https://youtu.be/Je1pS_BhP00
#ಹೆಚ್_ವಿ_ಆರ್_ನೆನಪುಗಳು_ಭಾಗ_2
#ಸಾಗರದ_ಮೊದಲ_ಸ್ಥಳಿಯ_ಪತ್ರಿಕೆ?
#ಮನೋಭೂಮಿ_ಕಮ೯ಚಾರಿ_ಸಾಗರಸುದ್ದಿ_ಸಾಗರವಾರ್ತಾ_ವನಕೃಪ
#ನಂತರ_ಸಾಗರಸಂದೇಶ_ನ್ಯಾಯದತಕ್ಕಡಿ.
#ಭೂಪಾಳಂ_ಚಂದ್ರಶೇಖರಯ್ಯರ_ಮಲೆನಾಡುವಾರ್ತ_ವರದಿಗಾರ_ಹೆಚ್_ವಿ_ನಾರಾಯಣರಾವ್_ಹರತಾಳು
#ಇವರ_ಸ್ಥಳಿಯ_ವರದಿಯಿಂದ_ಕೊಲೆ_ಆಗಿದ್ದೇ_ಅವರ_ಸಹೋದರ_ಹೆಚ್_ವಿ_ಆರ್_ಪತ್ರಕರ್ತರಾಗಲು_ಕಾರಣ.
#ಶಿವಮೊಗ್ಗ_ಜಿಲ್ಲೆಯ_ಕೊಲೆಯಾದ_ಮೊದಲ_ಪತ್ರಕರ್ತರು_ಹರತಾಳಿನ_ಹೆಚ್_ವಿ_ನಾರಾಯಣರಾವ್.
#ಆಗಿನ_ಜಿಲ್ಲಾ_ರಕ್ಷಣಾದಿಕಾರಿ_ಗರುಡಾಚಾರ್_ಇವರ_ಪುತ್ರ_ಉದಯಗರುಡಾಚಾರ್_ಈಗ_ಶಾಸಕರು
ಹೆಚ್.ವಿ. ಆರ್ ಅವರಿಗೆ ಈಗ 85 ವರ್ಷ ಆರೋಗ್ಯವಾಗಿದ್ದಾರೆ, ಇಪ್ಪತ್ತೈದು ವರ್ಷದ ಹಿಂದಿನ ಹೆಚ್.ವಿ.ಆರ್ ಗೆ ವ್ಯತ್ಯಾಸವಿಲ್ಲ ಆದರೆ ವಯೋಸಹಜ ಮರೆವು ಸಹಜವಾಗಿದೆ.
ಇವರ ಪತ್ರಿಕೆ ಸಾಗರ ಸಂದೇಶ 1975ರಲ್ಲಿ ಪ್ರಾರಂಭವಾಗಿ ಈಗ 47ನೇ ವರ್ಷಾಚಾರಣೆಯಲ್ಲಿದೆ, 2025 ಕ್ಕೆ ಸಾಗರ ಸಂದೇಶ ಪತ್ರಿಕೆಗೆ ಸುವರ್ಣ ಮಹೋತ್ಸವ.
ಸಾಗರದಲ್ಲಿ ಪ್ರಥಮ ಸ್ಥಳಿಯ ದಿನ ಪತ್ರಿಕೆ ಅವರ ನೆನಪಿನಲ್ಲಿ ರಾಮಚಂದ್ರ ಶೆಟ್ಟರ ಸಂಪಾದಕತ್ವದಲ್ಲಿ ಪ್ರಾರಂಭವಾಗಿದ್ದ ಮನೋಭೂಮಿ, ನಂತರ ಸಾಗರದ ಹಾಲಿ ಕ್ರಿಕೆಟ್ ಅಕಾಡಮಿಯ ನಾಗೇಂದ್ರ ಪಂಡಿತರ ತಂದೆ ಟಿ.ಡಿ. ಕಮಲಾಕ್ಷ ಪಂಡಿತರ ಸಂಪಾದಕತ್ವದ ಕಮ೯ಚಾರಿ, ಹಿರಿಯ ಸಮಾಜವಾದಿ, ರಾಮಮನೋಹರ ಲೋಹಿಯಾರ ಜೊತೆ ಕಾಗೋಡು ಚಳವಳಿಯಲ್ಲಿ ಬಂದನಕ್ಕೊಳಗಾದ ಜಿ. ರ್.ಜಿ.ನಗರ್ ಅವರ ಸಂಪಾದಕತ್ವದ ಸಾಗರ ಸುದ್ದಿ, ಉಳ್ಳೂರು ಸುಬ್ರಾವ್ ರ ಸಂಪಾದಕತ್ವದ ಸಾಗರವಾರ್ತ, ಎ.ಡಿ. ಸುಬ್ರಮಣ್ಯ ಸಂಪಾದಕತ್ವದ ವನಕೃಪ ನಂತರ ಇವರ ಸಂಪಾದಕತ್ವದ ಸಾಗರ ಸಂದೇಶ ನಂತರ ಕಾಗೋಡು ಹೋರಾಟದ ನೇತಾರ ಹೆಚ್.ಗಣಪತಿಯಪ್ಪರ ನ್ಯಾಯದ ತಕ್ಕಡಿ.
ಆಗಿನ ಮುದ್ರಣಾಲಯದಲ್ಲಿ ಅಕ್ಷರಗಳ ಮೊಳೆ ಜೋಡಿಸುವ ತ್ರಾಸದಾಯಕ ಕೆಲಸಗಳು ಈಗಿಲ್ಲ.
ಹೆಚ್.ವಿ.ಆರ್ ಪತ್ರಕರ್ತರಾಗಲು ಕಾರಣ ಅವರ ಸಹೋದರ ಹೆಚ್.ವಿ.ನಾರಾಯಣ ರಾವ್ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ಹರತಾಳಿನಲ್ಲಿ ಕೃಷಿಯ ಜೊತೆ ಶಿವಮೊಗ್ಗದ ಖ್ಯಾತರಾದ ಭೂಪಾಳಂ ಚಂದ್ರಶೇಖರಯ್ಯರ ಸಂಪಾದಕತ್ವದಲ್ಲಿ ಬರುತ್ತಿದ್ದ ಆ ಕಾಲದ ಜಿಲ್ಲಾ ಪತ್ರಿಕೆ ಮಲೆನಾಡು ವಾರ್ತಾ ದಿನಪತ್ರಿಕೆ ವರದಿಗಾರ ಮತ್ತು ಪತ್ರಿಕೆ ಏಜೆಂಟ್ ರಾಗಿ ಹೊಸನಗರ ತಾಲ್ಲೂಕಿನಲ್ಲಿ ಮಲೆನಾಡು ವಾರ್ತಾ ಜನಪ್ರಿಯಗೊಳಿಸಿದ್ದರು.
ಅವರು ಬರೆದ ಒಂದು ಸ್ಥಳಿಯ ಸುದ್ದಿಯಿಂದ 1970 ರಲ್ಲಿ ಅವರ ಕೊಲೆ ಆಗುತ್ತದೆ ಆ ಕಾರಣದಿಂದಲೇ ಅವರ ಸಹೋದರ ಹೆಚ್.ವಿ.ಆರ್. ಪತ್ರಕರ್ತರಾಗಿದ್ದು
Comments
Post a Comment