Blog number 1191. ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ತ್ಯಜಿಸಿ ಶಾಲಾ ಶಿಕ್ಷಕರಾದ ರಾಮಚಂದ್ರಪ್ಪ ಈಗ ಆದರ್ಶ ಶಿಕ್ಷಕರಾಗಿದ್ದಾರೆ
1993ರಲ್ಲಿ ಸಾಗರ ತಾಲ್ಲೂಕಿನ ಉತ್ತರ ಕನ್ನಡ ಜಿಲ್ಲೆಯ ಗಡಿ ಬಾಗದ ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದವರು ಪೈರ್ ಬ್ರಾಂಡ್ ರಾಮಚಂದ್ರಪ್ಪ ಯುವಕರು ಮತ್ತು ಪದವೀದರರು ಅಷ್ಟೇ ಅಲ್ಲ ಲಂಚ ವಿರೋದಿ ಆಗಿ ನ್ಯಾಯದ ಪರವಾಗಿ ಅತ್ಯುತ್ತಮ ವಾಗ್ಮಿ ಆಗಿದ್ದರು.
ಆಗ ನಾನು ನಮ್ಮ ಊರಿನ ಗ್ರಾಮ ಪಂಚಾಯತ್ ಉಪಾದ್ಯಕ್ಷನಾಗಿದ್ದೆ ನಾವೆಲ್ಲ ಸೇರಿ ಸಾಗರ ತಾಲ್ಲೂಕ್ ಗ್ರಾಮ ಪಂಚಾಯತನ ಅಧ್ಯಕ್ಷ ಉಪಾಧ್ಯಕ್ಷರ ವೇದಿಕೆ ಕೂಡ ಮಾಡಿದ್ದೆವು.
ಈಡಿಗ ಸಮಾಜದ ವಿದ್ಯಾವಂತ, ಕೆಲಸಗಾರ,ವಾಗ್ಮಿ ಆಗಿದ್ದ ರಾಮಚಂದ್ರರನ್ನ ರಾಜಕೀಯವಾಗಿ ಬೆಳೆಸಬಹುದಾದ ಸಂದಭ೯ದಲ್ಲಿ ಅವರನ್ನ ಎಲ್ಲಾ ರೀತಿಯಲ್ಲೂ ಹಣಿಯಲು ಅವರ ಪಕ್ಷದವರೇ ಮುಂದಾಗಿದ್ದು ವಿಪಯಾ೯ಸ.
ಇದೇ ಸಂದರ್ಭದಲ್ಲಿ ಇವರು ಶಿಕ್ಷಕರಾಗಿ ಆಯ್ಕೆ ಆದರು, ಎಲ್ಲರೂ ಬಾವಿಸಿದ್ದು ಶಿಕ್ಷಕರ ವೃತ್ತಿ ತಿರಸ್ಕರಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಆದರೆ ರಾಮಚಂದ್ರಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಶಿಕ್ಷಕರಾಗಿ ನಮ್ಮ ಊರಿನ ಸಮೀಪದ ಹೊಸನಗರ ತಾಲ್ಲೂಕಿನ ಹರತಾಳು ಶಾಲೆಗೆ ಕರ್ತವ್ಯಕ್ಕೆ ಬಂದರು.
ಈ ಸುದ್ದಿ ಆ ಕಾಲದಲ್ಲಿ ತುಂಬಾ ಸೋಜಿಗದ ಸುದ್ದಿ, ಈ ಕಾಲದಲ್ಲೂ ಕೂಡ ಏಕೆಂದರೆ ಸಕಾ೯ರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬರುವವರೇ ಹೆಚ್ಚು ಇಂತವರ ಮಧ್ಯೆ ರಾಮಚಂದ್ರಪ್ಪರ ನಡೆ ವಿಭಿನ್ನವೇ.
