ್ಟ ಮತ್ತು ಕರಾವಳಿ ಅಂಚಿನ ಬೈಂದೂರು, ಭಟ್ಕಳ, ಗೇರುಸೊಪ್ಪೆ, ಕುಮಟಾದಲ್ಲಿ ಹೆಚ್ಚಾಗಿ ಇದ್ದಾರೆ.
ಇದು ನಾನು ಬರೆದು ಪ್ರಕಟಸಿರುವ ಕೆಳದಿ ರಾಣಿ ಚOಪಕಾ ಕಾದ೦ಬರಿಯಲ್ಲಿ ಆ ಕಾಲದಲ್ಲಿ ಮಲೆನಾಡಿನಲ್ಲಿ ಮನೆ ಕಟ್ಟುವವರಿಗೆ ಕಾಡಿನಿಂದ ಮರ ಕಡಿದು ಮರ ಮಟ್ಟು ತಯಾರಿಸಿ ಕೊಡುತ್ತಿದ್ದ ಗಂಜಿಯವರ ಉಲ್ಲೇಖದ ಒಂದು ಅಧ್ಯಾಯ ಇದೆ. ಈಗ ಗಂಜಿಯವರಾರು ಕುಲ ಕಸುಬು ಮಾಡುತ್ತಿಲ್ಲ ಅವರ ಹೆಸರಿನ ಮುಂದಿನ ಗಂಜಿ ನಾಮ ಅದೃಶ್ಯ ಆಗಿದೆ, 1963ರಲ್ಲಿ ನಮ್ಮ ಮೂಲ ಮನೆಗೆ ಗಂಜಿ ಗಣಪಣ್ಣರ ತಂಡ ಮರ ಮಟ್ಟು ತಯಾರಿಸಿ ಕೊಟ್ಟಿದ್ದರು.
Comments
Post a Comment