ರಾಜಕೀಯ ಬಿಟ್ಟು ದೂರದ ಊರಲ್ಲಿ ಶಿಕ್ಷಕರಾದರೂ ಇವರನ್ನ ದೂಷಿಸುವ ಶೋಷಿಸುವ ರಾಜಕೀಯ ವಿರೋದಿಗಳು ಇವರ ಮತ್ತು ಇವರ ಬೆಂಬಲಿಗರ ಬಗರ್ ಹುಕುಂ ಜಮೀನು ಕಸಿಯುವ ಪ್ರಯತ್ನ ಮಾಡಿದಾಗ ಇದನ್ನು ವಿರೋದಿಸಿದ ಶಿಕ್ಷಕ ರಾಮಚಂದ್ರಪ್ಪ ಮತ್ತು ಸಂಗಡಿಗರನ್ನ ಜೈಲಿಗೂ ಕಳಿಸಿದರು.
ಇವರು ಜೈಲಲ್ಲಿ ಇದ್ದಾಗ ಬೇಟಿ ಮಾಡಲು ಹೋಗಿದ್ದು ಮತ್ತು ಇವರ ಅಮಾನತ್ತು ರದ್ದಿಗಾಗಿ ಆಗಿನ ಡಿಡಿಪಿಐ ಗಂಗಪ್ಪ ಗೌಡರಿಗೆ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರ ಶಿಪಾರಸ್ಸು ಮಾಡಿದ್ದು ಎಲ್ಲಾ ಇವತ್ತು ಸುಮಾರು 20 ವರ್ಷದ ನಂತರ ಬೇಟಿ ಆದ ರಾಮಚಂದ್ರಪ್ಪ ನೆನಪು ಮಾಡಿದರು.
ಮಗ ಮೈಸೂರಲ್ಲಿ ಎಂ.ಎಸ್ಸಿಯಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಡಿಸ್ಟಿಂಕ್ಷನ್ ಲ್ಲಿ ತೇಗ೯ಡೆ ಆದ ಬಗ್ಗೆ ಮತ್ತು ಮಗಳು ದ್ವಿತಿಯ ಪೀಯುಸಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಹಾಗೂ ಇವರು ತಾಳಗುಪ್ಪ ಸಮೀಪದ ತಲವಾಟ ಶಾಲೆಯಲ್ಲಿ ಕಾಯ೯ನಿವ೯ಹಿಸುತ್ತಿರುವ ವಿಚಾರ ಮತ್ತು ತಲವಾಟದ ವಿಚಾರವಂತ ಮೇಲ್ವಗ೯ದ ಜನರ ತುಂಬು ಹೃದಯದ ಸಹಕಾರದ ಬಗ್ಗೆ ಕೂಡ ತಿಳಿಸಿದರು.
ನನಗಂತೂ ರಾಮಚಂದ್ರಪ್ಪ ರಾಜಕೀಯ ಬಿಟ್ಟು ಶಿಕ್ಷಕರಾಗುವ ತೀಮಾ೯ನವೇ ಸರಿ ಅನ್ನಿಸಿತ್ತು ಏಕೆಂದರೆ ಇವರ ಮತ್ತು ಇವರ ಹೋರಾಟಕ್ಕೆ ಇವರನ್ನ ಕೊಲೆ ಮಾಡಿಸಲು ಹೇಸದ ರಾಜಕೀಯ ವ್ಯವಸ್ಥೆ ಅವತ್ತು ಸಾಗರದಲ್ಲಿತ್ತು.
ಈಗಾಗಲೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಹಣಾಹಣಿ ಮುಗಿದು ಅಧ್ಯಕ್ಷ ಉಪಾದ್ಯಕ್ಷರ ಮೀಸಲಾತಿಗೆ ಕಾಯುತ್ತಿರುವ ಪೈಪೋಟಿ ರಾಜಕಾರಣ ಜಾತಿ, ಹಣ, ಪಕ್ಷಗಳಲ್ಲಿ ಮುಳುಗಿ ಹೋಗಿರುವ ಸಂದಭ೯ದಲ್ಲಿ
Comments
Post a Comment